ಇನ್ನೂ ಮನೆ ತಲುಪಿಲ್ಲ ಶಬರಿಮಲೆ ಪ್ರವೇಶಿಸಿದ್ದ ಮಹಿಳೆಯರು..!

ಶಬರಿಮಲೆ ದೇಗುಲ ಪ್ರವೇಶ ಮಾಡಿದ್ದರಿಂದ ನಮಗೆ ಯಾವುದೇ ಭಯವಿಲ್ಲ. ಅಂದುಕೊಂಡ ಹಾಗೆ ಅಯ್ಯಪ್ಪಸ್ವಾಮಿಯ ದರ್ಶನ ಪಡೆದಿದ್ದೇವೆ. ನಮ್ಮ ಗುರಿಯನ್ನು ನಾವು ತಲುಪಿದ್ದೇವೆ- ಬಿಂದು

Latha CG | news18india
Updated:January 11, 2019, 11:06 AM IST
ಇನ್ನೂ ಮನೆ ತಲುಪಿಲ್ಲ ಶಬರಿಮಲೆ ಪ್ರವೇಶಿಸಿದ್ದ ಮಹಿಳೆಯರು..!
ಕನಕದುರ್ಗ, ಬಿಂದು
Latha CG | news18india
Updated: January 11, 2019, 11:06 AM IST
ಕೊಚ್ಚಿ,(ಜ.11): ಮೊದಲ ಬಾರಿಗೆ ಶಬರಿಮಲೆ ಪ್ರವೇಶ ಮಾಡಿ 800 ವರ್ಷಗಳ ಸಂಪ್ರದಾಯಕ್ಕೆ ಮಂಗಳ ಹಾಡಿದ್ದ ಕೇರಳದ ಇಬ್ಬರು ಮಹಿಳೆಯರು ಇನ್ನೂ ಮನೆಗೆ ವಾಪಸ್​ ಆಗಿಲ್ಲ. ಉಗ್ರ ಪ್ರತಿಭಟನೆಗಳು ನಡೆದ ಹಿನ್ನೆಲೆ ಅವರಿಗೆ ಜೀವ ಬೆದರಿಕೆ ಇದ್ದು  ಇನ್ನೂ ಅಜ್ಞಾತ ಸ್ಥಳದಲ್ಲೇ ಇದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್​ ತೀರ್ಪು ಹೊರಬಿದ್ದ ಮೇಲೆ, 40 ವರ್ಷದೊಳಗಿನ ಇಬ್ಬರು ಮಹಿಳೆಯರು ಜ.1 ರ ಮುಂಜಾನೆ ಅಯ್ಯಪ್ಪ ಸ್ವಾಮಿಯ ದೇಗುಲ ಪ್ರವೇಶಿಸಿ ದರ್ಶನ ಪಡೆದಿದ್ದರು.

ಕೇರಳ ಮೂಲದ ಬಿಂದು ಮತ್ತು ಸಿಪಿಐ ಕಾರ್ಯಕರ್ತೆ ಕನಕದುರ್ಗ ದೇಗುಲ ಪ್ರವೇಶಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಭಾರೀ ವೈರಲ್ ಆಗಿ ಕೇರಳಾದ್ಯಂತ ವಿರೋಧ ವ್ಯಕ್ತವಾಗಿತ್ತು. ಇಡೀ ರಾಜ್ಯವೇ ಹೊತ್ತಿ ಉರಿದಿತ್ತು. ಅಯ್ಯಪ್ಪ ಸ್ವಾಮಿ ಭಕ್ತರ ವಿರೋಧಕ್ಕೆ ಕಾರಣವಾಗಿತ್ತು.

ಶಬರಿಮಲೆ ಬಿಸಿ: ದೇಗುಲಕ್ಕೆ ಇಬ್ಬರು ಹೆಂಗಸರ ಪ್ರವೇಶ; ನಾಳೆ ಕೇರಳ ಬಂದ್!

ಇನ್ನೂ ಸಹ ಪ್ರತಿಭಟನೆಯ ಕಾವು ತಣ್ಣಗಾಗಿಲ್ಲ. ಆ ಇಬ್ಬರು ಮಹಿಳೆಯರಿಗೆ ಪೊಲೀಸ್​ ಭದ್ರತೆ ನೀಡಲಾಗಿದ್ದರೂ, ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆ ಅವರು ಇನ್ನೂ ಮನೆಗೆ ಹಿಂದಿರುಗಲು ಸಾಧ್ಯವಾಗಿಲ್ಲ. ಅಯ್ಯಪ್ಪನ ಭಕ್ತರಿಂದ ಜೀವಭಯವಿದೆ ಎಂದು ಅಜ್ಞಾತ ಸ್ಥಳದಲ್ಲೇ ಇದ್ದಾರೆ ಎಂಬ ಮಾಹಿತಿ ಲಭಿಸಿದೆ.

ಈ ಬಗ್ಗೆ ದೇಗುಲ ಪ್ರವೇಶಿಸಿದ್ದ ಮಹಿಳೆ ಬಿಂದು ಪ್ರತಿಕ್ರಿಯೆ ನೀಡಿದ್ದು, 'ಶಬರಿಮಲೆ ದೇಗುಲ ಪ್ರವೇಶ ಮಾಡಿದ್ದರಿಂದ ನಮಗೆ ಯಾವುದೇ ಭಯವಿಲ್ಲ. ಅಂದುಕೊಂಡ ಹಾಗೆ ಅಯ್ಯಪ್ಪಸ್ವಾಮಿಯ ದರ್ಶನ ಪಡೆದಿದ್ದೇವೆ. ನಮ್ಮ ಗುರಿಯನ್ನು ನಾವು ತಲುಪಿದ್ದೇವೆ' ಎಂದರು.

'ನಮಗೆ ನಮ್ಮ ಪೊಲೀಸ್​ ಇಲಾಖೆ, ಕೇರಳ ಸರ್ಕಾರ ಮತ್ತು ಪ್ರಜಾಪ್ರಭುತ್ವ ಸಮಾಜದ ಮೇಲೆ ನಂಬಿಕೆ ಇದೆ. ನಾವು ದೇಗುಲ ಪ್ರವೇಶಿಸುವ ಮುನ್ನ ನನ್ನ ಹಿತೈಷಿಗಳು ಹಾಗೂ ಪೊಲೀಸರು ನಮಗೆ ಸವಾಲುಗಳು ಎದುರಾಗುತ್ತವೆ ಎಂಬ ದೃಷ್ಟಿಯಿಂದ ದೇಗುಲ ಪ್ರವೇಶಿಸದಂತೆ ಸಲಹೆ ನೀಡಿದ್ದರು. ಈಗ ಅಂತಹುದೇ ಪರಿಸ್ಥಿತಿ ಎದುರಾಗಿದೆ' ಎಂದರು.
Loading...

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ