90 ದಿನದಲ್ಲಿ 350 ಆನ್ಲೈನ್ ಕೋರ್ಸ್ ಕಲಿಕೆ; ಲಾಕ್ಡೌನ್ ಸಮಯ ಸದುಪಯೋಗ ಪಡಿಸಿಕೊಂಡ ಯುವತಿ

ಆನ್​ಲೈನ್​ನಲ್ಲಿ ಹಲವು ಶ್ರೇಣಿಯ ಕೋರ್ಸ್​ಗಳಿದ್ದು, ಇವೆಲ್ಲಾ ಕಡಿಮೆ ಅವಧಿಯ ಪಠ್ಯಕ್ರಮಗಳಾಗಿದ್ದು, ಸಾಕಷ್ಟು ಸಹಾಯಕವಾಗಿವೆ. ಈ ಹಿನ್ನಲೆ ನನ್ನ ಬಿಡುವಿನ ಸಮಯವನ್ನು ಇವುಗಳ ಕಲಿಕೆಗೆ ಮೀಸಲಾಗಿಟ್ಟೆ.

news18-kannada
Updated:September 29, 2020, 4:34 PM IST
90 ದಿನದಲ್ಲಿ 350 ಆನ್ಲೈನ್ ಕೋರ್ಸ್ ಕಲಿಕೆ; ಲಾಕ್ಡೌನ್ ಸಮಯ ಸದುಪಯೋಗ ಪಡಿಸಿಕೊಂಡ ಯುವತಿ
ಆರತಿ
  • Share this:
ಕೊಚ್ಚಿ (ಸೆ.29): ಕೊರೋನಾ ಸೋಂಕು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ಇಡೀ ದೇಶವನ್ನು ತಿಂಗಳುಗಟ್ಟಲೇ ಲಾಕ್​ಡೌನ್​ ಮಾಡಿತು. ಸದಾ ಬ್ಯುಸಿ  ಜೀವನ ನಡೆಸುತ್ತಿದ್ದ ಮಂದಿಗೆ ಈ ಲಾಕ್​ಡೌನ್​ ಒಂದು ರೀತಿಯ ಬಂಧನ ಕೂಡ ಆಯಿತು. ಈ ಕ್ಷಣವನ್ನು ಸದುಪಯೋಗ ಪಡಿಸಿಕೊಂಡ ಕೇರಳ ಮಹಿಳೆಯೊಬ್ಬರು 90 ದಿನಗಳಲ್ಲಿ ಬರೋಬ್ಬರಿ 350 ಕೋರ್ಸ್​ ಕಲಿಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆರತಿ ರಘುರಾಮ್​ ಈ ದಾಖಲೆ ಮಾಡಿದವರು. ಕೇರಳದ ಎರ್ನಾಕುಲಂನ ಆರತಿ ಎಂಎಸ್ಸಿ ಬಯೋಕೆಮಿಸ್ಟ್ರಿ ವಿದ್ಯಾರ್ಥಿನಿ. ಲಾಕ್​ಡೌನ್​ ಸಮಯದಲ್ಲಿ ವಿಶ್ವ ಪ್ರಸಿದ್ದ ವಿಶ್ವವಿದ್ಯಾಲಯಗಳ ಆನ್​ಲೈನ್​ ಕೋರ್ಸ್​ಗಳ ಪಟ್ಟಿ ಮಾಡಿ ಅದನ್ನು ಮುಗಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆರತಿ, ನನ್ನ ಕಾಲೇಜಿನ ಪ್ರಧ್ಯಾಪಕ​ ಸಿಬ್ಬಂದಿಗಳು ನನಗೆ ಈ ಆನ್​ಲೈನ್​ ಕೋರ್ಸ್​ಗಳ ಕುರಿತು ಮಾರ್ಗದರ್ಶನ ಮಾಡಿದರು. ಆನ್​ಲೈನ್​ನಲ್ಲಿ ಹಲವು ಶ್ರೇಣಿಯ ಕೋರ್ಸ್​ಗಳಿದ್ದು, ಇವೆಲ್ಲಾ ಕಡಿಮೆ ಅವಧಿಯ ಪಠ್ಯಕ್ರಮಗಳಾಗಿದ್ದು, ಸಾಕಷ್ಟು ಸಹಾಯಕವಾಗಿವೆ. ಈ ಹಿನ್ನಲೆ ನನ್ನ ಬಿಡುವಿನ ಸಮಯವನ್ನು ಇವುಗಳ ಕಲಿಕೆಗೆ ಮೀಸಲಾಗಿಟ್ಟೆ. ಇದಕ್ಕೆ ಕಾಲೇಜಿನ ಪ್ರಿನ್ಸಿಪಾಲ್​ ಸೇರಿದಂತೆ ಪ್ರದ್ಯಾಪಕ ವರ್ಗ ಹೆಚ್ಚಿನ ಉತ್ತೇಜನ ನೀಡಿತು ಎನ್ನುತ್ತಾರೆ.

ಇದನ್ನು ಓದಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಡ್ಯಾಂಗೆ ಬಿದ್ದ ಮಹಿಳೆ; ಕಣ್ಣೆದುರೆ ಹೆಂಡತಿಯ ದರ್ಮರಣ

ಜಾನ್​ ಹಾಕಿನ್ಸ್​​, ಟೆಕ್ನಿಕಲ್​ ಯುನಿವರ್ಸಿಟಿ ಆಫ್​ ಡೆನ್ಮಾರ್ಕ್​, ವರ್ಜೆನಿಯಾ ವಿಶ್ವ ವಿದ್ಯಾಲಯ, ಸ್ಟೇಟ್​ ಯೂನಿವರ್ಸಿಟಿ ಆಫ್​ ನ್ಯೂಯರ್ಕ್​, ಕೊಲೊರಾಡೋ ಬೌಲ್ಡರ್​ ವಿಶ್ವವಿದ್ಯಾಲಯ, ರೋಚೆಸ್ಟರ್​ ವಿಶ್ವವಿದ್ಯಾಲಯ, ಎಮೋರಿ ವಿಶ್ವವಿದ್ಯಾಲಯ ಹಾಗೀ ಕೋರ್ಸೆರಾ ಪ್ರಾಜೆಕ್ಟ್​ ನೆಟ್​ವರ್ಕ್​ ಮೂಲಕ ಹಲವು ಆನ್​ಲೈನ್​ ಕೋರ್ಸ್​ಗಳನ್ನು ಇವರು ಮುಗಿಸಿದ್ದಾರೆ.
Published by: Seema R
First published: September 29, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading