• Home
  • »
  • News
  • »
  • national-international
  • »
  • Nitish Kumar: ಮಹಿಳೆಯರು ವಿದ್ಯಾವಂತರಲ್ಲದಿದ್ದರೆ, ಪುರುಷರು ಕೇರ್​​ಲೆಸ್ ಆಗಿದ್ರೆ ಜನಸಂಖ್ಯೆ ಹೆಚ್ಚಾಗುತ್ತೆ; ವಿವಾದ ಎಬ್ಬಿಸಿದ ನಿತೀಶ್ ಕುಮಾರ್ ಹೇಳಿಕೆ

Nitish Kumar: ಮಹಿಳೆಯರು ವಿದ್ಯಾವಂತರಲ್ಲದಿದ್ದರೆ, ಪುರುಷರು ಕೇರ್​​ಲೆಸ್ ಆಗಿದ್ರೆ ಜನಸಂಖ್ಯೆ ಹೆಚ್ಚಾಗುತ್ತೆ; ವಿವಾದ ಎಬ್ಬಿಸಿದ ನಿತೀಶ್ ಕುಮಾರ್ ಹೇಳಿಕೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಮಹಿಳೆಯರು ಉತ್ತಮ ಶಿಕ್ಷಣ ಪಡೆದಿದ್ದರೆ, ಅಥವಾ ತಿಳಿದಿರುವವರಾಗಿದ್ದರೆ ಗರ್ಭಿಣಿಯಾಗದಂತೆ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿದಿರುತ್ತಿದ್ದರು ಎಂದು ಹೇಳುವ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿವಾದಕ್ಕೀಡಾಗಿದ್ದಾರೆ

  • Share this:

ಪಾಟ್ನಾ: ಮಹಿಳೆಯರು (Womens) ವಿದ್ಯಾವಂತರಲ್ಲದಿದ್ದರೆ (Education) ಮತ್ತು ಪುರುಷರು (Man) ಅಸಡ್ಡ (ಕೇರ್​ ಲೇಸ್) ವ್ಯಕ್ತಿಗಳಾಗಿದ್ದರೆ, ರಾಜ್ಯದಲ್ಲಿ ​ ಜನಸಂಖ್ಯೆ ನಿಯಂತ್ರಣಕ್ಕೆ (Population Control) ಬರುವುದಿಲ್ಲ ಎಂದು ಹೇಳುವ ಮೂಲಕ ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Chief Minister Nitish Kumar) ವಿವಾದಕ್ಕೀಡಾಗಿದ್ದಾರೆ. ಶನಿವಾರ ಸಮಾಧಾನ್ ಯಾತ್ರೆಯ (Samadhan Yatra) ನಡುವೆ ವೈಶಾಲಿಯಲ್ಲಿ (Vaishali) ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ಭರದಲ್ಲಿ ಈ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಶಿಕ್ಷಣ ಪಡೆದಾಗ ಮಾತ್ರ ಜನಸಂಖ್ಯೆಯನ್ನು ನಿಯಂತ್ರಿಸಬಹುದು. ಆದರೆ ಈಗ ಜನಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ ಮತ್ತು ಜನಸಂಖ್ಯೆಯ ದರ ಹಾಗೆಯೇ ಇದೆ. ಮಹಿಳೆಯರು ಉತ್ತಮ ಶಿಕ್ಷಣ ಪಡೆದಿದ್ದರೆ, ಅಥವಾ ತಿಳಿದಿರುವವರಾಗಿದ್ದರೆ ಗರ್ಭಿಣಿಯಾಗದಂತೆ (Pregnant) ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿದಿರುತ್ತಿದ್ದರು.


(Mahilayen padh lengi tabhi yeh prajanan dar ghatega... abhi bhi wahi hai. Aaj agar mahilayen nahin padhi huyi hai, jo mard log jis tarikey se roj-roj karte hi rehta hai, usko dhyaan mein hi nahin rehta ki bachcha paida nahin karana hai... Mahila padhi rehti hai to unko sab cheej ka gyaan ho jaata hai ki bhai kaise humko bachna hai... ) ಪುರುಷರು ತಮ್ಮ ಕ್ರಿಯೆಯ ಫಲಿತಾಂಶವನ್ನು ಪರಿಗಣಿಸಲು ಸಿದ್ಧರಿಲ್ಲ ಮತ್ತು ಮಹಿಳೆಯರು ಸರಿಯಾಗಿ ಶಿಕ್ಷಣ ಪಡೆಯದ ಕಾರಣ ಅವರು ತಮ್ಮ ಕಾಲುಗಳನ್ನು ಕೆಳಗಿಳಿಸಲು ಆಗುತ್ತಿಲ್ಲ. ಹೀಗಾಗಿ ಜನಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.


ನಿತೀಶ್​ ಕುಮಾರ್ ಹೇಳಿಕೆಯಿಂದ ರಾಜ್ಯಕ್ಕೆ ಕಳಂಕ


ನಿತೀಶ್​ ಕುಮಾರ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಅಸಭ್ಯ ಭಾಷೆಯನ್ನು ಬಳಸುವ ಮೂಲಕ ರಾಜ್ಯದ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ. ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಿಸುವ ಬಗ್ಗೆ ಮಾತನಾಡುವಾಗ ಆಶ್ಲೀಲ ಭಾಷೆ ಬಳಸಿದ್ದಾರೆ ಎಂದು ಕಿಡಿಕಾರಿದ್ದಾರೆ.


ನಿತೀಶ್​ ಕುಮಾರ್​ ಹೇಳಿಕೆಯಿಂದ ಮುಖ್ಯಮಂತ್ರಿ  ಸ್ಥಾನಕ್ಕೆ ಧಕ್ಕೆ


ಬಿಹಾರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸಾಮ್ರಾಟ್ ಚೌಧರಿ ಅವರು, ಸಾರ್ವಜನಿಕವಾಗಿ ಅಸಭ್ಯ ಮತ್ತು ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ ಎಂದು ಆರೋಪಿಸಿ ನಿತೀಶ್​ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ ಅವರು ಬಳಸಿರುವ ಅಸಭ್ಯ ಪದಗಳು ಅಸೂಕ್ಷ್ಮತೆಯ ಪರಮಾವಧಿಯಾಗಿದೆ. ಇಂತಹ ಪದಗಳನ್ನು ಬಳಸುವ ಮೂಲಕ ಅವರು ಮುಖ್ಯಮಂತ್ರಿ  ಸ್ಥಾನಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.


No Compensation If You Die After Drinking Liquor, Says Nitish Kumar
ಮುಖ್ಯಮಂತ್ರಿ ನಿತೀಶ್​ ಕುಮಾರ್


ಶನಿವಾರದಿಂದ ಬಿಹಾರದಲ್ಲಿ ಜಾತಿಗಣತಿ ಸಮೀಕ್ಷೆ


ಬಿಹಾರದಲ್ಲಿ ಬಹು ನಿರೀಕ್ಷಿತ ಜಾತಿಗಣತಿ ಸಮೀಕ್ಷೆ ಶನಿವಾರದಿಂದ ಆರಂಭವಾಗಿದೆ. ಹದಿನೈದು ದಿನಗಳ ಕಾಲ ನಡೆಯುವ  ಸಮೀಕ್ಷೆಯ ಮೊದಲ ಹಂತದಲ್ಲಿ ಮನೆಗಳನ್ನು ಪಟ್ಟಿ ಮಾಡುವುದು, ಕುಟುಂಬಗಳು ಹಾಗೂ ಕಟ್ಟಡಗಳ ಗಣತಿ ನಡೆಯಲಿದೆ. ಎರಡನೇ ಹಂತ ಏಪ್ರಿಲ್ 1 ರಿಂದ ಏಪ್ರಿಲ್ 30ರವರೆಗೆ ನಡೆಯಲಿದೆ.


ಇದನ್ನೂ ಓದಿ: Bihar: ನಿತೀಶ್​ಗೆ ಶಾಕ್, ಸರ್ಕಾರ ರಚನೆಯಾದ 22 ದಿನದಲ್ಲೇ ಮೊದಲ ವಿಕೆಟ್​ ಪತನ, ಸಚಿವ ಸಿಂಗ್ ರಾಜೀನಾಮೆ!


ಜಾತಿ ಸಮೀಕ್ಷೆಯಿಂದ ರಾಜ್ಯದ ಜನಸಂಖ್ಯೆಯ ವಿವರ ಲಭ್ಯವಾಗುವ ಜೊತೆಗೆ ಪ್ರತಿ ಜಾತಿಯ ಆರ್ಥಿಕ ಸ್ಥಿತಿಗಳನ್ನು ಪತ್ತೆ ಮಾಡಬಹುದಾಗಿದೆ. ಇದು ಸಮಾಜದ ಪ್ರತಿಯೊಂದು ವರ್ಗವನ್ನು ಮೇಲೆತ್ತಲು ನೆರವಾಗಲಿದೆ ಎಂದು ನಿತೀಶ್​ ಕುಮಾರ್ ಹೇಳಿದ್ದು, ರಾಷ್ಟ್ರಮಟ್ಟದಲ್ಲಿ ಇದನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Published by:Monika N
First published: