ತರಬೇತಿ ಪಡೆದ ಮಹಿಳೆಯರೂ ಇನ್ನೂ ದೇವಾಲಯಗಳಲ್ಲಿ ಅರ್ಚನೆ ಮಾಡಬಹುದು; ತಮಿಳುನಾಡು ಸರ್ಕಾರ

ಸಿಎಂ ಎಂಕೆ ಸ್ಟಾಲಿನ್-ಸಚಿವ ಶೇಖರ್ ಬಾಬು.

ಸಿಎಂ ಎಂಕೆ ಸ್ಟಾಲಿನ್-ಸಚಿವ ಶೇಖರ್ ಬಾಬು.

2008 ರಲ್ಲಿ, ಅರ್ಚಕರಾಗಿದ್ದ ತನ್ನ ತಂದೆ ಮರಣಹೊಂದಿದ ನಂತರ ಮಗಳಿಗೆ ಅರ್ಚಕರಾಗಿ ದೇವಾಲಯದಲ್ಲಿ ಪೂಜೆ ನಡೆಸಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿತ್ತು. ಅಂದಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಸೇರಿದಂತೆ ಅನೇಕರು ಮದ್ರಾಸ್ ಹೈಕೋರ್ಟ್ ನಿರ್ಧಾರವನ್ನು ಶ್ಲಾಘಿಸಿದ್ದರು.

  • Share this:

    ಚೆನ್ನೈ: ಈ ಹಿಂದೆ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಿವಂಗತ ಕರುಣಾನಿಧಿ ದಲಿತರಿಗೆ ಆಗಮ ಶಾಸ್ತ್ರದ ತರಬೇತಿ ನೀಡುವ ಶಾಲೆಯನ್ನು ಆರಂಭಿಸಿದ್ದರು. ಅಲ್ಲದೆ, ಅಲ್ಲಿ ತರಬೇತಿ ಪಡೆದ ದಲಿತರೂ ಸಹ ಎಲ್ಲಾ ದೇವಾಲಯ ಗಳಲ್ಲಿ ಅರ್ಚನೆ ಮಾಡಬಹುದು ಎಂಬ ಐತಿಹಾಸಿಕ ಯೋಜನೆಯನ್ನು ಜಾರಿಗೆ ತಂದಿದ್ದರು. ಮೊದಲ ಬ್ಯಾಚ್​ನಲ್ಲಿ 40ಕ್ಕೂ ಹೆಚ್ಚು ದಲಿತ ವಿದ್ಯಾರ್ಥಿಗಳಿಗೆ ಇಲ್ಲಿ ಆಗಮ ಶಾಸ್ತ್ರ ಬೋಧಿಸಿ ತಮಿಳುನಾಡಿನ ನಾನಾ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಅವರಿಗೆ ಅರ್ಚಕ ಉದ್ಯೋಗ ನೀಡಿದ್ದು ಇತಿಹಾಸ. ದಶಕಗಳ ಹಿಂದೆ ಈ ಯೋಜನೆಗಾಗಿ ಸಾಕಷ್ಟು ಪರ-ವಿರೋಧ ಚರ್ಚೆಯಾಗಿತ್ತು. ಅಲ್ಲದೆ, ಈಗಲೂ ಈ ವಿವಾದ ದ್ರಾವಿಡ ನಾಡಿನಲ್ಲಿ ಜೀವಂತವಾಗಿದೆ. ಆದರೆ, ಇದೀಗ ಅಗಮ ಶಾಸ್ತ್ರದಲ್ಲಿ ತರಬೇತಿ ಪಡೆದ ಮಹಿಳೆಯರನ್ನು ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಿ ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆ ಸಚಿವ ಶೇಖರ್ ಬಾಬು ಘೋಷಿಸಿರುವುದು ಖಟ್ಟರ್​ ಹಿಂದೂಗಳನ್ನು ಮತ್ತಷ್ಟು ಕೆರಳಿಸಿದೆ.


    ಈ ಬಗ್ಗೆ ಮಾತನಾಡಿರುವ ಸಚಿವ ಶೇಖರ್​ ಬಾಬು, "ಮಹಿಳೆಯರನ್ನು ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಕ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಆದರೆ, ಅಗಮಾ ಶಾಸ್ತ್ರದಲ್ಲಿ ತರಬೇತಿ ಪಡೆದ ಮಹಿಳೆಯರು ದೇವಾಲಯದ ಅರ್ಚಕರ ಹುದ್ದೆಗಳನ್ನು ವಹಿಸಿಕೊಳ್ಳಲು ಬಯಸಿದರೆ ಅವರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಸರ್ಕಾರ ಸಿದ್ದವಾಗಿದೆ" ಎಂದು ಹೇಳಿದ್ದಾರೆ.


    ಅಲ್ಲದೆ, "ಆಗಮಾ ಶಾಸ್ತ್ರದಲ್ಲಿ ತರಬೇತಿ ಪಡೆದವರಿಗೆ ದೇವಾಲಯದಲ್ಲಿ ಅರ್ಚಕ ಹುದ್ದೆಗೆ ಅವಕಾಶ ನೀಡಲಾಗುವುದು. ದೇವಾಲಯದ ಪುರೋಹಿತರ ಪಾತ್ರವನ್ನು ತೆಗೆದುಕೊಳ್ಳಲು ಇಷ್ಟಪಡುವ ಮಹಿಳೆಯರಿಂದ ಮನವಿಗಳು ಬಂದರೆ, ಖಂಡಿತವಾಗಿ ನಾವು ಅವರನ್ನು ಪರಿಗಣಿಸುತ್ತೇವೆ. ಅಗಮಾ ಸಂಪ್ರದಾಯದಲ್ಲಿ ಅವರ ಪರಿಣತಿಯೇ ಮಾನದಂಡವಾಗಿ ರುತ್ತದೆಯೇ ವಿನಃ ಲಿಂಗ ತಾರತಮ್ಯ ಇಲ್ಲ. ಅವರಿಗೆ ಅಗತ್ಯವಾದ ತರಬೇತಿಯನ್ನು ನೀಡುತ್ತೇವೆ. ಜೊತೆಗೆ ಅರ್ಚಕರಾಗಿ ನೇಮಿಸುವ ಮೊದಲು ಸಂದರ್ಶನ ನಡೆಸುತ್ತೇವೆ" ಎಂದು ಸಚಿವ ಶೇಖರ್ ಬಾಬು ತಿಳಿಸಿದ್ದಾರೆ.


    ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸುವ ನಿರ್ಧಾರದ ಜೊತೆಗೆ ಮುಟ್ಟಿನ ಸಮಯದಲ್ಲಿ ದೇವಸ್ಥಾನದ ಆಚರಣೆಗಳಿಂದ ದೂರವಿರಲು "ಮಹಿಳೆಯರಿಗೆ ಐದು ದಿನಗಳ ರಜೆ" ಸೇರಿದಂತೆ ಎಲ್ಲ ಅಂಶಗಳನ್ನು ಪರಿಗಣಿಸುವುದಾಗಿ ಸಚಿವ ಶೇಖರ್‌ ಬಾಬು ಹೇಳಿದ್ದಾರೆ.


    ಇದನ್ನೂ ಓದಿ: CAA Act: ಪೌರತ್ವ ಕಾಯ್ದೆಯ ಬಗೆಗಿನ ಅಫಿಡವಿಟ್​ಗೆ ಪ್ರತಿಕ್ರಿಯಿಸಲು ಮುಸ್ಲೀಂ ಲೀಗ್​ಗೆ 2 ವಾರ ಗಡುವು ನೀಡಿದ ಸುಪ್ರೀಂ!


    2008 ರಲ್ಲಿ, ಅರ್ಚಕರಾಗಿದ್ದ ತನ್ನ ತಂದೆ ಮರಣಹೊಂದಿದ ನಂತರ ಮಗಳಿಗೆ ಅರ್ಚಕರಾಗಿ ದೇವಾಲಯದಲ್ಲಿ ಪೂಜೆ ನಡೆಸಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿತ್ತು. ಅಂದಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಸೇರಿದಂತೆ ಅನೇಕರು ಮದ್ರಾಸ್ ಹೈಕೋರ್ಟ್ ನಿರ್ಧಾರವನ್ನು ಶ್ಲಾಘಿಸಿದ್ದರು.


    ಮಧುರೈ ಹಳ್ಳಿಯ ಅರುಲ್ಮಿಗು ದುರ್ಗೈ ಅಮ್ಮನ್ ಕೋವಿಲ್ ಅರ್ಚಕರಾಗಿದ್ದ ಪಿನ್ನಥೇವರ್ ಅವರ ಮರಣದ ನಂತರ ಅವರ ಮಗಳು ಪಿನ್ನಿಯಕ್ಕಲ್ ಆ ಕೆಲಸವನ್ನು ತನಗೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆಕೆಯ ತಂದೆ 2006 ರಲ್ಲಿ ನಿಧನ ಹೊಂದಿದ್ದರೂ, ಪಿನ್ನಿಯಕ್ಕಲ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ 2004 ರಿಂದ ಪೂಜೆ ಮತ್ತು ಇತರ ಆಚರಣೆಗಳನ್ನು ಮಗಳು ಮಾಡುತ್ತಿದ್ದರು. ಆದರೆ, ಪಿನ್ನಥೇವರ್ ಮರಣದ ನಂತರ ಆಕೆ ಪೂಜೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.


    ಇದನ್ನೂ ಓದಿ: ಮುಸ್ಲೀಂ ವ್ಯಕ್ತಿಯ ಮೇಲಿನ ಹಲ್ಲೆ ಸಮಾಜ ಮತ್ತು ಧರ್ಮ ಎರಡಕ್ಕೂ ನಾಚಿಕೆಗೇಡಿನ ಸಂಗತಿ; ರಾಹುಲ್ ಗಾಂಧಿ


    ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಪುರುಷರು ಮಾತ್ರ ಅರ್ಚಕರಾಗಬಹುದು ಎಂಬ ವಾದಕ್ಕೆ ಯಾವುದೇ ಕಾನೂನು ಅಥವಾ ವಾಸ್ತವಿಕ ಆಧಾರವಿಲ್ಲ ಎಂದು ತಿಳಿಸಿತ್ತು. "ದೇವಾಲಯದ ಪ್ರಧಾನ ದೇವತೆ ಸ್ತ್ರೀ ರೂಪದಲ್ಲಿ” ಅಮ್ಮನ್ “ಆಗಿದ್ದಾಗ, ಅಂತಹ ದೇವಾಲಯಗಳಲ್ಲಿ ಪೂಜೆ ಮಾಡಲು ಮಹಿಳೆಯ ವಿರುದ್ಧ ಆಕ್ಷೇಪಣೆಗಳು ವ್ಯಕ್ತವಾಗುತ್ತಿರುವುದು ವಿಪರ್ಯಾಸ" ಎಂದು ನ್ಯಾಯಮೂರ್ತಿ ಕೆ.ಚಂದ್ರು ತಮ್ಮ ಆದೇಶದಲ್ಲಿ ತಿಳಿಸಿದ್ದರು.


    ಹೀಗಾಗಿ ಮಾಧ್ಯಮಗಳ ಮುಂದೆ ಕೋರ್ಟ್​ ಆದೇಶವನ್ನು ಉಲ್ಲೇಖಿಸಿ ಆಗಮ ಶಾಸ್ತ್ರದಲ್ಲಿ ಮಹಿಳೆಯರು ಪೌರೋಹಿತ್ಯ ನಡೆಸಬಾರದು ಎಂದು ಎಲ್ಲೂ ಉಲ್ಲೇಖಿಸಿಲ್ಲ. ಹೀಗಾಗಿ ಮಹಿಳೆಯರು ಅರ್ಚಕ ಹುದ್ದೆಯನ್ನು ಬಯಸಿದ್ದೇ ಆದರೆ, ತಮ್ಮ ಸರ್ಕಾರ ಅದಕ್ಕೆ ಅವಕಾಶ ನೀಡಲಿದೆ ಎಂಬ ಅವರ ಹೇಳಿಕೆ ತಮಿಳುನಾಡಿನಲ್ಲಿ ಹೊಸದೊಂದು ಪರ-ವಿರೋಧ ಚರ್ಚೆಗೆ ವೇದಿಕೆ ಕಲ್ಪಿಸಿದೆ.

    Published by:MAshok Kumar
    First published: