ರಾಮನಾಥಪುರ: ಜೀವನೋಪಾಯಕ್ಕಾಗಿ ಕಡಲಕಳೆ (Seaweed) ಸಂಗ್ರಹಿಸಲು ಸಮುದ್ರಕ್ಕೆ (Sea)ಇಳಿಯುವ ತಮಿಳುನಾಡಿನ (Tamil Nadu) ರಾಮನಾಥಪುರಂ (Ramanathapuram) ಜಿಲ್ಲೆಯ ಮೀನುಗಾರರು (Fishermen) ಕಡಲೆಕಳೆ ಬೆಲೆಯನ್ನು ಏರಿಕೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ (Government) ಒತ್ತಾಯಿಸಿದ್ದಾರೆ. ತಮಿಳುನಾಡಿನಲ್ಲಿ ಈ ಕೆಲಸವನ್ನು ಮಾಡುವ ಸ್ಥಳೀಯರನ್ನು ' ಸೀ ಏಂಜಲ್ಸ್' ಎಂದು ಕರೆಯಲಾಗುತ್ತದೆ. ಸಾಗರಕ್ಕೆ ಧುಮುಕಿ ಅಪಾಯಕಾರಿ ಕೆಲಸ ಮಾಡುವ ಮಹಿಳೆಯ ತಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದು ನೋವು ವ್ಯಕ್ತಪಡಿಸುತ್ತಾರೆ. ರಾಮನಾಥಪುರಂ ಜಿಲ್ಲೆಯ ಪ್ರಾಥಮಿಕ ಕೈಗಾರಿಕೆ ಮೀನುಗಾರಿಕೆಯಾಗಿರುವುದರಿಂದ ಪುರುಷರು ಮೀನುಗಾರಿಕೆಗೆ ತೆರಳಿದರೆ ಮಹಿಳೆಯರು ಕಡಲಕಳೆ ಸಂಗ್ರಹಿಸಲು ಸಮುದ್ರಕ್ಕೆ ಇಳಿಯುತ್ತಾರೆ. ಕಡಲಕಳೆಗಳನ್ನು ಸಂಗ್ರಹಿಸಲು ಹೋಗುವ ಈ ಮಹಿಳಾ ಮೀನುಗಾರರು ಅಪಾಯವನ್ನು ಮೈಮೇಲೆ ಎಳೆದುಕೊಂಡು ಈ ವೃತ್ತಿಯನ್ನು ಮಾಡುತ್ತಿದ್ದಾರೆ.
50 ವರ್ಷಗಳಿಂದ ಕಡಲಕಳೆ ಸಂಗ್ರಹ
ಹವಾಮಾನ ಮತ್ತು ಗಾಳಿಯ ವೇಗಕ್ಕೆ ಅನುಗುಣವಾಗಿ, ಅವರು ಬಂಡೆಗಳಿಗೆ ಅಂಟಿಕೊಂಡಿರುವ ಕಟ್ಟಕೊರೈ, ಕಂಚಿಪಾಸಿ, ಮಾರಿಕೋಲುಂದು ಮುಂತಾದ ವಿವಿಧ ರೀತಿಯ ಕಡಲಕಳೆಗಳನ್ನು ಮಹಿಳಾ ಮೀನುಗಾರರು ಹುಡುಕುತ್ತಾರೆ. ಈ ಮಹಿಳೆಯರು ಒಂದು ಚೀಲದಷ್ಟು ಕಡಲಕಳೆ ಸಂಗ್ರಹಿಸಲು ಸಮುದ್ರದೊಳಗೆ ಒಂದು ಕಿಲೋಮೀಟರ್ ದೂರ ಸಾಗುತ್ತಾರೆ.
ಪಾಕ್ ಸ್ಟ್ರೈಟ್ ಸಮುದ್ರ ಪ್ರದೇಶದಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬೇಸಿಗೆಯ ತಿಂಗಳುಗಳಲ್ಲಿ ಕಡಲಕಳೆ ಸಂಗ್ರಹಿಸಲು ಶುರು ಮಾಡುತ್ತಾರೆ. ರಾಮನಾಥಪುರದ ಸಮೀಪದ ಓಲೈಕಾಡ, ಮಾಂಗಾಡು, ಸಂಬೈ ಮತ್ತು ವಡಕಾಡು ಗ್ರಾಮಗಳ ಮಹಿಳೆಯರು ಈ ರೀತಿ ಕಡಲಕಳೆಗಳನ್ನು ಸಂಗ್ರಹವನ್ನು ಸುಮಾರು 50 ವರ್ಷಗಳಿಂದ ಮಾಡುತ್ತಿದ್ದಾರೆ.
ಕಡಲಕಳೆಯನ್ಜು ಸಂಗ್ರಹಿಸಲು ನೀರನ್ನು ಪ್ರವೇಶಿಸುವ ಮೊದಲು ಸಮುದ್ರದ ಕಳೆ ಕಣ್ಣಿಗೆ ಕಾಣುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸಿಕೊಳ್ಳಬೇಕಾಗುತ್ತದೆ. ಬೆಳಿಗ್ಗೆ ಈ ಕಾರ್ಯ ಆರಂಭವಾಗಲಿದ್ದು, ಸಂಜೆಯವರೆಗೆ ನಡೆಯಲಿದೆ. ಇದಕ್ಕಾಗಿ ಇಡೀ ದಿನ ಮಹಿಳೆಯರು ನೀರಿನಲ್ಲಿಯೇ ಕಳೆಯಬೇಕಾಗುತ್ತದೆ. ನಂತರ ಕಡಲಕಳೆಯನ್ನು ದಡಕ್ಕೆ ತಂದು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಈ ಕಡಲಕಳೆಗಳನ್ನು ಖರೀದಿಸಲು ವ್ಯಾಪಾರಿಗಳು ರಾಮೇಶ್ವರಂ ಮತ್ತು ರಾಮನಾಥಪುರದಿಂದ ಬರುತ್ತಾರೆ. ಈ ಕಡಲಕಳೆಗಳನ್ನು ವ್ಯಾಪಾರಿಗಳು ಕೆಜಿಗೆ 50 ರೂ.ಗೆ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಆದರೆ ಈ ಮಹಿಳೆಯರಿಂದ ಖರೀದಿಸುವ ಕಡಲಕಳೆಯನ್ನು ಈ ವ್ಯಾಪಾರಿಗಳು ವಿದೇಶಕ್ಕೆ ಕೆಜಿಗೆ 1,500 ರೂ.ಗೆ ರಫ್ತು ಮಾಡುತ್ತಾರೆ ಎಂದು ತಿಳಿದುಬಂದಿದೆ.
ಸಮುದ್ರದಲ್ಲಿ ಕಿಲೋಮೀಟರ್ವರೆಗೆ ಪ್ರಯಾಣ
ನಾವು ಕಡಲಕಳೆ ಎಲ್ಲಿ ಇರುತ್ತದೋ ಅಲ್ಲಿಗೆ ಹೋಗುತ್ತೇವೆ, ಅದು ಎಷ್ಟು ದೂರ ಎನ್ನುವುದರ ಬಗ್ಗೆ ಯೋಚಿಸುವುದಿಲ್ಲ. ನಾವು ಗಾಳಿಯನ್ನು ಅವಲಂಬಿಸಿ ಸಮುದ್ರ ತೀರದಿಂದ ಒಂದು ಕಿಲೋಮೀಟರ್ವರೆಗೆ ಪ್ರಯಾಣಿಸುತ್ತೇವೆ. ಗಾಳಿ ಹೆಚ್ಚಾದರೆ ನಾವು ತೀರಕ್ಕೆ ವಾಪಸ್ ಬರುತ್ತೇವೆ, ಕಡಿಮೆಯಾದರೆ ನಾವು ಒಂದು ಕಿಲೋಮೀಟರ್ ವರೆಗೆ ನೀರಿನಲ್ಲಿ ಪ್ರಯಾಣಿಸುತ್ತೇವೆ. ಈಜು ಕೌಶಲ್ಯ ಹೊಂದಿರುವ ಮಹಿಳೆಯರು ಕಡಲಕಳೆಗಳನ್ನು ಸಂಗ್ರಹಿಸಲು ನೀರಿನ ಆಳದೊಳಗೂ ಹೋಗುತ್ತಾರೆ ಎಂದು ಕಡಲಕಳೆ ಸಂಗ್ರಹಿಸುವ ಸುಗಂತಿ ಎಂಬುವವರು ಹೇಳಿದ್ದಾರೆ
30 ಕೆಜಿ ವರೆಗೆ ಸಂಗ್ರಹ
ನೀರಿನೊಳಗೆ ಕಡಲಕಳೆ ಹುಡುಕಲು ಕನ್ನಡಕಗಳನ್ನು ಬಳಸುತ್ತಾರೆ. ಅದನ್ನು ಬಿಟ್ಟರೆ ಬೇರೆ ಯಾವುದೇ ಇತರ ಉಪಕರಣಗಳನ್ನು ಬಳಸುವುದಿಲ್ಲ. ಪ್ರತಿಯೊಂದು ಕಡಲಕಳೆಯು ಒಂದು ವಿಶಿಷ್ಟವಾದ ಋತುವನ್ನು ಹೊಂದಿರುತ್ತದೆ. ಋತುವಿನ ಮೊದಲ ದಿನ ಹೆಚ್ಚು ಕಡಲಕಳೆ ಸಿಗುತ್ತದೆ. ಒಬ್ಬೊಬ್ಬರು ಸುಮಾರು 30 ಕೆಜಿ ತೂಕದ ಕಡಲಕಳೆ ಸಂಗ್ರಹಿಸುತ್ತಾರೆ. ನಂತರದ ದಿನಗಳಲ್ಲಿ ಬಂಡೆಗಳಿಗೆ ಕೈ ತಾಗಿ ಗಾಯಗಳಾದ ಮೇಲೆ ಕಡಿಮೆ ಸಂಗ್ರಹವಾಗುತ್ತದೆ ಎಂದು ತಿಳಿಸಿದ್ದಾರೆ.
ಔಷಧ ತಯಾರಿಕೆಯಲ್ಲಿ ಬಳಕೆ
ಮಾರಿಕೋಲುಂಡು ಕಡಲಕಳೆ ವೈದ್ಯಕೀಯ ಮತ್ತು ಕೆಲವು ಅಡುಗೆಯಲ್ಲಿ ಬಳಸಲಾಗುತ್ತದೆ. ಈ ರೀತಿಯ ಕಡಲಕಳೆಗಳನ್ನು ಜಿಗರ್ತಾಂಡ, ವೈದ್ಯಕೀಯ ಹೊಲಿಗೆ ದಾರ, ಔಷಧಗಳು ಮತ್ತು ಐಸ್ ಕ್ರೀಮ್‌ಗಳಲ್ಲಿ ಬಳಸಲಾಗುತ್ತದೆ. ಮಹಿಳಾ ಮೀನುಗಾರರು ಕಡಲಕಳೆಗಳನ್ನು ಸಂಗ್ರಹಿಸಲು ತಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ಏಕೆಂದರೆ ಬಂಡೆಗಳಿಂದ ಕಡಲಕಳೆಗಳನ್ನುಕೀಳುವುದು ಹೆಚ್ಚು ಅಪಾಯಕಾರಿ ಏಕೆಂದರೆ ಬಂಡೆಗಳು ಕೆಲವೊಮ್ಮೆ ಕೈಗಳನ್ನು ಸೀಳಬಹುದು ಮತ್ತು ಕುಟುಕು ಮೀನುಗಳು ಕಚ್ಚಬಹುದು ಎಂದು ಮಹಿಳೆಯರು ಹೇಳುತ್ತಾರೆ.
ತಮ್ಮ ಪ್ರಾಣವನ್ನು ಲೆಕ್ಕಿಸದೆ ತರುವ ಈ ಕಡಲೆಗೆ ಕೆಜಿಗೆ 50 ರೂಪಾಯಿ ನೀಡುತ್ತಿರುವುದು ನಮಗೆ ಬೇಸರ ತರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಇದರ ಬೆಲೆ ಏರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಸಮುದ್ರ ಡೈವರ್‌ಗಳು ಮನವಿ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ