• Home
 • »
 • News
 • »
 • national-international
 • »
 • Abortion Medicine: ಭಾರತದ ಅಗ್ಗದ ಗರ್ಭಪಾತದ ಔಷಧಗಳನ್ನು ತರಿಸಿಕೊಳ್ಳುತ್ತಿರುವ ಅಮೆರಿಕಾದ ಮಹಿಳೆಯರು, ಕಾರಣವೇನು?

Abortion Medicine: ಭಾರತದ ಅಗ್ಗದ ಗರ್ಭಪಾತದ ಔಷಧಗಳನ್ನು ತರಿಸಿಕೊಳ್ಳುತ್ತಿರುವ ಅಮೆರಿಕಾದ ಮಹಿಳೆಯರು, ಕಾರಣವೇನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಯುಎಸ್ ಸುಪ್ರೀಂ ಕೋರ್ಟ್ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ತೆಗೆದು ಹಾಕಿದ ನಂತರ, ಗರ್ಭಪಾತದ ಮಾತ್ರೆಗಳ ಬೇಡಿಕೆಯಲ್ಲಿ ಏರಿಕೆ ಕಂಡಿತು ಎಂದು ಕೆಲ ರಫ್ತುದಾರರು ತಿಳಿಸಿದ್ದಾರೆ.

 • Share this:

  ರೋಯ್ ವರ್ಸಸ್ ವೇಡ್ ಪ್ರಕರಣದಲ್ಲಿ ಯುಎಸ್ ಸುಪ್ರೀಂ ಕೋರ್ಟ್‌ನ (US Supreme Court) ತೀರ್ಪಿನಿಂದ ಉದ್ರಿಕ್ತಗೊಂಡಿದ್ದ ಡೆಬೊರಾ ವಿಲ್ಲೋಬಿ ರ‍್ಯಾಲಿಯಲ್ಲಿ ಭಾಗವಹಿಸುವುದು ಇಲ್ಲವೇ ದೇಣಿಗೆ ನೀಡುವುದಕ್ಕಿಂತಕ್ಕಿಂತಲೂ ಮಿಗಿಲಾಗಿ ಇನ್ನೇನಾದರೂ ಮಾಡುವ ಉದ್ದೇಶವನ್ನು ಹೊಂದಿದ್ದರು. ಟೆಕ್ಸಾಸ್ ಕ್ರಿಮಿನಲ್ ಕಾನೂನಿನ ಅನ್ವಯ ತಾಯಿಯ ಜೀವವನ್ನು ಉಳಿಸುವ ಉದ್ದೇಶವನ್ನು ಹೊರತುಪಡಿಸಿ ಗರ್ಭಪಾತ (Abortion) ಮಾಡುವುದು ಹಾಗೂ ಅದಕ್ಕೆ ಪ್ರಯತ್ನಿಸುವುದನ್ನು ಅಪರಾಧ ಎಂದು ಪರಿಗಣಿಸಿದೆ.


  ಜೇನ್ ರೋಯ್ (ಮೇಲ್ಮನವಿದಾರರು) ಟೆಕ್ಸಾಸ್ ಶಾಸನವು ಅಸ್ಪಷ್ಟವಾಗಿದೆ ಮತ್ತು ಯುಎಸ್ ಸಂವಿಧಾನದ ವಿವಿಧ ತಿದ್ದುಪಡಿಗಳ ಅಡಿಯಲ್ಲಿ ರಕ್ಷಿಸಲಾದ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಿದೆ ಎಂದು ಅವರು ಪ್ರತಿಪಾದಿಸಿದರು. ಅಂತೆಯೇ ಶಾಸನವನ್ನು ಜಾರಿಗೊಳಿಸದಂತೆ ಪ್ರತಿವಾದಿ ಜಿಲ್ಲಾ ಅಟಾರ್ನಿ ಹೆನ್ರಿವೇಡ್ ವಿರುದ್ಧ ತಡೆಯಾಜ್ಞೆಯನ್ನು ಕೋರಿದರು.


  ಭಾರತದಿಂದ ಮಾರಾಟವಾದ ಗರ್ಭಪಾತ ಮಾತ್ರೆಗಳ ಬಳಕೆ


  ನ್ಯಾಯಾಲಯದ ತೀರ್ಪಿನಿಂದ ಅಸಮಾಧಾನಗೊಂಡಿದ್ದ ಡೆಬೊರಾ, ಅನ್‌ವಾಂಟೆಡ್ ಎಂಬ ಬ್ರಾಂಡ್ ಹೆಸರಿನಲ್ಲಿ ಭಾರತದಿಂದ ಮಾರಾಟವಾಗುವ ಗರ್ಭಪಾತ ಮಾತ್ರೆಗಳ ಪ್ಯಾಕ್‌ಗೆ ಆರ್ಡರ್ ಮಾಡಿದರು. ಭಾರತವು ಮೈಫೆಪ್ರಿಸ್ಟೋನ್ ಮತ್ತು ಮಿಸೊಪ್ರೊಸ್ಟಾಲ್ ಅನ್ನು ಮಾರಾಟ ಮಾಡಲು ಅನೇಕ ಆನ್‌ಲೈನ್ ಔಷಧಾಲಯಗಳನ್ನು ಹೊಂದಿದೆ, ಸಾಮಾನ್ಯವಾಗಿ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಈ ಔಷಧಗಳನ್ನು ಬಳಸಲಾಗುತ್ತಿದ್ದು ಔಷಧಗಳನ್ನು ಖರೀದಿಸುವ ಸಮಯದಲ್ಲಿ ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ ಮತ್ತು ವೈದ್ಯರ ಸೂಚನೆಗಳ ಅಗತ್ಯವೂ ಇರುವುದಿಲ್ಲ.


  ಇದನ್ನೂ ಓದಿ: Kenya Drought: ಕೀನ್ಯಾದಲ್ಲಿ ಭೀಕರ ಬರಗಾಲ; ಮೃತಪಟ್ಟ ಆನೆಗಳೇ ಆಹಾರವಾಗಿ ಬಳಕೆ?


  ಈ ಔಷಧಗಳನ್ನು ತೆಗೆದುಕೊಳ್ಳಲು ಆನ್‌ಲೈನ್ ಪೂರೈಕೆದಾರರ ವಿತರಣೆ ಹಕ್ಕುಗಳನ್ನು ಪರಿಶೀಲಿಸಲು ಕೆಲವೊಂದು ಅರ್ಜಿಗಳನ್ನು ತುಂಬಿಸಬೇಕಾಗುತ್ತದೆ. ವಿಲ್ಲೋಬಿ ಅರ್ಜಿಗಳನ್ನು ಭರ್ತಿಗೊಳಿಸಿದ ನಂತರ Secureabortionpills.com ಮೂಲಕ ಔಷಧಗಳನ್ನು ಆರ್ಡರ್ ಮಾಡಿದರು.


  ಆನ್‌ಲೈನ್‌ನಲ್ಲಿ ಔಷಧಗಳ ಪೂರೈಕೆ


  ವಿಲ್ಲೋಬಿ ಔಷಧಗಳನ್ನು ಆರ್ಡರ್ ಮಾಡಲು ಸಮಯದಲ್ಲಿ ಶಿಪ್‌ಮೆಂಟ್ ಅನ್ನು ಕುಟುಂಬ ನಿರ್ವಹಣೆ ಅಥವಾ ಕುಟುಂಬಕ್ಕಾಗಿ ವೈದ್ಯಕೀಯ ಚಿಕಿತ್ಸೆ ಎಂಬುದನ್ನು ವಿವರಿಸುವ ಸೂಚನೆಗಳನ್ನು ಪಡೆದುಕೊಂಡರು. ಶಿಪ್ಪಿಂಗ್ ಶುಲ್ಕ ಸೇರಿದಂತೆ ಔಷಧದ ಒಟ್ಟು ವೆಚ್ಚ $310 ಆಗಿತ್ತು.


  ಯುಎಸ್ ಅನ್ನು ತನ್ನ ರಾಜ್ಯ ಎಂದು ಬಹಿರಂಗಪಡಿಸಲು ಬಯಸದ ವಿಲ್ಲೋಬಿ ಇನ್ನಷ್ಟು ಕಡಿಮೆ ಆಯ್ಕೆಗಳನ್ನು ಆರಿಸಿಕೊಂಡರೆ ಔಷಧಗಳ ಡೆಲಿವರಿ ಇನ್ನಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಎರಡು ದಿನಗಳ ನಂತರ ಆಕೆ ತನ್ನ ಸ್ಥಳೀಯ ಅಂಚೆ ಕಚೇರಿಯಲ್ಲಿ ಗುರುತಿಸಲಾಗದ ಪ್ಯಾಕೇಜ್ ಅನ್ನು ಸ್ವೀಕರಿಸಿದಳು.


  ಅದು ಏನೆಂದು ತಿಳಿದಿರಲಿಲ್ಲ ಎಂದು ವಿಲ್ಲೋಬಿ ತಿಳಿಸಿದ್ದಾರೆ. ಹೊಸದಿಲ್ಲಿಯ ಮ್ಯಾನ್‌ಕೈಂಡ್ ಫಾರ್ಮ್ ತಯಾರಿಸಿದ ಅನ್‌ವಾಂಟೆಡ್ ಔಷಧ ಆ ಪ್ಯಾಕೇಟ್‌ನೊಳಗಿತ್ತು. ಇದನ್ನು ಕುರಿತು ಮ್ಯಾನ್‌ಕೈಂಡ್ ಫಾರ್ಮಾ ಅಥವಾ Secureabortionpills.com ಕಾಮೆಂಟ್‌ಗಾಗಿ ಪ್ರತಿಕ್ರಿಯಿಸಲಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.


  ಭಾರತದ ಜೆನೆರಿಕ್ ಔಷಧ ಉದ್ಯಮ


  ಪ್ರಪಂಚದಲ್ಲೇ ಅತಿ ದೊಡ್ಡದಾದ ಭಾರತದ ಜೆನೆರಿಕ್ ಔಷಧ ಉದ್ಯಮವು $24 ಶತಕೋಟಿಗೂ ಹೆಚ್ಚು ಸಾಗರೋತ್ತರ ಮಾರಾಟವನ್ನು ಹೊಂದಿದೆ ಹಾಗೂ ಮೇಲ್ ಆರ್ಡರ್‌ ಆಧಾರಿತವಾಗಿ ಗರ್ಭಪಾತವನ್ನು ನಿರ್ಬಂಧಿಸಲು ಬಯಸುವ ಜನರಿಗೆ ಸಹಾಯಮಾಡುತ್ತಿದೆ.


  ಇದನ್ನೂ ಓದಿ: Vijay Mallya Lawyer: ವಿಜಯ್ ಮಲ್ಯ ಜೊತೆ ಸಂಪರ್ಕವೇ ಇಲ್ಲ, ಮುಕ್ತಿ ನೀಡುವಂತೆ ಸುಪ್ರೀಂಗೆ ವಕೀಲರ ಅಹವಾಲು


  ಯುಎಸ್ ಸುಪ್ರೀಂ ಕೋರ್ಟ್ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ತೆಗೆದುಹಾಕಿದ ನಂತರ, ಗರ್ಭಪಾತದ ಮಾತ್ರೆಗಳಿಗೆ ಬೇಡಿಕೆಯಲ್ಲಿ ಏರಿಕೆ ಕಂಡಿತು ಎಂದು ಕೆಲ ರಫ್ತುದಾರರು ತಿಳಿಸಿದ್ದಾರೆ. ಸಂತಾನೋತ್ಪತ್ತಿ ಆರೋಗ್ಯದ ಕುರಿತು ಸಂಶೋಧಕರಾದ ಗುಟ್‌ಮಾಕರ್ ಇನ್‌ಸ್ಟಿಟ್ಯೂಟ್ ಪ್ರಕಾರ, ಹನ್ನೆರಡು ರಾಜ್ಯಗಳು ಗರ್ಭಪಾತ ನಿಷೇಧವನ್ನು ಹೊಂದಿವೆ.


  ಗರ್ಭಾವಸ್ಥೆಯ ಏಳು ವಾರಗಳಿಂದ ಆರಂಭಿಸಿ ಗರ್ಭಪಾತ ಮಾತ್ರೆಗಳ ಬಳಕೆಯನ್ನು ನಿಷೇಧಿಸುತ್ತವೆ ಹಾಗೂ ಔಷಧಿಗಳನ್ನು ಶಿಫಾರಸು ಮಾಡುವವರಿಗೆ ಜೈಲು ಶಿಕ್ಷೆ ಮತ್ತು $ 10,000 ದಂಡವನ್ನು ವಿಧಿಸುತ್ತದೆ.


  ಆನ್‌ಲೈನ್‌ನಲ್ಲಿ ಔಷಧಗಳನ್ನು ಖರೀದಿಸುವ ಜನರು ನಕಲಿಗಳನ್ನು ಸ್ವೀಕರಿಸುವ ಅವಕಾಶ ಯಾವಾಗಲೂ ಇರುತ್ತದೆ, ಆದರೆ ಭಾರತೀಯ ಮಾತ್ರೆಗಳಲ್ಲಿ ವಂಚನೆಯ ನಿದರ್ಶನಗಳನ್ನು ಕಂಡುಕೊಂಡಿಲ್ಲ ಎಂಬುದು ಮನೆಯಲ್ಲಿ ಗರ್ಭಪಾತದ ಔಷಧಿಗಳನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುವ ಅಮೇರಿಕನ್ ಗುಂಪು ಪ್ಲಾನ್ ಸಿಯ ಹೇಳಿಕೆಯಾಗಿದೆ.

  Published by:Kavya V
  First published: