• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Iran Protest: ಯುವತಿ ಸಾವು ದುರಾದೃಷ್ಟಕರ ಎಂದ ಸರ್ಕಾರ! ಹಿಜಾಬ್ ವಿರುದ್ಧ ಮುಂದುವರೆದ ಮಹಿಳೆಯರ ಪ್ರತಿಭಟನೆ

Iran Protest: ಯುವತಿ ಸಾವು ದುರಾದೃಷ್ಟಕರ ಎಂದ ಸರ್ಕಾರ! ಹಿಜಾಬ್ ವಿರುದ್ಧ ಮುಂದುವರೆದ ಮಹಿಳೆಯರ ಪ್ರತಿಭಟನೆ

ಪ್ರತಿಭಟನೆ ವೇಳೆ ಹಿಜಾಬ್ ಎಸೆದ ಮಹಿಳೆಯರು

ಪ್ರತಿಭಟನೆ ವೇಳೆ ಹಿಜಾಬ್ ಎಸೆದ ಮಹಿಳೆಯರು

ಇರಾನ್‌ನಲ್ಲಿ ನೈತಿಕ ಪೊಲೀಸಗಿರಿ, ಮಹಿಳೆಯರ ಮೇಲಿನ ದಬ್ಬಾಳಿಕೆ ಖಂಡಿಸಿ ಪ್ರತಿಭಟನಾನಿರತ ಮಹಿಳೆಯರು ಹಿಜಾಬ್‌ ಕಿತ್ತೆಸೆದಿದ್ದಾರೆ. ಕೆಲವರು ಸಾರ್ವಜನಿಕವಾಗಿಯೇ ಹಿಜಾಬ್‌ಗೆ ಬೆಂಕಿ ಹಚ್ಚಿದ್ದಾರೆ. ಇನ್ನು ಮಹಿಳೆಯೊಬ್ಬಳು ತನ್ನ ಕೂದಲನ್ನು ಕತ್ತರಿಸಿಕೊಂಡು ಪ್ರತಿಭಟನೆ ಮಾಡಿದ್ದು, ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ನಡುವೆ ಯುವತಿ ಸಾವು ದುರಾದೃಷ್ಟಕರ ಘಟನೆ ಅಂತ ಇರಾನ್ ಸರ್ಕಾರ ಸಂತಾಪ ಸೂಚಿಸಿದೆ.

ಮುಂದೆ ಓದಿ ...
  • Share this:

ಇರಾನ್: ನೈತಿಕ ಪೊಲೀಸ್ ಗಿರಿ (Moral Policing) ವಿರೋಧಿಸಿ ಇರಾನ್‌ನಲ್ಲಿ (Iran) ನಡೆಯುತ್ತಿರುವ ಮಹಿಳೆಯರ ಪ್ರತಿಭಟನೆ (Women Protest) ತೀವ್ರ ಸ್ವರೂಪ ಪಡೆಯುತ್ತಿದೆ. ಹಿಜಾಬ್ (Hijab) ಧರಿಸದೇ ಬಂಧನಕ್ಕೊಳಗಾಗಿ ಅನುಮಾನಾಸ್ಪದವಾಗಿ ಮೃತಪಟ್ಟ 22 ವರ್ಷದ ಯುವತಿ ಮಹ್ಸಾ ಅಮಿನಿ ಸಾವಿಗೆ (Mahsa Amini death) ನ್ಯಾಯ ಕೊಡಿಸುವಂತೆ ಆಗ್ರಹಿಸಿ ಮಹಿಳೆಯರು ಬೀದಿಗೆ ಇಳಿದಿದ್ದಾರೆ. ಈ ವೇಳೆ ನೈತಿಕ ಪೊಲೀಸಗಿರಿ, ಮಹಿಳೆಯರ ಮೇಲಿನ ದಬ್ಬಾಳಿಕೆ ಖಂಡಿಸಿ ಪ್ರತಿಭಟನಾನಿರತ ಮಹಿಳೆಯರು ಹಿಜಾಬ್‌ ಕಿತ್ತೆಸೆದಿದ್ದಾರೆ. ಕೆಲವರು ಸಾರ್ವಜನಿಕವಾಗಿಯೇ ಹಿಜಾಬ್‌ಗೆ ಬೆಂಕಿ ಹಚ್ಚಿದ್ದಾರೆ. ಇನ್ನು ಮಹಿಳೆಯೊಬ್ಬಳು ತನ್ನ ಕೂದಲನ್ನು ಕತ್ತರಿಸಿಕೊಂಡು ಪ್ರತಿಭಟನೆ ಮಾಡಿದ್ದು, ಆ ವಿಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿದೆ. ಈ ನಡುವೆ ಯುವತಿ ಸಾವು ದುರಾದೃಷ್ಟಕರ ಘಟನೆ ಅಂತ ಇರಾನ್ ಸರ್ಕಾರ ಸಂತಾಪ ಸೂಚಿಸಿದೆ.


ಹಿಬಾಜ್ ಧರಿಸದೇ ಬಂಧನಕ್ಕೆ ಒಳಗಾಗಿದ್ದ ಅಮಿನಿ


22 ವರ್ಷದ ಯುವತಿ ಮಹ್ಸಾ ಅಮಿನಿ ಪಶ್ಚಿಮ ಇರಾನ್‌ನಲ್ಲಿರುವ ತಮ್ಮ ಹುಟ್ಟೂರಿನಿಂದ ತಮ್ಮ ಕುಟುಂಬದೊಂದನೆ ರಾಜಧಾನಿ ಟೆಹರಾನ್ ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಲು ರೈಲಿನಲ್ಲಿ ತೆರಳುತ್ತಿದ್ದರು. ಆದರೆ, ಟೆಹರಾನ್ ಬಳಿಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತಲೆಗೆ ಹಿಜಾಬ್ ಅನ್ನು ಸರಿಯಾಗಿ ಧರಿಸಿಲ್ಲ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿತ್ತು.


ಮೃತ ಯುವತಿ ಮಹ್ಸಾ ಅಮಿನಿ


ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಯುವತಿ


ಯಾವ ಠಾಣೆಗೆ ಆಕೆಯನ್ನು ಕರೆದೊಯ್ದಿದ್ದಾರೆ ಎಂಬ ಮಾಹಿತಿಯನ್ನೂ ನೀಡಿರಲಿಲ್ಲ. ಬಳಿಕ ಕೆಲ ಗಂಟೆಗಳ ನಂತರ ಅವರ ಕುಟುಂಬಸ್ಥರು ಆಕೆಯನ್ನು ಯಾವ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂಬುದನ್ನು ಪತ್ತೆ ಹಚ್ಚಿ ಆ ಠಾಣೆಗೆ ಹೋಗಿ ವಿಚಾರಿಸಿದಾಗ, ಅಮಿನಿ ಅವರು ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಟೆಹರಾನ್‌ನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು. ಕುಟುಂಬಸ್ಥರು ಆಸ್ಪತ್ರೆಗೆ ಹೋಗಿ ನೋಡುವಷ್ಟರಲ್ಲಿ ಅಮಿನಿಯನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಅದಾಗಿ ಕೆಲವೇ ಹೊತ್ತಿನಲ್ಲಿ ಅಮಿನಿ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.


ಮಹಿಳೆಯರ ಪ್ರತಿಭಟನೆ


ಇದನ್ನೂ ಓದಿ: Queen Elizabeth II Funeral: ಹೇಗೆ ನಡೆಯಲಿದೆ ರಾಣಿಯ ಅಂತ್ಯಕ್ರಿಯೆ? ರಾಜಮನೆತನದಲ್ಲಿದೆ ಕಟ್ಟಿನಿಟ್ಟಿನ ನಿಯಮ!


ಯುವತಿ ಸಾವು ದುರಾದೃಷ್ಟಕರ ಎಂದ ಪೊಲೀಸರು


ಇರಾನ್ ಪೊಲೀಸರು ಹಾಗೂ ಸರ್ಕಾರ ಮಹ್ಸಾ ಅಮಿನಿಯ ಸಾವನ್ನು "ದುರದೃಷ್ಟಕರ ಘಟನೆ" ಎಂದು ಕರೆದಿದೆ. ಅದನ್ನು ಅವರು ಪುನರಾವರ್ತಿಸಲು ಬಯಸುವುದಿಲ್ಲ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.


ಕೂದಲು ಕತ್ತರಿಸಿ ಆಕ್ರೋಶ


ಯುವತಿ ಸಾವು ವಿರೋಧಿಸಿ ಮುಂದುವರೆದ ಪ್ರತಿಭಟನೆ


ಯುವತಿ ಮಹ್ಸಾ ಅಮಿನಿ ಅನುಮಾನಾಸ್ಪದ ಸಾವನ್ನು ವಿರೋಧಿಸಿ ಪಶ್ಚಿಮ ಇರಾನ್ ಸೇರಿದಂತೆ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಪಶ್ಚಿಮ ಇರಾನ್‌ನಲ್ಲಿ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಮೃತಪಟ್ಟಿರುವ ಯುವತಿಯ ಹುಟ್ಟೂರಾದ ಸಘೆಜ್ ಹಾಗೂ ಸುತ್ತಲಿನ ಪ್ರಾಂತ್ಯದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಸಾವಿರಾರು ಮಹಿಳೆಯರು ರಸ್ತೆಗಿಳಿದು ತಮ್ಮ ಹಿಜಾಬ್ ಕಿತ್ತೆಸೆದು, ಗಾಳಿಯಲ್ಲಿ ತೂರುವ ಮೂಲಕ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಡೆತ್ ಟು ಡಿಕ್ಟೇಟರ್ ಎಂಬ ಘೋಷಣೆಗಳನ್ನು ಕೂಗುತ್ತಾ ಬೀದಿಗಳಲ್ಲಿ ಜಾಥಾ ನಡೆಸುತ್ತಿದ್ದಾರೆ.


ಇದನ್ನೂ ಓದಿ: Crime News: ಸರಸಕ್ಕೆ ಕರೆದು ಪ್ರಿಯಕರನ ಮರ್ಮಾಂಗಕ್ಕೇ ಕತ್ತರಿ! ಅರ್ಜೆಂಟಲ್ಲಿ ಓಡೋಡಿ ಬಂದವ ಆಸ್ಪತ್ರೆ ಪಾಲು!


ಹಿಜಾಬ್‌ಗೆ ಬೆಂಕಿ, ಕೂದಲು ಕತ್ತರಿಸಿಕೊಂಡು ಆಕ್ರೋಶ


ಇನ್ನು ಕೆಲವು ಪ್ರತಿಭಟನಾನಿರತ ಮಹಿಳೆಯರು ಸಾರ್ವಜನಿಕವಾಗಿಯೇ ಹಿಜಾಬ್‌ಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಕೆಲವು ಮಹಿಳೆಯರು ತಮ್ಮ ಕೂದಲನ್ನು ಕತ್ತಿಕಿಸಿಕೊಂಡು, ಅದನ್ನು ವಿಡಿಯೋ ಮಾಡಿ, ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಈ ಮೂಲಕ ಮಹಿಳೆಯರ ಮೇಲಿನ ದಬ್ಬಾಳಿಕೆಗೆ ಸೆಡ್ಡು ಹೊಡೆಯಲಾಗಿದೆ.

top videos
    First published: