Women's Rights: ಹಕ್ಕುಗಳಿಗಾಗಿ ಮಿತಿಮೀರಿದ ಮಹಿಳೆಯರ ಹೋರಾಟ- ಹೆಚ್ಚಾಗ್ತಿದೆ ಪುರುಷ ತಾರತಮ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಪ್ರತಿಕ್ರಿಯೆಯಲ್ಲಿ ಸುಮಾರು 55 ಪ್ರತಿಶತ ಪುರುಷರು ಮತ್ತು 41 ಪ್ರತಿಶತ ಮಹಿಳೆಯರು ಹಕ್ಕುಗಳಿಗಾಗಿ ಮಹಿಳೆಯರ ಹೋರಾಟವು ಮಿತಿಮೀರಿದೆ ಎಂದು ಹೇಳಿದ್ದಾರೆ ಎಂಬುದಾಗಿ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.

  • Trending Desk
  • 3-MIN READ
  • Last Updated :
  • New Delhi, India
  • Share this:

ಸಮಾಜ ಅಭಿವೃದ್ಧಿಯಾಗಬೇಕು ಎಂದರೆ ಅಲ್ಲಿ ಮಹಿಳೆಯರ (Women) ಪಾತ್ರ ದೊಡ್ಡದು. ಮಹಿಳೆಯರಿಗೂ ಸ್ಥಾನಮಾನ, ಗೌರವ, ಅವಕಾಶ ಎಲ್ಲವೂ ಸಿಗಬೇಕು. ಮಹಿಳೆಯರನ್ನು ಸದೃಢ ಶಕ್ತಿಯನ್ನಾಗಿ ಮಾಡಲು ಅನೇಕ ಹಕ್ಕುಗಳು(Rights) ಮಹಿಳೆಯರಿಗೆ ಮೀಸಲಿವೆ. ಸಾಂವಿಧಾನಿಕ ಹಕ್ಕುಗಳ ಜೊತೆ ಜೊತೆಯೇ ಅವರಿಗೆ ಹಲವು ನೈತಿಕ ಹಕ್ಕುಗಳಿವೆ. ಅಷ್ಟೇ ಅಲ್ಲದೇ ಪ್ರತಿ ದಿನವೂ ಒಂದಲ್ಲಾ ಒಂದು ಹಕ್ಕುಗಳಿಗೆ ಹೋರಾಟ ನಡೆಸುತ್ತಲೇ ಇದ್ದಾರೆ.


ಮಹಿಳೆಯರಿಗೆ ಪ್ರಾಧಾನ್ಯತೆ, ಅವರ ಹಕ್ಕುಗಳಿಗಾಗಿ ಸಮಾಜ ಹೋರಾಡುತ್ತಿರುವ ಪರಿಗೂ ಹಲವರು ವಿರೋಧವಿದೆ. ಕಾರಣ ಇಷ್ಟೇ ಮಹಿಳೆಯರ ಹಕ್ಕುಗಳ ಹೋರಾಟದಲ್ಲಿ ಪುರುಷರ ಹಕ್ಕುಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ದಶಕಗಳಿಂದ ಇದೆ. ಇದನ್ನೇ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.


ಹಕ್ಕುಗಳಿಗಾಗಿ ಮಹಿಳೆಯರ ಹೋರಾಟವು ಮಿತಿಮೀರಿದೆ


ಈ ಹಕ್ಕುಗಳ ಹೋರಾಟ, ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಮೀಕ್ಷೆ ನಡೆದಿದೆ. Ipsos UK ಮತ್ತು ಗ್ಲೋಬಲ್ ಇನ್‌ಸ್ಟಿಟ್ಯೂಟ್ ಫಾರ್ ವುಮೆನ್ಸ್ ಲೀಡರ್‌ಶಿಪ್ ಲಂಡನ್‌ನ ಕಿಂಗ್ಸ್ ಕಾಲೇಜ್‌ ಸಮೀಕ್ಷೆ ಒಂದನ್ನು ನಡೆಸಿದ್ದು ಸಮೀಕ್ಷೆಯಲ್ಲಿ ಪುರುಷರು ಸೇರಿ ಮಹಿಳೆಯರು, ಹಕ್ಕುಗಳಿಗಾಗಿ ಮಹಿಳೆಯರ ಹೋರಾಟವು ಮಿತಿಮೀರಿ ಹೋಗಿದೆ ಎಂಬ ಅಭಿಪ್ರಾಯ ಪಟ್ಟಿದ್ದಾರೆ.


ಇದನ್ನೂ ಓದಿ: Borewell Tragedy: ವ್ಯರ್ಥವಾದ ರಕ್ಷಣಾ ಕಾರ್ಯಾಚರಣೆ! 24 ಗಂಟೆಗಳ ಅಂತರದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಇಬ್ಬರು ಬಾಲಕರ ಸಾವು


ಭಾರತ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ 32 ದೇಶಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಹತ್ತಿರತ್ತಿರ ಇಪ್ಪತ್ತೈದು ಸಾವಿರ ಪ್ರತಿಕ್ರಿಯೆಗಳು ಬಂದಿವೆ.


ಈ ಪ್ರತಿಕ್ರಿಯೆಯಲ್ಲಿ ಸುಮಾರು 55 ಪ್ರತಿಶತ ಪುರುಷರು ಮತ್ತು 41 ಪ್ರತಿಶತ ಮಹಿಳೆಯರು ಹಕ್ಕುಗಳಿಗಾಗಿ ಮಹಿಳೆಯರ ಹೋರಾಟವು ಮಿತಿಮೀರಿದೆ ಎಂದು ಹೇಳಿದ್ದಾರೆ ಎಂಬುದಾಗಿ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.


"ಇದು ಪುರುಷರ ವಿರುದ್ಧ ನಡೆಯುತ್ತಿರುವ ತಾರತಮ್ಯ"


16-74 ವರ್ಷ ವಯಸ್ಸಿನರ ನಡುವೆ ನಡೆದ ಈ ಸಮೀಕ್ಷೆಯಲ್ಲಿ ಸುಮಾರು 22,500 ಜನ ಪ್ರತಿಕ್ರಿಯೆ ನೀಡಿದ್ದಾರೆ. ಅವರಲ್ಲಿ 55 ಪ್ರತಿಶತ ಪುರುಷರು ಮತ್ತು 41 ಪ್ರತಿಶತ ಮಹಿಳೆಯರು, ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಈ ನಿಲುವನ್ನು ವ್ಯಕ್ತಪಡಿಸಿದ್ದಾರೆ.


ಅಲ್ಲದೇ ಹಲವರು ಸಮಾಜವು ಮಹಿಳೆಯರ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಬೇರೆ ಹಂತವನ್ನೇ ತಲುಪಿದೆ, ಆದರೆ ಈ ನಡುವೆ ಪುರುಷರ ಹಕ್ಕುಗಳ ಬಗ್ಗೆ ಯಾರು ಮಾತನಾಡುತ್ತಿಲ್ಲ, ಈ ವಿಷಯದಲ್ಲಿ ಪುರುಷರ ವಿರುದ್ಧ ತಾರತಮ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.


ಸಮೀಕ್ಷೆ ಯಾವೆಲ್ಲಾ ದೇಶಗಳಲ್ಲಿ ನಡೆದಿದೆ?


ಜಪಾನ್‌ನಲ್ಲಿ ಸರಿಸುಮಾರು 2,000 ವ್ಯಕ್ತಿಗಳು, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಬ್ರಿಟನ್, ಇಟಲಿ, ಸ್ಪೇನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ತಲಾ 1,000 ವ್ಯಕ್ತಿಗಳು ಮತ್ತು ಅರ್ಜೆಂಟೀನಾ, ಬೆಲ್ಜಿಯಂ, ಚಿಲಿ, 500 ವ್ಯಕ್ತಿಗಳನ್ನು ಸಮೀಕ್ಷೆ ಒಳಗೊಂಡಿದೆ.


ಇದನ್ನೂ ಓದಿ: Shocking Video: ಫೋನ್‌ನಲ್ಲಿ ಮಾತಾಡ್ತಾ ನಿಂತಿದ್ದ ಮಹಿಳೆಯ ತುಟಿಗೆ ಕಿಸ್‌ ಕೊಟ್ಟು ಪರಾರಿಯಾದ ಕಿರಾತಕ! ವಿಡಿಯೋ ವೈರಲ್


ಕೊಲಂಬಿಯಾ, ಹಂಗೇರಿ, ಭಾರತ, ಇಂಡೋನೇಷ್ಯಾ, ಮಲೇಷ್ಯಾ, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ಪೆರು, ಪೋಲೆಂಡ್, ಪೋರ್ಚುಗಲ್, ಸೌದಿ ಅರೇಬಿಯಾ, ಸಿಂಗಾಪುರ್, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಸ್ವೀಡನ್, ಥೈಲ್ಯಾಂಡ್, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿ ಸುಮಾರು ಒಟ್ಟು ಎಲ್ಲಾ 32 ದೇಶಗಳಲ್ಲಿ ಸಮೀಕ್ಷೆ ನಡೆದಿದೆ.


ಲ್ಯಾಟಿನ್ ಅಮೇರಿಕಾ ಮತ್ತು ಏಷ್ಯಾದ ಹೆಚ್ಚಿನ ದೇಶಗಳಿಂದ ಪ್ರತಿಕ್ರಿಯೆ ನೀಡಿದವರಲ್ಲಿ ಹೆಚ್ಚಿನವರು ನಗರವಾಸಿಗಳು, ವಿದ್ಯಾವಂತರು ಮತ್ತು ಸಾಮಾನ್ಯ ಜನಸಂಖ್ಯೆಗಿಂತ ಹೆಚ್ಚು ಶ್ರೀಮಂತರು ಎಂದು ಸಮೀಕ್ಷೆಯ ವರದಿ ಹೇಳಿದೆ.


ಲಿಂಗ ತಾರತಮ್ಯದ ಬಗ್ಗೆ ಸಮೀಕ್ಷೆಯ ಫಲಿತಾಂಶ


ಸಮೀಕ್ಷೆಗೆ ಒಳಗಾದ 32 ದೇಶಗಳಲ್ಲಿ ಕೇವಲ 6 ಪ್ರತಿಶತದಷ್ಟು ಜನರು ಲಿಂಗ ಅಸಮಾನತೆ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದರೆ, ಸುಮಾರು 94 ಪ್ರತಿಶತದಷ್ಟು ಜನರು ಸಾರ್ವಜನಿಕ ಕ್ಷೇತ್ರದಲ್ಲಿ ಲಿಂಗ ಅಸಮಾನತೆಯ ಪಾತ್ರವನ್ನು ಜಾಗತಿಕವಾಗಿ ಒಪ್ಪಿಕೊಂಡಿದ್ದಾರೆ.


ಸಮೀಕ್ಷೆಯಲ್ಲಿ ಭಾರತದ ಸುಮಾರು 15 ಪ್ರತಿಶತದಷ್ಟು ಜನರು ಲಿಂಗ ಅಸಮಾನತೆ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದರೆ, ಜಪಾನ್‌ನಲ್ಲಿ ಕೇವಲ 2 ಪ್ರತಿಶತದಷ್ಟು ಜನರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Published by:Latha CG
First published: