Selfie: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಡ್ಯಾಂಗೆ ಬಿದ್ದ ಮಹಿಳೆ; ಕಣ್ಣೆದುರೆ ಹೆಂಡತಿಯ ದರ್ಮರಣ

ಅಣೆಕಟ್ಟು ವೀಕ್ಷಣೆಗೆಂದು ಬಂದ ಮಹಿಳೆಯೊಬ್ಬರು, ಆಯಾತಪ್ಪಿ ಬಿದ್ದಿದ್ದಾರೆ. 10 ರಿಂದ 12 ಅಡಿಗಳಿಂದ ಈಕೆ ಬಿದ್ದಿದ್ದು, ಬದುಕುಳಿದಿರುವ ಸಾಧ್ಯತೆ ಕಡಿಮೆಯಾಗಿದೆ.

news18-kannada
Updated:September 28, 2020, 11:05 PM IST
Selfie: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಡ್ಯಾಂಗೆ ಬಿದ್ದ ಮಹಿಳೆ; ಕಣ್ಣೆದುರೆ ಹೆಂಡತಿಯ ದರ್ಮರಣ
ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಮಹಿಳೆ
  • Share this:
ಭೋಪಾಲ್​ (ಸೆ.28): ಅಪಾಯದ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅನೇಕ ಜನರು ಪ್ರಾಣಬಿಟ್ಟಿದ್ದಾರೆ. ಆದರೂ ಕೂಡ ಜನರಿಗೆ ಈ ಕ್ರೇಜ್​ ಕಡಿಮೆಯಾಗಿಲ್ಲ. ಇದೇ ರೀತಿಯ ಘಟನೆ ಕೂಡ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ನಗರದಿಂದ 40 ಕಿ.ಮೀ ದೂರವಿರುವ ಹಲಾಲಿ ಅಣೆಕಟ್ಟು ವೀಕ್ಷಣೆಗೆಂದು ಬಂದ ಮಹಿಳೆಯೊಬ್ಬರು, ಆಯಾತಪ್ಪಿ ಬಿದ್ದಿದ್ದಾರೆ. 10 ರಿಂದ 12 ಅಡಿಗಳಿಂದ ಈಕೆ ಬಿದ್ದಿದ್ದು, ಬದುಕುಳಿದಿರುವ ಸಾಧ್ಯತೆ ಕಡಿಮೆಯಾಗಿದೆ. ತಕ್ಷಣಕ್ಕೆ ರಕ್ಷಣಾ ಕಾರ್ಯ ನಡೆದಿದ್ದು, ಈವರೆಗೂ ದೇಹ ಪತ್ತೆಯಾಗಿಲ್ಲ. ಭಾನುವಾರದಂದು ಅಣೆಕಟ್ಟು ನೋಡಲು ವೈದ್ಯ ಉತ್ಕರ್ಷ ಮಿಶ್ರಾ ಹೆಂಡತಿಯೊಡನೆ ಬಂದಿದ್ದರು. ಈ ವೇಳೆ ಈ ಅಚಾತುರ್ಯ ಸಂಭವಿಸಿದೆ.

while taking selfiedoctors wife falls into dam, selfie, selfie craze, selfie craze in people, women fells dam while taking selfie , ಸೆಲ್ಫಿ, ಸೆಲ್ಫಿ ಕ್ರೇಜ್​
ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಮಹಿಳೆ


ಘಟನೆ ಕುರಿತು ಮಾತನಾಡಿರುವ ಉತ್ಕರ್ಷ ನಾನು ನನ್ನ ಹೆಂಡತಿ ಡ್ಯಾಂ ನೋಡಲು ಬಂದಿದ್ದೇವು. ಈ ವೇಳೆ ಆಕೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಯಾವಾಗ ಆಕೆ ಆಯಾ ತಪ್ಪಿ ಬಿದ್ದಳು ಎಂಬುದು ತಿಳಿಯಲಿಲ್ಲ. ನನ್ನ ಕಣ್ಣ ಎದುರೇ ಆಕೆ ಬಿದ್ದು ಹೋದಳು ಎಂದರು.

ಇನ್ನು ಈ ವೇಳೆ ಸ್ಥಳದಲ್ಲಿ ಯಾರು ಇಲ್ಲದ ಕಾರಣ ವೈದ್ಯನ ವಿಚಾರಣೆ ಕೂಡ ನಡೆಸಲಾಗಿದೆ. ಇದು ಆಕಸ್ಮಿಕವಾಗಿ ನಡೆದ ಘಟನೆಯೋ ಅಥವಾ ಉದ್ದೇಶಪೂರ್ವಕವಾಗಿ ನಡೆದಿದೆಯೋ ಎಂಬ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ತಮ್ಮ ಮೊಬೈಲ್​ಗಳನ್ನು ಪರಿಶೀಲಿಸಿ. ಇದು ಆಕಸ್ಮಿಕವಾದ ಘಟನೆ ಎಂದಿದ್ದಾರೆ.
Published by: Seema R
First published: September 28, 2020, 11:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading