ಪ್ರತಿದಿನ(Everyday) ನಾವು ಚಿತ್ರ-ವಿಚಿತ್ರ ಘಟನೆಗಳನ್ನ ನೋಡುತ್ತಿರತ್ತೇವೆ. ಕೆಲವೊಂದು ಘಟನೆಗಳನ್ನು ನೋಡಿದಾಗ ಮನುಷ್ಯ(Humans) ನಿಜಕ್ಕೂ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯನಾ? ಎಂಬ ಪ್ರಶ್ನೆ(Question) ಮೂಡುತ್ತೆ. ಕೆಲವೊಂದು ಘಟನೆಗಳಲ್ಲಿ ಮನುಷ್ಯ ಮೃಗಗಳಿಗಿಂತ(Beast) ಹೀನಾಯವಾಗಿ ನಡೆದುಕೊಂಡಿರುತ್ತಾನೆ. ಸೇಡು(Revenge) ತಿರಿಸಿಕೊಳ್ಳುವ ಭರದಲ್ಲಿ ಎಂಥಾ ಕೃತ್ಯಕ್ಕೂ ಕೈ ಹಾಕುವ ಮನಸ್ಥಿತಿಗೆ ಹೋಗುತ್ತಾರೆ. ಅದಕ್ಕೆ ತಕ್ಕ ಉದಾಹರಣೆ ಎಂಬಂತೆ ಬ್ಯಾಂಕಾಕ್(Bangkok)ನಲ್ಲಿ ಒಂದು ದುರ್ಘಟನೆ ನಡೆದಿದೆ. ಮಹಿಳೆಯೊಬ್ಬಳ್ಳು 32 ನೇ ಅಂತಸ್ತಿನಲ್ಲಿ ಪೇಂಟಿಂಗ್(Painting) ಮಾಡುತ್ತಿದ್ದವರ ಹಗ್ಗ(Rope)ವನ್ನು ಕತ್ತರಿಸಿ ಕ್ರೌರ್ಯ ಮೆರೆದಿದ್ದಾಳೆ. ಅದೃಷ್ಟವಶಾತ್ ಮೂವರು ಪೇಂಟರ್ಗಳು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ ಮಹಿಳೆ ಹೀಗೆ ಹಗ್ಗ ಕತ್ತಿರಿಸಲು ಕಾರಣವೇನೆಂದು ಕೇಳಿದರೆ ನೀವು ಕೂಡ, ಇಷ್ಟು ಸಣ್ಣ ವಿಚಾರಕ್ಕೆ ಜೀವ ತೆಗೆಯುವ ನಿರ್ಧಾರವನ್ನು ಯಾರಾದರೂ ಮಾಡುತ್ತಾರಾ ಎಂಬ ಪ್ರಶ್ನೆ ಮೂಡುತ್ತೆ. ಸಣ್ಣ ವಿಚಾರಕ್ಕೆ ಮಹಿಳೆ ಸೈಕೋ ರೀತಿ ವರ್ತಿಸಿರುವುದು ನಿಜಕ್ಕೂ ಖಂಡನೀಯ.
ಅಷ್ಟಕ್ಕೂ ಅಸಲಿಗೆ ಅಲ್ಲಿ ನಡೆದಿದ್ದೇನು?
ಬ್ಯಾಂಕಾಕ್ನ ಎತ್ತರದ ಅಪಾರ್ಟ್ಮೆಂಟ್ವೊಂದರಲ್ಲಿ ಮಹಿಳೆ ವಾಸಿಸುತ್ತಿದ್ದಳು. ಅದೇ ಅಪಾರ್ಟ್ಮೆಂಟ್ನಲ್ಲಿ ಕೆಲ ರಿಪೇರಿ ಕೆಲಸ ಬಾಕಿ ಇತ್ತು. ಅದರ ಮಾಲೀಕ ಈ ಕೆಲಸವನ್ನು ಮಾಡಲು ಇಲ್ಲಿಗೆ ಪೇಂಟರ್ಗಳನ್ನು ಕಳುಹುಸಿಕೊಟ್ಟಿದ್ದ. ಇಲ್ಲಿಗೆ ಬಂದಿದ್ದ ಪೇಂಟರ್ಗಳು ತಮ್ಮ ಪಾಡಿಗೆ ಕೆಲಸವನ್ನು ಶುರುಮಾಡಿಕೊಂಡಿದ್ದರು. ಬೆಳಗ್ಗೆ ಕೆಲಸ ಮಾಡಿ ಮಧ್ಯಾಹ್ನ ಊಟಕ್ಕೆ ಬ್ರೇಕ್ ನೀಡಿದ್ದರು. ಈ ವೇಳೆ 21ನೇ ಅಂತಸ್ತಿನ ಫ್ಲ್ಯಾಟ್ನಲ್ಲಿ ವಾಸಿಸುತ್ತಿದ್ದ ಮಹಿಳೆ , ತನ್ನ ಮನೆಯ ಕಿಟಕಿಯನ್ನ ತೆರೆದು ನೋಡಿದ್ದಾಳೆ. ಆಗ ಈಕೆಗೆ ಅಪಾರ್ಟ್ಮೆಂಟ್ನ ರಿಪೇರಿ ಕೆಲಸಗಳು ನಡೆಯುತ್ತಿರುವುದು ತಿಳಿದಿದೆ. ಕೂಡಲೇ ಆಚೆ ಬಂದು ಪೇಂಟರ್ಗಳನ್ನು ಕೇಳಿದ್ದಾಳೆ. ಮಾಲೀಕರು ಇಲ್ಲಿ ಕೆಲಸ ಮಾಡುವಂತೆ ಹೇಳಿದ್ದಾರೆ. ಹೀಗಾಗಿ ಇಲ್ಲಿ ಬಂದು ಕೆಲಸ ಮಾಡುತ್ತಿದ್ದೇವೆ ಎಂದು ಪೇಂಟರ್ಗಳು ಆಕೆಯ ಪ್ರಶ್ನೆಗೆ ಉತ್ತರಿಸಿದ್ದರು.
ಇದನ್ನು ಓದಿ :
ಪತಿಗೆ ತಿಳಿಯದಂತೆ ಪತ್ನಿಯ Online Shopping: ಪಾರ್ಸೆಲ್ ತಂದ Amazon ಡೆಲಿವರಿ ಗರ್ಲ್ ಮಾಡಿದ್ಳು ಸೂಪರ್ ಪ್ಲಾನ್
ತನಗೆ ತಿಳಿಸದೆ ಕೆಲಸ ಮಾಡಿದ್ದಕ್ಕೆ ಮಹಿಳೆಯಿಂದ ಕೃತ್ಯ
ಕೆಲಸ ಆರಂಭಿಸುವ ಮುನ್ನ ನಮಗೆ ಹೇಳಬೇಕಿತ್ತು ಎಂದು ಮಹಿಳೆ ಪೇಂಟರ್ಗಳ ಮುಂದೆ ಕ್ಯಾತೆ ತೆಗೆದಿದ್ದಾಳೆ. ಏನೇ ಕೇಳುವುದಿದ್ದರು ಮಾಲೀಕರನ್ನ ಕೇಳಿ. ನಾವು ಕೆಲಸಗಾರರು, ಕೆಲಸ ಮುಗಿಸಿ ಹೋಗುತ್ತೇವೆ ಎಂದು ಮತ್ತೆ ಪೇಂಟಿಂಗ್ ಮಾಡಲು ಮುಂದಾಗಿದ್ದಾರೆ. 32 ನೇ ಅಂತಸ್ತಿನಲ್ಲಿ ಪೇಂಟಿಂಗ್ ಮಾಡಬೇಕಿದ್ದ ಕಾರಣ ಹಗ್ಗಗಳನ್ನು ಕಟ್ಟಿಕೊಂಡು ಪೇಂಟಿಂಗ್ ಮಾಡುತ್ತಿದ್ದರು. ಇದೇ ವೇಳೆ ಮಹಿಳೆ 21ನೇ ಅಂತಸ್ತಿನಿಂದ ಮನೆಯ ಕಿಟಕಿ ತೆಗೆದು ಪೇಂಟರ್ಗಳ ಹಗ್ಗಗಳನ್ನು ಕತ್ತಿರಿಸಿದ್ದಾಳೆ. ತನಗೆ ತಿಳಿಸದೇ ಕೆಲಸ ಮಾಡುತ್ತಿದ್ದಾರೆ ಅನ್ನುವ ಕೋಪಕ್ಕೆ ಮೂರು ಜೀವಗಳ ಜತೆ ಚೆಲ್ಲಾಟವಾಡಿ ಮಣ್ಣು ತಿನ್ನುವಂತಹ ಕೃತ್ಯವೆಸಗಿದ್ದಾಳೆ.
ಇದನ್ನು ಓದಿ :
ತಾಯಿ-ಮಗು ರಕ್ಷಿಸಲು ಬಂದವರೇ ಸಿಲುಕಿದ್ರು ಅಪಾಯಕ್ಕೆ : ಪ್ರವಾಹಕ್ಕೆ ಮುಖಮಾಡಿ ಗೆದ್ದು ಬಂದಿದ್ದೇ ಬಲು ರೋಚಕ!
ಪವಾಡ ಸದೃಶ ರೀತಿಯಲ್ಲಿ ಪಾರಾದ ಪೇಂಟರ್ಗಳು
ಮೂವರು ಪೇಂಟರ್ಗಳು 32ನೇ ಅಂತಸ್ತಿನಿಂದ ಹಗ್ಗಕಟ್ಟಿಕೊಂಡು ಹಂತ ಹಂತವಾಗಿ ಕೆಳಗಡೆ ಬರುತ್ತಾ ಕೆಲಸ ಮಾಡುತ್ತಿದ್ದರು. ಈ ವೇಳೆ ಮೂವರಲ್ಲಿ ಒಬ್ಬನಿಗೆ ಹಗ್ಗ ಲೂಸ್ ಆದ ಅನುಭವವಾಗಿದೆ. ಕೂಡಲೇ ಕೆಳಗೆ ನೋಡಿದ್ದು, ಮಹಿಳೆ ಹಗ್ಗ ಕತ್ತರಿಸುತ್ತಿರುವುದು ಕಾಣಿಸಿದೆ. ತನ್ನ ಸ್ನೇಹಿತರಿಗೂ ಈ ವಿಷವನ್ನು ತಿಳಿಸಿದ್ದಾನೆ. ಮೂವರು ಜೋರಾಗಿ ಕಿರುಚಿ ಹಗ್ಗ ಕಟ್ ಮಾಡದಂತೆ ಹೇಳಿದರೂ, ಮಹಿಳೆ ಮಾತ್ರ ಹಗ್ಗವನ್ನು ಕತ್ತರಿಸಿದ್ದಾಳೆ. ಇವರ ಕೂಗಾಟ ಕೇಳಿದ 26ನೇ ಅಂತಸ್ತಿನ ಮನೆಯವರು ಹೊರಬಂದಿದ್ದಾರೆ. ಕೂಡಲೇ ಅವರನ್ನು ಕಿಟಿಕಿ ತೆಗೆದು ಒಳಗಡೆ ಕರೆದುಕೊಂಡಿದ್ದಾರೆ. ಬಳಿಕ ಪೊಲೀಸರು ಆಗಮಿಸಿ ಆಕೆಯ ಮೇಲೆ ಕೊಲೆ ಯತ್ನ ಕೇಸ್ ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ಆಕೆಯನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ. ಆಕೆಯ ಮೇಲಿನ ಆರೋಪ ಸಾಬೀತಾದರೆ 20 ವರ್ಷ ಜೈಲು ಶಿಕ್ಷೆ ಅನುಭವಿಸಿಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ