Viral Video: ಅಬ್ಬಾ, ಜಸ್ಟ್​ ಮಿಸ್​! ಈ ವಿಡಿಯೋ ನೋಡೋಕೂ ಡಬಲ್​ ಗುಂಡಿಗೆ ಬೇಕು ರೀ

Viral video: ಉತ್ತರ ಪ್ರದೇಶದ ಶಿಕೋಹಾಬಾದ್ ರೈಲು ನಿಲ್ದಾಣದಲ್ಲಿ ಇಂತದ್ದೇ ಒಂದು ಅಪಾಯದಿಂದ ಮಹಿಳೆಯೊಬ್ಬರು ಕ್ಷಣ ಮಾತ್ರದಲ್ಲಿ ಪಾರಾಗಿದ್ದಾರೆ. ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಕಾನ್‌ಸ್ಟೆಬಲ್ ಶಿವಲಾಲ್ ಮೀನಾ ಮತ್ತು ರೈಲ್ವೆ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಸ್ತೆ ದಾಟುವಾಗ ಮತ್ತು ರೈಲು (Train) ಸಂಚರಿಸುವ ಪ್ರದೇಶಗಳಲ್ಲಿ ಪ್ರಯಾಣಿಕರು ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆ. ವಾಹನಗಳಲ್ಲಾದರೂ ರಸ್ತೆ ದಾಟುವಾಗ ಬ್ರೆಕ್ ಹಾಕಿ ಅಪಾಯ ತಪ್ಪಿಸಬಹುದು, ಆದರೆ ರೈಲ್ ನಲ್ಲಿ ಅಷ್ಟು ಬೇಗ ವೇಗ ಕಡಿಮೆ ಮಾಡಿ ಅಪಾಯ ತಪ್ಪಿಸಲು ಸಾದ್ಯವಾಗುವುದಿಲ್ಲ. ಉತ್ತರ ಪ್ರದೇಶದ (Uttara Pradesh) ಶಿಕೋಹಾಬಾದ್ ರೈಲು ನಿಲ್ದಾಣದಲ್ಲಿ ಇಂತದ್ದೇ ಒಂದು ಅಪಾಯದಿಂದ ಮಹಿಳೆಯೊಬ್ಬರು (Women) ಕ್ಷಣ ಮಾತ್ರದಲ್ಲಿ ಪಾರಾಗಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ನೀವೂ ಕೂಡ ಈ ವಿಡಿಯೋ ನೋಡಿದರೆ ಗಾಬರಿಗೊಳ್ಳುತ್ತೀರಾ.

ನಡೆದದ್ದೇನು?

ಮಹಿಳೆಯೊಬ್ಬರು ಒಂದು ಹಳಿಯಿಂದ ಇನ್ನೊಂದು ಹಳಿಗೆ ದಾಟಲು ಪ್ರಯತ್ನಿಸುತ್ತಿರುವಾಗ ರೈಲು ಬರುವ ಸದ್ದು ಕೇಳಿಸಿಕೊಂಡರು. ರೈಲು ಬರುವುದಕ್ಕಿಂತ ಮುಂಚಿತವಾಗಿ ಫ್ಲಾಟ್​​ಫಾರ್ಮ್ ಹತ್ತಲು ಅವರು ಪ್ರಯತ್ನಿಸಿದ್ದಾರೆ. ಆದರೆ ಅದು ಬಹಳ ಎತ್ತರವಿರುವುದರಿಂದಾಗಿ ಅವರಿಗೆ ಮೇಲೇರಲು ಸಾಧ್ಯವಾಗಲಿಲ್ಲ. ಅವರ ವಸ್ತುಗಳಿರುವ ಬ್ಯಾಗ್ ಅನ್ನು ಮೇಲಕ್ಕೆಸೆದು ತನ್ನನ್ನು ಕಾಪಾಡುವಂತೆ ಕೂಗಿಕೊಂಡಿದ್ದಾರೆ.

ರೈಲ್ವೆ ಸಿಬ್ಬಂಧಿಯಿಂದ ರಕ್ಷಣೆ:

ಕಾಪಾಡುವಂತೆ ಮಹಿಳೆ ಕಿರುಚಿಕೊಂಡಿದನ್ನು ಕಂಡು ಅಲ್ಲೆ ಪಕ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೈಲ್ವೆ ಸಿಬ್ಬಂದಿಯೊಬ್ಬರು ತಕ್ಷಣ ಅವರ ಸಹಾಯಕ್ಕೆ ಬಂದಿದ್ದಾರೆ. ಮಹಿಳೆಯ ಕೈ ಹಿಡಿದು ಫ್ಲಾಟ್​​ಫಾರ್ಮ್ ಮೇಲೆ ಎಳೆದುಕೊಂಡಿದ್ದಾರೆ. ಅವರು ಎಳೆದು ಕೊಂಡ ಕೇವಲ ಎರಡೇ ಸೆಕೆಂಡ್​ನಲ್ಲಿ ರೈಲು ಅದೇ ಹಳಿಯ ಮೂಲಕ ಪಾಸ್ ಆಗಿದೆ. ಸುದ್ದಿ ಸಂಸ್ಥೆ ANI ಪ್ರಕಾರ ಮಹಿಳೆ ರೈಲ್ವೆ ಹಳಿಯಲ್ಲಿ ಸಿಲುಕಿಕೊಂಡಾಗ ಆಕೆಯನ್ನು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಕಾನ್‌ಸ್ಟೆಬಲ್ ಶಿವಲಾಲ್ ಮೀನಾ ಮತ್ತು ರೈಲ್ವೆ ಸಿಬ್ಬಂದಿ ಗಮನಿಸಿದ್ದರು. ಇಬ್ಬರೂ ಕಾರ್ಯಪ್ರವೃತ್ತರಾಗಿ ಮಹಿಳೆಯನ್ನು ರಕ್ಷಿಸಲು ಓಡಿ ಬಂದಿದ್ದಾರೆ.


ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದು ಯುವತಿ ಸಾವು

ಮಹಿಳೆಯ ಅಜಾಗರೂಕತೆ:

ಒಮ್ಮೆ ಅಪಾಯದಿಂದ ಪಾರಾದರೂ ಸಹ ತಮ್ಮ ನೀರಿನ ಬಾಟಲಿ ರೈಲಿನ ಹಳಿ ಮೇಲೆ ಬಿದ್ದಿದೆ ಎಂದು ಮತ್ತೆ ರೈಲು ಹಾದು ಹೋಗುವ ಜಾಗಕ್ಕೆ ಹೋಗಲು ಯತ್ನಿಸಿದ್ದಾರೆ. ಆಗಲೂ ಸಹ ಸಿಬ್ಬಂದಿ ಕೂಗಿ ಎಚ್ಚರಿಸಿದ್ದಾರೆ. ಈ ರೀತಿಯ ಅಜಾಗರೂಕತೆಗಳಿಂದಾಗಿಯೇ ರೈಲು ಅಪಘಾತಗಳೂ ಸಂಭವಿಸುತ್ತವೆ.

ಸಿ.ಸಿ ಟಿವಿಯಲ್ಲಿ ಸೆರೆಯಾದ ದೃಶ್ಯ:

ಸಿ.ಸಿ ಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಮಹಿಳೆಯೊಬ್ಬರು ಒಂದು ಹಳಿಯಿಂದ ಇನ್ನೊಂದು ಹಳಿಗೆ ದಾಟುತ್ತಿರುವ ದೃಶ್ಯವನ್ನು ನೋಡಬಹುದು. ಅದೇ ಸಮಯಕ್ಕೆ  ಸಿಬ್ಭಂದಿ ಸಹಾಯ  ಮಾಡಿ ಪ್ರಾಣ ಉಳಿಸಿದ ದೃಶ್ಯವನ್ನೂ ಸಹ ನಾವು ಕಾಣಬಹುದು. ಟ್ವಿಟ್ಟರ್​​ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಹಲವಾರು ರೀತಿಯ ಕಮೆಂಟ್​ ಬಂದಿದ್ದು, ಪ್ರಾಣಾಪಾಯದಿಂದ ಕಾಪಾಡಿದ ವ್ಯಕ್ತಿಗೆ ಪ್ರಶಂಸೆಗಳು ಸಿಕ್ಕಿವೆ. ಇನ್ನೂ ಬೇಜವಾಬ್ಧಾರಿ ತೋರಿದ ಮಹಿಳೆಯ ವಿರುದ್ಧವೂ ಕಾಮೆಂಟ್ಸ್​ ಬಂದಿದೆ. ಈ ದೃಶ್ಯವನ್ನು ನೀವು ಸಹ ನೋಡಬಹುದು.

ಇದನ್ನೂ ಓದಿ: ಈ ದೇಶದಲ್ಲಿ ಸೊಳ್ಳೆಗಳೇ ಇಲ್ಲ! ಡೆಂಗ್ಯೂ, ಮಲೇರಿಯಾದಂತ ಕಾಯಿಲೆಗಳು ಇಲ್ಲಿನ ಜನರಿಗೆ ಬರೋದೇ ಇಲ್ಲ

ಈ ತಿಂಗಳ ಆರಂಭದಲ್ಲೇ ರೈಲ್ವೇ ಸಚಿವಾಲಯವು ಟ್ವಿಟರ್‌ನಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿತ್ತು. ರೈಲ್ವೆ ಹಳಿಯ ಪಕ್ಕ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿ ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುವಾಗ ರೈಲಿನ ಅಡಿಯಲ್ಲಿ ಸಿಲುಕಿಕೊಂಡಿದ್ದವನ್ನು ರಕ್ಷಿಸಲಾಗಿತ್ತು. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಅಲರ್ಟ್ ಆರ್‌ಪಿಎಫ್ ಸಿಬ್ಬಂದಿಗಳು ಆತನನ್ನು ರಕ್ಷಿಸಿದ್ದರು. ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಅಂತರದಲ್ಲಿ ಜಾರಿಬಿದ್ದಿದ್ದ ವ್ಯಕ್ತಿಯನ್ನು ಕಾಪಾಡಿದ್ದರು. ಈ ವಿಡಿಯೋ ಹಂಚಿಕೊಳ್ಳುವಾಗ ಚಲಿಸುತ್ತಿರುವ ರೈಲಿನಿಂದ ಎಂದಿಗೂ ಇಳಿಯ ಬೇಡಿ ಅಥವಾ ಹತ್ತಲೂ ಪ್ರಯತ್ನಿಸ ಬೇಡಿ ಎಂದು ಬರೆಯಲಾಗಿತ್ತು. ಈ ರೀತಿ ಮಾಡುವುದರಿಂದ ಪ್ರಾಣಾಪಾಯ ಉಂಟಾಗುತ್ತದೆ ಎಂದು ಸಚಿವಾಯವು ಪ್ರಯಾಣಿಕರಿಗೆ ತಿಳಿಸಿತ್ತು.
First published: