ಮದ್ಯಸೇವನೆ ಮಾಡಿದ ತಮಿಳುನಾಡು ವಿದ್ಯಾರ್ಥಿನಿಯರ ಅಮಾನತು ಪ್ರಕರಣ; ಮಹಿಳಾ ಆಯೋಗದಿಂದ ನೋಟಿಸ್ ಜಾರಿ

2019ರ ನವೆಂಬರ್​ನಲ್ಲಿ ಸ್ನೇಹಿತೆಯ ಹುಟ್ಟುಹಬ್ಬ ಆಚರಿಸಿದ್ದ ವೇಳೆ ಸಹಪಾಠಿಗಳ ಜೊತೆ ಸೇರಿ ನಾಲ್ವರು ವಿದ್ಯಾರ್ಥಿನಿಯರೂ ಮದ್ಯಪಾನ ಮಾಡಿದ್ದರು. ಈ ಎಲ್ಲ ವಿದ್ಯಾರ್ಥಿಗಳು ಧರ್ಮಾಪುರಂನ ಅಧೀನಂ ಆರ್ಟ್ಸ್​ ಕಾಲೇಜಿನಲ್ಲಿ ಓದುತ್ತಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

Sushma Chakre | news18-kannada
Updated:January 15, 2020, 9:45 AM IST
ಮದ್ಯಸೇವನೆ ಮಾಡಿದ ತಮಿಳುನಾಡು ವಿದ್ಯಾರ್ಥಿನಿಯರ ಅಮಾನತು ಪ್ರಕರಣ; ಮಹಿಳಾ ಆಯೋಗದಿಂದ ನೋಟಿಸ್ ಜಾರಿ
ಮದ್ಯಸೇವನೆ ಮಾಡಿದ್ದ ವಿದ್ಯಾರ್ಥಿನಿಯರು
  • Share this:
ಚೆನ್ನೈ (ಜ. 15): ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಖಾಸಗಿ ಕಾಲೇಜು ವಿದ್ಯಾರ್ಥಿನಿಯರು ಮದ್ಯಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಲೇಜಿನಿಂದ ಅವರನ್ನು ಅಮಾನತು ಮಾಡಲಾಗಿತ್ತು. ಈ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ಧರ್ಮಾಪುರಂನ ಅಧೀನಂ ಆರ್ಟ್ಸ್​ ಕಾಲೇಜಿಗೆ ನೋಟಿಸ್ ನೀಡಿದೆ.

2019ರ ನವೆಂಬರ್​ನಲ್ಲಿ ಸ್ನೇಹಿತೆಯ ಹುಟ್ಟುಹಬ್ಬ ಆಚರಿಸಿದ್ದ ವೇಳೆ ಸಹಪಾಠಿಗಳ ಜೊತೆ ಸೇರಿ ನಾಲ್ವರು ವಿದ್ಯಾರ್ಥಿನಿಯರೂ ಮದ್ಯಪಾನ ಮಾಡಿದ್ದರು. ಈ ಎಲ್ಲ ವಿದ್ಯಾರ್ಥಿಗಳು ಧರ್ಮಾಪುರಂನ ಅಧೀನಂ ಆರ್ಟ್ಸ್​ ಕಾಲೇಜಿನಲ್ಲಿ ಓದುತ್ತಿದ್ದರು. ತಮಾಷೆಗಾಗಿ ವಿದ್ಯಾರ್ಥಿಗಳೇ ಇದನ್ನು ವಿಡಿಯೊ ಮಾಡಿದ್ದರು. ಇಬ್ಬರು ಹುಡುಗರ ಜೊತೆ ಕುಳಿತು ಕುಡಿಯುತ್ತಿದ್ದ ಯುವತಿಯರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಕಾಲೇಜು ಯೂನಿಫಾರಂ ಧರಿಸಿ ಮದ್ಯಪಾನ ಮಾಡುತ್ತಿದ್ದ ವಿದ್ಯಾರ್ಥಿನಿಯರ ವಿಡಿಯೋ ವೈರಲ್ ಆಗಿತ್ತು.

ಡಿಸೆಂಬರ್ 24ರಂದು ಈ ವಿಚಾರ ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಬಂದಿತ್ತು. ಈ ಕುರಿತು ವಿಚಾರಣೆ ನಡೆಸಿ, ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದ ಆಡಳಿತ ಮಂಡಳಿ ಆ ನಾಲ್ವರು ವಿದ್ಯಾರ್ಥಿಯರನ್ನು ಅಮಾನತು ಮಾಡಿತ್ತು. ಈ ಘಟನೆ ಕಾಲೇಜಿನಿಂದ ಹೊರಗೆ ನಡೆದಿದ್ದರೂ ಯೂನಿಫಾರಂ ಹಾಕಿಕೊಂಡು ಕುಡಿದಿದ್ದರಿಂದ ಯಾರು ಬೇಕಾದರೂ ಅವರು ನಮ್ಮ ಕಾಲೇಜಿನವರು ಎಂದು ಸುಲಭವಾಗಿ ಗುರುತಿಸಬಹುದು. ಅವರ ವರ್ತನೆ ಇಡೀ ಕಾಲೇಜಿನ ಮೇಲೆ ದುಷ್ಪರಿಣಾಮ ಬೀರುವುದರಿಂದ ಅಮಾನತು ಮಾಡುತ್ತಿರುವುದಾಗಿ ಆಡಳಿತ ಮಂಡಳಿ ತಿಳಿಸಿತ್ತು.

ಇದನ್ನೂ ಓದಿ: ನಿರ್ಭಯಾ ಗಲ್ಲು ಶಿಕ್ಷೆ ಪ್ರಕರಣ; ಸುಪ್ರೀಂಕೋರ್ಟ್​ನಲ್ಲಿ ಇಬ್ಬರು ಅತ್ಯಾಚಾರಿಗಳ ಶುಶ್ರೂಷಾ ಅರ್ಜಿ ವಜಾ

ಈ ಕುರಿತು ಕಾಲೇಜು ಶಿಕ್ಷಕರು ವಿದ್ಯಾರ್ಥಿನಿಯರಿಗೆ ಮುನ್ನೆಚ್ಚರಿಕೆ ನೀಡಿಲ್ಲ, ಶಿಕ್ಷೆಯ ಹೆಸರಿನಲ್ಲಿ ಆ ವಿದ್ಯಾರ್ಥಿನಿಯರ ಮೇಲೆ ನೈತಿಕ ಪೊಲೀಸ್​ಗಿರಿ, ಸಾರ್ವಜನಿಕ ನಿಂದನೆ ಮಾಡುವುದು ಸರಿಯಲ್ಲ ಎಂದು ಆಲ್​ ಇಂಡಿಯಾ ಪ್ರೈವೇಟ್ ಕಾಲೇಜು ಎಂಪ್ಲಾಯೀಸ್​ ಯೂನಿಯನ್ ಅಧೀನಂ ಕಾಲೇಜಿಗೆ ಪತ್ರ ಬರೆದಿತ್ತು. ಆದರೆ, ಕಾಲೇಜಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಯೂನಿಯನ್ ಮಹಿಳಾ ಆಯೋಗಕ್ಕೆ ದೂರು ನೀಡಿತ್ತು.

ಇದನ್ನೂ ಓದಿ: ವಿಮಾನದಲ್ಲಿದ್ದ ಯುವತಿಯಿಂದ ಬಾಂಬ್ ಸ್ಫೋಟದ ಬೆದರಿಕೆ; ಏರ್​ಪೋರ್ಟ್​ಗೆ ಹಿಂತಿರುಗಿದ ಪೈಲಟ್​ಗೆ ಕಾದಿತ್ತು ಶಾಕ್!

ಈ ಬಗ್ಗೆ ಕಾಲೇಜಿಗೆ ನೋಟಿಸ್ ನೀಡಿರುವ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್​. ಕುಂದರ್, ಮದ್ಯ ಸೇವನೆ ಮಾಡಿದ ವಿದ್ಯಾರ್ಥಿನಿಯರ ವಿರುದ್ಧ ಕಾನೂನಿನ ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಬೇಕೋ ಆ ಕ್ರಮಗಳನ್ನು ಕೈಗೊಳ್ಳಿ. ಆದರೆ, ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯದ ಜೊತೆ ಆಟವಾಡಬೇಡಿ. ಈ ಪ್ರಕರಣದ ಬಗ್ಗೆ ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂಬ ಬಗ್ಗೆ 30 ದಿನದೊಳಗೆ ವರದಿ ನೀಡಿ ಎಂದು ಸೂಚಿಸಿದ್ದಾರೆ.
Published by: Sushma Chakre
First published: January 15, 2020, 9:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading