ಮಹಿಳೆಯರೂ ಮಸೀದಿಗೆ ಬಂದು ಪ್ರಾರ್ಥನೆ ಸಲ್ಲಿಸಬಹುದು: ಸುಪ್ರೀಂಕೋರ್ಟ್​ನಲ್ಲಿ ಮುಸ್ಲಿಂ ಕಾನೂನು ಮಂಡಳಿ ಹೇಳಿಕೆ

ಮುಸ್ಲಿಂ ಮಹಿಳೆಯರನ್ನು ವಿಭಿನ್ನವಾಗಿ ಇರಿಸಲಾಗಿದೆ. ಏಕೆಂದರೆ ಇಸ್ಲಾಂ ಧರ್ಮದ ಸಿದ್ಧಾಂತಗಳ ಪ್ರಕಾರ, ಮಹಿಳೆಯರು ಮಸೀದಿ ಅಥವಾ ಮನೆಯಲ್ಲಿ ಆಕೆಯ ಆಯ್ಕೆಯಂತೆ ಪ್ರಾರ್ಥಿಸುವುದಕ್ಕಾಗಿ ಅವಕಾಶ ನೀಡಲಾಗಿದೆ ಎಂದು ಮುಸ್ಲಿಂ ಕಾನೂನು ಮಂಡಳಿ ತನ್ನ ಅಫಿಡವಿಟ್​ನಲ್ಲಿ ತಿಳಿಸಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ನವದೆಹಲಿ: ಮುಸ್ಲಿಂ ಮಹಿಳೆಯರು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಬಹುದು. ಮತ್ತು ಇದಕ್ಕೆ ವಿರುದ್ಧವಾಗಿರುವ ಫತ್ವಾಸ್​ಅನ್ನು ನಿರ್ಲಕ್ಷಿಸಿ ಎಂದು ಅಖಿಲ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್​ಬಿ) ಬುಧವಾರ ಸುಪ್ರೀಂಕೋರ್ಟ್​ಗೆ ಹೇಳಿದೆ.

    ಈ ವಿಚಾರವಾಗಿ ಸುಪ್ರೀಂಕೋರ್ಟ್​ನಲ್ಲಿ ಅಫಿಡವಿಟ್​ ಸಲ್ಲಿಸಿರುವ ಮುಸ್ಲಿಂ ಕಾನೂನು ಮಂಡಳಿ, ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಕ್ಕೆ ಅವಕಾಶ ಮುಕ್ತವಾಗಿದೆ. ಅವರು ಹಾಗೆ ಮಾಡುವುದು ಕಡ್ಡಾಯವೇನಲ್ಲ. ಮಹಿಳೆಯರು ಮಸೀದಿ ಬದಲಿಗೆ ಮನೆಯಲ್ಲೂ ಪ್ರಾರ್ಥನೆ ಸಲ್ಲಿಸಲು ಆಯ್ಕೆ ಕೂಡ ಇದೆ ಎಂದು ಹೇಳಿದೆ.

    ಮಹಿಳೆಯರಿಗೂ ಮಸೀದಿ ಪ್ರವೇಶಕ್ಕೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡುವಂತೆ ಕೋರಿ ಮುಸ್ಲಿಂ ಮಹಿಳೆಯರು ಸಲ್ಲಿಸಿದ್ದ ಅರ್ಜಿಗೆ ಮುಸ್ಲಿಂ ಕಾನೂನು ಮಂಡಳಿ ಹೀಗೆ ಪ್ರತಿಕ್ರಿಯಿಸಿದೆ.

    ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದನ್ನು ವಿರೋಧಿಸಿದ ಎಐಎಂಪಿಎಲ್​ಬಿ, ಮಸೀದಿ ಖಾಸಗಿ ನಿರ್ವಹಣೆಯ ಅಂಗ. ಮತ್ತು ಧಾರ್ಮಿಕ ಸ್ಥಳದ ವ್ಯವಸ್ಥೆಗೆ ನ್ಯಾಯಾಲಯ ಅಡ್ಡಿಪಡಿಸಬಾರದು ಎಂದು ಹೇಳಿದೆ. ಅಲ್ಲದೇ, ಧಾರ್ಮಿಕ ವಿಷಯದಲ್ಲಿ ನ್ಯಾಯಾಲಯ ಸಲಹೆ ನೀಡಬಹುದು. ಆದರೆ, ನಿರ್ದೇಶನ ನೀಡುವಂತಿಲ್ಲ ಎಂದು ಹೇಳಿದೆ.

    ದೇಶಾದ್ಯಂತ ಮಸೀದಿಗೆ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಅಸಂವಿಧಾನಿಕ ಮತ್ತು ಜೀವನ, ಸಮಾನತೆ, ಲಿಂಗ ನ್ಯಾಯದ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಿ ಯಾಸ್ಮಿಮ್ ಜುಬೇರ್, ಅಹ್ಮದ್ ಪಿರ್ಜಾದೆ ಮತ್ತು ಜುಬೇರ್ ಅಹ್ಮದ್ ಪಿರ್ಜಾದೆ ಎಂಬುವವರು ಸುಪ್ರೀಂಕೋರ್ಟ್​ನಲ್ಲಿ ವಾದಿಸಿದ್ದರು. ಅಲ್ಲದೇ, ಮಸೀದಿಗೆ ತೆರಳಿ ನಮಾಜ್​ ಮಾಡಲು ಮಹಿಳೆಯರಿಗೆ ಅವಕಾಶ ನೀಡುವಂತೆ ಸರ್ಕಾರ ಮತ್ತು ಮುಸ್ಲಿಂ ಮಂಡಳಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.

    ಇದನ್ನು ಓದಿ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನಾಕಾರರ ಮೇಲೆ ಖಾರದ ಪುಡಿ ಎರಚಿದ ಮಹಿಳೆ: ವೀಡಿಯೊ ವೈರಲ್​​

    ಇಸ್ಲಾಂ ಧರ್ಮವು ಮಹಿಳೆಯರಿಗೆ ಮಸೀದಿಯಲ್ಲಿ ಪ್ರಾರ್ಥನೆಗೆ ಸೇರ್ಪಡೆಗೊಳ್ಳುವುದನ್ನು ಕಡ್ಡಾಯಗೊಳಿಸಿಲ್ಲ ಅಥವಾ ಪುರುಷರಂತೆ ಮಹಿಳೆಯರು ಶುಕ್ರವಾರ ನಮಾಜ್​ಅನ್ನು ಮಸೀದಿಯಲ್ಲಿ ಮಾಡುವುದು ಕಡ್ಡಾಯವಲ್ಲ. ಮುಸ್ಲಿಂ ಮಹಿಳೆಯರನ್ನು ವಿಭಿನ್ನವಾಗಿ ಇರಿಸಲಾಗಿದೆ. ಏಕೆಂದರೆ ಇಸ್ಲಾಂ ಧರ್ಮದ ಸಿದ್ಧಾಂತಗಳ ಪ್ರಕಾರ, ಮಹಿಳೆಯರು ಮಸೀದಿ ಅಥವಾ ಮನೆಯಲ್ಲಿ ಆಕೆಯ ಆಯ್ಕೆಯಂತೆ ಪ್ರಾರ್ಥಿಸುವುದಕ್ಕಾಗಿ ಅವಕಾಶ ನೀಡಲಾಗಿದೆ ಎಂದು ಮುಸ್ಲಿಂ ಕಾನೂನು ಮಂಡಳಿ ತನ್ನ ಅಫಿಡವಿಟ್​ನಲ್ಲಿ ತಿಳಿಸಿದೆ.
    First published: