Smriti Irani: ತೂಕ ಕಳೆದುಕೊಂಡು ಅಚ್ಚರಿ ಮೂಡಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಚಿತ್ರನಟಿಯಾಗಿದ್ದ ಕಾಲದಲ್ಲಿ ಬಳುಕುವ ಬಳ್ಳಿಯಂತಿದ್ದ ಸಚಿವೆ ಸ್ಮೃತಿ ಇರಾನಿ, ರಾಜಕೀಯಕ್ಕೆ ಬಂದ ಬಳಿಕ ತಮ್ಮ ದೇಹ ಸೌಂದರ್ಯದ ಬಗ್ಗೆ ಅಷ್ಟಾಗಿ ಗಮನ ನೀಡಿರಲಿಲ್ಲ

ಚಿತ್ರನಟಿಯಾಗಿದ್ದ ಕಾಲದಲ್ಲಿ ಬಳುಕುವ ಬಳ್ಳಿಯಂತಿದ್ದ ಸಚಿವೆ ಸ್ಮೃತಿ ಇರಾನಿ, ರಾಜಕೀಯಕ್ಕೆ ಬಂದ ಬಳಿಕ ತಮ್ಮ ದೇಹ ಸೌಂದರ್ಯದ ಬಗ್ಗೆ ಅಷ್ಟಾಗಿ ಗಮನ ನೀಡಿರಲಿಲ್ಲ

ಚಿತ್ರನಟಿಯಾಗಿದ್ದ ಕಾಲದಲ್ಲಿ ಬಳುಕುವ ಬಳ್ಳಿಯಂತಿದ್ದ ಸಚಿವೆ ಸ್ಮೃತಿ ಇರಾನಿ, ರಾಜಕೀಯಕ್ಕೆ ಬಂದ ಬಳಿಕ ತಮ್ಮ ದೇಹ ಸೌಂದರ್ಯದ ಬಗ್ಗೆ ಅಷ್ಟಾಗಿ ಗಮನ ನೀಡಿರಲಿಲ್ಲ

  • Share this:
    ಭಾರತೀಯ ರಾಜಕೀಯ(Politics)ರಂಗದ ಅತಿ ಪ್ರಗತಿಪರ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರು ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani).. ಚಿತ್ರನಟಿಯಾಗಿ (Actress )ಅಸಂಖ್ಯಾತ ಜನರ ಮನಸ್ಸು ಕದ್ದಿದ್ದ ಸ್ಮೃತಿ, ರಾಜಕಾರಣಕ್ಕೆ ಬಂದು ಸದ್ಯ ಪ್ರಧಾನಿ ನರೇಂದ್ರ ಮೋದಿ (Modi) ನೇತೃತ್ವದ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Development) ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ... ತಮ್ಮ ಖಡಕ್ ನಡವಳಿಕೆ ಹಾಗೂ ಹೇಳಿಕೆಗಳ ಮೂಲಕವೇ ಎದುರಾಳಿ ನಾಯಕರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ಸ್ಮೃತಿ ಇರಾನಿ, ಈಗ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಫೋಟೋ (Photo) ಒಂದರಿಂದ ಅಭಿಮಾನಿಗಳ ಮನ ಸೆಳೆಯುವುದರ ಜೊತೆಗೆ ಅಚ್ಚರಿ ಮೂಡಿಸಿದ್ದಾರೆ..

    ತೂಕ ಇಳಿಸಿಕೊಂಡ ಕೇಂದ್ರ ಸಚಿವೆ ಸ್ಮೃತಿ ಇರಾನಿ

    ಚಿತ್ರನಟಿಯಾಗಿದ್ದ ಕಾಲದಲ್ಲಿ ಬಳುಕುವ ಬಳ್ಳಿಯಂತಿದ್ದ ಸಚಿವೆ ಸ್ಮೃತಿ ಇರಾನಿ, ರಾಜಕೀಯಕ್ಕೆ ಬಂದ ಬಳಿಕ ತಮ್ಮ ದೇಹ ಸೌಂದರ್ಯದ ಬಗ್ಗೆ ಅಷ್ಟಾಗಿ ಗಮನ ನೀಡಿರಲಿಲ್ಲ. ಆದರೆ ಈಗ ರಾಜಕೀಯದ ಜಂಜಾಟದ ನಡುವೆಯೂ ಸ್ಮೃತಿ ಇರಾನಿ ತೂಕ ಇಳಿಸಿಕೊಂಡು ಗಮನಸೆಳೆದಿದ್ದಾರೆ.



    ರಾಜಕೀಯದಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಸ್ಮೃತಿ ಇರಾನಿ, ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಒಂದಿಲ್ಲೊಂದು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಈಗ ತಾವು ತೂಕ ಇಳಿಸಿಕೊಂಡಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಲು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು ಕೇಂದ್ರ ಸಚಿವೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ..

    ಸಲ್ವಾರ್ ತೊಟ್ಟು, ಪ್ರಿಂಟೆಡ್ ದುಪಟ್ಟ ಹೊದ್ದು ಮರದ ಬಳಿ ನಿಂತು ಮರದಲ್ಲಿ ಹೂ ಕೀಳಲು ಯತ್ನಿಸುತ್ತಿರುವಂತೆ ಫೋಸ್ ನೀಡಿರುವ ಫೋಟೋವನ್ನ ಸಚಿವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಇದನ್ನು ಓದಿ: ಬೆಳ್ಳಿಯ ಕಾಲ್ಗೆಜ್ಜೆಗಾಗಿ ಮಹಿಳೆಯರ ಪಾದವೇ ಕಟ್; ರಾಜಸ್ಥಾನದಲ್ಲೊಬ್ಬ ಸೈಕೋ ಆರೋಪಿ

    ಸದ್ಯ ಸಚಿವೆ ಸ್ಮೃತಿ ಇರಾನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗೆ ಬಾಲಿವುಡ್ ನಟಿಯರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ.. ನಟಿ ಸೋನಂ ಕಪೂರ್ ಲುಕಿಂಗ್ ಗ್ರೇಟ್ ಅಂತ ಕಮೆಂಟ್ ಮಾಡಿದ್ರೆ, ಕೆಜಿಎಫ್ ನಟಿ ಮೌನಿ ರಾಯ್ ಬಹಳ ಸುಂದರವಾಗಿದ್ದೀರಾ ಅಂತ ಕಮೆಂಟ್ ಮಾಡಿದ್ದಾರೆ.

    ತೂಕ ಇಳಿಸಿಕೊಳ್ಳಲು ಟಿಪ್ಸ್ ಕೇಳಿದ ಅಭಿಮಾನಿಗಳು

    ತೂಕ ಇಳಿಸಿಕೊಂಡು ಸುಂದರವಾಗಿ ಕಾಣುತ್ತಿರುವ ಸಚಿವೆ ಸ್ಮೃತಿ ಇರಾನಿ ಬಳಿ,ಅಭಿಮಾನಿಗಳು ಸಹ ತೂಕ ಇಳಿಕೆ ಬಗ್ಗೆ ಸಲಹೆ ಕೇಳುತ್ತಿದ್ದಾರೆ.. ನೀವು ತುಂಬಾ ಅದ್ಭುತವಾಗಿ ಕಾಣುತ್ತಿದ್ದೀರಾ.. ನೀವು ಹೇಗೆ ತೂಕ ಇಳಿಸಿಕೊಂಡ್ರಿ ಎಂಬುದರ ಬಗ್ಗೆ ನಮಗೂ ಸಲಹೆ ನೀಡಿ ಅಂತ ಒತ್ತಾಯಿಸಿದ್ದಾರೆ.

    ಇದನ್ನು ಓದಿ: ವೈರಲ್ ಆದ ರಾಮನವಮಿ ರ‍್ಯಾಲಿಯ ಹಳೆಯ ವಿಡಿಯೋ; ಫ್ಯಾಕ್ಟ್ ಚೆಕ್ ಮಾಡಿದ ಆ್ಯಂಟಿ ಫೇಕ್ ವಾರ್ ರೂಮ್

    ಇನ್ನು ಇದಕ್ಕೂ ಮೊದಲು ತಮ್ಮ ಸ್ನೇಹಿತರ ಜೊತೆ ಇರುವ ಫೋಟೋವನ್ನ ಸ್ಮೃತಿ ಇರಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ರು.. ಆ ಫೋಟೋದಲ್ಲಿಯೂ ಸಹ ಸೃತಿ ಇರಾನಿ ಕೊಂಚ ತೂಕ ಇಳಿಸಿಕೊಂಡಿದ್ರು..

    ಸ್ಮೃತಿ ಇರಾನಿಯಂತೆ ತೂಕ ಇಳಿಸಿಕೊಂಡಿದ್ದ ಖುಷ್ಬೂ

    ಕಳೆದ ಕೆಲವು ತಿಂಗಳುಗಳ ಹಿಂದೆ ಖ್ಯಾತ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಸಹ, ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದರು, ಜೊತೆಗೆ ಸೆಲ್ಫಿ ಫೋಟೋ ಹಂಚಿಕೊಳ್ಳುವ ಮೂಲಕ ಸೋಲು-ಗೆಲುವು ಒಳ್ಳೆಯದು. ಆರೋಗ್ಯ ದೇಹ ಮನಸ್ಸು ಖುಷಿಯಾಗಿ ಇದ್ದರೆ ನೀವು ಸದಾ ಆರೋಗ್ಯವಾಗಿ ಇರುತ್ತೀರ ಎಂದು ಹೇಳಿ ತಮ್ಮ ತೂಕ ಇಳಿಕೆಯ ಬಗ್ಗೆ ಖುಷ್ಬೂ ಹೇಳಿಕೊಂಡಿದ್ದರು.. ಸದ್ಯ ಈಗ ನಟಿ ಖುಷ್ಬೂ ಅವರಂತೆಯೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ತೂಕ ಇಳಿಕೆ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ..
    Published by:ranjumbkgowda1 ranjumbkgowda1
    First published: