ಕೊಳೆತು ದುರ್ವಾಸನೆ ಬೀರುತ್ತಿದ್ದ ಅಮ್ಮ-ತಂಗಿಯ ಶವದೊಂದಿಗೆ 2 ತಿಂಗಳು ಕಳೆದಿದ್ದಳು ಆಕೆ!

ಅಯೋಧ್ಯೆಯ ಆದರ್ಶ ನಗರ ಕಾಲೋನಿಯ ಒಂದೇ ಮನೆಯಲ್ಲಿ ತಾಯ ಮತ್ತು ಇಬ್ಬರು ಹೆಣ್ಣುಮಕ್ಕಳು ವಾಸ ಮಾಡುತ್ತಿದ್ದರು. ಪುಷ್ಪಾ ತನ್ನ ಮಕ್ಕಳಾದ ದೀಪಾ ಮತ್ತು ವಿಭಾ ಜೊತೆಗೆ ವಾಸವಾಗಿದ್ದರು.

news18-kannada
Updated:November 9, 2019, 4:52 PM IST
ಕೊಳೆತು ದುರ್ವಾಸನೆ ಬೀರುತ್ತಿದ್ದ ಅಮ್ಮ-ತಂಗಿಯ ಶವದೊಂದಿಗೆ 2 ತಿಂಗಳು ಕಳೆದಿದ್ದಳು ಆಕೆ!
ಪ್ರಾತಿನಿಧಿಕ ಚಿತ್ರ
  • Share this:
ಲಕ್ನೋ (ನ. 9): ಮಾನಸಿಕ ಅಸ್ವಸ್ಥೆಯಾಗಿದ್ದ ಮಹಿಳೆಯೊಬ್ಬಳು 2 ತಿಂಗಳ ಕಾಲ ತನ್ನ ತಾಯಿ, ತಂಗಿಯ ಕೊಳೆತ ಶವದ ಜೊತೆಗೆ ಮನೆಯಲ್ಲಿ ವಾಸವಾಗಿದ್ದ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ಮನೆಯಿಂದ ದುರ್ವಾಸನೆ ಬರುತ್ತಿದ್ದುದರಿಂದ ಪೊಲೀಸರು ಮನೆ ಬಾಗಿಲು ಒಡೆದು ನೋಡಿದಾಗ ಮೂಳೆಗಳು ಮಾತ್ರ ಕಾಣುವಷ್ಟು ತಾಯಿ-ಮಗಳ ದೇಹಗಳು ಕೊಳೆತು ಹೋಗಿತ್ತು. ಪಕ್ಕದ ರೂಮಿನಲ್ಲಿ ಮಲಗಿದ್ದ ಇನ್ನೋರ್ವ ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಯೋಧ್ಯೆಯ ಆದರ್ಶ ನಗರ ಕಾಲೋನಿಯ ಒಂದೇ ಮನೆಯಲ್ಲಿ ತಾಯ ಮತ್ತು ಇಬ್ಬರು ಹೆಣ್ಣುಮಕ್ಕಳು ವಾಸ ಮಾಡುತ್ತಿದ್ದರು. ಪುಷ್ಪಾ ತನ್ನ ಮಕ್ಕಳಾದ ದೀಪಾ ಮತ್ತು ವಿಭಾ ಜೊತೆಗೆ ವಾಸವಾಗಿದ್ದರು. ಪುಷ್ಪಾ ಅವರ ಗಂಡ 28 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಕೆಲವು ವರ್ಷಗಳ ಹಿಂದೆ ಒಬ್ಬಳು ಮಗಳು ಕೂಡ ಸಾವನ್ನಪ್ಪಿದ್ದಳು.

ಅದಾದ ನಂತರ ದೀಪಾ ಮತ್ತು ವಿಭಾ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ತನ್ನ ಮಕ್ಕಳ ಸ್ಥಿತಿ ಹೀಗಾಯಿತಲ್ಲ ಎಂಬ ಕೊರಗಿನಲ್ಲಿ ಪುಷ್ಪಾ ಕೂಡ ಖಿನ್ನತೆಗೆ ಒಳಗಾಗಿದ್ದರು. ಆ ಮನೆಯಲ್ಲಿದ್ದ ಮೂವರೂ ಬೇರೆಯವರೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಹೀಗಾಗಿ, ಅಕ್ಕಪಕ್ಕದವರು ಆ ಮನೆಯತ್ತ ಹೆಚ್ಚು ಹೋಗುತ್ತಿರಲಿಲ್ಲ.

Ayodhya Ram Mandir: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧ; ಹೇಗಿರಲಿದೆ ಗೊತ್ತಾ ಬೃಹತ್ ದೇಗುಲ?

ಆದರೆ, 2 ದಿನಗಳಿಂದ ಆ ಮನೆಯ ಬಳಿ ಓಡಾಡಿದವರಿಗೆ ದುರ್ನಾತ ಬರುತ್ತಿದ್ದುದರಿಂದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬರುತ್ತಿದ್ದಂತೆ ಮನೆಯ ಬಾಗಿಲು ತೆರೆದಾಗ ಅಮ್ಮ-ಮಗಳಿಬ್ಬರೂ ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ. ತಾಯಿ-ಮಗಳ ಸಾವಿನ ಕಾರಣ ತಿಳಿಯಲು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ ದೀಪಾಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ