ಟೀ ಶರ್ಟ್ ಮೇಲೆ ಟ್ರಂಪ್ ವಿರೋಧಿ ಬರಹ: ಆಕ್ಷೇಪಿಸಿದ್ದಕ್ಕೆ ಬಟ್ಟೆ ಕಳಚಿ ಬೆತ್ತಲಾಗಿ ವೋಟು ಹಾಕಿದ ಹುಡುಗಿ
ಆಕೆ ಟೀ ಶರ್ಟ್ ತೆಗೆಯಬೇಕೆಂಬುದು ನಮ್ಮ ಉದ್ದೇಶವಾಗಿರಲಿಲ್ಲ. ಹೊರಗೆ ಹೋಗಿ ಅದೇ ಟೀ ಶರ್ಟ್ಅನ್ನು ಒಳಮುಖವಾಗಿ ಧರಿಸಿ ಬಂದಿದ್ದರೂ ಆಗುತ್ತಿತ್ತು. ಅದಕ್ಕೆ ಅವಕಾಶವನ್ನೇ ಕೊಡದೇ ಬಟ್ಟೆ ಕಳಚಿದ್ದಾಳೆ ಎಂದು ಅಧಿಕಾರಿ ಹೇಳಿದ್ದಾರೆ.
ಮಹಿಳೆಯೋರ್ವಳು ಮೇಲುಡುಪು ಬಿಚ್ಚಿಯೇ ಮತದಾನ ಮಾಡಿ ಬಂದ ಘಟನೆ ಅಮೆರಿಕಾದ ನ್ಯೂ ಹ್ಯಾಂಪ್ಶೈರ್ನ ಎಕ್ಸ್ಟರ್ ನಲ್ಲಿ ನಡೆದಿದೆ. ಟೀ ಶರ್ಟ್ ಮೇಲೆ ಟ್ರಂಪ್ ವಿರೋಧಿ ಬರಹ ಇದ್ದದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಮತದಾನದ ವೇಳೆ ಮತಗಟ್ಟೆಯಿಂದ ನೂರು ಮೀಟರ್ ಅಂತರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಅವಕಾಶ ಇರುವುದಿಲ್ಲ. ಪ್ರಚಾರ ಸಾಮಾಗ್ರಿಯನ್ನು ಹಿಡಿದು ತರುವುದಾಗಲಿ, ಪ್ರಚಾರವನ್ನಾಗಲಿ ಮಾಡುವಂತಿಲ್ಲ. ಆದರೆ, ನ್ಯೂ ಹ್ಯಾಂಪ್ಶೈರ್ನ ಎಕ್ಸ್ಟರ್ ಎಂಬಲ್ಲಿ ರಾಜಕೀಯ ಬರಹವಿದ್ದ ಟೀ ಶರ್ಟ್ ಧರಿಸಿದ್ದಕ್ಕೆ ಮತದಾನಕ್ಕೆ ಅವಕಾಶವಿಲ್ಲವೆಂದು ಅಧಿಕಾರಿಗಳು ಮಹಿಳೆಗೆ ಮತದಾನ ಮಾಡಲು ಅವಕಾಶ ನೀಡಿಲ್ಲ. ಮಹಿಳೆ ಧರಿಸಿದ್ದ ಟಿ ಶರ್ಟ್ ಮೇಲೆ ಮ್ಯಾಕ್ ಕ್ಯಾನ್ ಹಿರೋ ಟ್ರಂಪ್ ಝಿರೋ ಎಂಬ ಬರಹವಿದ್ದುದರಿಂದ ಅಧಿಕಾರಿಗಳು ಆಕ್ಷೇಪ ಮಾಡಿದ್ದಾರೆ. ಟ್ರಂಪ್ ಝಿರೋ ಎಂದು ಬರೆದಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಅಧಿಕಾರಿ ಮಹಿಳೆಗೆ ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ಮಹಿಳೆ, ನಾನು ಟಿ ಶರ್ಟ್ ತೆಗೆಯಬೇಕೆಂದು ಬಯಸುತ್ತೀರಾ? ನಾನು ಒಳಗಡೆ ಏನನ್ನೂ ಧರಿಸಿಲ್ಲ ಎನ್ನುತ್ತಲೇ ಟಿ ಶರ್ಟ್ ಕಳಚಿದ್ದಾಳೆ. ಅಲ್ಲಿದ್ದವರು ಬೆರಗುಗಣ್ಣಿನಿಂದಲೇ ನೋಡುತ್ತ ನಿಂತಿರುವಾಗಲೇ ಆ ಮಹಿಳೆ ಮತದಾನ ಕೇಂದ್ರಕ್ಕೆ ತೆರಳಿ ತನ್ನ ಹಕ್ಕನ್ನು ಚಲಾಯಿಸಿ ಅಲ್ಲಿಂದ ತೆರಳಿದ್ದಾಳೆ.
ಆಕೆ ಶರ್ಟ್ ತೆಗೆಯಬೇಕೆಂಬುದು ನಮ್ಮ ಉದ್ದೇಶವಾಗಿರಲಿಲ್ಲ. ಹೊರಗೆ ಹೋಗಿ ಅದೇ ಟಿ ಶರ್ಟ್ಅನ್ನು ಒಳಮುಖವಾಗಿ ಧರಿಸಿ ಬಂದಿದ್ದರೂ ಆಗುತ್ತಿತ್ತು. ಅದಕ್ಕೆ ಅವಕಾಶವನ್ನೇ ಕೊಡದೇ ಬಟ್ಟೆ ಕಳಚಿದ್ದಾಳೆ ಎಂದು ಅಧಿಕಾರಿ ಹೇಳಿದ್ದಾರೆ.
ಅಂಥ ಟೀ ಶರ್ಟ್ ಧರಿಸಿದ್ದಕ್ಕೆ ಮತಗಟ್ಟೆಯಿಂದಲೇ ಹೊರಹಾಕಬಹುದಾಗಿತ್ತು. ಆದರೆ ಎರಡು ಸಾವಿರ ಜನ ಮತ ಚಲಾಯಿಸಬೇಕಿದೆ. ಎಲ್ಲ ಪ್ರಕ್ರಿಯೆಗಳನ್ನು ಸುರಕ್ಷಿತವಾಗಿ ಮುಗಿಸಬೇಕಿದೆ. ನಮಗೆ ಮಾಡುವುದಕ್ಕೆ ಬೇರೆ ಬಹಳಷ್ಟು ಕೆಲಸಗಳಿರುವುದರಿಂದ ಈ ವಿಷಯವನ್ನು ದೊಡ್ಡದು ಮಾಡಲು ಹೋಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ