ಆಕಸ್ಮಿಕ ಬೆಂಕಿಗೆ ಧಗಧಗ ಹೊತ್ತಿ ಉರಿದ ಕಾರು: ತಾಯಿ, ಇಬ್ಬರು ಪುತ್ರಿಯರು ಜೀವಂತ ದಹನ!

ಈ ಸಂಬಂಧ ಈಗಾಗಲೇ ಎಫ್​​ಐಆರ್​​ರ ದಾಖಲಿಸಿಕೊಂಡಿದ್ದೇವೆ. ಅವಘಡ ಕುರಿತು ತನಿಖೆ ಮುಂದುವರಿಸಲಿದ್ದೇವೆ ಎಂದು ಡಿಸಿಪಿ ಜಸ್ಮೀತ್‌ ಸಿಂಗ್‌ ತಿಳಿಸಿದ್ದಾರೆ.

Ganesh Nachikethu | news18
Updated:March 11, 2019, 5:03 PM IST
ಆಕಸ್ಮಿಕ ಬೆಂಕಿಗೆ ಧಗಧಗ ಹೊತ್ತಿ ಉರಿದ ಕಾರು: ತಾಯಿ, ಇಬ್ಬರು ಪುತ್ರಿಯರು ಜೀವಂತ ದಹನ!
ಹೊತ್ತಿ ಉರಿದ ಕಾರು
Ganesh Nachikethu | news18
Updated: March 11, 2019, 5:03 PM IST
ನವದೆಹಲಿ(ಮಾ.11): ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ತಾಯಿ ಸೇರಿದಂತೆ ಇಬ್ಬರು ಪುತ್ರಿಯರು ಜೀವಂತ ದಹನವಾಗಿದ್ದಾರೆ. ಇಡೀ ಕುಟಂಬ ದೆಹಲಿಯಲ್ಲಿರುವ ಅಕ್ಷರಧಾಮ ದೇವಾಲಯದ ಕಡೆಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಪ್ರಯಾಣದ ವೇಳೆ ದಾರಿ ಮಧ್ಯೆಯೇ ದಿಢೀರ್​​ ಬೆಂಕಿ ಕಾಣಿಸಿಕೊಂಡು ಕಾರು ಹೊತ್ತು ಉರಿದಿದೆ. ಇದೀಗ ಕಾರಿನಲ್ಲಿಯೇ ಇದ್ದ 35 ವರ್ಷ ವಯಸ್ಸಿನ ಮಹಿಳೆ ಮತ್ತು ಅವರು ಇಬ್ಬರು ಪುತ್ರಿಯರು ಜೀವಂತ ದಹನರಾಗಿದ್ದಾರೆ. ಈ ಅಮಾನುಷ್ಯ ಕೃತ್ಯದಿಂದ ಮೃತ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.

ಇನ್ನು ದೆಹಲಿಯ ಅಕ್ಷರಧಾಮ ಮೇಲ್ಸೇತುವೆಯೊಂದರ ಬಳಿ ಈ ಅನಾಹುತ ಸಂಭವಿಸಿದೆ. ಮೂವರು ಮಕ್ಕಳ ಜತೆಗೆ ಇಡೀ ಕುಟುಂಬ ಡಾಟ್ಸನ್‌ ಗೋ ಎಂಬ ಕಾರಿನಲ್ಲಿ ಅಕ್ಷರಧಾಮಕ್ಕೆ ಪ್ರಯಾಣ ಬೆಳೆಸಿತ್ತು. ಕಾರಿನ ಹಿಂಬದಿಯ ಗ್ಯಾಸ್​​ ಸೋರಿಕೆಯಾಗಿದ್ದು, ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಕಾರು ಧಗಧಗ ಹೊತ್ತು ಉರಿದ ಪರಿಣಾಮ ಓರ್ವ ತಾಯಿ ಸೇರಿದಂತೆ ಇಬ್ಬರು ಪುತ್ರಿಯರು ಮೃತಪಟ್ಟಿದ್ದಾರೆ.

ರಂಜನಾ ಮಿಶ್ರಾ ಎಂಬ 35 ವರ್ಷದ ತಾಯಿ ಹಾಗೂ ಪುತ್ರಿಯರಾದ ರಿಧಿ ಮತ್ತು ನಿಕ್ಕಿ ಎಂಬುವರು ಕಾರಿನ ಬೆಂಕಿಗೆ ಬಲಿಯಾದ ಮೃತರು. ಜತೆಗೆ ಉರಿಯುತ್ತಿದ್ದ ಕಾರಿನಿಂದ  ದಟ್ಟವಾದ ಕಪ್ಪು ಹೊಗೆ ಹೊರಬಂದಿದ್ದು ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಆರು ಮಂದಿ ಸಾವು

ಹಾಗೆಯೇ ದಿಢೀರ್​​​ ಬೆಂಕಿ ಕಾಣಿಸಿಕೊಂಡ ಕೂಡಲೇ ಕಾರು ಚಲಾಯಿಸುತ್ತಿದ್ದ ಉಪೇಂದ್ರ ಮಿಶ್ರಾ ಒಬ್ಬ ಮಗಳ ಜತೆಗೆ ಪರಾರಿಯಾಗಿದ್ದಾರೆ. ಮುಂದಿನ ಸೀಟಿನಲ್ಲಿದ್ದ ಓರ್ವ ಮಗಳನ್ನು ಕಾಪಾಡಿದ ಉಪೇಂದ್ರ ಮಿಶ್ರಾ, ಹಿಂಬದಿ ಸೀಟಿನಲ್ಲಿದ್ದ ಹೆಂಡತಿ ಮತ್ತು ಇನ್ನಿಬ್ಬರು ಪುತ್ರಿಯರನ್ನು ಪಾರು ಮಾಡುವಲ್ಲಿ ಸಫಲರಾಗಿದ್ದಾರೆ. ಕಾರಿನಿಂದ ತಪ್ಪಿಸಿಕೊಂಡು ಹೊರಬರಲಾರದೇ ಮೂವರು ಸುಟ್ಟು ಭಸ್ಮವಾಗಿದ್ದಾರೆ ಎನ್ನುತ್ತಿವೆ ಪೊಲೀಸ್​​​ ಪ್ರಾಥಮಿಕ ವರದಿ ಮೂಲಗಳು.

ಈ ಸಂಬಂಧ ಈಗಾಗಲೇ ಎಫ್​​ಐಆರ್​​ರ ದಾಖಲಿಸಿಕೊಂಡಿದ್ದೇವೆ. ಅವಘಡ ಕುರಿತು ತನಿಖೆ ಮುಂದುವರಿಸಲಿದ್ದೇವೆ ಎಂದು ಡಿಸಿಪಿ ಜಸ್ಮೀತ್‌ ಸಿಂಗ್‌ ತಿಳಿಸಿದ್ದಾರೆ.
------------
First published:March 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ