Husband-Wife: ಕೈಕಾಲು ಕಟ್ಟಿ ಪತ್ನಿಯನ್ನು 4ನೇ ಮಹಡಿಯಿಂದ ಕೆಳಗೆಸೆದು ಕೊಂದ ಪತಿ

ತನ್ನಿಂದ ದೂರವಾಗಿ ಬದುಕುತ್ತಿದ್ದ ಪತ್ನಿಯನ್ನು ಪತಿಯೊಬ್ಬ ನಾಲ್ಕನೇ ಮಹಡಿಯಿಂದ ಕೆಳಗೆಸೆದು ಕೊಲೆ ಮಾಡಿರುವ ಘಟನೆ ಆಗ್ರಾದಲ್ಲಿ ನಡೆದಿದೆ.

ರಿತಿಕಾ ಸಿಂಗ್

ರಿತಿಕಾ ಸಿಂಗ್

  • Share this:
ಕುಟುಂಬ ಕಲಹ ಪ್ರೇಮ ಮತ್ತು ದ್ವೇಷದ ಘಟನೆಗಳು ದಿನನಿತ್ಯ ವರದಿಯಾಗುತ್ತಲೇ ಇರುತ್ತವೆ. ಬಹಳಷ್ಟು ಘಟನೆಗಳಲ್ಲಿ ಹೆಂಡತಿ ಗಂಡನ ಕೊಲ್ಲುವುದು ಗಂಡ ಹೆಂಡತಿಯನ್ನು ಕೊಲ್ಲುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ದಾಂಪತ್ಯ ಕಲಹ, ಅಕ್ರಮ ಸಂಬಂಧಗಳಂತೂ ಹೆಚ್ಚಾಗಿ ಕೊಲೆಯಲ್ಲಿಯೇ (Murder) ಕೊನೆಗೊಳ್ಳುತ್ತವೆ. ಈಗ ಇಂಥದ್ದೇ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಪತಿಯೊಬ್ಬ ತನ್ನ ಪತ್ನಿಯನ್ನು ನಾಲ್ಕನೇ ಮಹಡಿಯಿಂದ (Balcony) ಕೆಳಗೆಸೆದು ಕೊಂದಿದ್ದಾನೆ. ಈ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. 30 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಪತಿ ಮತ್ತು ಇತರ ನಾಲ್ವರು ಮನೆಯ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಎಸೆದ ನಂತರ ಆಕೆ (Woman) ಸಾವನ್ನಪ್ಪಿದ್ದಾರೆ ಎಂದು  ಪೊಲೀಸರು ತಿಳಿಸಿದ್ದಾರೆ.

ಫೇಸ್​ಬುಕ್​ನಲ್ಲಿ ಭೇಟಿಯಾದ ಯುವಕನ ಜೊತೆ ವಾಸಿಸುತ್ತಿದ್ದ ಮಹಿಳೆ

ಮೃತರಾದ ರಿತಿಕಾ ಸಿಂಗ್ ಅವರು ತಮ್ಮ ಪತಿಯಿಂದ ಬೇರ್ಪಟ್ಟ ನಂತರ ಫೇಸ್‌ಬುಕ್‌ನಲ್ಲಿ ಭೇಟಿಯಾದ ಸ್ನೇಹಿತನೊಂದಿಗೆ ತಾಜ್‌ಗಂಜ್ ಪೊಲೀಸ್ ಠಾಣೆಯ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಅವರು ಹೇಳಿದರು.

ಪತಿ ಹಾಗೂ ಮೂವರ ಬಂಧನ

ಮಹಿಳೆಯ ಪತಿ ಆಕಾಶ್ ಗೌತಮ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶದಿಂದ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

ಗೆಳೆಯನೊಂದಿಗೆ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿದ್ದ ಮಹಿಳೆ

"ರಿತಿಕಾ ಸಿಂಗ್ ಎಂದು ಗುರುತಿಸಲಾದ ವಿವಾಹಿತ ಮಹಿಳೆ ತನ್ನ ಫೇಸ್‌ಬುಕ್ ಸ್ನೇಹಿತ ವಿಪುಲ್ ಅಗರವಾಲ್ ಅವರೊಂದಿಗೆ ತಾಜ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ್ಲಾ ಮೇವಾಟಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ" ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ( ಎಸ್‌ಎಸ್‌ಪಿ), ಆಗ್ರಾ, ಸುಧೀರ್ ಕುಮಾರ್ ಸಿಂಗ್ ಹೇಳಿದರು.

2014ರಲ್ಲಿ  ಮದುವೆಯಾಗಿ 2018ರಲ್ಲಿ ಬೇರೆಯಾದ ಜೋಡಿ

ರಿತಿಕಾ ಗಾಜಿಯಾಬಾದ್ ನಿವಾಸಿಯಾಗಿದ್ದು, ಫಿರೋಜಾಬಾದ್ ನಿವಾಸಿ ಆಕಾಶ್ ಗೌತಮ್ ಅವರನ್ನು 2014 ರಲ್ಲಿ ವಿವಾಹವಾದರು ಮತ್ತು 2018 ರಲ್ಲಿ ಬೇರ್ಪಟ್ಟಿದ್ದರು ಎಂದು ಅವರು ಹೇಳಿದರು.

ಮಾಜಿ ಹೆಂಡತಿಯ ಮನೆಗೆ ಬಂದು ದಾಂಧಲೆ

ಶುಕ್ರವಾರ, ರಿತಿಕಾ ಸಿಂಗ್ ಅವರ ಪತಿ ಆಕಾಶ್ ಗೌತಮ್ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರೊಂದಿಗೆ ಅಪಾರ್ಟ್‌ಮೆಂಟ್‌ಗೆ ಬಂದರು. ಅಲ್ಲಿ ಅವರು ರಿತಿಕಾ ಮತ್ತು ಆಕೆಯ ಗೆಳೆಯ ವಿಪುಲ್ ಅಗರವಾಲ್ ಅವರೊಂದಿಗೆ ಜಗಳವಾಡಿದರು. ನಂತರ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ವಿಪುಲ್ ಅಗರವಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಎಸ್‌ಎಸ್‌ಪಿ ಹೇಳಿದರು.

ಕೈಕಾಲು ಕಟ್ಟಿ ಬಾಲ್ಕನಿಯಿಂದ ಎಸೆದರು

ಅಗರವಾಲ್ ನೀಡಿದ ದೂರಿನ ಪ್ರಕಾರ, ಆರೋಪಿಯು ಮಹಿಳೆಯ ಗೆಳೆಯನ ಕೈಗಳನ್ನು ಕಟ್ಟಿ ಫ್ಲಾಟ್‌ನ ಸ್ನಾನಗೃಹದಲ್ಲಿ ಬೀಗ ಹಾಕಿದ್ದಾನೆ. ಆರೋಪಿಗಳು ರಿತಿಕಾಳನ್ನು ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಎಸೆಯುವ ಮುನ್ನ ಅವರ ಕೈಗಳನ್ನೂ ಕಟ್ಟಿ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Rape Case: ಎಲ್ಲರೂ ಮದುವೆಯಲ್ಲಿ ಬ್ಯುಸಿ ಇದ್ದಾಗ 5 ವರ್ಷದ ಬಾಲಕಿ ಮೇಲೆ 15ರ ಬಾಲಕನಿಂದ ಅತ್ಯಾಚಾರ

ಸ್ನಾನಗೃಹದ ಕಿಟಕಿಯಿಂದ ಸಹಾಯಕ್ಕಾಗಿ ಕೂಗಿ ನೆರೆಹೊರೆಯವರ ಗಮನ ಸೆಳೆಯುವ ಮೂಲಕ ಅಗರವಾಲ್ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು.

"ಆಗ್ರಾದ ತಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 302 ಮತ್ತು 34 ರ ಅಡಿಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೂವರನ್ನು ಬಂಧಿಸಲಾಗಿದೆ, ಇಬ್ಬರು ತಲೆಮರೆಸಿಕೊಂಡಿದ್ದಾರೆ" ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ ಸಿಟಿ) ವಿಕಾಸ್ ಕುಮಾರ್ ಪಿಟಿಐಗೆ ತಿಳಿಸಿದರು.
Published by:Divya D
First published: