news18-kannada Updated:February 26, 2021, 11:42 AM IST
ಪ್ರಾತಿನಿಧಿಕ ಚಿತ್ರ
ಉತ್ತರ ಪ್ರದೇಶ(ಫೆ.26): ಪೊಲೀಸರಿಗೆ ದಾರಿ ತಪ್ಪಿಸುವುದಕ್ಕಾಗಿ ನಮ್ಮ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ ಮಹಿಳೆಯನ್ನು ಪೊಲೀಸರು ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಫೆ.21ರ ರಾತ್ರಿ ಇಬ್ಬರು ಅಪರಿಚಿತ ವ್ಯಕ್ತಿಗಳು ತಮ್ಮ ಮನೆಗೆ ನುಗ್ಗಿ 10 ಲಕ್ಷ ರೂ. ಮೌಲ್ಯ ನಗದು ಮತ್ತು ಆಭರಣವನ್ನು ದೋಚಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಳು. ಪ್ರಕರಣ ಭೇದಿಸಿದಾಗ ಆರೋಪಿತ ಮಹಿಳೆ ಸೇರಿದಂತೆ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಮ್ಮ ಮನೆಯಲ್ಲಿ ಕಳ್ಳತನ ಆಗಿದೆ ಎಂದು ಆರೋಪಿಸಿದ ಮಹಿಳೆ ಹೆಸರನ್ನು ಗಾಜಿಯಾಬಾದ್ನ ವಿಜಯ ನಗರ ನಿವಾಸಿ ಪೂಜಾ ಕುಮಾರ್ (24) ಎಂದು ಗುರುತಿಸಲಾಗಿದೆ. ಈಕೆಗೆ ಸಹಾಯ ಮಾಡಿದ ತಾಯಿ ರಾಜ್ಕುಮಾರಿ ಸಿಂಗ್ (48), ಚಾಲಕ ವಿನೋದ್ ಕುಮಾರ್ (45), ಆಭರಣ ವ್ಯಾಪಾರಿ ಗಜೇಂದ್ರ ಸೋನಿ (55) ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆ ಮದುವೆ ಆಗಿರುವ ಪೂಜಾ ವಿಜಯ್ ನಗರದಲ್ಲಿ ವಾಸ ಮಾಡುತ್ತಿದ್ದಾಳೆ. ಈಕೆಗೆ ಸಹಾಯ ಮಾಡಿದ ಮೂವರು ಹತ್ರಾಸ್ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಗುಬ್ಬಚ್ಚಿ ಗೂಡಿನ ರಕ್ಷಣೆಗಾಗಿ ಬೆಳೆ ಕಟಾವು ಮಾಡದ ರೈತ; ಆನಂದ್ ಮಹೀಂದ್ರಾ ಮೆಚ್ಚುಗೆ
ಘಟನೆಯ ಹಿಂದಿನ ರಾತ್ರಿಯೂ ಪೂಜಾ ಪತಿ ಮತ್ತು ಅಳಿಯಂದಿರು ಮನೆಯಲ್ಲಿ ಇರಲಿಲ್ಲ. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಗೆ ನುಗ್ಗಿ ನನಗೆ ನಿದ್ರೆ ಮಾತ್ರೆಗಳನ್ನು ನೀಡಿ ಬೆಲೆಬಾಳುವ ಸಾಮಗ್ರಿಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿ ಪೂಜಾ ಪೊಲೀಸರಿಗೆ ಹೇಳಿದ್ದಳು.
ಪೊಲೀಸರಿಗೆ ಅನುಮಾನ ಬಂದಿದ್ದು ಹೇಗೆ?
ಗಾಜಿಯಾಬಾದ್ ಸರ್ಕಲ್ ಆಫೀಸರ್ (ನಗರ 1) ಅಭಯ್ಕುಮಾರ್ ಮಿಶ್ರಾ ಅವರು ಹೇಳುವ ಪ್ರಕಾರ, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಹಲವು ಅನುಮಾನಾಸ್ಪದ ವಿಷಯಗಳನ್ನು ನಾವು ಕಂಡಿದ್ದೇವೆ. ಹಾಗಾಗಿ, ಮನೆಯಲ್ಲಿ ಕಳ್ಳತನ ಘಟನೆ ನಡೆದ ಸಮಯದಲ್ಲಿ ಮಹಿಳೆ ಯಾರೊಂದಿಗೋ ದೂರವಾಣಿಯಲ್ಲಿ ಮಾತನಾಡುತ್ತಿದ್ದಳು ಎಂದು ಪರಿಶೀಲಿಸಲಾಯಿತು.
ಆಕೆ ಆರೋಪಿಸಿದಂತೆ ಮಹಿಳೆಗೆ ನಿದ್ರೆ ಮಾತ್ರೆ ನೀಡಿದ್ದರೆ ಆಕೆ ದೂರವಾಣಿಯಲ್ಲಿ ಮಾತನಾಡಲು ಸಾಧ್ಯವಿಲ್ಲ. ಆದರೆ, ಗಾಜಿಯಾಬಾದ್ನ ಚಾಲಕ ವಿನೋದ್ನೊಂದಿಗೆ ಹಲವಾರು ಬಾರಿ ಪೂಜಾ ಮಾತನಾಡಿದ್ದರು. ಹತ್ರಾಸ್ನಲ್ಲಿರುವ ಪೂಜಾ ತನ್ನ ತಾಯಿಯ ಮನೆಯಲ್ಲಿ ತನ್ನ ಫೋನ್ ಅನ್ನು ಬಿಟ್ಟು ಚಾಲಕನೊಂದಿಗೆ ಗಾಜಿಯಾಬಾದ್ಗೆ ಬಂದಿದ್ದಳು. ಘಟನೆಯ ಸಮಯದಲ್ಲಿ ಪೂಜಾ ಚಾಲಕ ವಿನೋದ್ನ ಫೋನ್ ಬಳಸುತ್ತಿದ್ದಳು ಎಂದು ಮಾಹಿತಿ ನೀಡಿದ್ದಾರೆ.ಪೊಲೀಸರು ಒಮ್ಮೆ ಚಾಲಕ ವಿನೋದ್ನನ್ನು ಪ್ರಶ್ನಿಸಿದಾಗ ಆತ ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದಾನೆ. ಚಾಲಕ ವಿನೋದ್ ಮತ್ತು ಪೂಜಾ ತಾಯಿ ರಾಜಕುಮಾರಿ ಈ ಮೊದಲೇ ಸಂಚು ಹಾಕಿಕೊಂಡಂತೆ ಮನೆಯಲ್ಲಿದ್ದ ಅಮೂಲ್ಯ ವಸ್ತುಗಳನ್ನು ಕಳ್ಳತನ ಮಾಡಿ ಹೋಗಿದ್ದೇವೆ. ರಾತ್ರಿ ವೇಳೆ ನೆರೆಹೊರೆಯ ಮಹಿಳೆಯೊಬ್ಬರು ಪೂಜಾ ಮನೆ ಕಡೆಗೆ ಬಂದರು. ಆದರೆ ಘಟನೆ ಬಗ್ಗೆ ಅರಿವು ಆಗಲಿಲ್ಲ ಎಂದು ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಬೆಟ್ಟಿಂಗ್ ಅಭ್ಯಾಸ ಹೊಂದಿದ್ದ ಪೂಜಾ ತಾಯಿ
ಆರೋಪಿ ಪೂಜಾಳ ತಾಯಿ ಇತ್ತೀಚೆಗೆ ಬೆಟ್ಟಿಂಗ್ನಲ್ಲಿ ಹಣ ಹೂಡಿಕೆ ಮಾಡುವ ಅಭ್ಯಾಸ ಹೊಂದಿದ್ದರು. ಇದರಿಂದಾಗಿ ಪೊಲೀಸರಿಗೆ ಅನುಮಾನ ಬಂದ ಕಾರಣ ಆಕೆಯನ್ನು ವಿಚಾರಣೆ ನಡೆಸಲಾಯಿತು. ತಾಯಿ ಮಗಳು ಸೇರಿಕ್ಕೊಂಡು ಮನೆಯಲ್ಲಿದ್ದ ಬೆಲೆಬಾಳುವ ಅಮೂಲ್ಯ ವಸ್ತು ಮತ್ತು ನಗದು ಹಣವನ್ನು ತಾವೇ ಎಗರಿಸಿ ಕಳ್ಳತನ ನಡೆದಂತೆ ಪ್ರಕರಣವನ್ನು ದಾಖಲಿಸಿದ್ದರು. ಅವರ ಪ್ರಯತ್ನ ವಿಫಲವಾಗಿದೆ. ಇನ್ನು, ಪೂಜಾ ಮನೆಯಲ್ಲಿದ್ದ ಕದ್ದ ಚಿನ್ನಾಭರಣವನ್ನು ಮಾರಿ ಹಣ ಪಡೆಯಲು ಸಹಾಯ ಮಾಡಿದ್ದ ಕಾರಣಕ್ಕಾಗಿ ಆಭರಣ ವ್ಯಾಪಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಬಂಧಿತ ಆರೋಪಿಗಳಿಂದ ಚಿನ್ನಾಭರಣ ಮತ್ತು 1.10 ಲಕ್ಷ ರೂ. ನಗದು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Published by:
Latha CG
First published:
February 26, 2021, 11:42 AM IST