ಹರಿಯಾಣ,(ಜೂ.08): ಮಹಿಳೆಯೊಬ್ಬಳು ತನ್ನ ವಯಸ್ಸಾದ ಅತ್ತೆಗೆ ಸ್ವಲ್ಪವೂ ಕರುಣೆ ಇಲ್ಲದೇ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹರಿಯಾಣದ ಮಹೇಂದ್ರಗರ್ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಪಕ್ಕದ ಮನೆಯ ವ್ಯಕ್ತಿಯೊಬ್ಬರು ಈ ನಿಷ್ಕರುಣೀಯ ದೃಶ್ಯವನ್ನು ತಮ್ಮ ಫೋನ್ನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ವಾಟ್ಸ್ಯಾಪ್ ಮತ್ತು ಫೇಸ್ಬುಕ್ಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಮಹಿಳೆಯ ವಿರುದ್ಧ ತೀರಾ ಖಂಡನೆ ವ್ಯಕ್ತವಾಗುತ್ತಿದೆ.
ಹಲ್ಲೆಗೊಳಗಾದ ವೃದ್ಧೆ ಇಂಡಿಯನ್ ನ್ಯಾಷನಲ್ ಆರ್ಮಿಯ ಸಂಸ್ಥಾಪಕ ಸುಭಾಷ್ ಚಂದ್ರ ಬೋಸ್ ಅವರ ಅವಧಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ಸರ್ಕಾರದಿಂದ 30 ಸಾವಿರ ರೂ. ಪಿಂಚಣಿ ಪಡೆಯುತ್ತಿದ್ದರು ಎನ್ನಲಾಗಿದೆ.
ಈ ವಿಡಿಯೋದಲ್ಲಿ ತುಂಬಾ ವಯಸ್ಸಾದ ವೃದ್ದೆಯೊಬ್ಬರು ಮರದ ಮಂಚದ ಮೇಲೆ ಮಲಗಿದ್ದಾರೆ. ತೀರಾ ನಿಶ್ಯಕ್ತರಾಗಿರುವ ಅತ್ತೆಗೆ ಸೊಸೆ ಕರುಣೆ ಇಲ್ಲದೇ ಹೊಡೆಯುತ್ತಿದ್ದಾರೆ. ವೃದ್ಧೆಯ ತಲೆ ಕೂದಲು ಹಿಡಿದು ಎಳೆದಾಡಿ ತನ್ನ ದರ್ಪ ತೋರಿದ್ದಾಳೆ. ಜೊತೆಗೆ ಕಾಲನ್ನು ನುಲುಚಿ, ದೇಹವನ್ನು ಹಿಡಿದು ಎಳೆದಾಡಿದ್ದಾಳೆ. ಪದೇ ಪದೇ ಇದೇ ರೀತಿ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ತೀರಾ ಹಲ್ಲೆಗೊಳಗಾದ ಆ ನಿಶ್ಯಕ್ತ ವೃದ್ಧೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಸಹಾಯಕರಾಗಿದ್ದಾರೆ.
Dear @mlkhattar
This video clip is from Niwaj Nagar village in the subdivision Narnaul of the Mahendragarh District in Haryana filmed by neighbours.This old woman is a proud Ex member of INA and get Rs 30000/- Govt pension who is regularly beaten by her Daughter in law.
Pls help pic.twitter.com/hJLJoMh2hc
ರಿಷಿ ಬಾಗ್ರೆ ಎಂಬ ವ್ಯಕ್ತಿ ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಹರಿಯಾಣ ಸಿಎಂ ಮನೋಹರ್ ಲಾಲ್ ಆ ಮಹಿಳೆಯನ್ನು ಬಂಧಿಸಿರುವುದಾಗಿ ಖಚಿತಪಡಿಸಿದ್ದಾರೆ. "ಇದು ತುಂಬಾ ಶೊಚನೀಯ, ದಯನೀಯ ಹಾಗೂ ಖಂಡನೀಯವಾಗಿದೆ. ಇಂತಹ ನಡವಳಿಕೆಯನ್ನು ಜನರು ಸಹಿಸಬಾರದು. ಆ ಮಹಿಳೆ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ," ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
This is deplorable and condemnable, such behavior should not be tolerated in civilised society.
ಈ ವಿಡಿಯೋ ಮಾಡಿದ ಪಕ್ಕದ ಮನೆ ಯುವತಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದು, ಈ ದೃಶ್ಯ ನೋಡಿ ನಾನು ಶಾಕ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ. "ಆ ಮಹಿಳೆ ಯಾವಾಗಲೂ ತನ್ನ ವಯಸ್ಸಾದ ಅತ್ತೆಗೆ ಬೈಯ್ಯುವುದು ಹೊಡೆಯುವುದು ಮಾಡುತ್ತಿದ್ದಳು. ನಾನು ತುಂಬಾ ಸಲ ನೋಡಿದ್ದೆ. ಆದರೆ ಏನು ಮಾಡಬೇಕೆಂದು ಗೊತ್ತಾಗಿರಲಿಲ್ಲ. ಬಳಿಕ ವಿಡಿಯೋ ಮಾಡಲು ನಿರ್ಧರಿಸಿದೆ. ತಪ್ಪು ಮಾಡಿರುವುದು ಆ ಮಹಿಳೆ, ನಾನು ಹೆದರುವುದಿಲ್ಲ," ಎಂದು ಯುವತಿ ಹೇಳಿದ್ದಾಳೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆದ ಬಳಿಕ ಪೊಲೀಸರು ಮಹಿಳೆ ಮನೆಗೆ ಆಗಮಿಸಿ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. "ನಾವು ಹಲ್ಲೆಗೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ವೈದ್ಯಕೀಯ ಪರೀಕ್ಷೆ ಬಳಿಕ ಅವರು ಎಲ್ಲಿ ಇರಲು ಬಯಸುತ್ತಾರೋ ಅಲ್ಲಿಗೆ ಕರೆದುಕೊಂಡು ಹೋಗುತ್ತೇವೆ," ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಮಹಿಳೆ ಮೊದಲು ಮನೆ ಬಿಟ್ಟು ಪರಾರಿಯಾಗಿದ್ದಳು. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ