Viral News: ಮಧ್ಯಾಹ್ನ ನಿದ್ದೆ ಮಾಡಿದ್ದಕ್ಕೆ ಸೊಸೆಗೆ ಹಿಗ್ಗಾಮುಗ್ಗಾ ಥಳಿಸಿದ ಅತ್ತೆ-ಮಾವ

ಮನೆಗೆಲಸ ಮಾಡಿ ಸುಸ್ತಾಗಿದ್ದಕ್ಕೆ ಮಧ್ಯಾಹ್ನ ಮಲಗಿದರೆ ಅದಕ್ಕೇ ಸೊಸೆಗೆ ಅತ್ತೆ ಮಾವ ಚೆನ್ನಾಗಿ ಹೊಡೆದಿದ್ದಾರೆ. ಮೊದಲು ಗಂಡನೂ ಹೊಡೆಯುತ್ತಿದ್ದ ಎಂದು ಸದ್ಯ ಮಹಿಳೆ ಪೊಲೀಸರ ಮೊರೆಹೋಗಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಯಾರಾದರೂ ನಮ್ಮ ಮನೆಗಳಲ್ಲಿ ಮಧ್ಯಾಹ್ನ ನಿದ್ದೆ (Afternoon Nap) ಮಾಡುತ್ತಿರುವುದನ್ನು ನೋಡಿದರೆ ಮನೆಯಲ್ಲಿರುವ ಹಿರಿಯರು ಮಧ್ಯಾಹ್ನ ಮಲಗಬಾರದು ಎಂದು ಬಯ್ಯುವುದನ್ನು ನಾವು ಕೇಳಿರುತ್ತೇವೆ. ಆದರೆ ಎಲ್ಲಾದರೂ ಮಧ್ಯಾಹ್ನ ನಿದ್ದೆ ಮಾಡಿದಕ್ಕಾಗಿ ಹೊಡೆದಿರುವುದನ್ನು (Thrashing) ಎಲ್ಲಿಯೂ ಇದುವರೆಗೆ ಕೇಳಿರಲು ಸಾಧ್ಯವೇ ಇಲ್ಲ.ಆದರೆ ಇಲ್ಲೊಂದು ಘಟನೆ ನಡೆದಿದ್ದು, ಮನೆಯ ಸೊಸೆಯನ್ನು (daughter in law) ತನ್ನ ಅತ್ತೆ ಮಾವ (In laws) ಇಬ್ಬರು ಸೇರಿಕೊಂಡು ಆಕೆಗೆ ಮಧ್ಯಾಹ್ನ ಮಲಗಿದ್ದಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾಳೆ. ಆದರೆ ಈ ಆರೋಪದ ಹಿಂದೆ ಇನ್ನೂ ಅನೇಕ ಕಾರಣಗಳಿವೆ ಎಂದು ನಿಮಗೆ ಇದನ್ನು ಪೂರ್ತಿಯಾಗಿ ಓದಿದರೆ ಅರ್ಥವಾಗುತ್ತದೆ.

ಗುಜರಾತಿನ ಅಹ್ಮದಾಬಾದ್‌ನ ಶಾಹಿಬಾಗ್‌ನಲ್ಲಿ ನೆಲೆಸಿರುವ 24 ವರ್ಷದ ಮಹಿಳೆ, ಮಧ್ಯಾಹ್ನ ಹೊತ್ತಿನಲ್ಲಿ ತಾನು ಮಲಗುವುದು ತನ್ನ ಅತ್ತೆ ಮಾವನಿಗೆ ಇಷ್ಟವಾಗಲಿಲ್ಲ ಎಂದು ಹೇಳಿದ್ದಾಳೆ. ಆರಂಭದಲ್ಲಿ, ಅವರು ಅವಳ ಮಧ್ಯಾಹ್ನದ ನಿದ್ರೆಯನ್ನು ವಿರೋಧಿಸಿದರು ಮತ್ತು ನಂತರ ನಾನು ಮಧ್ಯಾಹ್ನ ನಿದ್ರೆಯನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಿದ್ದಕ್ಕೆ ಅತ್ತೆ ಮತ್ತು ಮಾವ ಇಬ್ಬರೂ ಹೊಡೆಯಲು ಪ್ರಾರಂಭಿಸಿದರು ಎಂದು ಸೊಸೆ ಹೇಳಿದ್ದಾಳೆ.

ಈ ಮಹಿಳೆಯು 2016ರಲ್ಲಿ ಮೆಹ್ಸಾನಾದಲ್ಲಿರುವ ಕಾಡಿಯ ವ್ಯಕ್ತಿಯೊಬ್ಬನನ್ನು ಮದುವೆಯಾದಳು ಮತ್ತು ಅಂದಿನಿಂದ ತನ್ನ ಅತ್ತೆ-ಮಾವನೊಂದಿಗೆ ಒಂದೇ ಮನೆಯಲ್ಲಿಯೇ ವಾಸಿಸುತ್ತಿದ್ದಳು ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಈ ಸಮಸ್ಯೆ ಇಂದು ನಿನ್ನೆಯದಲ್ಲ

"ಮೊದಲಿನಿಂದಲೂ, ನಾನು ಮಧ್ಯಾಹ್ನ ನಿದ್ರೆ ಮಾಡುವುದನ್ನು ಅವರು ಆಕ್ಷೇಪಿಸುತ್ತಿದ್ದರು. ನಾನು ಮುಂಜಾನೆ ಬೇಗೆ ಏಳುವುದರಿಂದ ನನಗೆ ಮಧ್ಯಾಹ್ನ ಬರುವ ನಿದ್ರೆ ತಡೆಯಲು ಸಾಧ್ಯವಾಗುವುದಿಲ್ಲ" ಎಂದು ಸೊಸೆ ಹೇಳಿದರು.

ಇದನ್ನೂ ಓದಿ: Family Fight: ಅನ್ನ ಮಾಡಿದ್ದಕ್ಕೆ ಅತ್ತೆ-ಸೊಸೆ ಜಗಳ, ಅತ್ತೆ ಮೇಲೆ ಬಿಸಿ ಅನ್ನದ ತಿಳಿ ಎರಚಿದ ಸೊಸೆ

ಮೊದಲ ಬಾರಿಗೆ ತನ್ನ ಪತಿ ಹೊಡೆದಾಗ ಅವಳು ಕಾಡಿ ಪೊಲೀಸರಿಗೆ ದೂರು ಸಲ್ಲಿಸಿದ್ದಳು. ಆದರೆ ಅವರು ನಂತರ ರಾಜಿ ಮಾಡಿಕೊಳ್ಳಲು ಬಂದ ನಂತರ ಅವಳು ಅವನೊಂದಿಗೆ ವಾಸಿಸಲು ಹಿಂತಿರುಗಿದಳು. ಆದರೂ, ಅದರ ನಂತರವೂ ಪರಿಸ್ಥಿತಿ ಸುಧಾರಿಸಲಿಲ್ಲ. "ನಾನು ಗರ್ಭಿಣಿಯಾಗಿದ್ದಾಗ ನನ್ನ ಪತಿ ಮತ್ತು ಅತ್ತೆ ಮಾವ ನನಗೆ ಸಹಾಯ ಮಾಡಲಿಲ್ಲ ಮತ್ತು ನನ್ನನ್ನು ನನ್ನ ಹೆತ್ತವರ ಮನೆಗೆ ಕಳುಹಿಸಿದರು" ಎಂದು ಅವರು ಹೇಳಿದರು.

ಮೊದಲಿನಿಂದಲೂ ಗಂಡ-ಹೆಂಡತಿ ನಡುವೆ ಅಷ್ಟಕಷ್ಟೇ

ಈ ದಂಪತಿ ಸೆಪ್ಟೆಂಬರ್ 18, 2017 ರಂದು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. "ಇದು ಕೂಡ ನನ್ನ ಅತ್ತೆ ಮಾವ ಮತ್ತು ಗಂಡನಿಗೆ ಸರಿ ಹೋಗಲಿಲ್ಲ. ಗಂಡು ಮಗು ಆಗದ ಕಾರಣ ಅವರು ನನಗೆ ತುಂಬಾನೇ ಕಿರುಕುಳ ನೀಡಿದರು ಮತ್ತು ಥಳಿಸಿದರು" ಎಂದು ಹೇಳಿದರು.

ಈ ವರ್ಷದ ಫೆಬ್ರವರಿ 7ರಂದು ಅವರ ಪತಿ ಅವಳನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಸಮುದಾಯದ ನಾಯಕರ ಹಸ್ತಕ್ಷೇಪದ ಹೊರತಾಗಿಯೂ, ಪತಿ ಅವಳನ್ನು ಅವನ ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದರು. ಈ ಘಟನೆಯ ನಂತರ, ಅವಳು ಮಾಧವಪುರ ಪೊಲೀಸರನ್ನು ಸಂಪರ್ಕಿಸಿ ತನ್ನ ಪತಿ ಮತ್ತು ಅತ್ತೆ ಮಾವಂದಿರ ವಿರುದ್ಧ ಕೌಟುಂಬಿಕ ಹಿಂಸೆಯ ಬಗ್ಗೆ ದೂರು ಸಲ್ಲಿಸಿದಳು.
Published by:Soumya KN
First published: