ಚೆನ್ನೈ: ರಸ್ತೆ ಗುಂಡಿಗಳು ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ಗುಂಡಿ ತಪ್ಪಿಸಲು ಹೋಗಿ ವಾಹನದಿಂದ ಬಿದ್ದು ಗಂಭೀರವಾಗಿ ಗಾಯಗೊಂಡವರು ಕೆಲವರಾದರೆ, ಪ್ರಾಣವನ್ನೇ ಕಳೆದುಕೊಂಡವರು ಮತ್ತಷ್ಟು ಜನ. ಹೀಗಿದ್ದರೂ ಸರ್ಕಾರ ಮಾತ್ರ ರಸ್ತೆ ಗುಂಡಿಗಳ (Pothole) ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಸದ್ಯ ರಸ್ತೆ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸಿ ಗಾಡಿಯಿಂದ ಕೆಳಗೆ ಬಿದ್ದ 22 ವರ್ಷದ ಯುವತಿ ಟ್ರಕ್ಗೆ (Truck) ಸಿಲುಕಿ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ (Chennai) ನಡೆದಿದೆ. ಮೃತ ಯುವತಿಯನ್ನು ಶೋಭನಾ ಎಂದು ಗುರುತಿಸಲಾಗಿದ್ದು, ಇವರು ಖಾಸಗಿ ಟೆಕ್ ಕಂಪನಿ (Private Tech Company) ಝೋಹೋದಲ್ಲಿ (Zoho) ಇಂಜಿನಿಯರ್ (Engineer) ಆಗಿ ಕೆಲಸ ಮಾಡುತ್ತಿದ್ದರು. ಶೋಭನಾ ತಮ್ಮ ಸಹೋದರನನ್ನು ನೀಟ್ ಕೋಚಿಂಗ್ ತರಗತಿಗೆ (NEET Coaching Class) ಡ್ರಾಪ್ ಮಾಡಲು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಅಪಘಾತದಿಂದ ಸಹೋದರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಆದರೆ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಚೆನ್ನೈನ ಮಧುರವಾಯಲ್ನ ಸರ್ವಿಸ್ ರಸ್ತೆಯಲ್ಲಿ ಘಟನೆ
ಈ ಬಗ್ಗೆ ಪ್ರತಿಕ್ರಿಯಿಸಿದ ಪೂನಮಲ್ಲಿ ಪೊಲೀಸ್ ಅಧಿಕಾರಿ, ಶೋಭನಾ ತಮ್ಮ ಸಹೋದರನ ಜೊತೆಗೆ ಮಧುರವಾಯಲ್ನ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾರೆ. ಆದರೆ ಈ ವೇಳೆ ರಸ್ತೆಯಲ್ಲಿದ್ದ ಗುಂಡಿಯಿಂದ ತಪ್ಪಿಸಿಕೊಳ್ಳಲು ಹೋಗಿ ಇಬ್ಬರೂ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಯುವತಿಗೆ ಮೇಲೆ ಹರಿದು ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಾಲಕನಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
TN | A woman software engineer, S Shobana,died after being mowed down by a truck near Maduravoyal in Chennai y'day.She lost control of her two-wheeler when she hit a pothole on the road.Her brother was present with her & sustained injuries;admitted to hospital: Poonamallee Police pic.twitter.com/nguwsoGuBW
— ANI (@ANI) January 4, 2023
ಅಪಘಾತ ಬಳಿಕ ಎಸ್ಕೇಪ್ ಆಗಿದ್ದ ಚಾಲಕ ಅರೆಸ್ಟ್
ಶೋಭನಾ ಮತ್ತು ಅವರ ಸಹೋದರ ಗಾಡಿಯಲ್ಲಿ ಹೋಗುವಾಗ ಹೆಲ್ಮೆಟ್ ಧರಿಸಿರಲಿಲ್ಲ. ಅಲ್ಲದೇ ಅಪಘಾತದ ಬಳಿಕ ಪರಾರಿಯಾಗಿದ್ದ ಟ್ರಕ್ ಚಾಲಕನನ್ನು ಮೋಹನ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಯುವತಿಯ ಸಹೋದರನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಟ್ರಕ್ ಚಾಲಕನ ಅಜಾಗರೂಕ ಚಾಲನೆ ಮತ್ತು ನಿರ್ಲಕ್ಷ್ಯವೇ ಯುವತಿ ಸಾವಿಗೆ ಕಾರಣ ಎಂಬ ಆರೋಪದಡಿ ಮೋಹನ್ ಅನ್ನು ಬಂಧಿಸಲಾಗಿದೆ. ರಸ್ತೆಯಲ್ಲಿದ್ದ ಗುಂಡಿಯನ್ನು ಇದೀಗ ನಾಗರಿಕ ಅಧಿಕಾರಿಗಳು ಸರಿಪಡಿಸಿದ್ದಾರೆ. ಇನ್ನೂ ಮೃತ ಯುವತಿಯ ಸಹೋದರನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಶೋಭನಾ ಸಾವಿಗೆ ಝೋಹೋ ಕಂಪನಿಯ ಸಿಇಒ ಟ್ವೀಟ್
ಶೋಭನಾ ಸಾವಿಗೆ ಝೋಹೋ ಕಂಪನಿಯ ಸಿಇಒ ಶ್ರೀಧರ್ ವೆಂಬು ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಶೋಭನಾ ಅವರ ಸಾವಿಗೆ ಹದಗೆಟ್ಟ ರಸ್ತೆಗಳೇ ಕಾರಣ ಎಂದು ದೂಷಿಸಿದ್ದಾರೆ.
ನಮ್ಮ ಉದ್ಯೋಗಿಗಳಲ್ಲಿ ಒಬ್ಬರಾದ ಶೋಭನಾ, ಚೆನ್ನೈನ ಮಧುರವಾಯಲ್ ಬಳಿ ಇದ್ದ ದೊಡ್ಡ ರಸ್ತೆ ಗುಂಡಿಯಿಂದ ತಪ್ಪಿಸಿಕೊಳ್ಳಲು ಹೋಗಿ ಸ್ಕೂಟರ್ ಸ್ಕಿಡ್ ಆಗಿ ದುರಂತವಾಗಿ ಸಾವನ್ನಪ್ಪಿದ್ದಾರೆ. ತಮ್ಮ ಕಿರಿಯ ಸಹೋದರನನ್ನು ತರಗತಿಗೆ ಬಿಡಲು ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ನಮ್ಮ ನಗರದಲ್ಲಿರು ಹದಗೆಟ್ಟ ರಸ್ತೆಗಳಿಂದ ಯುವತಿಯ ಕುಟುಂಬಕ್ಕೆ ಮತ್ತು ಜೊಹೋ ಕಂಪನಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Bengaluru Roads: ರಸ್ತೆ ಗುಂಡಿ ವಿರುದ್ಧ ದೂರು ನೀಡಲು ಮೊಬೈಲ್ ಆ್ಯಪ್!
ಶೋಭನಾ ಸಾವಿನ ನಂತ್ರ ರಸ್ತೆ ಗುಂಡಿ ಮುಚ್ಚಿಸಿರುವ ನಾಗರಿಕ ಅಧಿಕಾರಿಗಳು
ಇದೀಗ ಶೋಭನಾ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಶೋಭನಾ ಸಾವಿನ ನಂತರ ಈಗ ಚೆನ್ನೈ ನಾಗರಿಕ ಅಧಿಕಾರಿಗಳು ರಸ್ತೆಯ ಗುಂಡಿಗಳನ್ನು ಮುಚ್ಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ