• Home
 • »
 • News
 • »
 • national-international
 • »
 • Viral Story: ಹೆಬ್ಬಾವಿನ ಹೊಟ್ಟೆಯಿಂದ ಜೀವಂತವಾಗಿ ಬದುಕಿ ಬಂದ ಮಹಿಳೆ!

Viral Story: ಹೆಬ್ಬಾವಿನ ಹೊಟ್ಟೆಯಿಂದ ಜೀವಂತವಾಗಿ ಬದುಕಿ ಬಂದ ಮಹಿಳೆ!

ಹೆಬ್ಬಾವು

ಹೆಬ್ಬಾವು

ಕೆಲಸಕ್ಕೆಂದು ಹೋದ ಮಹಿಳೆ ಹೆಬ್ಬಾವು ನುಂಗಿ ಸಾವನ್ನಪ್ಪಿದ್ದಾರೆ. ನಂತರ ಊರವರು‌, ಪೊಲೀಸ್ ಸಿಬ್ಬಂದಿಗಳು ಸೇರಿ ಅವಳ ಮೃತದೇಹವನ್ನು ಹೊರತೆಗೆದಿದ್ದಾರೆ. ಹೆಬ್ಬಾವು ಯಾವ ರೀತಿ ಮಹಿಳೆಯನ್ನ ನುಂಗಿದೆ ಇಲ್ಲಿದೆ ಮಾಹಿತಿ.

 • Share this:

  ಹೆಬ್ಬಾವಿನ ಹೊಟ್ಟೆಯಿಂದ ಜೀವಂತವಾಗಿ ಬದುಕಿಬಂದ ಮಹಿಳೆ!ಅಬ್ಬಾ! ಏನಿದು ಭಯಾನಕ ಕಥೆ. ಇದುವರೆಗೆ ಮನುಷ್ಯರು ತನ್ನ ಸ್ವಾರ್ಥಕ್ಕಾಗಿ ಕೊಂದು ಪ್ರಾಣಿಗಳನ್ನು (Animals) ಹಿಂಸಿಸುತ್ತಿದ್ದರು. ಆದರೆ ಇದೀಗ ಇಂಡೋನೇಷ್ಯಾದಲ್ಲೊಂದು ಭಯಾನಕ ಘಟನೆ ನಡೆದಿದೆ. ವಿಷಯ ಏನಪ್ಪಾ ಅಂದರೆ ಇಂಡೋನೇಷ್ಯಾದಲ್ಲಿ 22 ಅಡಿ ಉದ್ದದ ಹೆಬ್ಬಾವು (Snake) 54 ವರ್ಷದ ಮಹಿಳೆಯನ್ನು ನುಂಗಿದೆ. ಆದರೆ ಅ ಮಹಿಳೆಯನ್ನು ಜೀವಂತವಾಗಿ ಹೊರ ತೆಗೆದಿದ್ದಾರೆ. ಈ ವಿಷಯ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಪ್ರತಿಯೊಬ್ಬ ವ್ಯಕ್ತಿಯೂ ಏನಾದರು ಕೆಲಸಕ್ಕೆಂದು ತೋಟಕ್ಕೋ, ರಬ್ಬರ್‌ ಗುಡ್ಡಕ್ಕೋ ಹೋಗುತ್ತಾರೆ. ಆದರೆ ಈ ಎಲ್ಲಾ ಘಟನೆಯನ್ನು ನೋಡಿದಾಗ ಎಷ್ಟೇ ಧೈರ್ಯವಿದ್ದರೂ ಒಮ್ಮೆಗೆ ನಡುಕವನ್ನು ಹುಟ್ಟಿಸುತ್ತದೆ. ಹಾಗಾದ್ರೆ ಏನಾಯ್ತು ಇಂಡೋನೇಷ್ಯಾದಲ್ಲಿ. ಯಾರದು ಮಹಿಳೆ ಇಲ್ಲಿದೆ ಸಂಪೂರ್ಣ ಮಾಹಿತಿ.


  ಇದು ಇಂಡೋನೇಷ್ಯಾದಲ್ಲಾದಂತಹ ಒಂದು ಅಚ್ಚರಿಯ ಸಂಗತಿಯಾಗಿದ್ದು, ಇನ್ನು ಮುಂದಕ್ಕೆ ಎಲ್ಲರನ್ನೂ ಯಾವುದೇ ಕೆಲಸಕ್ಕೂ ಹೋಗುವಾಗಲೂ ಎಚ್ಚರಿಕೆಯಿಂದ ಇರುವಂತೆ ಮಾಡಿದ ಘಟನೆಯಾಗಿದೆ.


  ಘಟನೆಯ ವಿವರ
  ಪೊಲೀಸರ ಪ್ರಕಾರ, ಬಲಿಪಶು ಆದಂತಹ ಮಹಿಳೆ 54 ವರ್ಷದ ಜಹ್ರಾಹ್ ಎಂದು ಗುರುತಿಸಲಾಗಿದೆ. ಜಂಬಿ ಪ್ರದೇಶದ ತೋಟದಿಂದ ರಬ್ಬರ್ ಸಂಗ್ರಹಿಸಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಸೇರಿಕೊಂಡು ಹುಡುಕಾಟ ನಡೆಸಿದರು. ಸಿಎನ್‌ಎನ್ ಇಂಡೋನೇಷ್ಯಾದೊಂದಿಗೆ ಮಾತನಾಡಿದ ಬೆಟಾರಾ ಜಂಬಿ ಪೊಲೀಸ್ ಮುಖ್ಯಸ್ಥ ಸಂತ್ರಸ್ತೆಯ ಪತಿ  ಎಕೆಪಿ ಹೆರಾಫಾ ಇಡೀ ಪ್ರದೇಶವನ್ನು ಹುಡುಕಿದ್ದಾರೆ ಎಂದು ಹೇಳಿದರು.


  ಇದನ್ನೂ ಓದಿ: ಟಾಟಾದಿಂದ OTT ಲವರ್ಸ್‌ಗೆ ಭರ್ಜರಿ ಸಿಹಿಸುದ್ದಿ, ಇನ್ಮುಂದೆ ಲೈಫ್ ಇನ್ನಷ್ಟು ಜಿಂಗಾಲಾಲ!


  ಇದಲ್ಲದೆ ಅವರು ಈ ಸಂದರ್ಭದಲ್ಲಿ ಅವಳ ಚಪ್ಪಲಿ, ತಲೆ ಸ್ಕಾರ್ಫ್, ಜಾಕೆಟ್ ಮತ್ತು ಚಾಕುವನ್ನು ಮಾತ್ರ ಕಂಡುಕೊಂಡಿದ್ದಾರೆ. ಮರುದಿನ ಮತ್ತೆ ಹುಡುಕಾಟವನ್ನು ಅವನ  ಗುಂಪಿನೊಂದಿಗೆ ಪ್ರಾರಂಭಿಸಿದಾಗ ಊದಿಕೊಂಡ ದೈತ್ಯ ಹಾವನ್ನು ಕಂಡರು ಎಂದು ತಿಳಿಸಿದರು. ನಂತರ ಪೊಲೀಸರು, ನೆರೆಯವರು ಬಂದು ನೋಡಿದರು̤


  ಜನರ ಊಹೆಗಳು:


  ಆ ಸಂದರ್ಭದಲ್ಲಿ ಮೊದಲು ಹೆಬ್ಬಾವು ಜಹ್ರಾಳನ್ನು ಕಚ್ಚಿರಬಹುದು. ನಂತರ ಅವರನ್ನು ಸುತ್ತಲೂ ಸುತ್ತಿಕೊಂಡಿರಬಹುದು ಆ ಮೇಲೆ ನುಂಗಿರಬಹುದು ಎಂದು ಊಹಿಸಲಾಗಿದೆ.


  ಅದಲ್ಲದೆ ಎರಡು ಗಂಟೆಯಾದರೂ ಬೇಕಾಗುತ್ತಿತ್ತು ಎಂದು ಊಹೆ ಮಾಡಿದ್ದಾರೆ. ಹೆಬ್ಬಾವಿನ ಚಿತ್ರವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.


  ಸಾಂದರ್ಭಿಕ ಚಿತ್ರ


  ಓರ್ವ ಸ್ವಯಂಸೇವಕ ಹೆಬ್ಬಾವಿನ ತಲೆಯನ್ನು ಕೊಂಬೆಯೊಂದಿಗೆ ಹಿಡಿದರು. ನಂತರ ಇತರರು ಅದನ್ನು ಊದಿಕೊಂಡ ಪ್ರದೇಶದ ಮೇಲೆ ಹೊಡೆಯಲು ಮುಂದಾದರು ಎಂದು ವೀಡಿಯೊ ತೋರಿಸುತ್ತದೆ. ನಂತರ ಆ ಹಾವನ್ನು ಕತ್ತರಿಸಿ ಆಕೆಯ ದೇಹವನ್ನು ಹೊರಗೆ ತೆಗೆದುಹಾಕಿದರು. ಅವಶೇಷಗಳನ್ನು ತೆಗೆದ ನಂತರ ಪೊಲೀಸರು ಅದು ಜಹ್ರಾಹ್ ದೇಹ ಎಂದು ಪತ್ತೆಹಚ್ಚಿದರು.‌


  ಇದನ್ನೂ ಓದಿ: ನಿಮ್ಮ ಮೊಬೈಲ್‌ನಲ್ಲಿ ಉಚಿತವಾಗಿ ಒಟಿಟಿ ಸಿನಿಮಾಗಳನ್ನು ನೋಡಿ, ಮೊದಲು ಹೀಗ್​ ಮಾಡಿ!


  ಇದಲ್ಲದೆ ಈಕೆಯ ಮನೆಯಿಂದ ಸುಮಾರು ಅರ್ಧ ಮೈಲಿ ದೂರದಲ್ಲಿ ದೊಡ್ಡದೊಡ್ಡ ಗುಹೆಗಳು, ಕಲ್ಲುಬಂಡೆಗಳು ಇರುವುದರಿಂದ ಸಾಕಷ್ಟು ಹಾವುಗಳು ಇಲ್ಲಿ ವಾಸಿಸುತ್ತವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.


  ಈವರೆಗೆ ಇಂಡೋನೇಷ್ಯಾದಲ್ಲಿ ಆದ ಹೆಬ್ಬಾವಿನ ದಾಳಿ:  ಇನ್ನು ಕಳೆದ ವರ್ಷದ ಮಾರ್ಚ್​ನಿಂದ ಈ ತನಕ ಗಮನಿಸಿದರೆ ಇಂಡೋನೇಷಿಯಾದಲ್ಲಿ ಇದು ಎರಡನೇ ಹೆಬ್ಬಾವು ದಾಳಿ ಪ್ರಕರಣ. 25 ವರ್ಷದ ಯುವಕನನ್ನು ಹೆಬ್ಬಾವೊಂದು ಸಂಪೂರ್ಣ ನುಂಗಿದ್ದನ್ನು ಇಲ್ಲಿ ಸ್ಮರಿಸಬಹುದು.  ಸಾಮಾನ್ಯವಾಗಿ ಮನುಷ್ಯನನ್ನು ನುಂಗಿದ ಹೆಬ್ಬಾವುಗಳು ಬದುಕುಳಿಯಲಾರವು. ಹಾಗಾಗಿ ಕಾಡಿನಲ್ಲಿ ಸಿಗುವ ಮಂಗ, ಹಂದಿ ಮತ್ತು ಇತರೇ ಸಸ್ತನಿಗಳೇ ಇವುಗಳ ಆಹಾರ.


  ಇದನ್ನೂ ಓದಿ: ದೀಪಾವಳಿಗೆ ಅಮೆಜಾನ್‌ನ ಬಂಪರ್ ಆಫರ್!‌ ಒನ್‌ಪ್ಲಸ್‌ ಮೊಬೈಲ್‌ ಮೇಲೆ ಭಾರಿ ರಿಯಾಯಿತಿ


  ಹಾಗಾಗಿ ಪ್ರತಿಯೊಬ್ಬರೂ ತಾವು ವಾಸಿಸುವ ಪ್ರದೇಶದಲ್ಲಿ ಸಂಚರಿಸುವಾಗ ತುಂಬಾ ಜಾಗ್ರತೆಯಿಂದ ಹೋಗಬೇಕು ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

  Published by:Harshith AS
  First published: