• Home
  • »
  • News
  • »
  • national-international
  • »
  • Husband Murder: ಜೀನ್ಸ್ ಪ್ಯಾಂಟ್​​ಗಾಗಿ ಗಂಡನನ್ನೇ ಕೊಲೆ ಮಾಡಿದ ಹೆಂಡತಿ; ಹಿಂಗ್ಯಾಕೆ ಆಯ್ತು?

Husband Murder: ಜೀನ್ಸ್ ಪ್ಯಾಂಟ್​​ಗಾಗಿ ಗಂಡನನ್ನೇ ಕೊಲೆ ಮಾಡಿದ ಹೆಂಡತಿ; ಹಿಂಗ್ಯಾಕೆ ಆಯ್ತು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಂಡತಿ ಜೀನ್ಸ್​ (Jeans) ಧರಿಸುವುದಕ್ಕೆ ಗಂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಹೆಂಡತಿ ಚಾಕುವಿನಿಂದ ಇರಿದು ಗಂಡನನ್ನು ಕೊಲೆ ಮಾಡಿಬಿಟ್ಟಿದ್ದಾಳೆ. ಕ್ಷುಲ್ಲಕ ಬಟ್ಟೆ ಜಗಳ ಭೀಕರ ಕೊಲೆಯಲ್ಲಿ ಕೊನೆಯಾಗಿದೆ.

  • Share this:

ರಾಂಚಿ: ಮದುವೆಯಾದ (Marriage) ಬಳಿಕ ಗಂಡ-ಹೆಂಡತಿ (Husband and Wife) ಒಟ್ಟಿಗೆ ಜೀವನ ನಡೆಸುವಾಗ ಕೆಲವೊಂದಷ್ಟು ಅಡ್ಜೆಸ್ಟ್​ಮೆಂಡ್​ಗಳನ್ನ ಮಾಡಿಕೊಳ್ಳೋದು ಅನಿವಾರ್ಯ. ಭಾರತೀಯ ಮದುವೆಗಳಲ್ಲಿ ಹೆಣ್ಣು ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ವಾಸಿಸಬೇಕು. ಅಲ್ಲಿನ ರೀತಿರಿವಾಜುಗಳನ್ನು ಪಾಲಿಸಬೇಕು ಎಂದು ಬಹುತೇಕರು ಬಯಸುತ್ತಾರೆ. ಇನ್ನು ಗಂಡನಾದವನೂ ಸಹ ಹೆಂಡತಿ ಹೀಗೆಯೇ ಇರಬೇಕು ಎಂದು ನಿರ್ಬಂಧಗಳನ್ನು ಹೇರುತ್ತಾನೆ. ಮದುವೆಯಾದ ಬಳಿಕ ಕೆಲವೊಂದು ಬಟ್ಟೆಗಳನ್ನು ಧರಿಸಬಾರದು ಎಂದು ಕಂಡಿಷನ್​ ಹಾಕುವ ಗಂಡಂದಿರೂ ಇದ್ದಾರೆ. ಈ ಪ್ರಕರಣದಲ್ಲೂ ಆದೇ ಆಗಿದೆ. ಹೆಂಡತಿ ಜೀನ್ಸ್​ (Jeans) ಧರಿಸುವುದಕ್ಕೆ ಗಂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಹೆಂಡತಿ ಚಾಕುವಿನಿಂದ ಇರಿದು ಗಂಡನನ್ನು ಕೊಲೆ ಮಾಡಿಬಿಟ್ಟಿದ್ದಾಳೆ. ಕ್ಷುಲ್ಲಕ ಬಟ್ಟೆ ಜಗಳ ಭೀಕರ ಕೊಲೆಯಲ್ಲಿ ಕೊನೆಯಾಗಿದೆ. ಈ ಧಾರುಣ ಘಟನೆ ನಡೆದಿರೋದು ಜಾರ್ಖಂಡ್​ ರಾಜ್ಯದಲ್ಲಿ.


ಜೀನ್ಸ್​​ ಧರಿಸಿ ಜಾತ್ರೆಗೆ ಹೋಗಿದ್ದ ಹೆಂಡತಿ


ಜಾರ್ಖಂಡ್‌ನ ಜಮ್ತಾರಾದಲ್ಲಿ ಮದುವೆಯ ನಂತರ ಜೀನ್ಸ್ ಧರಿಸುವುದನ್ನು ತಡೆದಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಜಮ್ತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಜೋರ್ಭಿತ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಶನಿವಾರ ರಾತ್ರಿ, ಪುಷ್ಪಾ ಹೆಂಬ್ರೋಮ್ ಎಂಬ ವಿವಾಹಿತೆ ಜೀನ್ಸ್ ಧರಿಸಿ ಗೋಪಾಲಪುರ ಗ್ರಾಮದಲ್ಲಿ ಜಾತ್ರೆಯನ್ನು ನೋಡಲು ಹೋಗಿದ್ದರು. ಆಕೆ ಮನೆಗೆ ಹಿಂದಿರುಗಿದಾಗ, ಗಂಡ ಜೀನ್ಸ್​ ಧರಿಸಿ ಜಾತ್ರೆಗೆ ಹೋಗಿದ್ದನ್ನು ಪ್ರಶ್ನಿಸಿದ್ದಾನೆ. ಇದೇ ವಿಚಾರವಾಗಿ ದಂಪತಿ ಮಧ್ಯೆ ಜಗಳ ವಿಕೋಪಕ್ಕೆ ಹೋಗಿದೆ. ಏಕೆ ಜೀನ್ಸ್​ ಧರಿಸಬಾರದು ಎಂದು ಹೆಂಡತಿ ಪ್ರಶ್ನಿಸಿದ್ದಾಳೆ. ಜೀನ್ಸ್​ ಧರಿಸುವುದನ್ನು ಗಂಡ ಬಿಲ್​ಕುಲ್​ ಒಪ್ಪಿಲ್ಲ. ಗಂಡನ ಹೇಳಿಕೆಗಳು ವಾಗ್ವಾದಕ್ಕೆ ಕಾರಣವಾಯಿತು.  ಕೋಪದ ಭರದಲ್ಲಿ ಪುಷ್ಪಾ ತನ್ನ ಗಂಡನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಆತ ತೀವ್ರವಾಗಿ ಗಾಯಗೊಂಡಿದ್ದಾರೆ.


ಇದನ್ನೂ ಓದಿ: Shocking News: ಛೇ..4 ತಿಂಗಳ ಮಗುವನ್ನು ಟೆರೇಸ್​ನಿಂದ ಕೆಳಕ್ಕೆಸೆದ ಕೋತಿ!


ಜೀನ್ಸ್​​ ಜಗಳ ಕೊಲೆಯಲ್ಲಿ ಅಂತ್ಯ


ಕುಟುಂಬ ಸದಸ್ಯರು ತಕ್ಷಣ ಅವರನ್ನು ಧನ್‌ಬಾದ್ ಪಿಎಂಸಿಎಚ್‌ಗೆ ಕರೆದೊಯ್ದರು ಆದರೆ ಅಲ್ಲಿ ಸಾವನ್ನಪ್ಪಿದ್ದಾರೆ. ಮೃತರ ತಂದೆ ಕರ್ಣೇಶ್ವರ ತುಡು ಮಾತನಾಡಿ, ಜೀನ್ಸ್ ಪ್ಯಾಂಟ್ ಹಾಕುವ ವಿಚಾರದಲ್ಲಿ ಮಗ ಮತ್ತು ಸೊಸೆ ನಡುವೆ ಜಗಳವಾಗಿತ್ತು. ಜಗಳದ ವೇಳೆ ಪತ್ನಿಯೇ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ ಎಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಘಟನೆಯ ಬಗ್ಗೆ ನಮಗೆ ಮಾಹಿತಿ ಬಂದಿದೆ. ಪತಿ ಧನಬಾದ್‌ನಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರಿಂದ, ಧನ್‌ಬಾದ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಮ್ತಾರಾ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅಬ್ದುಲ್ ರೆಹಮಾನ್ ಹೇಳಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.


ಮತ್ತೊಂದು ಅಪರಾಧ ಪ್ರಕರಣ


ಗಂಡನ ಅತ್ಯಾಚಾರಕ್ಕೆ ಹೆಂಡತಿಯೇ ಸಾಥ್​ ನೀಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಇಲ್ಲಿನ ಕಾರ್ಖಾನೆಯೊಂದರ ಮ್ಯಾನೇಜರ್ (Factory Manager) ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ದುಷ್ಕೃತ್ಯದ ಬಳಿಕ ಬಾಲಕಿಗೆ ಆಸಿಡ್ ಕುಡಿಯುವಂತೆ ಒತ್ತಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ಜೈ ಪ್ರಕಾಶ್ (31) ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಜುಲೈ 2 ರಂದು ಪ್ರಕಾಶ್ ತನ್ನ ಅನಾರೋಗ್ಯದ ಪತ್ನಿಯನ್ನು ಭೇಟಿ ಮಾಡುವ ನೆಪದಲ್ಲಿ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದಿದ್ದಾನೆ. ನಂತರ ಆತ ತನ್ನ ಪತ್ನಿಯ ಸಹಾಯದೊಂದಿಗೆ ಆಕೆಯ ಸಮ್ಮುಖದಲ್ಲೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

Published by:Kavya V
First published: