ಕೊಯಮತ್ತೂರು: ಅಪ್ರಾಪ್ತರ ಮೇಲೆ ಲೈಂಗಿಕ ಅಪರಾಧಗಳನ್ನು ಎಸುಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿ 19 ವರ್ಷದ ಯುವತಿ, 17 ವರ್ಷದ ಅಪ್ರಾಪ್ತನಿಗೆ ಲೈಂಗಿಕ ಕಿರುಕುಳ ನೀಡಿದ್ದಾಳೆ ಎಂದು ಪ್ರಕರಣ ದಾಖಲಾಗಿದೆ. ತಮಿಳುನಾಡಿದ ಪೊಲಾಚ್ಚಿಯಲ್ಲಿ ಘಟನೆ ನಡೆದಿದ್ದು, ಬಾಲಕನ ತಾಯಿ ಯುವತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಾಯಿಯ ದೂರಿನ ಪ್ರಕಾರ 19 ವರ್ಷದ ಯುವತಿ, ಬಾಲಕನನ್ನು ಕರೆದೊಯ್ದು ಬಲವಂತವಾಗಿ ಮದುವೆಯಾಗಿದ್ದಾಳಂತೆ. ನಂತರ ಆತನೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಕಿರುಕುಳ ನೀಡಿದ್ದಾಳೆ ಎಂದು ಪೊಲೀಸರಿಗೆ ನೀಡಿದ ಕಂಪ್ಲೇಂಟ್ನಲ್ಲಿ ಉಲ್ಲೇಖಿಸಲಾಗಿದೆ.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿಯ 19 ವರ್ಷದ ಮಹಿಳೆ, 17 ವರ್ಷದ ಹುಡುಗನೊಂದಿಗೆ ಪರಾರಿಯಾಗಿದ್ದಳು. ಆತನೊಂದಿಗೆ ಮದುವೆಯಾಗಿ ನಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಳು. ಅಪ್ರಾಪ್ತ ಬಾಲಕನ ತಾಯಿಯ ದೂರು ನೀಡುತ್ತಿದ್ದಂತೆ ಮಹಿಳೆಯು ಪೊಲೀಸರ ಮುಂದೆ ಶರಣಾಗಿದ್ದಾಳೆ. ಆರೋಪಿ ಮಹಿಳೆ ಪಟ್ಟಣದ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದಳು. 12ನೇ ತರಗತಿ ಉತ್ತೀರ್ಣನಾಗಿರುವ ಹುಡುಗ ಆಗಾಗ್ಗೆ ಮಹಿಳೆಯ ಕೆಲಸದ ಸ್ಥಳಕ್ಕೆ ಭೇಟಿ ನೀಡುತ್ತಿದ್ದನು.
ಸುಮಾರು ಒಂದು ವರ್ಷದಲ್ಲಿ ಮಹಿಳೆ ಹುಡುಗನೊಂದಿಗೆ ಪ್ರೀತಿ-ಪ್ರೇಮ ಅಂತ ಸಂಬಂಧ ಶುರು ಮಾಡಿದ್ದಳು. ಕಳೆದ ಗುರುವಾರ ಮಹಿಳೆ ಅಪ್ರಾಪ್ತ ಬಾಲಕನೊಂದಿಗೆ ಪಳನಿಗೆ ಪರಾರಿಯಾಗಿದ್ದಳು. ಅಲ್ಲಿ ಬಾಲಕನೊಂದಿಗೆ ವಿವಾಹ ನೆರವೇರಿದೆ. ಮರುದಿನ ಇಬ್ಬರು ಮತ್ತೆ ಕೊಯಮತ್ತೂರಿಗೆ ಬಂದಿದ್ದಾರೆ. ಸೆಮ್ಮೆಡುವ್ ಪ್ರದೇಶದಲ್ಲಿ ಬಾಡಿಗೆ ಮನೆ ಹಿಡಿದು ವಾಸಿಸತೊಡಗಿದ್ದರು. ಈ ಸಮಯದಲ್ಲಿ ಮಹಿಳೆ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಳೆ ಎಂದು ದೂರು ದಾಖಲಾಗಿದೆ.
ಹದಿಹರೆಯದ ಹುಡುಗನ ತಾಯಿ ಮಹಿಳೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಬಗ್ಗೆ ತಿಳಿದ ನಂತರ ಅಪ್ರಾಪ್ತ ಬಾಲಕನೊಂದಿಗೆ ಬಂದು ಯುವತಿ ಪೊಲ್ಲಾಚಿಯ ಮಹಿಳಾ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ. ಆಕೆಯನ್ನು ಬಂಧಿಸಿ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಕೆಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಕಳೆದು ತಿಂಗಳ ರಾಜಸ್ಥಾನದಲ್ಲಿ ಇಂತಹದ್ದೇ ಘಟನೆ ವರದಿಯಾಗಿತ್ತು. ರಾಜಘಡ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಬಂಧಿಸಲಾಗಿತ್ತು. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಮಹಿಳೆಯ ಪತಿ ಮತ್ತು ಆತನ ಕುಟುಂಬದ ಸದಸ್ಯರು ಅಪರಾಧಕ್ಕೆ ಸಹಾಯ ಮಾಡಿದ್ದರು. 16 ವರ್ಷದ ಹುಡುಗನ ಕುಟುಂಬದಿಂದ 1 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದರು. ಒಂದು ಲಕ್ಷ ರೂಪಾಯಿ ನೀಡಿ, ಇಲ್ಲವಾದರೆ ತನ್ನ ಮೇಲೆ ನಿಮ್ಮ ಮಗ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದು ಹೆದರಿಸಿದ್ದರು. ಪೊಲೀಸರ ಕಾರ್ಯಾಚರಣೆಯಿಂದ ಕಿಡ್ನ್ಯಾಪ್ & ರೇಪ್ ಆರೋಪ ಪ್ರಕರಣದ ಸತ್ಯ ಬಯಲಾಗಿತ್ತು.
ಇದನ್ನೂ ಓದಿ: Extra Marital Affair: ಪಾಪಪ್ರಜ್ಞೆ ಕಾಡುತ್ತಿದೆ.. ಅಕ್ರಮ ಸಂಬಂಧ ಸಾಕು ಎಂದ ವಿವಾಹಿತೆಯ ಬರ್ಬರ ಕೊಲೆ!
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ