ಲವ್​ ಲೆಟರ್ಸ್​​ಗೆ ಬೆಂಕಿ ಹಚ್ಚಲು ಹೋಗಿ ಇಡೀ ಅಪಾರ್ಟ್​ಮೆಂಟ್​ನ್ನೇ ಸುಟ್ಟ ಯುವತಿ

ಈ ಘಟನೆಗೆ ಲಿಲ್ಲಾರ್ಡ್​​​ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ಪರಿಗಣಿಸಿದ್ದಾರೆ. ಹೀಗಾಗಿ ಅಕ್ಟೋಬರ್ 16ರಂದು ಆರೋಪಿಯನ್ನು ಕೋರ್ಟ್​ಗೆ ಹಾಜರುಪಡಿಸಲಾಗುತ್ತದೆ.

Latha CG | news18-kannada
Updated:September 19, 2019, 3:58 PM IST
ಲವ್​ ಲೆಟರ್ಸ್​​ಗೆ ಬೆಂಕಿ ಹಚ್ಚಲು ಹೋಗಿ ಇಡೀ ಅಪಾರ್ಟ್​ಮೆಂಟ್​ನ್ನೇ ಸುಟ್ಟ ಯುವತಿ
ಪ್ರಾತಿನಿಧಿಕ ಚಿತ್ರ
  • Share this:
ಅಮೆರಿಕಾ(ಸೆ.19): ಮಾಜಿ ಪ್ರಿಯಕರನಿಂದ ಬಂದಿದ್ದ ಕೆಲವು ಪ್ರೇಮ ಪತ್ರಗಳನ್ನು ಸುಟ್ಟು ಹಾಕಲು ಹೋದ ಯುವತಿಯೊಬ್ಬಳು ಇಡೀ ಅಪಾರ್ಟ್​​ಮೆಂಟ್​ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಈ ಘಟನೆ ಅಮೆರಿಕಾದ ನೆಬ್ರಸ್ಕಾ ರಾಜ್ಯದ ಲಿಂಕನ್​​ ನಗರದಲ್ಲಿ ಸಂಭವಿಸಿದೆ.  ಅರಿಯೌನಾ ಲಿಲ್ಲಾರ್ಡ್​ ಎಂಬ 19 ವರ್ಷದ ಯುವತಿ ಹಳೆಯ ಬಾಯ್​ ಫ್ರೆಂಡ್​ ಬರೆದಿದ್ದ ಲವ್​ ಲೆಟರ್​ಗಳನ್ನು ಸುಟ್ಟು ಹಾಕಲು ನಿರ್ಧರಿಸಿದ್ದಾಳೆ. ಅದಕ್ಕಾಗಿ ಆಕೆ ಬ್ಯುಟೇನ್​​​ ಟಾರ್ಚ್​ ಬಳಸಿದ್ದಳು ಎಂದು ತಿಳಿದು ಬಂದಿದೆ.

ಪ್ರೇಮ ಪತ್ರಗಳಿಗೆ ಬೆಂಕಿ ಹಚ್ಚಿದಾಗ ಮೊದಲು ಸರಿಯಾದ ಹೊತ್ತಿಕೊಳ್ಳಲಿಲ್ಲ. ಹೀಗಾಗಿ ಆಕೆ ಬೆಡ್​ರೂಂನ ಕಾರ್ಪೆಟ್​ ಮೇಲೆ ಪತ್ರಗಳನ್ನು ಇಟ್ಟು ಬೆಂಕಿ ಹಚ್ಚಿದ್ದಳು. ಬಳಿಕ ಅಲ್ಲಿಯೇ ನಿದ್ರೆಗೆ ಜಾರಿದ್ದಳು. ಲಿಲ್ಲಾರ್ಡ್​ ಪತ್ರಗಳಿಗೆ ಬೆಂಕಿ ಹಚ್ಚಿದ್ದನ್ನೇ ಮರೆತಿದ್ದಳು. ಬಳಿಕ ಅಪಾರ್ಟ್​ಮೆಂಟ್​ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಆಕೆಗೆ ಎಚ್ಚರವಾಗಿದೆ. ಒಬ್ಬಳೇ ಇದ್ದ ಕಾರಣ ಅಪಾರ್ಟ್​ಮೆಂಟ್​ನಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ನೆರೆ ಸಂತ್ರಸ್ತರು ಭಿಕ್ಷುಕರಂತೆ ಕಾಯ್ತಿದ್ರೆ ಬಿಎಸ್​ವೈ ಉತ್ತರಾಧಿಕಾರಿ ಹುಡುಕಾಟದಲ್ಲಿದ್ದಾರೆ; ಎಚ್​.ಡಿ. ರೇವಣ್ಣ

ವಿಷಯ ತಿಳಿದಾಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಲಿಲ್ಲಾರ್ಡ್​ ಮಾಡಿದ ಯಡವಟ್ಟಿಗೆ ಅಪಾರ್ಟ್​ಮೆಂಟ್​​ನಲ್ಲಿ ಸುಮಾರು 2,85,282 ರೂ.ಗಳಷ್ಟು ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಲಿಂಕನ್​ ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ಲಿಲ್ಲಾರ್ಡ್​​​ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ಪರಿಗಣಿಸಿದ್ದಾರೆ. ಹೀಗಾಗಿ ಅಕ್ಟೋಬರ್ 16ರಂದು ಆರೋಪಿಯನ್ನು ಕೋರ್ಟ್​ಗೆ ಹಾಜರುಪಡಿಸಲಾಗುತ್ತದೆ.

First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading