ಮನೆಗಳಿಗೆ ನುಗ್ಗಿ ಅಡುಗೆ ಮಾಡಿಕೊಡುವಂತೆ ತಾಲಿಬಾನಿಗಳ ಟಾರ್ಚರ್.. ಊಟ ರುಚಿಯಿಲ್ಲವೆಂದು ಮಹಿಳೆಗೆ ಬೆಂಕಿ!

ತಾಲಿಬಾನ್ ಉಗ್ರರು ಬಲವಂತವಾಗಿ ಅಡುಗೆ ಮಾಡಲು ಮಹಿಳೆಯರನ್ನು ಹಿಂಸಿಸುತ್ತಿದ್ದಾರಂತೆ. ಅಡುಗೆ ಮಾಡಿ ಹಾಕಿದರೆ ರುಚಿ ಚನ್ನಾಗಿಲ್ಲ ಎಂದು ತಗಾದೆ ತೆಗೆದು ಮಹಿಳೆಯೊಬ್ಬರಿಗೆ ಉಗ್ರರು ಬೆಂಕಿ ಇಟ್ಟಿದ್ದಾರಂತೆ.

ತಾಲಿಬಾನ್ ಉಗ್ರರು.

ತಾಲಿಬಾನ್ ಉಗ್ರರು.

  • Share this:
ಅಫ್ಘಾನಿಸ್ತಾನ್​ ಸರ್ಕಾರಕ್ಕೆ ಅಮೆರಿಕಾ ನೀಡಿದ್ದ ಸೇನಾ ಬೆಂಬಲವನ್ನು ವಾಪಸ್​​ ಪಡೆಯುತ್ತಲೇ ತಾಲಿಬಾನಿ ಉಗ್ರರು ಅಫ್ಘಾನಿಸ್ತಾನವನ್ನು ವಶ ಪಡಿಸಿಕೊಂಡಿದ್ದಾರೆ. ಅಧ್ಯಕ್ಷ ಅಶ್ರಮ ಘನಿ ದೇಶದಿಂದ ಪಲಾಯನ ಮಾಡಿದ್ದು, ತಾಲಿಬಾನಿ ಉಗ್ರರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.  ಕಾಬೂಲ್​ ನಗರದ ರಸ್ತೆಗಳಲ್ಲಿ ಉಗ್ರರ ಉಪಟಳ ಮಿತಿ ಮೀರಿದೆ. ಕಾಬೂಲ್​​ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನಿಗಳು ಬಂದೂಕುಗಳ ಸಮೇತ ಸಂಸತ್​ಗೆ ನುಗ್ಗಿ ಎಲ್ಲಂದರಲ್ಲಿ ಕುಳಿತಿದ್ದರು. ನಂತರ ಅಮ್ಯೂಸ್​​ಮೆಂಟ್​ ಪಾರ್ಕ್​​ಗಳಿಗೆ ನುಗ್ಗಿ ಮೋಜು ಮಸ್ತಿ ನಡೆಸಿದ್ದರು. ಅಫ್ಘನ್​ ನಿವಾಸಿಗಳನ್ನೂ ಉಗ್ರರು ಇನ್ನಿಲ್ಲದಂತೆ ಹಿಂಸಿಸುತ್ತಿದ್ದಾರಂತೆ.

ಬಂದೂಕುಗಳೊಂದಿಗೆ ಮನೆಗಳಿಗೆ ನುಗ್ಗುತ್ತಿರುವ ತಾಲಿಬಾನಿ ಉಗ್ರರು ಒಳ್ಳೆಯ ಅಡುಗೆ ಮಾಡಿ ಬಡಿಸುವಂತೆ ನಿವಾಸಿಗಳಿಗೆ ಕಾಟ ಕೊಡುತ್ತಿದ್ದಾರಂತೆ. ಈ ಬಗ್ಗೆ ಅಫ್ಘಾನಿಸ್ತಾನದ ಮಾಜಿ ನ್ಯಾಯಾಧೀಶೆ ಮತ್ತು ಮಹಿಳಾ ಹಕ್ಕುಗಳ ವಕೀಲರಾದ ನಜ್ಲಾ ಅಯೌಬಿ ಅವರು ಮಾಹಿತಿ ನೀಡಿದ್ದಾರೆ. ತಾಲಿಬಾನ್ ಉಗ್ರರು ಬಲವಂತವಾಗಿ ಅಡುಗೆ ಮಾಡಲು ಮಹಿಳೆಯರನ್ನು ಹಿಂಸಿಸುತ್ತಿದ್ದಾರಂತೆ. ಅಡುಗೆ ಮಾಡಿ ಹಾಕಿದರೆ ರುಚಿ ಚನ್ನಾಗಿಲ್ಲ ಎಂದು ತಗಾದೆ ತೆಗೆದು ಮಹಿಳೆಯೊಬ್ಬರಿಗೆ ಉಗ್ರರು ಬೆಂಕಿ ಇಟ್ಟಿದ್ದಾರಂತೆ. ಚನ್ನಾಗಿ ಅಡುಗೆ ಮಾಡಿಲ್ಲ ಅಂತ ಮಹಿಳೆಗೆ ಬೆಂಕಿ ಹಚ್ಚಲಾಗಿದೆ ಎಂದು ನಜ್ಲಾ ತಿಳಿಸಿದ್ದಾರೆ.

ಭಾರತೀಯರ ಪಾಲಿಗೆ ಆತಂಕ ಸೃಷ್ಟಿಸಿದ್ದ ಸುದ್ದಿಯೊಂದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕಾಬೂಲ್ ಸಮೀಪದ ಹಮೀದ್​ ಖರ್ಜೈದ್​​​ ಏರ್​​ಪೋರ್ಟ್​​ನಿಂದ 150 ಭಾರತೀಯರನ್ನು ತಾಲಿಬಾನಿಗಳು ಅಪಹರಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ 150 ಭಾರತೀಯರ ಕಿಡ್ನ್ಯಾಪ್​ ಸುದ್ದಿ ಸುಳ್ಳು ಎಂದು ಕೇಂದ್ರ ಸರ್ಕಾರ ಇಂದು ಸ್ಪಷ್ಟನೆ ನೀಡಿದೆ. ಭಾರತೀಯರನ್ನು ಅಪಹರಿಸಿರುವ ಆರೋಪವನ್ನು ತಾಲಿಬಾನಿಗಳ ಮುಖಂಡ ಅಹ್ಮದುಲ್ಲಾ ವಸೇಕ ಕೂಡ ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರ ತನ್ನ ನಾಗರಿಕರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಕಿಡ್ನ್ಯಾಪ್​​ ಸುದ್ದಿ ಹರಿದಾಡಿದ್ದು ಭಾರತೀಯರನ್ನು ಆತಂಕಕ್ಕೀಡು ಮಾಡಿತ್ತು.

ಇದನ್ನೂ ಓದಿ: ನಮ್ಮನ್ನು ಕೊಂದು, ಮಾಂಸವನ್ನು ನಾಯಿಗಳಿಗೆ ಹಾಕುತ್ತಾರೆ: ತಾಲಿಬಾನಿಗಳ ಕ್ರೌರ್ಯವನ್ನು ಬಿಚ್ಚಿಟ್ಟ ಅಫ್ಘಾನಿಸ್ತಾನದ ಮಹಿಳೆ

ಅಫ್ಗಾನ್​​ ಪರಿಸ್ಥಿತಿ ಹದಗೆಡುತ್ತಲೇ ಕೇಂದ್ರ ಸರ್ಕಾರ ಹೊಸ ಎಲೆಕ್ಟ್ರಾನಿಕ್ ವೀಸಾವನ್ನು ಪರಿಚಯಿಸಿದೆ. ಇ-ತುರ್ತು ಎಕ್ಸ್-ಮಿಸ್ಕ್ ವೀಸಾದಡಿ ಭಾರತಕ್ಕೆ ಪ್ರವೇಶಿಸಲು ಸಲ್ಲಿಸುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ಪರಿಶೀಲಿಸಲಾಗುವುದು.  ಅಫ್ಘಾನಿಸ್ತಾನವು ಈ ಮೊದಲು ಈ ವರ್ಗಕ್ಕೆ ಒಳಪಟ್ಟಿರಲಿಲ್ಲ. ಭಾರತದ ವೀಸಾ ಪಡೆಯಬೇಕಾದವರು ಖುದ್ದು ರಾಯಭಾರ ಕಚೇರಿಗೆ ಹಾಜರಗಬೇಕಿತ್ತು. ಆದರೆ ಈಗ, ಕಾಬೂಲ್‌ನ ಪರಿಸ್ಥಿತಿಯನ್ನು ಗಮನಿಸಿ ಇ-ವೀಸಾ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಮೆರಿಕಾ ತನ್ನ ಸೇನೆಯನ್ನು ಮೇ 1ರಿಂದ ಹಿಂಪಡೆಯಲು ಆರಂಭಿಸಿತ್ತು. ಅಂದಿನಿಂದ ತಾಲಿಬಾನ್​​​ ಹಂತ ಹಂತವಾಗಿ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಯುಸ್​​ ಸೇನಾ ಬೆಂಬಲಿತ ಅಶ್ರಫ್​ ಘನಿ ಸರ್ಕಾರವನ್ನು ಹಿಮ್ಮೆಟ್ಟಿಸಿ ತಾಲಿಬಾನಿಗಳು ಅಫ್ಘನ್​ ಮೇಲೆ ಪ್ರಭುತ್ವ ಸಾಧಿಸಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಅಮೆರಿಕಾ ಸೇನಾ ಬೆಂಬಲದೊಂದಿಗೆ ಇದ್ದ ಅಧಿಕಾರವನ್ನು ತಾಲಿಬಾನಿಗಳು ಕಿತ್ತುಕೊಂಡಿದ್ದಾರೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದು ಅಜ್ಞಾನ ಸ್ಥಳಕ್ಕೆ ತೆರಳಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ನಡೆದುಕೊಳ್ಳಬೇಕು.
Published by:Kavya V
First published: