Heart Breaking: ಮರುಮದುವೆಯಾಗೋಕೆ ಮಗುವನ್ನೇ ಮಾರಿಬಿಟ್ಟಳು, ಹೆತ್ತಕರುಳು ಅನ್ನೋದೆಲ್ಲಾ ಸುಳ್ಳಾ?

9 month old baby sold by mother: ಮತ್ತೊಂದು ಮದುವೆ ಮಾಡಲು ಆಕೆಯ ಪೋಷಕರು ನಿರ್ಧಾರ ಮಾಡಿದ್ದರು. ಆದರೆ ಈ ಮದುವೆಗೆ 9 ತಿಂಗಳ ಕಂದಮ್ಮ ಅಡ್ಡಿಯಾಗಿತ್ತು. ಈ ಮಗುವನ್ನ ಹೇಗಾದರೂ ಮಾಡಿ ಮಾರಬೇಕು ಎಂದು ಕುಟುಂಬಸ್ಥರು ಸಂಚು ರೂಪಿಸಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Mother sells child for money: ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ ಹೊರತು, ಕೆಟ್ಟ ತಾಯಿ ಇರುವುದಿಲ್ಲ. ನಿನ್ನಷ್ಟು ಪ್ರೀತಿಯ ಮಾಡುವವರು ಯಾರೇ, ಪ್ರೀತಿಯ ಬೇಡೋಕೆ.. ಮರುಜನ್ಮದಲ್ಲಿ ಹುಟ್ಟಿ ಬರಬೇಕು ಪ್ರೀತಿಯ ಪಡೆಯೋಕೆ(Mother's love).. ಅಮ್ಮ ನೀನೆ ಬದುಕು, ಅಮ್ಮ ನೀನೆ ಪ್ರಪಂಚ.. ಹೌದು, ತಾಯಿಯೆಂದರೆ ಪ್ರಪಂಚ. ಮಕ್ಕಳ ಊಟ, ಬಟ್ಟೆ, ನಿದ್ದೆ ಎಲ್ಲ ವಿಚಾರದಲ್ಲಿ ಸದಾ ತಾಯಿ ಕಾಳಜಿ ವಹಿಸುತ್ತಾಳೆ. ತಾನು ತಿನ್ನದೆ ಇದ್ದರೂ ತನ್ನ ಮಕ್ಕಳ ಹೊಟ್ಟೆ ತುಂಬಿಸುವವಳೆ ತಾಯಿ. ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ. ಆದರೆ ಇಲ್ಲೊಬ್ಬಳು ತಾಯಿ ಮರುಮದುವೆಯಾಗಲು ತನ್ನ 9 ತಿಂಗಳ (9 months old baby) ಹಸುಗೂಸನ್ನು ಮಾರಾಟ ಮಾಡಿದ್ದಾಳೆ. ಮೊದಲನೇ ಪತಿಯಿಂದ ಹೆಂಡತಿ ದೂರವಾಗಿದ್ದಳು(Separated). ಮತ್ತೊಂದು ಮದುವೆಯಾಗುವ ಕನಸು ಕಂಡಿದ್ದಳು. ಆದರೆ ಮರುಮದುವೆಯಾಗಲು ತನ್ನ 9 ತಿಂಗಳ ಕಂದಮ್ಮ ಇದ್ದರೆ ಕಷ್ಟ ಎಂದು, ಮಗುವನ್ನು ಮಾರಾಟ ಮಾಡಿದ್ದಾಳೆ. ಏನೂ ಅರಿಯದ ಕಂದಮ್ಮನನ್ನು ಈ ರೀತಿ ಬೇರೆ ಮಾಡಿರುವುದು ನಿಜಕ್ಕೂ ಕರುಳು ಹಿಂಡುವಂತಿದೆ.

  ಪತ್ನಿ-ಪತ್ನಿ ಸಂಬಂಧದಲ್ಲಿ ಬಿರುಕು

  ತಮಿಳುನಾಡಿನ ತೂತುಕ್ಕುಡಿ ಜಿಲ್ಲೆಯ ಮಹಿಳೆಯೊಬ್ಬಳು ಈ ರೀತಿಯ ಕೆಲಸ ಮಾಡಿದ್ದಾಳೆ.. 2019ರಲ್ಲಿ 28 ವರ್ಷದ ಜೆಬಮಲಾರ್(Jebamalar) ವಿರುಧುನಗರ ಜಿಲ್ಲೆಯವರಾದ 38 ವರ್ಷದ ಆರ್ ಮಣಿಕಂಠನ್( R Manikandan) ಜೊತೆ ವಿವಾಹವಾಗಿದ್ದರು. ಬಳಿಕ ಕೆಲ ತಿಂಗಳು ಸುಖವಾಗಿ ಸಂಸಾರ ನಡೆಸುತ್ತಿದ್ದರು. ಇದಾದ ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಸಣ್ಣಪುಟ್ಟ ಕಾರಣಕ್ಕೆ ಜಗಳವಾಗುತ್ತಿತ್ತು. ಇಬ್ಬರು ದೂರವಾಗಲು ನಿರ್ಧಾರ ಮಾಡಿದರು. ಅದರಂತೆ ಜೆಬಮಲಾರ್ ತನ್ನ 9 ತಿಂಗಳು ಮಗುವಿನ ಜೊತೆ ತಾಯಿ ಮನೆ ಸೇರಿದಳು. ಅತ್ತ ಪತಿ ಯಾವುದಕ್ಕೂ ಕೇರ್ ಮಾಡದೇ ತನ್ನ ಪಾಡಿಗೆ ತನ್ನ ಕೆಲಸದಲ್ಲಿ ತೊಡಗಿಕೊಂಡು ಬ್ಯುಸಿಯಾಗಿದ್ದ.

  ಭವಿಷ್ಯಕ್ಕೆ ಮಗು ಅಡ್ಡಿ?

  ಇತ್ತ ತವರು ಮನೆ ಸೇರಿದ್ದ ಜೆಬಮಲಾರ್ ಗೆ ಮತ್ತೊಂದು ಮದುವೆ ಮಾಡಲು ಆಕೆಯ ಪೋಷಕರು ನಿರ್ಧಾರ ಮಾಡಿದ್ದರು. ಆದರೆ ಈ ಮದುವೆಗೆ 9 ತಿಂಗಳ ಕಂದಮ್ಮ ಅಡ್ಡಿಯಾಗಿತ್ತು. ಈ ಮಗುವನ್ನ ಹೇಗಾದರೂ ಮಾಡಿ ಮಾರಬೇಕು ಎಂದು ಕುಟುಂಬಸ್ಥರು ಸಂಚು ರೂಪಿಸಿದ್ದರು. ಅದರಂತೆ ಸಪ್ಟೆಂಬರ್ 23 ರಂದು ಜೆಬಮಲಾರ್ ಮತ್ತು ಆಕೆಯ ಸಹೋದರ ಆಂಟನಿ ಮತ್ತು ಚಿಕ್ಕಪ್ಪ ಡೇನಿಯಲ್ ಮಗು ಮಾರಲು ಮುಂದಾಗಿದ್ದರು. ಕಾರ್ತಿಕೇಯನ್ ಮತ್ತು ಜೇಸುದಾಸ್ ಎಂಬ ಇಬ್ಬರು ದಲ್ಲಾಳಿಗಳನ್ನು ಸಂಪರ್ಕಿಸಿದ್ದರು.

  ಇದನ್ನೂ ಓದಿ: ಹೊಸ ಗಂಡ ತಂದೇ ಬಿಟ್ಟ ಗಂಡಾಂತರ: 23 ವರ್ಷ ಯುವಕನ ಮೇಲಿನ ಮೋಹಕ್ಕೆ 6 ವರ್ಷದ ಮಗನೇ ಬಲಿಯಾದ!

  ಮಕ್ಕಳಿಲ್ಲದೆ ಕೊರಗುತ್ತಿದ್ದ 52 ವರ್ಷದ ಎಚ್ ಸೆಲ್ವಮಣಿ ಹಾಗೂ 40 ವರ್ಷದ ಶ್ರೀದೇವಿ ಮಗುವನ್ನು ಕೊಂಡುಕೊಳ್ಳಲು ಹುಡುಕುತ್ತಿದ್ದರು. ಜೆಬಮಲಾರ್ 9 ತಿಂಗಳ ಗಂಡುಮಗುವನ್ನು ಮೂರು ಲಕ್ಷ ಹಣ ನೀಡಿ ಈ ದಂಪತಿಗಳು ಪಡೆದುಕೊಂಡಿದ್ದರು. ಇಷ್ಟೆಲ್ಲಾ ನಡೆಯುತ್ತಿದ್ದರೂ ಮಣಿಕಂಠನಿಗೆ ಮಾತ್ರ ಇದರ ಬಗ್ಗೆ ಕಿಂಚಿತ್ತು ಗೊತ್ತಾಗಿಲ್ಲ. ಮಗು ಮಾರಾಟವಾದ ಬಳಿಕ ಮಗು ನೋಡಲು ಮಣಿಕಂಠನ್ ಪತ್ನಿ ಮನೆ ಬಳಿ ಬಂದಿದ್ದ.
  ಈ ವೇಳೆ ಜೆಬಮಲಾರ್, ಮಗು ಮಾರಾಟ ವಿಚಾರ ಮಣಿಕಂಠನ್ ಗೆ ತಿಳಿಯಬಾರದೆಂದು ಸುಳ್ಳು ಹೇಳಿ ಅಲ್ಲಿಂದ ಕಳಿಸಿದ್ದಳು. ಜೆಬಮಲಾರ್ ನಡುವಳಿಕೆಯಿಂದ ಅನುಮಾನಗೊಂಡ ಮಣಿಕಂಠನ್ ಮತ್ತೆ ಮನೆ ಬಳಿ ಬಂದಿದ್ದ. ಮಗು ತೋರಿಸುವಂತೆ ಪಟ್ಟು ಹಿಡಿದಿದ್ದ. ಈ ವೇಳೆ ಮಗು ಮಾರಾಟವಾಗಿರುವ ವಿಚಾರ ಮಣಿಕಂಠನಿಗೆ ತಿಳಿದಿದೆ.

  ಪೊಲೀಸರ ಮಧ್ಯಪ್ರವೇಶ

  ಕೂಡಲೇ ಪೊಲೀಸ್ ಠಾಣೆಗೆ ತೆರಳಿದ ಮಣಿಕಂಠನ್, ತನ್ನ ಮಗುವನ್ನು ರಕ್ಷಿಸುವಂತೆ ದೂರು ನೀಡಿದ್ದ. ಕಾರ್ಯಪ್ರವೃತ್ತರಾದ ಪೊಲೀಸರು ಮಗು ಪಡೆದ ದಂಪತಿ ಹಾಗೂ ಓರ್ವ ದಲ್ಲಾಳಿಯನ್ನ ಬಂಧಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಜೆಬಮಲಾರ್ ಹಾಗೂ ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ. ಅವರನ್ನ ಹಿಡಿಯಲು ಖಾಕಿ ಪಡೆ ಈಗಾಗಲೇ ಬಲೆ ಬೀಸಿದೆ.

  (ವರದಿ: ವಾಸುದೇವ್ ಎಂ)
  Published by:Soumya KN
  First published: