ಆಕೆ ಕರುಳಿನ ಕುಡಿಗೆ ಟಾರ್ಚರ್ ನೀಡ್ತಿದ್ದ ವಿಕೃತ ತಾಯಿ. ಮಗುವಿನ ಮೇಲೆ ಅಮಾನುಷ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದಳು. ಬಳಿಕ ಆ ವಿಡಿಯೋಗಳನ್ನು ನೋಡಿಕೊಂಡು ಖುಷಿಪಡುತ್ತಿದ್ದಳು. ಗಾಯಗೊಂಡ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು ಪೊಲೀಸರನ್ನು ಯಮಾರಿಸುತ್ತಿದ್ದಳು. ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಎರಡು ವರ್ಷದ ಪುಟ್ಟ ಮಗುವೊಂದನ್ನು ಮನಸಿಗೆ ಬಂದಂತೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡುತ್ತಿರುವ ಮಹಿಳೆ ಬೇರೆ ಯಾರೂ ಅಲ್ಲ. ಆ ಪುಟ್ಟ ಮಗುವಿನ ಹೆತ್ತ ತಾಯಿ ತುಳಸಿ.
ಆಂಧ್ರಪ್ರದೇಶ ಮೂಲದ ಈಕೆಯನ್ನು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೊಟ್ಟು ಗ್ರಾಮದ ವಾಸಿ ವಡಿವಳಗನ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ ಎರಡು ವರ್ಷದ ಗಂಡು ಮಗು ಸಹ ಇದ್ದು, ಕಳೆದೊಂದು ವರ್ಷದಿಂದ ಇವರ ಸಂಸಾರದಲ್ಲಿ ಬಿರುಕು ಮೂಡಿತ್ತು. ಇಬ್ಬರ ನಡುವೆ ಹೊಂದಾಣಿಕೆಯಾಗದೆ ಫೆಬ್ರವರಿ ತಿಂಗಳಲ್ಲಿ ಗಂಡ ಹೆಂಡತಿ ಬೇರೆ ಬೇರೆಯಾಗಿದ್ದಾರೆ. ತುಳಸಿ ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದಳು. ಆದ್ರೆ ಇತ್ತೀಚೆಗೆ ಮಗುವಿಗೆ ಪದೇ ಪದೇ ಆನಾರೋಗ್ಯ ಕಾಡಿತ್ತು. ವಿಚಾರ ತಿಳಿದು ಮಗುವಿನ ಆರೋಗ್ಯ ವಿಚಾರಿಸಲು ಹೋದ ತಂದೆ ವಡಿವಳಗನ್ ಗೆ ದೊಡ್ಡ ಶಾಕ್ ಕಾದಿತ್ತು.
ಮಗುವನ್ನು ನೋಡಲು ಹೋದ ತಂದೆಗೆ ಅಕ್ಕಪಕ್ಕದ ಮನೆಯವರು ತಾಯಿಯೇ ಮಗುವನ್ನು ನಿರಂತರವಾಗಿ ಹಲ್ಲೆ ನಡೆಸುತ್ತಿರುವ ಬಗ್ಗೆ ತಿಳಿಸಿದ್ದಾರೆ. ಅನುಮಾನಗೊಂಡು ಪತ್ನಿ ತುಳಸಿ ಮೊಬೈಲ್ ಪರಿಶೀಲನೆ ನಡೆಸಿದಾಗ ಮಗುವಿನ ಮೇಲೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿರುವ ವಿಡಿಯೋಗಳು ಕಂಡು ಒಂದು ಕ್ಷಣ ದಂಗಾಗಿದ್ದಾನೆ. ಮಗುವನ್ನು ಸಿಕ್ಕ ಸಿಕ್ಕ ವಸ್ತುಗಳಿಂದ ಥಳಿಸಿ ಮೊಬೈಲ್ನಲ್ಲಿ ಸೆರೆ ಹಿಡಿದು ವಿಕೃತಿ ಮೆರೆದಿರುವ ಪತ್ನಿ ವಿರುದ್ಧ ಸತ್ಯ ಮಂಗಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಸತ್ಯಮಂಗಲಂ ಪೊಲೀಸರು ಪಾಪಿ ತಾಯಿ ತುಳಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಹಿರಂಗವಾಗಿದೆ.
ಇದನ್ನೂ ಓದಿ: Woman sexually assaults boy: 17 ವರ್ಷ ಬಾಲಕನನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಯುವತಿ!
ಪ್ರೇಮ್ ಕುಮಾರ್ ಎಂಬಾತನ ಜೊತೆ ಕಳೆದ ಹಲವು ವರ್ಷಗಳಿಂದ ಅಕ್ರಮ ಸಂಬಂಧವಿಟ್ಟುಕೊಂಡಿದ್ದು, ಆತನ ಜೊತೆ ವಿಡಿಯೋ ಕಾಲ್ ಮಾಡುವ ವೇಳೆ ಮಗು ಅಡ್ಡಿಪಡಿಸುತ್ತಿತ್ತು. ಹಾಗಾಗಿ ಕೋಪಕ್ಕೆ ಮಗುವಿನ ಮೇಲೆ ಹಲ್ಲೆ ಮಾಡಿ, ಅದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ, ಬಳಿಕ ಅದನ್ನು ನೋಡುತ್ತಾ ಆಕ್ರೋಶ ತಿರಿಸಿಕೊಳ್ಳುತ್ತಿರುವುದಾಗಿ ಪೊಲೀಸರ ತನಿಖೆ ವೇಳೆ ಆರೋಪಿ ತುಳಸಿ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಸತ್ಯಮಂಗಲಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಒಟ್ನಲ್ಲಿ ಮಕ್ಕಳು ತಾಯಿಯ ಬಳಿ ಇದ್ದರೆ ಸುರಕ್ಷಿತವಾಗಿ ಇರ್ತಾರೆ ಎಂಬ ಮಾತಿದೆ. ಆದ್ರೆ ಈ ಮಹಾತಾಯಿ ತನ್ನ ಅಕ್ರಮ ಸಂಬಂಧಕ್ಕೆ ಮಗು ಅಡ್ಡಪಡಿಸುತ್ತಿದೆ ಎಂಬ ಕಾರಣಕ್ಕೆ ಹೀಗೆ ಚಿತ್ರಹಿಂಸೆ ನೀಡಿದ್ದು ಮಾತ್ರ ಅಮಾನುಷ. ಸದ್ಯ ತಮಿಳುನಾಡು ಮಕ್ಕಳ ಕಲ್ಯಾಣ ಇಲಾಖೆ ಮಗುವನ್ನು ರಕ್ಷಣೆ ಮಾಡಿ ತಂದೆಯ ಸುಪರ್ದಿಗೆ ನೀಡಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ