• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Viral News: ಕೋಳಿಯನ್ನೇ ಎತ್ತಿಕೊಂಡು ಠಾಣೆಗೆ ಬಂದ ಮಹಿಳೆ! ಕೋಳಿ ಕೊಲೆಗೆ ಯತ್ನಿಸಿದವರ ಮೇಲೆ ಕಂಪ್ಲೇಂಟ್!

Viral News: ಕೋಳಿಯನ್ನೇ ಎತ್ತಿಕೊಂಡು ಠಾಣೆಗೆ ಬಂದ ಮಹಿಳೆ! ಕೋಳಿ ಕೊಲೆಗೆ ಯತ್ನಿಸಿದವರ ಮೇಲೆ ಕಂಪ್ಲೇಂಟ್!

ಕೋಳಿಯೊಂದಿಗೆ ಪೊಲೀಸ್ ಠಾಣೆಗೆ ಬಂದ ಮಹಿಳೆ

ಕೋಳಿಯೊಂದಿಗೆ ಪೊಲೀಸ್ ಠಾಣೆಗೆ ಬಂದ ಮಹಿಳೆ

ಹಲ್ಲೆಗೊಳಗಾದರೆ, ಮನೆಯಲ್ಲಿ ಕಳ್ಳತನವಾದರೆ, ವಂಚನೆಗೆ ಒಳಗಾದರೆ ಅಥವಾ ಯಾರಾದರೂ ಬೆದರಿಕೆಯಾಕಿದರೆ ಪೊಲೀಸರಿಗೆ (Police) ದೂರು ನೀಡುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ತನ್ನಕೋಳಿಯನ್ನು ಪೊಲೀಸ್​ ಠಾಣೆಗೆ (Police Station) ತೆಗೆದುಕೊಂಡು ಬಂದು, ಪಕ್ಕದ ಮನೆಯವರು ಇದನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ಇದಕ್ಕೆ ಸ್ವಲ್ಪ ಗಾಯವಾಗಿದೆ ಎಂದು ತೋರಿಸಿ ತಕ್ಷಣವೇ ಎಫ್​ಐಆರ್ (FIR)​ ದಾಖಲಿಸಲು ಪೊಲೀಸರಿಗೆ ಒತ್ತಾಯಿಸಿದ ಘಟನೆ ನಡೆದಿದೆ.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Chhattisgarh, India
 • Share this:

ಛತ್ತೀಸ್​​ಗಢ : ಛತ್ತಿಸ್​ಗಢದ (Chhattisgarh) ಬಿಲಾಸ್​ಪುರ (Bilaspur) ಎಂಬಲ್ಲಿ ವಿಚಿತ್ರ ಘಟನೆ ನಡೆದಿದೆ. ಹಲ್ಲೆಗೊಳಗಾದರೆ, ಮನೆಯಲ್ಲಿ ಕಳ್ಳತನವಾದರೆ, ವಂಚನೆಗೆ ಒಳಗಾದರೆ ಅಥವಾ ಯಾರಾದರೂ ಬೆದರಿಕೆಯಾಕಿದರೆ ಪೊಲೀಸರಿಗೆ (Police) ದೂರು ನೀಡುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ತನ್ನಕೋಳಿಯನ್ನು ಪೊಲೀಸ್​ ಠಾಣೆಗೆ (Police Station) ತೆಗೆದುಕೊಂಡು ಬಂದು, ಪಕ್ಕದ ಮನೆಯವರು ಇದನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ಇದಕ್ಕೆ ಸ್ವಲ್ಪ ಗಾಯವಾಗಿದೆ ಎಂದು ತೋರಿಸಿ ತಕ್ಷಣವೇ ಎಫ್​ಐಆರ್ (FIR)​ ದಾಖಲಿಸಲು ಪೊಲೀಸರಿಗೆ ಒತ್ತಾಯಿಸಿದ ಘಟನೆ ನಡೆದಿದೆ.


ಪಚೀತಿಗೆ ಒಳಗಾದ ಪೊಲೀಸರು


ಕೋಳಿ ಕೊಲೆಗೆ ಯತ್ನದ ಬಗ್ಗೆ ದೂರು ದಾಖಲಿಸಿಕೊಳ್ಳಬೇಕೆಂದು ಮಹಿಳೆ ಒತ್ತಾಯಿಸಲು ಶುರು ಮಾಡಿದ್ದರಿಂದ ಒಂದು ಕ್ಷಣ ಪೊಲೀಸರೇ ದಂಗಾಗಿದ್ದಾರೆ. ಕೊನೆಗೆ ಆ ಮಹಿಳೆಯನ್ನು ಕೂರಿಸಿ ನಡೆದ ಘಟನೆ ಬಗ್ಗೆ ಕೇಳಿದಾಗ ನೈಜ ಘಟನೆ ಬಹಿರಂಗಪಡಿಸಿದ್ದಾಳೆ.


ಕೋಳಿ ರೆಕ್ಕೆ ಕತ್ತರಿಸಿದ್ದ ಪಕ್ಕದ ಮನೆ ಮಹಿಳೆ


ಬಿಲಾಸ್​ಪುರದ ರತನ್​ಪುರ ಪೊಲೀಸ್​ ಠಾಣೆಯ ವ್ಯಾಪ್ತಿಯ ಸಿಲ್ದಾಹ ಗ್ರಾಮದ ಜಾನಕಿ ಬಾಯಿ ಎಂಬ ಮಹಿಳೆ ತಮ್ಮ ಮನೆಯಲ್ಲಿ ಕೋಳಿಗಳನ್ನು ಸಾಕುತ್ತಿದ್ದಾರೆ. ಈ ಕೋಳಿಗಳೊಂದಿಗೆ ಜಾನಕಿ ಬಾಯಿ ಅತ್ಯುತ್ತಮ ಬಾಂಧವ್ಯವನ್ನೂ ಇಟ್ಟುಕೊಂಡಿದ್ದರು. ಆದರೆ ಕೋಳಿಗಳು ಅಡ್ಡಾದಿಡ್ಡಿಯಾಗಿ ಅಕ್ಕಪಕ್ಕದ ಮನೆಗಳ ಸುತ್ತಾ ಹೋಗುತ್ತಿದ್ದವು. ಈ ವೇಳೆ ಭಾನುವಾರ ನೆರೆ ಮನೆಯ ಮಹಿಳೆಯೊಬ್ಬರು ತನ್ನ ಕೋಳಿಯನ್ನು ಹಿಡಿದು ರೆಕ್ಕೆಯನ್ನು ಕತ್ತರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.


Dog Care: ನಾಯಿಗಳ ಬರ್ತ್​ಡೇ ಆಚರಿಸಲು ಶುರುವಾಯ್ತು ಡಾಬಾ! ಇಲ್ಲಿ ನಿಮ್ಮ ಶ್ವಾನಕ್ಕೆ ಸಿಗುತ್ತೆ ಸಖತ್ ಊಟ!


ತಿನ್ನಲು ಬಯಸಿದ್ದರೆಂದು ದೂರು


ಭಾನುವಾರ ಮಹಿಳೆಯ ಕೋಳಿ ಕಾಣಿಸದಿದ್ದಾಗ, ಹೇಗೋ ತನ್ನ ಪಕ್ಕದ ಮನೆಯಲ್ಲಿದೆ ಎಂಬುದನ್ನು ಪತ್ತೆ ಹಚ್ಚಿದ್ದಾಳೆ. ಅಲ್ಲದೆ ಪಕ್ಕದ ಮನೆಯವರು ಮಾಂಸಹಾರಿಗಳು, ಹಾಗಾಗಿ ನನ್ನ ಕೋಳಿಯನ್ನು ತಿನ್ನಲು ಬಯಸಿದ್ದರು. ಅವರು ರೆಕ್ಕೆಗಳನ್ನು ಕತ್ತರಿಸಿದ್ದಾರೆ, ನಾನು ಜಗಳ ಮಾಡಿ ನನ್ನ ಹುಂಜವನ್ನು ತಂದಿದ್ದೇನೆ ಎಂದು ಮಹಿಳೆ ಗಾಯಗೊಂಡಿರುವ ಹುಂಜವನ್ನು ಪೊಲೀಸರಿಗೆ ತೋರಿಸುತ್ತಾ ದೂರಿದ್ದಾಳೆ. ಅಲ್ಲದೆ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾಳೆ.
ಪ್ರತಿದಿನ ಕೋಳಿಗಳ ಕಣ್ಮರೆ


ಜಾನಕಿ ಬಾಯಿ ಮನೆಯಲ್ಲಿ ಸಾಕಷ್ಟು ಕೋಳಿಗಳಿದ್ದು, ಅವು ಮನೆ ಅಕ್ಕ ಪಕ್ಕ ಸುತ್ತಾಡುತ್ತಿರುತ್ತವೆ. ಕೆಲವು ದಿನಗಳಿಂದ  ಕೋಳಿಗಳು ಕಣ್ಮರೆಯಾಗುತ್ತಿದ್ದವು. ಹಾಗಾಗಿ ತಮ್ಮ ಕೋಳಿಗಳ ಮೇಲೆ ನಿಗಾವಹಿಸಿದ್ದ ಜಾನಕಿ ಬಾಯಿ ಸೋಮವಾರ ಸಂಜೆ ನೆರಮನೆಯವರು ಕೋಳಿಯನ್ನು ಕದ್ದಿರುವುದನ್ನು ಕಂಡು ಹಿಡಿದಿದ್ದಾರೆ. ಕೋಳಿಯನ್ನು ಕದ್ದು ಹೋಗಿದ್ದನ್ನು ಗಮನಿಸಿ ನಾನು ಅವರ ಮನೆಗೆ ಹೋಗುವಷ್ಟರಲ್ಲಿ ಹುಂಜದ ರೆಕ್ಕೆಯನ್ನು ಕತ್ತರಿಸಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.


ಪತಿಯನ್ನು ಕರೆಸಿದ ಪೊಲೀಸರು


ಮಹಿಳೆ ಆರೋಪವನ್ನು ನಂಬದ ಪೊಲೀಸರು ಸ್ಪಷ್ಟನೆಗಾಗಿ ಮಹಿಳೆಯ ಪತಿಯನ್ನು ಕರೆಸಿದ್ದಾರೆ. ವಿಚಿತ್ರವೆಂದರೆ ಆತ ಕೂಡ ತನ್ನ ಪತ್ನಿಯ ಪರ ಮಾತನಾಡಿ ಪಕ್ಕದ ಮನೆಯವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದ್ದಾನೆ.


ರಾಜಿ ಮಾಡಿಸಿದ ಪೊಲೀಸರು


ದಂಪತಿ ಪಕ್ಕದ ಮನೆಯವ ವಿರುದ್ಧ ದೂರು ದಾಖಲಿಸಲು ಒತ್ತಾಯ ಮಾಡಿದ್ದರಿಂದ , ಕೋಳಿಯನ್ನು ಕೊಲ್ಲಲು ಯತ್ನಿಸಿದ ಆರೋಪ ಹೊತ್ತಿದ್ದ ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆ ತಂದಿದ್ದಾರೆ. ಆದರೆ ಆ ಮಹಿಳೆ ಕೋಳಿಯನ್ನು ತಾನು ಕೊಲ್ಲಲು ಪ್ರಯತ್ನಿಸಲಿಲ್ಲ, ಸುಳ್ಳು ಆರೋಪ ಎಂದು ವಾದಿಸಿದ್ದಾಳೆ. ನಂತರ ಪೊಲೀಸರು ಇಬ್ಬರನ್ನು ರಾಜಿ ಮಾಡಿ ಠಾಣೆಯಿಂದ ಕಳುಹಿಸಿದರು. ಆದರೆ ಕೋಳಿ ಜಗಳ ಸ್ಥಳೀಯವಾಗಿ ಚರ್ಚೆಯನ್ನುಂಟು ಮಾಡಿದೆ.

Published by:Rajesha M B
First published: