BreastMilk from Armpit: ಹೆರಿಗೆ ಬಳಿಕ ಮಹಿಳೆಯ ಕಂಕುಳಲ್ಲಿ ಜಿನುಗುತ್ತಿರುವ ಹಾಲು.. ಏನಿದು ವಿಚಿತ್ರ?

26 ವರ್ಷ ಮಹಿಳೆ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಪ್ರಸವದ 2 ದಿನಗಳ ಬಳಿಕ ಕಂಕುಳಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ವೈದ್ಯರು ಪರಿಶೀಲಿಸಿದಾಗ ಹಾಲು ಜಿನುಗುತ್ತಿರುವುದು ಪತ್ತೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗರ್ಭಿಣಿಯಾಗಿ 9 ತಿಂಗಳುಗಳು ಕಳೆದ ಬಳಿಕ ಮಗುವಿಗೆ ಜನ್ಮ ನೀಡುವುದು. ನಂತರ ಸ್ತನಗಳಲ್ಲಿ ಹಾಲು ಉತ್ಪತಿಯಾಗುವುದು ಸಾಮಾನ್ಯ. ಮಗು ಹುಟ್ಟುತ್ತಲೇ ತಾಯಿ ಎದೆಯಲ್ಲಿ ಹಾಲು ಜಿನುಗುತ್ತದೆ. ಪ್ರತಿ ಜೀವಿಯ ಮೊದಲ ಆಹಾರ ತಾಯಿ ಎದೆಯಾಲು. ಬಸುರಿಯಿಂದ ಬಾಣಂತಿಯಾಗುತ್ತಲೇ ತಾಯಿಯಾದವಳು ಎದೆಯಾಲುಣಿಸಲು ಶುರು ಮಾಡುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ಪತ್ತೆಯಾಗಿದೆ. ಮಗುವಿಗೆ ಜನ್ಮ ನೀಡಿದ ಮಹಿಳೆಗೆ 2 ದಿನಗಳ ಬಳಿಕ ವಿಚಿತ್ರ ಸಮಸ್ಯೆ ಎದುರಾಗಿದೆ. ಮಹಿಳೆಯ ಕಂಕುಳಲ್ಲಿ ಹಾಲು ಜಿನುಗುತ್ತಿದ್ದು ಕುಟುಂಬಸ್ಥರು ಸೇರಿದಂತೆ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪೋರ್ಚುಗೀಸ್​​ ದೇಶದಲ್ಲಿ ಈ ಅಪರೂಪದ ಪ್ರಕರಣ ಪತ್ತೆಯಾಗಿದೆ. 26 ವರ್ಷ ಮಹಿಳೆ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಪ್ರಸವದ 2 ದಿನಗಳ ಬಳಿಕ ಕಂಕುಳಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ವೈದ್ಯರು ಪರಿಶೀಲಿಸಿದಾಗ ಹಾಲು ಜಿನುಗುತ್ತಿರುವುದು ಪತ್ತೆಯಾಗಿದೆ. ಎದೆಯಾಲು ಕಂಕುಳಲ್ಲಿ ಬರುಲು ಹೇಗೆ ಸಾಧ್ಯ? ಏನಿದು ವೈಚಿತ್ರ್ಯ ಎಂದು ತಜ್ಞ ವೈದ್ಯರು ಪರಿಶೀಲನೆ ನಡೆಸಿದ್ದಾರೆ.

ಸಮಸ್ಯೆ ಎದುರಿಸುತ್ತಿರುವ ಮಹಿಳೆ ಅಪರೂಪದ ಕಾಯಿಲೆಯಾದ ಪೊಲಿಮಸ್ತಿಯಾ (polymastia) ದಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಪೊಲಿಮಸ್ತಿಯಾ ಅಂದರೆ 2ಕ್ಕಿಂತ ಹೆಚ್ಚು ಸ್ತನಗಳು ದೇಹದಲ್ಲಿ ಕಂಡು ಬರುವುದು. ಮಗುವಿಗೆ ಜನ್ಮ ನೀಡುವವರೆಗೂ ಈ ಸಮಸ್ಯೆ ಗೊತ್ತಾಗುವುದಿಲ್ಲ. ಒಮ್ಮೆ ತಾಯಿಯಾದ ಬಳಿಕ ದೇಹದಲ್ಲಿರುವ 3ನೇ ಸ್ತನ ಕೂಡ ಹಾಲು ನೀಡಲು ಮುಂದಾಗುತ್ತದೆ. ಸಾಮಾನ್ಯವಾಗಿ ಈ 3ನೇ ಸ್ತನ ಕಂಕುಳಲ್ಲಿ ಕಂಡು ಬರುತ್ತದೆ. ಆದರೆ ಸಾಮಾನ್ಯ ಸ್ತನಗಳಂತೆ 3ನೇ ಸ್ತನಕ್ಕೆ ಮೊಲೆಗಳು ಇರುವುದಿಲ್ಲ. ಕೇವಲ ಹಾಲಿನ ನಾಳ ಮಾತ್ರ ಇರುತ್ತದೆ.

ಮೊಲೆ ಇಲ್ಲದ ಕಾರಣ ಮಗುವಿಗೆ ಕಂಕುಳಿಂದ ಹಾಲುಣಿಸಲು ಸಾಧ್ಯವಿಲ್ಲ. ಇನ್ನು ಸ್ತನ ಕ್ಯಾನ್ಸರ್​ ಪರೀಕ್ಷೆ ವೇಳೆ ಮಹಿಳೆಯ 3ನೇ ಸ್ತನವನ್ನೂ ಪರಿಶೀಲಿಸಬೇಕು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕಂಕುಳಲ್ಲಿ ಹಾಲು ಜಿನುಗುತ್ತಿರುವುದು


ಇನ್ನು ಎದೆಹಾಲಿನ ಬಗ್ಗೆ ತಾಯಂದಿರು ತಿಳಿದಿರಲೇಬೇಕಾದ ವಿಚಾರಗಳನ್ನು ಸರಳವಾಗಿ ವಿವರಿಸಿದ್ದಾರೆ ಬೆಂಗಳೂರಿನ ಫೋರ್ಟಿಸ್ಲಾ ಫೆಮ್ಮೆ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ ಗೀತಾ ಮೊನ್ನಪ್ಪ.

  1. ಎದೆ ಹಾಲು ಶಿಶುವಿಗೆ ಬೇಧಿ, ಕಿವಿ ಸೋಂಕು, ಶ್ವಾಸಕೋಶದ ಸೋಂಕು, ಮೂತ್ರಾಂಗ ವ್ಯೂಹದ ಸೋಂಕು ಮೊದಲಾದವುಗಳಿಂದ ರಕ್ಷಣೆ ನೀಡುತ್ತದೆ.

  2. ಎದೆ ಹಾಲು ಕುಡಿದು ಬೆಳೆದಂತಹ ಮಕ್ಕಳು ಇಸಬು, ಆಸ್ತಮಾ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಬಾಲ್ಯದಲ್ಲಿ ಬರುವಂತಹ ಲ್ಯುಕೇಮಿಯಾ ಹಾಗೂ ಮುಂದೆ ಲಿಂಫೋಮದಂತಹ ಕ್ಯಾನ್ಸರ್‌ನಿಂದ ಬಳಲುವ ಸಾಧ್ಯತೆ ಕಡಿಮೆ.

  3. ಸ್ತನ್ಯಪಾನ ಮಾಡಿಸಿದ ತಾಯಂದಿರು ಗರ್ಭಿಣಿಯಾಗಿದ್ದಾಗ ಹೆಚ್ಚಾದ ತೂಕವನ್ನು ಬಹಳ ವೇಗವಾಗಿ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ.

  4. ಎದೆ ಹಾಲೂಡಿಸುವುದರಿಂದ ತಾಯಂದಿರಿಗೆ ಅಂಡಾಶಯ ಮತ್ತು ಸ್ತನ ಕ್ಯಾನ್ಸರ್‌ ಬರುವ ಅಪಾಯ ಕಡಿಮೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: