Online baby: ಆನ್‌ಲೈನ್ ನಲ್ಲೇ ವೀರ್ಯ, ಸಂತಾನೋತ್ಪತ್ತಿ ಕಿಟ್ ಆರ್ಡರ್; ಹುಟ್ಟಿದ ಮಗು ಹೇಗಿದೆ ನೋಡಿ!

Buy Sperm Online: ಮಗು ಪಡೆಯಲು ಹಲವಾರು Private Fertility ಕೇಂದ್ರಗಳನ್ನ ಸುತ್ತಾಡಿದ್ದರು. ಮಗು ಪಡೆಯಬೇಕಾದರೆ 1.64 ಲಕ್ಷಕ್ಕೂ ಹೆಚ್ಚು ಹಣ ಬೇಕಿತ್ತು. ಈ ದರವನ್ನ ಭರಿಸಲಾಗದ ಮಹಿಳೆ ಕೊನೆಗೆ ಆನ್‌ಲೈನ್ ಮೂಲಕವೇ ಎಲ್ಲವನ್ನೂ ತರಿಸಿಕೊಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮತ್ತೆ ತಾಯಿ ಆಗಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    Viral News: ವಿಶ್ವದಲ್ಲಿ ಪ್ರತಿದಿನ ನಂಬಲಾಗದ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ. ಅದರಂತೆ ಬ್ರಿಟಿಷ್ ನ ಮಹಿಳೆಯೊಬ್ಬಳು ಆನ್ ಲೈನ್ ನಲ್ಲಿ ವೀರ್ಯ ಮತ್ತು ಸಂತಾನೋತ್ಪತ್ತಿ ಕಿಟ್ ಆರ್ಡರ್ ಮಾಡಿ ಮಗುವಿಗೆ ಜನ್ಮ ನೀಡಿದ್ದಾಳೆ. ಇದಕ್ಕೂ ಮುನ್ನ ಯೂಟ್ಯೂಬ್ ನಲ್ಲಿ ಆನ್‌ಲೈನ್ ನಲ್ಲಿ ತರಿಸಿದ ಸ್ವಯಂ ಗರ್ಭಧಾರಣೆ ಕಿಟ್ ಅನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ಮಹಿಳೆ ಮಾಹಿತಿ ಪಡೆದಿದ್ದಳು. ಅದರಂತೆ ಸ್ವಯಂ ಗರ್ಭಧಾರಣೆ ಧರಿಸಿ ಮುದ್ದು ಮಗುವಿಗೆ ಈಗ ಬ್ರಿಟಿಷ್ ಮಹಿಳೆ ಜನ್ಮ ನೀಡಿದ್ದಾಳೆ. ಆ ಮಗುವಿಗೆ ಈಡನ್ (Eden) ಎಂದು ಹೆಸರಿಡಲಾಗಿದೆ. ಈ ವಿಚಾರ ಅನೇಕರಿಗೆ ಅಚ್ಚರಿ ಉಂಟುಮಾಡಿದೆ. ಇಂಗ್ಲೆಂಡಿನ ಟಿಸೈಡ್ ನಂಥೋರ್ಪೆ ನಿವಾಸಿ 33 ವರ್ಷದ ಸ್ಟೆಫನಿ ಟೇಲರ್ ಎಂಬ ಮಹಿಳೆ ಎರಡನೇ ಮಗು ಬೇಕು ಎಂಬ ಆಸೆಯನ್ನು ಹೊಂದಿದ್ದಳು. ಈಗಾಗಲೇ ಒಂದು ಮಗು ಹೊಂದಿರುವ ಮಹಿಳೆ, ಮತ್ತೊಂದು ಮಗುವಿನ ಬಯಕೆಯಲ್ಲಿ ಇದ್ದರು.

    ಆದರೆ ಸ್ಟೆಫನಿ ತನ್ನ ಪ್ರಿಯಕರನಿಂದ ದೂರವಾಗಿದ್ದಳು. ಹೇಗಾದರೂ ಮಾಡಿ ಮತ್ತೊಂದು ಮಗು ಪಡೆಯಬೇಕೆಂಬ ಆಸೆ ಹೊಂದಿದ್ದ ಸ್ಟೆಫನಿ, Private Fertility ಕೇಂದ್ರಕ್ಕೂ ಭೇಟಿ ನೀಡಿದ್ದಳು. ಆದರೆ ಟ್ರೀಟ್ಮೆಂಟ್ ನ ಬೆಲೆ ಕಂಡು ಎರಡನೇ ಮಗು ಆಸೆಯನ್ನೇ ಮರೆತಿದ್ದಳು.
    ಹೀಗಿದ್ದಾಗ ಸ್ಟೆಫನಿ ಕಣ್ಣಿಗೆ A Baby app ಬಿದ್ದಿತ್ತು. ಇದರ ಮೂಲಕ ಸ್ಟೆಫನಿ ವೀರ್ಯಾಣು ದಾನಿಯನ್ನು ಕಂಡುಕೊಂಡಿದ್ದಳು. ಬಳಿಕ E-bay Appನಲ್ಲಿ ಸ್ವಯಂ ಗರ್ಭಧಾರಣೆ ಕಿಟ್ ಅನ್ನ ಆರ್ಡರ್ ಮಾಡಿದ್ದಳು. ಬಳಿಕ ಅದನ್ನು ಸ್ವತಃ ತಾವೇ ಧರಿಸಿಕೊಂಡು ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಈ ರೀತಿಯಾದ ತಂತ್ರಜ್ಞಾನ ಇಲ್ಲದೆ ಇದ್ದಿದ್ದರೆ ನನಗೆ ಎರಡನೇ ಮಗು ಪಡೆಯುವ ಕನಸು ಕನಸಾಗಿಯೇ ಉಳಿಯುತ್ತಿತ್ತು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಬರೋಬ್ಬರಿ 23 ಮಕ್ಕಳ ತಂದೆ ಈತ...ಆದರೂ ಬೇಡಿಕೆ ಕಮ್ಮಿಯಾಗಿಲ್ಲ!

    ಈಗಾಗಲೇ ಈಕೆಗೆ ಒಂದು ಮಗು ಇದೆ

    ಸ್ಟೆಫನಿ ಈ ಹಿಂದೆ ಮಾಜಿ ಪ್ರಿಯಕರ ಫ್ರಾಂಕಿನೊಂದಿಗೆ ಮಗುವನ್ನ ಹೊಂದಿದ್ದಳು. ವೈಯಕ್ತಿಕ ಕಾರಣಾಂತರಗಳಿಂದಾಗಿ ಪ್ರಿಯಕರನಿಂದ ದೂರವಾಗಬೇಕಾಯಿತು. ದೂರಾದ ಬಳಿಕವೂ ಎರಡನೇ ಮಗು ಆಸೆ ಹೊಂದಿದ್ದ ಮಹಿಳೆ ತನ್ನ ಆಸೆಯನ್ನು ಐದು ವರ್ಷದ ಬಳಿಕ ಈಡೇರಿಸಿಕೊಂಡಿದ್ದಾಳೆ. ಈ ಹಿಂದೆ ಮಗು ಪಡೆಯಲು ಹಲವಾರು Private Fertility ಕೇಂದ್ರಗಳನ್ನ ಸುತ್ತಾಡಿದ್ದರು. ಮಗು ಪಡೆಯಬೇಕಾದರೆ 1.64 ಲಕ್ಷಕ್ಕೂ ಹೆಚ್ಚು ಹಣ ಬೇಕಿತ್ತು. ಈ ದರವನ್ನ ಭರಿಸಲಾಗದ ಮಹಿಳೆ ಕೊನೆಗೆ ಆನ್‌ಲೈನ್ ಮೂಲಕವೇ ಎಲ್ಲವನ್ನೂ ತರಿಸಿಕೊಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮತ್ತೆ ತಾಯಿ ಆಗಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

    ಸ್ಟೆಫನಿಯ ತಾಯಿ ಮತ್ತು ಆಕೆಯ ಸಹೋದರಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಆಕೆಯ ತಂದೆ ಇದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರಂತೆ. ಬಳಿಕ ಇದನ್ನು ಅದ್ಭುತ ನಿರ್ಧಾರ ಎಂದು ತಂದೆಯೇ ತಿಳಿಸಿದ್ದಾರೆ. ಮಗುವಾದ ಬಳಿಕ Sperm Donorಗೆ ಈ ಮಾಹಿತಿಯನ್ನು ಸ್ಟೆಫನಿ ತಿಳಿಸಿದ್ದಾರೆ. ಮುಂದೆ ತನ್ನ ಮಗ ಬೆಳೆದು ದೊಡ್ಡವನಾದ ಬಳಿಕ Sperm Donor ಅವರನ್ನು ಭೇಟಿಯಾದರು ನನಗೆ ತೊಂದರೆ ಇಲ್ಲ ಅಂತ ಸ್ಟೆಫನಿ ಹೇಳಿದ್ದಾರೆ. ಇನ್ನು ಸ್ಟೆಫನಿ ತುಂಬಾ ಅದ್ಭುತವಾದ ಮಹಿಳೆ, ಭವಿಷ್ಯದಲ್ಲಿ ಆಕೆಗೆ ಮತ್ತಷ್ಟು ಮಕ್ಕಳು ಬೇಕಾದಲ್ಲಿ ನನ್ನನ್ನು ಸಂಪರ್ಕಿಸಬಹುದೆಂದು Sperm Donor ತಿಳಿಸಿದ್ದಾರೆ ಎನ್ನಲಾಗಿದೆ.

    (ವರದಿ- ವಾಸುದೇವ್. ಎಂ)
    Published by:Soumya KN
    First published: