Viral Video: ಶುದ್ಧಗಾಳಿ ಬೇಕೆಂದು ವಿಮಾನದ ಕಿಟಕಿ ಓಪನ್ ಮಾಡಿದ ಮಹಿಳೆ!

ಗಗನಸಖಿ ತುರ್ತು ನಿರ್ಗಮನ ಕಿಟಕಿಯ ಪಕ್ಕದ ಸೀಟುಗಳಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಆ ಕಿಟಕಿಯನ್ನು ಓಪನ್ ಮಾಡದಂತೆ ಸೂಚನೆ ನೀಡಿದ್ದರು. ಆದರೆ, ಕಿಟಕಿ ಪಕ್ಕ ಕುಳಿತಿದ್ದ ಮಹಿಳೆ ತನಗೆ ಶುದ್ಧ ಗಾಳಿ ಬೇಕಾಗಿದೆ ಎಂದು ಹೇಳಿ ಆ ಕಿಟಕಿಯನ್ನು ಓಪನ್ ಮಾಡಿಯೇ ಬಿಟ್ಟರು.

Sushma Chakre | news18-kannada
Updated:September 27, 2019, 12:00 PM IST
Viral Video: ಶುದ್ಧಗಾಳಿ ಬೇಕೆಂದು ವಿಮಾನದ ಕಿಟಕಿ ಓಪನ್ ಮಾಡಿದ ಮಹಿಳೆ!
ವಿಮಾನದ ಎಮರ್ಜೆನ್ಸಿ ಕಿಟಕಿ ಓಪನ್ ಮಾಡಿದ ಮಹಿಳೆ
  • Share this:
ಆಕಾಶದಲ್ಲಿ ಹಾರುವ ವಿಮಾನದಲ್ಲಿ ಒಮ್ಮೆ ಪ್ರಯಾಣಿಸಬೇಕೆಂಬುದು ಎಷ್ಟೋ ಜನರ ಕನಸು. ವಿಮಾನದಲ್ಲಿ ಕಿಟಕಿ ಪಕ್ಕ ಕುಳಿತು ಮೋಡಗಳನ್ನು ನೋಡುತ್ತಾ, ಕೆಳಗೆಲ್ಲೋ ದೂರದಲ್ಲಿ ಕಾಣುವ ಪೇಟೆ, ಕಟ್ಟಡಗಳು, ಗದ್ದೆ ಬಯಲನ್ನು ನೋಡಿ ಸಂಭ್ರಮಿಸುವ ಆಸೆ ಎಲ್ಲರಿಗೂ ಇರುತ್ತದೆ. ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಬಯಕೆಯಿಂದ ವಿಮಾನ ಹತ್ತಿದ ಮಹಿಳೆಯೊಬ್ಬಳು ಯಡವಟ್ಟು ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾಳೆ.

ಚೀನಾದ ಮಹಿಳೆ ಚೀನಾದ ಏರ್​ಪೋರ್ಟ್​ನಲ್ಲಿ ವಿಮಾನ ರನ್​ವೇಯಲ್ಲಿ ಹೋಗುತ್ತಿದ್ದಾಗಲೇ ವಿಮಾನದ ಒಳಗೆ ಉಸಿರು ಕಟ್ಟಿದ ಹಾಗಾಗುತ್ತಿದೆ ಎಂಬ ಕಾರಣಕ್ಕೆ ವಿಮಾನದ ಎಮರ್ಜೆನ್ಸಿ ಕಿಟಕಿಯನ್ನು ಓಪನ್ ಮಾಡಿದ್ದಾಳೆ. ಈ ವಿಡಿಯೋ ಈ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೆಖೆಯಾಗುತ್ತಿದೆ ಎಂಬ ಕಾರಣಕ್ಕೆ ವಿಮಾನದ ಕಿಟಕಿ ಓಪನ್ ಮಾಡಿದ ಮಹಿಳೆಯ ಕೆಲಸಕ್ಕೆ ವಿಮಾನದ ಪ್ರಯಾಣಿಕರೆಲ್ಲ ಗಾಬರಿಯಾಗಿದ್ದಾರೆ. ಚೀನಾದ ಟಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಂಎಫ್ 8215 ವಿಮಾನದಲ್ಲಿ ಈ ಘಟನೆ ನಡೆದಿದೆ.

ಸ್ಕ್ಯಾನಿಂಗ್​ ಮಷಿನ್​ ಒಳಗೇ ರೋಗಿಯನ್ನು ಮರೆತ ಆಸ್ಪತ್ರೆ ಸಿಬ್ಬಂದಿ​; ಆಮೇಲೇನಾಯ್ತು ಗೊತ್ತಾ?

ಚೀನಾದ ಸ್ಥಳೀಯ ಪತ್ರಿಕೆಗಳ ವರದಿ ಪ್ರಕಾರ, ವಿಮಾನ ಹೊರಡುತ್ತಿದ್ದಂತೆ ಗಗನಸಖಿ ತುರ್ತು ನಿರ್ಗಮನ ಕಿಟಕಿಯ ಪಕ್ಕದ ಸೀಟುಗಳಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಆ ಕಿಟಕಿಯನ್ನು ಓಪನ್ ಮಾಡದಂತೆ ಸೂಚನೆ ನೀಡಿದರು. ಆದರೆ, ಕಿಟಕಿ ಪಕ್ಕ ಕುಳಿತಿದ್ದ ಮಹಿಳೆ ತನಗೆ ಉಸಿರು ಕಟ್ಟಿದ ಹಾಗಾಗುತ್ತಿದೆ, ಶುದ್ಧ ಗಾಳಿ ಬೇಕಾಗಿದೆ ಎಂದು ಹೇಳಿ ಆ ಕಿಟಕಿಯನ್ನು ಓಪನ್ ಮಾಡಿಯೇ ಬಿಟ್ಟರು.



ಕೂಡಲೇ ಗಗನಸಖಿ ಈ ವಿಷಯವನ್ನು ಏರ್​ಪೋರ್ಟ್​ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ರನ್​ವೇಗೆ ಬಂದ ಪೊಲೀಸರು ಆ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದರಿಂದ ವಿಮಾನ ಒಂದೂವರೆ ಗಂಟೆಗಳ ಕಾಲ ತಡವಾಗಿ ಹೊರಡಬೇಕಾಯಿತು. ವಿಮಾನ ಚಲಿಸುತ್ತಿರುವಾಗಲೇ ಕಿಟಕಿ ತೆಗೆದ ಮಹಿಳೆಯ ವಿಡಿಯೋ ವೈರಲ್ ಆಗಿದೆ. 
First published: September 27, 2019, 12:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading