• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • COVID Fear: ಕೊರೊನಾ ಭಯಕ್ಕೆ 3 ವರ್ಷಗಳ ಕಾಲ ಮಗನೊಂದಿಗೆ ಮಹಿಳೆ ಮನೆಯಲ್ಲೇ ಲಾಕ್​; ಗಂಡನಿಗೂ ನೋ ಎಂಟ್ರಿ!

COVID Fear: ಕೊರೊನಾ ಭಯಕ್ಕೆ 3 ವರ್ಷಗಳ ಕಾಲ ಮಗನೊಂದಿಗೆ ಮಹಿಳೆ ಮನೆಯಲ್ಲೇ ಲಾಕ್​; ಗಂಡನಿಗೂ ನೋ ಎಂಟ್ರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೂರು ವರ್ಷಗಳ ಹಿಂದೆ ಕೋವಿಡ್​ 19 ದೇಶವ್ಯಾಪಿ ಸಾಕಷ್ಟು ಸಾವು ನೋವುಗಳನ್ನು ಉಂಟು ಮಾಡಿತ್ತು. ಈ ಕಾರಣದಿಂದಲೇ 33 ವರ್ಷದ ಮುನ್ಮುಮ್ ಮಾಝಿ ತನ್ನ 10 ವರ್ಷದ ಮಗನ್ನು ಮನೆಯೊಳಗೆ ಸೇರಿಸಿ ಒಳಗಿನಿಂದ ಬೀಗ ಹಾಕಿಕೊಂಡಿದ್ದಾಳೆ. ಈ ಮೂರು ವರ್ಷದಲ್ಲಿ ಆಕೆ ತನ್ನ ಗಂಡನನ್ನು ಕೂಡ ಮನೆ ಒಳಗೆ ಸೇರಿಸಿಲ್ಲ ಎಂದು ತಿಳಿದುಬಂದಿದೆ.

ಮುಂದೆ ಓದಿ ...
  • Share this:

ಗುರುಗ್ರಾಮ್: ಕೋವಿಡ್​ 19 (COVID 19) ಸಾಂಕ್ರಾಮಿಕ ರೋಗ ಎರಡು ವರ್ಷ ಇಡೀ ಪ್ರಪಂಚವನ್ನು ತಲ್ಲಣಗೊಳಿಸಿತ್ತು. ಕೋವಿಡ್​ ಕಡಿಮೆಯಾದ ನಂತರ ಇಡೀ ಜನಜೀವನದಲ್ಲಿ ಹಲವು ಬದಲಾವಣೆ ಉಂಟಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಎಲ್ಲರೂ ಕೋವಿಡ್​ ವ್ಯಾಕ್ಸಿನ್ (Vaccine)​ ಪಡೆದುಕೊಂಡ ನಂತರ ಈ ಸಾಂಕ್ರಾಮಿಕ ತಲೆಕೆಡಿಸಿಕೊಳ್ಳದೆ ಸಹಜ ಜೀವನಕ್ಕೆ ಮರಳಿದ್ದಾರೆ. ಆದರೆ ಗುರುಗ್ರಾಮ್​ನಲ್ಲಿ (Gurugram) ಒಬ್ಬ ಮಹಿಳೆ (Woman) ಕೋವಿಡ್​ 19 ವೈರಸ್​​ಗೆ ಭಯಪಟ್ಟು ಮೂರು ವರ್ಷಗಳಿಂದ ಮನೆಯಿಂದ ಹೊರ ಬರದೆ ನಾಲ್ಕು ಗೋಡೆಗಳ ಮಧ್ಯೆಯೇ ಜೀವನ ಸಾಗಿಸುತ್ತಿದ್ದ ಆಘಾತಕಾರಿ ಘಟನೆ ಬೆಳಕಿದೆ ಬಂದಿದೆ. ಈ ಮೂರು ವರ್ಷಗಳು ಆಕೆ ತನ್ನ 10 ವರ್ಷದ ಮಗನನ್ನು ಕೂಡ ಮನೆಯಲ್ಲೆ ಕೂಡಿ ಹಾಕಿ ಮನೆಯೊಳಗೆ ಕಾಲ ಕಳೆದಿದ್ದಾಳೆ. ಕೊನೆಗೆ ಪತಿಯ ಮನವಿ ಮೇರೆಗೆ ಪೊಲೀಸರು, ಆರೋಗ್ಯ ಇಲಾಖೆ (Health Department) ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರ ತಂಡ ಮನೆ ಬಾಗಿಲನ್ನು ಹೊಡೆದು ಮುನ್ಮುನ್ ಮಾಝಿ ಮತ್ತು ಆಕೆಯ 10 ವರ್ಷದ ಮಗನನ್ನು ರಕ್ಷಿಸಿದ್ದಾರೆ.


ಮೂರು ವರ್ಷಗಳ ಹಿಂದೆ ಕೋವಿಡ್​ 19 ದೇಶವ್ಯಾಪಿ ಸಾಕಷ್ಟು ಸಾವು ನೋವುಗಳನ್ನು ಉಂಟು ಮಾಡಿತ್ತು. ಈ ಕಾರಣದಿಂದಲೇ 33 ವರ್ಷದ ಮುನ್ಮುಮ್ ಮಾಝಿ ತನ್ನ 10 ವರ್ಷದ ಮಗನ್ನು ಮನೆಯೊಳಗೆ ಸೇರಿಸಿ ಒಳಗಿನಿಂದ ಬೀಗ ಹಾಕಿಕೊಂಡಿದ್ದಾಳೆ. ಈ ಮೂರು ವರ್ಷದಲ್ಲಿ ಆಕೆ ತನ್ನ ಗಂಡನನ್ನು ಕೂಡ ಮನೆ ಒಳಗೆ ಸೇರಿಸಿಲ್ಲ ಎಂದು ತಿಳಿದುಬಂದಿದೆ. ಗುರುಗ್ರಾಮ್‌ನ ಚಕ್ಕರ್‌ಪುರ ಪ್ರದೇಶದ ಬಾಡಿಗೆ ಮನೆಯಲ್ಲಿ ಮೂರು ವರ್ಷಗಳ ಕಾಲ ತನ್ನನ್ನು ಮತ್ತು ತನ್ನ ಅಪ್ರಾಪ್ತ ಮಗನನ್ನು ಬಂಧಿಯಾಗಿಸಿ ಜೀವನ ಸಾಗಿಸಿದ್ದಾಳೆ.


ಪತಿ ಪಕ್ಕದ ಮನೆಯಲ್ಲಿ ವಾಸ


ಕೊರೊನಾ ಬಗ್ಗೆ ಭಯ ಹೊಂದಿದ್ದ ಮುನ್ಮುನ್ ಲಾಕ್​ಡೌನ್​ ವೇಳೆ ​ ಮನೆಯಲ್ಲೇ ಬಂಧಿಯಾಗಿದ್ದರು. ಇಂಜಿನಿಯರ್​ ಆಗಿದ್ದ ಪತಿ ಸುಜನ್ ಮಾಝಿ 2020 ರಲ್ಲಿ ಮೊದಲ ಲಾಕ್‌ಡೌನ್ ನಂತರ ನಿರ್ಬಂಧಗಳು ಸಡಿಲಗೊಂಡಾಗ ಕೆಲಸಕ್ಕೆ ಹೋಗಿದ್ದಾರೆ. ಆದರೆ ಮನೆಯಿಂದ ಹೊರ ಹೋದ ಕಾರಣ ಗಂಡನನ್ನು ಮತ್ತೆ ಆಕೆ ಮನೆಯೊಳಗೆ ಸೇರಿಸಲಿಲ್ಲ. ಹೊರಗೆ ಎಲ್ಲಾ ಸಹಜ ಸ್ಥಿತಿಯಲ್ಲಿದೆ, ಕೋವಿಡ್​ 19 ಸೋಂಕು ಕಡಿಮೆಯಾಗಿದೆ ಎಂದು ಅವರು ಹಲವು ಬಾರಿ ತಿಳಿ ಹೇಳಿದರೂ, ಆಕೆ ಮಾತ್ರ ಅದೇ ಭಯದಲ್ಲಿ ಇದ್ದಿದ್ದರಿಂದ ಇವರ ಮಾತನ್ನು ಕೇಳದೆ ಮನೆಯೊಳಗೆ ಸೇರಿಸಿಲ್ಲ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Mother: ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ 11 ಮಕ್ಕಳ ತಾಯಿ, ಮನೆಯಿಂದ ಹೊರಹಾಕಿದ ಪತಿ! ಆತ ಕೊಟ್ಟ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?

 ಪಕ್ಕದ ಮನೆಯಲ್ಲಿ ಪತಿ ವಾಸ

ಪತ್ನಿಯ ಮನವೊಲಿಸಲು ವಿಫಲನಾದ ಸುಜನ್ ಕೆಲವು ದಿನಗಳ ಕಾಲ ಸಂಬಂಧಿಕರು ಮತ್ತು ಸ್ನೇಹಿತರ ಮನೆಯಲ್ಲಿ ಕಳೆದಿದ್ದಾರೆ. ಕೊನೆಗೆ​ ಪತ್ನಿ ಮತ್ತು ಮಗ ವಾಸವಿದ್ದ ಮನೆಯ ಸಮೀಪದಲ್ಲೇ ಮತ್ತೊಂದು ಬಾಡಿಗೆ ಮನೆ ಮಾಡಿ ವಾಸ ಮಾಡತೊಡಗಿದ್ದಾರೆ. ಮಗ ಮತ್ತು ಪತ್ನಿಯನ್ನು ನೋಡಬೇಕೆಂದರೆ ಮತ್ತು ಮಾತನಾಡಬೇಕೆಂದರೆ ವಿಡಿಯೋ ಕರೆಯಿಂದ ಮಾತ್ರ ಸಾಧ್ಯವಾಗುತ್ತಿತ್ತು ಎಂದು ಸುಜನ್​ ತಿಳಿಸಿದ್ದಾರೆ. ಜೊತೆಗೆ ಅವರಿಬ್ಬರಿಗೂ ಮನೆಯ ಬಾಡಿಗೆ ಸಹಿತ  ಅಗತ್ಯವಾಗಿದ್ದ ವಸ್ತುಗಳನ್ನು ಖರೀದಿಸಿ, ಮನೆ ಬಾಗಿಲಲ್ಲಿ ಇಟ್ಟು ಹೋಗುತ್ತಿದ್ದೆ ಎಂದು ಅವರು ಹೇಳಿದ್ದಾರೆ.




ಬಾಗಿಲು ಹೊಡೆದು ರಕ್ಷಣೆ


" ಆರಂಭದಲ್ಲಿ, ಸುಜನ್ ನಮ್ಮ ಬಳಿ ಈ ವಿಚಾರ ಹೇಳಿದಾಗ ನಾನು ನಂಬಲಿಲ್ಲ, ಇದೊಂದು ಕೌಟುಂಬಿಕ ಕಲಹ ಎಂದುಕೊಂಡಿದ್ದೆ. ಆದರೆ ಅವರು ತಮ್ಮ ಹೆಂಡತಿ ಮತ್ತು ಮಗನೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿಸಿದಾಗ ಈ ವಿಷಯ ತಿಳಿದು ಆಘಾತಗೊಂಡೆ. ನಂತರ ಅವರನ್ನು ರಕ್ಷಿಸಲು ಮಧ್ಯ ಪ್ರವೇಶ ಮಾಡಿದೆವು. ಮಹಿಳೆ ವಾಸಿಸುತ್ತಿದ್ದ ಮನೆ ತುಂಬಾ ಕೊಳಕು ಮತ್ತು ಕಸದಿಂದ ತುಂಬಿತ್ತು. ನಾನು ಆ ಮಗುವಿನೊಂದಿಗೂ ಮಾತನಾಡಿದೆ. ಅವರ ಪರಿಸ್ಥಿತಿ ಕಂಡು ಬೇಸರವಾಯಿತು. ಇನ್ನೂ ಕೆಲವು ದಿನಗಳು ಅವರು ಅಲ್ಲೇ ಕಳೆದಿದ್ದರೆ ಏನಾದರೂ ಅನಾಹುತ ಸಂಭವಿಸಬಹುದು ಎಂದು ಭಾವಿಸಿ, ಮನೆ ಬಾಗಿಲು ಹೊಡೆದು ಅವರನ್ನು ರಕ್ಷಿಸಲಾಯಿತು" ಎಂದು ಎಎಸ್​ಐ ಕುಮಾರ್ ತಿಳಿಸಿದ್ದಾರೆ.


ಸೂರ್ಯನನ್ನೇ ನೋಡದ ತಾಯಿ-ಮಗ


ಮೂರು ವರ್ಷ ಮನೆಯೊಳಗೆ ಕಳೆದಿರುವುದರಿಂದ ಆ ಮಹಿಳೆ ಮತ್ತು ಮಗ  ಸೂರ್ಯನ ಬೆಳಕನ್ನೇ ನೋಡಿರಲಿಲ್ಲ. ಕೋವಿಡ್ ಭಯದಿಂದ ಈ ಮೂರು ವರ್ಷಗಳಲ್ಲಿ ಆ ಮಹಿಳೆ ಅಡುಗೆ ಅನಿಲ ಮತ್ತು ಶೇಖರಣೆ ಮಾಡಿದಂತಹ ನೀರನ್ನು ಸಹ ಬಳಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.


ಪತ್ನಿ ಮತ್ತು ಮಗನನ್ನು ಬಂಧ ಮುಕ್ತಗೊಳಿಸಿದ್ದಕ್ಕೆ ಸುಜನ್​ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಅವರಿಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ನನ್ನ ಜೀವನ ವಾಪಸ್​ ನನಗೆ ವಾಪಸ್​ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ಭಾವುಕರಾಗಿ ಹೇಳಿದ್ದಾರೆ.


ಮಹಿಳೆಗೆ ಕೆಲವು ಮಾನಸಿಕ ಸಮಸ್ಯೆಗಳಿವೆ. ಇಬ್ಬರನ್ನೂ ರೋಹ್ಟಕ್‌ನ ಪಿಜಿಐಗೆ ಸೂಚಿಸಲಾಗುತ್ತದೆ, ಅಲ್ಲಿ ಅವರನ್ನು ಮನೋವೈದ್ಯಕೀಯ ವಾರ್ಡ್‌ಗೆ ದಾಖಲಿಸಲಾಗುವುದು ಎಂದು ಗುರುಗ್ರಾಮ್‌ನ ಸಿವಿಲ್ ಸರ್ಜನ್ ಡಾ ವೀರೇಂದ್ರ ಯಾದವ್ ಹೇಳಿದರು.

Published by:Rajesha M B
First published: