ಲಕ್ನೋ: ಬೀದಿ ನಾಯಿಗಳನ್ನು(Street Dogs) ಹಿಡಿಯುವ ವಿಚಾರವಾಗಿ ಮಹಿಳೆಯರ ನಡುವೆ ಮಾರಾಮಾರಿ ನಡೆದಿರುವ ಘಟನೆ ಉತ್ತರಪ್ರದೇಶದ (Uttar Pradesh) ಗಾಜಿಯಾಬಾದ್ನ (Ghaziabad) ರೆಸಿಡೆನ್ಶಿಯಲ್ ಸೊಸೈಟಿಯೊಂದರಲ್ಲಿ (Residential Society) ನಡೆದಿದೆ. ಅಲ್ಲದೇ ಮಹಿಳೆಯರ ಕಾದಾಟದ (Womens Fight) ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕ್ಯಾಂಪಸ್ (Campus) ಒಳಗಡೆ ಸೇರಿಕೊಂಡಿದ್ದ ಬೀದಿ ನಾಯಿಗಳನ್ನು ಓಡಿಸಲು ಆಡಳಿತ ನಿಧರ್ರಿಸಿತ್ತು. ಆದರೆ ಇದಕ್ಕೆ ಕ್ಯಾಂಪಸ್ನಲ್ಲಿಯೇ ಇದ್ದ ಶ್ವಾನ ಪ್ರಿಯರ (Dog Lovers) ಗುಂಪು ವಿರೋಧಿಸಿದ್ದೇ ಘರ್ಷಣೆಗೆ ಕಾರಣವಾಗಿದೆ. ಸೊಸೈಟಿಯಿಂದ (Society) ಹೊರಗೆ ಬಂದ ನಾಯಿಗಳನ್ನು ಚೀಲದಲ್ಲಿ ತುಂಬಲಾಗಿತ್ತು. ಆದರೆ ಇದಕ್ಕೆ ಪೂನಂ ಕಶ್ಯಪ್ ನೇತೃತ್ವದ ಶ್ವಾನ ಪ್ರೇಮಿಗಳು ವಿರೋಧಿಸಿ, ವಾಗ್ವಾದ ನಡೆಸಲು ಆರಂಭಿಸಿದ್ದಾರೆ. ಈ ವೇಳೆ ಜಗಳ ತಾರಕಕ್ಕೇರಿದೆ.
ಜುಟ್ಟು ಹಿಡಿದು ಮಹಿಳೆಯರ ನಡುವೆ ಮಾರಾಮಾರಿ
ವಿಡಿಯೋದಲ್ಲಿ ಮಹಿಳೆಯರ ಗುಂಪೊಂದು ಪೂನಂ ಕಶ್ಯಪ್ ಅವರ ಕೂದಲನ್ನು ಎಳೆದಾಡುತ್ತಾ ಹೊಡೆಯುತ್ತಿರುತ್ತಾರೆ. ಇದೇ ಸಮಯದಲ್ಲಿ ಪೂನಂ ಕಶ್ಯಪ್ ಮತ್ತೋರ್ವ ಮಹಿಳೆಯ ಕಪಾಳಕ್ಕೆ ಹೊಡೆಯುವುದನ್ನು ಕಾಣಬಹುದಾಗಿದೆ.
#Ghaziabad डॉग को हटाने का विरोध करने पर रिवर हाइट्स सोसायटी में महिला को घेर पर पीटा। pic.twitter.com/bEBfTMi77M
— Jhalko Delhi (@JhalkoDelhi) January 12, 2023
ಜಗಳಕ್ಕೆ ಪೂನಂ ಕಶ್ಯಪ್ ಅವರೇ ಕಾರಣ ಅಂದ ನಿವಾಸಿಗಳು
ಪೂನಂ ಕಶ್ಯಪ್ ಅವರೇ ಈ ಜಗಳಕ್ಕೆ ಕಾರಣ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಬೋಧ್ ತ್ಯಾಗಿ ಆರೋಪಿಸಿದ್ದಾರೆ. ತಾನು ಪ್ರಾಣಿ ಕಲ್ಯಾಣ ಸಂಸ್ಥೆಯೊಂದಿಗೆ ಸಂಪರ್ಕಹೊಂದಿದ್ದೇನೆ ಎಂದು ಬೆದರಿಕೆಯೊಡ್ಡಿದ್ದ ಪೂನಂ ವಿರುದ್ಧ ಸುಬೋಧ್ ತ್ಯಾಗಿ ಹಲವಾರು ಆರೋಪ ಮಾಡುವ ಮೂಲಕ ಕಿಡಿಕಾರಿದ್ದಾರೆ.
ಬೀದಿ ನಾಯಿಗಳನ್ನು ಹಿಡಿಯಲು ಬಂದಿದ್ದ ವೇಳೆ ಘಟನೆ
ಸದ್ಯ ಈ ಪ್ರಕರಣ ಸಂಬಂಧ ಸಂಪೂರ್ಣವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ದುಬೆ ಹೇಳಿದ್ದಾರೆ. ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ನಾಯಿ ಕಚ್ಚಿದ ಹಲವಾರು ಘಟನೆಗಳು ವರದಿಯಾಗಿತ್ತು. ಈ ಹಿನ್ನೆಲೆ ಬೀದಿ ನಾಯಿಗಳನ್ನು ಹಿಡಿಯಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಎಲಿವೇಟರ್ಗಳು ಮತ್ತು ಇತರ ಸ್ಥಳಗಳಲ್ಲಿ ನಾಯಿಗಳು ಜನರ ಮೇಲೆ ದಾಳಿ ಮಾಡಿವೆ ಎಂದು ನಿವಾಸಿಗಳು ದೂರಿದ್ದರು. ಆದರೆ ಮತ್ತೊಂದು ಗುಂಪು ಕ್ಯಾಂಪಸ್ನಲ್ಲಿದ್ದ ನಾಯಿಗಳ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
दिनांक 11.01.23 को थाना नंदग्राम क्षेत्रान्तर्गत रिवर हाइटस सोसायटी मे दो पक्षो मे मारपीट की घटना के संबंध मे एसीपी नंदग्राम की वीडियो बाइट@Uppolice @DCPCityGZB pic.twitter.com/1AwDoXSScq
— POLICE COMMISSIONERATE GHAZIABAD (@ghaziabadpolice) January 12, 2023
ಈ ಘಟನೆ ಕುರಿತಂತೆ ಸಲಹೆ ನೀಡಲು ನಾಗರಿಕ ಸಂಸ್ಥೆಗಳು ಪ್ರಯತ್ನಿಸಿದೆ. ಪಿಟ್ ಬುಲ್, ರೊಟ್ವೀಲರ್ ಮತ್ತು ಡೊಗೊ ಅರ್ಜೆಂಟಿನೋ ಎಂಬ ಮೂರು ತಳಿಯ ನಾಯಿಗಳನ್ನು ನಿವಾಸಿಗಳು ಸಾಕುವುದನ್ನು ಘಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಿಷೇಧಿಸಿದೆ. ನಾಯಿಗಳನ್ನು ಸಾಕುವ
ಪ್ರತಿ ಕುಟುಂಬ ಒಂದು ನಾಯಿಯನ್ನು ಮಾತ್ರ ಸಾಕುವಂತೆ ಸೂಚನೆ
ಕುರಿತಂತೆ ಹಲವಾರು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಅಲ್ಲದೇ ನಾಯಿಗಳನ್ನು ಸಾಕಲು ಪರವಾನಗಿ ಅವಶ್ಯಕತೆ ಮತ್ತು ಪ್ರತಿ ಕುಟುಂಬ ಕೇವಲ ಒಂದು ನಾಯಿಯನ್ನು ಮಾತ್ರ ಸಾಕಬಹುದು ಎಂದು ಸೂಚಿಸಿದೆ.
ಇದನ್ನೂ ಓದಿ: Stray Dog Attack: ಬೀದಿ ನಾಯಿ ದಾಳಿಯಿಂದ ರಕ್ಷಿಸಿಕೊಳ್ಳಲು ಸುಲಭ ಟಿಪ್ಸ್
ಈ ಮುನ್ನ ಟೋಲ್ ಪ್ಲಾಜಾ ಬಳಿ ಮಹಿಳೆಯರ ಕಿತ್ತಾಟ
ಈ ಮುನ್ನ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪಿಂಪಲಗಾಂವ್ ಟೋಲ್ ಪ್ಲಾಜಾ ಕಾರಿನಲ್ಲಿ ಪತಿಯೊಂದಿಗೆ ಬಂದ ಮಹಿಳೆ ಮತ್ತು ಟೋಲ್ ಪ್ಲಾಜಾದ ಮಹಿಳಾ ಸಿಬ್ಬಂದಿ ಇಬ್ಬರು ಹೊಡೆದಾಡಿಕೊಂಡಿದ್ದರು. ಟೋಲ್ ಪ್ಲಾಜಾ ಅಂತಾನೂ ನೋಡದೇ, ಪರಸ್ಪರ ಜುಟ್ಟು ಹಿಡಿದುಕೊಂಡ ಮಹಿಳೆಯರು, ಒಬ್ಬರಿಗೊಬ್ಬರ ಜಡೆ ಹಿಡಿದುಕೊಂಡು, ಬೈಯ್ದಾಡಿಕೊಳ್ಳುತ್ತಾ ಹೊಡೆದಾಡಿಕೊಂಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ