Missing Mystery: ಕಾಣೆಯಾದ ಮಹಿಳೆಯ ಪತ್ತೆಗೆ ಹೆಲಿಕಾಪ್ಟರ್ ಬಳಕೆ, 1 ಕೋಟಿ ಖರ್ಚು; ಕೊನೆಗೆ ಎಲ್ಲರೂ ಪೆಚ್ಚಾದ್ರು!

ಆಕೆಯ ಹುಡುಕಾಟಕ್ಕಾಗಿ ನೌಕಾಪಡೆ, ವಾಯುಪಡೆ, ಹೆಲಿಕಾಪ್ಟರ್​ ಸಹಾಯವನ್ನೂ ಪಡೆದಿದ್ದರು. 36 ಗಂಟೆಗಳ ಕಾಲ ಮಹಿಳೆಯಾಗಿ ತೀವ್ರ ಶೋಧ ನಡೆಸಿದ್ದಾರೆ. ಇದಕ್ಕಾಗಿ ಪೊಲೀಸರು ಅಂದಾಜು 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ಹುಡುಕಾಟದಲ್ಲಿ ತೊಡಗಿದ್ದ ಅಧಿಕಾರಿಗಳಿಗೆ ದೊಡ್ಡ ಶಾಕ್​​ ಕಾದಿತ್ತು.

ಮಿಸ್ಸಿಂಗ್​ ಮಿಸ್ಟ್ರಿ

ಮಿಸ್ಸಿಂಗ್​ ಮಿಸ್ಟ್ರಿ

  • Share this:
ಹೈದ್ರಾಬಾದ್​​​: ಆಂಧ್ರ ಪ್ರದೇಶದಲ್ಲಿ (Andhra Pradesh) ವರದಿಯಾಗಿರುವ ವಿಚಿತ್ರ ಪ್ರಕರಣ ಪೊಲೀಸರನ್ನೇ ದಂಗು ಬಡಿಸಿದೆ. ಎರಡ್ಮೂರು ದಿನಗಳ ಹಿಂದೆಯಷ್ಟೇ ವಿಶಾಖಪಟ್ಟಣಂನ ಆರ್.ಕೆ ​​ಬೀಚ್​ನಿಂದ (Visakhapatnam RK Beach) ಗೃಹಿಣಿಯೊಬ್ಬರು ಏಕಾಏಕಿ ಕಾಣೆಯಾಗಿದ್ದರು (Missing Case). ಗಂಡನೊಂದಿಗೆ ತಮ್ಮ ಮದುವೆಯ 2ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಬಂದಿದ್ದ ಹೆಂಡತಿ ನಾಪತ್ತೆಯಾಗಿದ್ದರು. ಬೀಚ್​ನಲ್ಲಿ ಸುತ್ತಾಡಲು ಹೋದಾಗ ಗಂಡ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ನಂತರ ಎದ್ದು ನೋಡಿದ್ರೆ ಹೆಂಡತಿ ಕಾಣೆಯಾಗಿರುವುದು ತಿಳಿದು ಬಂದಿದೆ. ಪತಿ ಶ್ರೀನಿವಾಸ್​​ ಕೂಡಲೇ ಸ್ಥಳೀಯ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಣೆಯಾದ ಗೃಹಿಣಿ ಸಮುದ್ರ ಪಾಲಾಗಿರಬಹುದೆಂದು ಶಂಕಿಸಿದ್ದರು. ಆಕೆಯ ಹುಡುಕಾಟಕ್ಕಾಗಿ ನೌಕಾಪಡೆ, ವಾಯುಪಡೆ, ಹೆಲಿಕಾಪ್ಟರ್​ ಸಹಾಯವನ್ನೂ ಪಡೆದಿದ್ದರು. 36 ಗಂಟೆಗಳ ಕಾಲ ಮಹಿಳೆಯಾಗಿ ತೀವ್ರ ಶೋಧ ನಡೆಸಿದ್ದಾರೆ. ಇದಕ್ಕಾಗಿ ಪೊಲೀಸರು ಅಂದಾಜು 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ಹುಡುಕಾಟದಲ್ಲಿ ತೊಡಗಿದ್ದ ಅಧಿಕಾರಿಗಳಿಗೆ ದೊಡ್ಡ ಶಾಕ್​​ ಕಾದಿತ್ತು.

ನೆಲ್ಲೂರಿನಲ್ಲಿ ಮಹಿಳೆ ಪ್ರತ್ಯಕ್ಷ

ವಿಶಾಖಪಟ್ಟಣಂನಲ್ಲಿ ಕಾಣೆಯಾಗಿದ್ದ ಗೃಹಿಣಿ ನೆಲ್ಲೂರು ಜಿಲ್ಲೆಯಲ್ಲಿ ಪತ್ತೆಯಾಗಿದ್ದರು. ಗಂಡ ಸೇರಿದಂತೆ ಶೋಧ ಕಾರ್ಯದಲ್ಲಿ ತೊಡಗಿದ್ದವರು ಆಘಾತ ವ್ಯಕ್ತಪಡಿಸಿದ್ದರು. ಪತ್ತೆಯಾದ ಮಹಿಳೆಯನ್ನು ವಿಚಾರಿಸಿದಾಗ ಅಸಲಿ ಸಂಗತಿ ಬಯಲಾಗಿದೆ. ಆಕೆ ಕಥೆ ಕೇಳಿದ ಎಲ್ಲರೂ ದಂಗಾಗಿ ಹೋಗಿದ್ದಾರೆ. ಪೊಲೀಸರು- ನೌಕಾಪಡೆ- ವಾಯುಪಡೆ ಸಿಬ್ಬಂದಿ ಶ್ರಮ, 1 ಕೋಟಿ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.

ಇದನ್ನೂ ಓದಿ: Power Bill: ಒಂದೇ ತಿಂಗಳಲ್ಲಿ 3419 ಕೋಟಿ ಬಿಲ್! ಶಾಕ್‌ಗೆ ಒಳಗಾಗಿ ಆಸ್ಪತ್ರೆ ಸೇರಿದ ಮನೆ ಯಜಮಾನ!

ಕಾಣೆಯಾಗಿದ್ದ ಮಹಿಳೆ ಪ್ರಿಯಕರನ ಜೊತೆ ಪರಾರಿಯಾಗಿದ್ದಳು!

ವಿವಾಹ ವಾರ್ಷಿಕೋತ್ಸವ ಆಚರಣೆ ನೆಪದಲ್ಲಿ ವಿಶಾಖಪಟ್ಟಂಗೆ ಬಂದಿದ್ದ ಹೆಂಡತಿ ತನ್ನದೇ ಆಟ ಆಡಿದ್ದಳು. ಗಂಡನಿಗೆ ಚೆಳ್ಳೆಹಣ್ಣು ತಿನ್ನಿಸಿ ಪ್ರೇಮಿಯೊಂದಿಗೆ ಪರಾರಿಯಾಗಿದ್ದಳು. ಇದ್ಯಾವುದನ್ನೂ ಅರಿಯ ಗಂಡ , ಆಕೆಗಾಗಿ ಪೊಲೀಸರೊಂದಿಗೆ ಹಗಲು-ರಾತ್ರಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಮದುವೆಗೆ ಮುನ್ನವೇ ಹೆಂಡತಿಗೆ ಪ್ರಿಯಕರನಿದ್ದ. ಆತನೊಂದಿಗೆ 2 ಸಲ ಮನೆಯಿಂದ ಪರಾರಿ ಕೂಡ ಆಗಿದ್ದಳು. ಆದರೆ ಮನೆಯವರು ಬಲವಂತವಾಗಿ ಆಕೆಯನ್ನು ಕರೆತಂದು ತಾವು ನೋಡಿದ ವರನಿಗೆ ಕೊಟ್ಟು ಮದುವೆ ಮಾಡಿದ್ದರು.

ಪೆಚ್ಚಾದ ಪೊಲೀಸರು..!

ಮದುವೆಯ ಬಳಿಕವೂ ಆಕೆ ತನ್ನ ಹಳೆ ಬಾಯ್​​ ಫ್ರೆಂಡ್​ನೊಂದಿಗೆ ಅನೈತಿಕ ಸಂಬಂಧ ಮುಂದುವರೆದಿದ್ದಳು. ಗಂಡನೊಂದಿಗೆ ವಿಶಾಖಪಟ್ಟಣಂಗೆ ಬರುತ್ತಿರುವ ಬಗ್ಗೆಯೂ ಪ್ರಿಯಕರನಿಗೆ ಮೊದಲೇ ಮಾಹಿತಿ ಕೊಟ್ಟಿದ್ದಳು. ಅಲ್ಲಿಂದು ನೆಲ್ಲೂರಿಗೆ ಪರಾರಿಯಾಗುವುದಾಗಿ ಆಕೆ ಮತ್ತು ಅವಳ ಬಾಯ್​ ಫ್ರೆಂಡ್​ ಮೊದಲೇ ಪ್ಲಾನ್​ ಮಾಡಿಕೊಂಡಿದ್ದರು. ಅವರ ಪ್ಲಾನ್​ನಂತೆಯೇ ಎಲ್ಲವೂ ನಡೆದಿತ್ತು. ಆದರೆ ಇವರ ಕಳ್ಳಾಟದಿಂದ ಪೊಲೀಸರು ಮಾತ್ರ ಬರೋಬ್ಬರಿ 1 ಕೋಟಿ ರೂ. ಕಳೆದುಕೊಳ್ಳುವಂತಾಗಿದೆ.

ಇಡೀ ಪ್ರಕರಣ ಬೆಳಕಿಗೆ ಬರುತ್ತಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರೀ ಚರ್ಚೆಯಾಗುತ್ತಿದೆ. ಪೊಲೀಸರು 1 ಕೋಟಿ ರೂ. ಖರ್ಚು ಮಾಡಿದ್ದು ಟ್ರೋಲ್​ ಪೇಜ್​ಗಳಿಗೆ ಆಹಾರವಾಗಿದೆ. ತರಹೇವಾರಿ ಮೆಮೆಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ಇಷ್ಟೆಲ್ಲಾ ನಷ್ಟಕ್ಕೆ ಕಾರಣವಾದ ಮಹಿಳೆ ಮತ್ತು ಆಕೆಯ ಪ್ರಿಯಕರನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
Published by:Kavya V
First published: