Punished for Love: ಪ್ರೇಮಿಗಳು, ಆಗಾಗ್ಗೆ ತಮ್ಮ ಕುಟುಂಬದ ಪ್ರತಿರೋಧವನ್ನು ಎದುರಿಸುತ್ತಾರೆ. ಇದರಿಂದಾಗಿ ಅವರು ಮದುವೆಯಾಗಲು ಅಥವಾ ಪ್ರೀತಿಯಲ್ಲಿ ಬಿದ್ದ ನಂತರ ಒಟ್ಟಿಗೆ ಕಾಲ ಕಳೆಯಲು ಕಷ್ಟವಾಗುತ್ತದೆ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಈ ರೀತಿ ಆಗುತ್ತದೆ. ಫ್ರಾನ್ಸ್ನಂತ ಮುಂದುವರಿದ ದೇಶದಲ್ಲೂ ವ್ಯಕ್ತಿಯೊಬ್ಬನನ್ನು ಪ್ರೀತಿಸಿ (Love) ಮದುವೆಯಾಗಲು ಹೊರಟಿದ್ದಕ್ಕೆ ಯುವತಿಯನ್ನು 25 ವರ್ಷಗಳ ಕಾಲ ಮನೆಯಲ್ಲೇ ಲಾಕ್ ಮಾಡಿರುವ ಘಟನೆ ನಡೆದಿತ್ತು. ಹೌದು, ನೀವು ಇದನ್ನು ನಂಬ್ಲೇಬೇಕು. ಅಂದಹಾಗೆ, ಈ ಘಟನೆ ನಡೆದಿದ್ದು, 19ನೇ ಶತಮಾನದ ಉತ್ತರಾರ್ಧದಲ್ಲಿ. ಮಗಳನ್ನು ಆಕೆಯ ತಾಯಿಯೇ 25 ವರ್ಷಗಳ ಕಾಲ ಆಕೆಯ ಮನೆಯಲ್ಲಿ ಕೂಡಿ (Locked in House) ಹಾಕಿದ್ದರು. ಫ್ರಾನ್ಸ್ನ ವಿಯೆನ್ನೆಯ ಬ್ಲಾಂಚೆ ಮೊನಿಯರ್ನನ್ನು ಆಕೆಯ ತಾಯಿ (Mother) ಮೇಡಮ್ ಮೊನಿಯರ್ ಕಿಟಕಿಯಿಲ್ಲದ ಕೋಣೆಯಲ್ಲಿ ಕಟ್ಟಿ ಹಾಕಿ ಬಂಧಿಸಿದ್ದರು. ಮಾನವ ಇತಿಹಾಸದಲ್ಲಿ, ಬ್ಲಾಂಚೆಯ ದುರಂತ ಕತೆಯನ್ನು ಅತ್ಯಂತ ಭೀಕರ ಪ್ರಕರಣವೆಂದು ಪರಿಗಣಿಸಲಾಗಿದೆ.
ಬ್ಲಾಂಚೆ ಒಂದೇ ಕೋಣೆಯಲ್ಲಿ ಇರುತ್ತಿದ್ದಳು ಮತ್ತು ಆಕೆಗೆ ಐವತ್ತು ವರ್ಷವಾಗುವವರೆಗೂ ಹಾಸಿಗೆಯ ಮೇಲೆ ಸರಪಳಿ ಹಾಕಲಾಗಿತ್ತು. ಸೇವಕನೊಬ್ಬ ತನ್ನ ಕೊಳಕಾದ ಹಾಸಿಗೆಯ ಮೇಲೆ ಎಸೆದ ತುಣುಕುಗಳನ್ನು ಮಾತ್ರ ಆಕೆ ತಿನ್ನುತ್ತಿದ್ದಳು ಮತ್ತು ಮಲಗಿದ್ದ ಸ್ಥಳದಲ್ಲೇ ಮಲವಿಸರ್ಜನೆ ಮಾಡುವಂತಾಗಿತ್ತು. ಅಲ್ಲದೆ, ಆಕೆ ನಿಧಾನವಾಗಿ ಸಾವಿಗೆ ಹತ್ತಿರವಾಗುತ್ತಿದ್ದಳು, ಕೊಳೆಯುತ್ತಿದ್ದಳು ಮತ್ತು ಆಕೆಯ ತೂಕ ಕೇವಲ 55lbs ಅಂದರೆ ಸುಮಾರು 25 ಕೆಜಿಗೆ ಇಳಿದಿತ್ತು ಎಂದೂ ಡೈಲಿ ಸ್ಟಾರ್ ವರದಿ ಹೇಳುತ್ತದೆ.
ಮೇ 23,1901 ರಂದು, ಪ್ಯಾರಿಸ್ನ ಅಟಾರ್ನಿ ಜನರಲ್ಗೆ ಕಳೆದ 25 ವರ್ಷಗಳಿಂದ ಮೇಡಮ್ ಮೊನಿಯರ್ ಮನೆಯಲ್ಲಿ ಅವಿವಾಹಿತೆಯನ್ನು ಕೂಡಿ ಹಾಕಲಾಗಿದೆ ಎಂಬ ಅನಾಮಧೇಯ ಪತ್ರ ಬರೆದರು. ನಂತರ, ಪೊಲೀಸರು ಮನೆಯ ಮೇಲೆ ದಾಳಿ ಮಾಡಿ ಬ್ಲಾಂಚೆಯನ್ನು ರಕ್ಷಿಸಿದರು. ಅಲ್ಲದೆ, ಆಕೆಯ ಸಹೋದರ ಮತ್ತು ತಾಯಿಯನ್ನು ಪೊಲೀಸರು ಬಂಧಿಸಿದ್ದರು ಎಂದೂ ತಿಳಿದುಬಂದಿದೆ.
ಅಲ್ಲದೆ, ಬ್ಲಾಂಚೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. 1901ರಲ್ಲಿ ಪೊಲೀಸರಿಂದ ರಕ್ಷಿಸಲ್ಪಟ್ಟ ನಂತರ, ಆಕೆ ಇನ್ನೂ ಹಲವು ವರ್ಷಗಳ ಕಾಲ ಬದುಕಿದ್ದರು ಮತ್ತು 1913ರಲ್ಲಿ ನಿಧನರಾದರು ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ