HOME » NEWS » National-international » WOMAN KILLS HER SIX YEAR OLD SON IN PUNJABS JALANDHAR FOR LOVING HIS GRANDMOTHER MORE

ಅಜ್ಜಿಯನ್ನೇ ಹೆಚ್ಚು ಇಷ್ಟಪಡುತ್ತಿದ್ದ ಮಗ; ಸಹಿಸದ ತಾಯಿ ಹೆತ್ತಕಂದನ ಕೊಂದೇ ಬಿಟ್ಟಳು..!

ಮೊಮ್ಮಗನ ಅಳುವಿನ ಶಬ್ದ ಕೇಳಿ ಅಜ್ಜ-ಅಜ್ಜಿ ರೂಂ ಕಡೆ ಧಾವಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೊಮ್ಮಗನನ್ನು ಕಂಡು ದಿಗ್ಬ್ರಾಂತರಾಗಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲು ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಬಾಲಕ ಕೊನೆಯುಸಿರೆಳೆದಿದ್ದಾನೆ.

news18-kannada
Updated:June 10, 2020, 4:29 PM IST
ಅಜ್ಜಿಯನ್ನೇ ಹೆಚ್ಚು ಇಷ್ಟಪಡುತ್ತಿದ್ದ ಮಗ; ಸಹಿಸದ ತಾಯಿ ಹೆತ್ತಕಂದನ ಕೊಂದೇ ಬಿಟ್ಟಳು..!
ಅಜ್ಜಿಯನ್ನೇ ಹೆಚ್ಚು ಇಷ್ಟಪಡುತ್ತಿದ್ದ ಮಗ; ಸಹಿಸದ ತಾಯಿ ಹೆತ್ತಕಂದನ ಕೊಂದೇ ಬಿಟ್ಟಳು..!
  • Share this:
ಜಲಂಧರ್(ಜೂ.10): ಅಸೂಯೆ ಅಥವಾ ಹೊಟ್ಟೆಕಿಚ್ಚು ಎಂಥ ಹೇಯ ಕೆಲಸವನ್ನಾದರೂ ಮಾಡಿಸಿ ಬಿಡುತ್ತದೆ. ಈ ಮಾತಿಗೆ ಪಂಜಾಬ್​ನಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ. ತಾಯಿಯೊಬ್ಬಳು ತನ್ನ 6 ವರ್ಷದ ಮಗನನ್ನೇ ಕೊಲೆ ಮಾಡಿದ್ದಾಳೆ. ಇದಕ್ಕೆ ಕಾರಣ ಏನು ಅಂತೀರಾ? ಮಗ ತನಗಿಂತ ತನ್ನ ಅಜ್ಜಿಯನ್ನೇ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಎಂಬುದು. ಇದನ್ನು ಸಹಿಸದ ತಾಯಿ ಹೆತ್ತ ಮಗನನ್ನೇ ಕೊಂದಿದ್ದಾಳೆ.

ಈ ಘಟನೆ ಜಲಂಧರ್ ಜಿಲ್ಲೆಯ ಶಾಹ್ಕೋಟ್​ ನಗರದ ಸೋಹಲ್​ ಜಾಗಿರ್ ಹಳ್ಳಿಯಲ್ಲಿ ನಡೆದಿದೆ. ಅಡುಗೆ ಮನೆಯಲ್ಲಿ ಬಳಸುವ ಚಾಕುವಿನಿಂದ ತನ್ನ ಮಗನನ್ನು ಚುಚ್ಚಿ ಹತ್ಯೆ ಮಾಡಿದ್ದಾಳೆ. ಕುಲವಿಂದರ್ ಕೌರ್​​(30) ಕೊಲೆಪಾತಕಿ ತಾಯಿ. ಮಗನನ್ನು ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ತಾನಿದ್ದ ಎರಡನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಆದರೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಬದುಕುಳಿದಿದ್ದಾಳೆ.

ಕುಲವಿಂದರ್​ಗೆ ಗಾಯಗಳಾಗಿದ್ದು, ನಾಕೊದರ್​​​​ನ ಸಿವಿಲ್​ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಶಾಹ್ಕೋಟ್​ ಡೆಪ್ಯುಟಿ ಸೂಪರಿಂಟೆಂಡೆಂಟ್​ ತಿಳಿಸಿದ್ದಾರೆ.

ಚೀನಾ ವಸ್ತುಗಳು-ಆಪ್‌ಗಳನ್ನು ಬಹಿಷ್ಕರಿಸಲು ಬಿಜೆಪಿ ಕರೆ; ಟಿಕ್‌ಟಾಕ್‌ನಲ್ಲಿ ಖಾತೆ ತೆರೆದ ಕೇಂದ್ರ ಸರ್ಕಾರ!

ಇನ್ನು, ಕುಲವಿಂದರ್​ನ ಗಂಡ ಇಟಲಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಈಕೆ ಹಳ್ಳಿಯಲ್ಲಿ ತನ್ನ ಅತ್ತೆ-ಮಾವ ಮತ್ತು ಮಗನೊಂದಿಗೆ ವಾಸಿಸುತ್ತಿದ್ದಳು. ಆದರೆ ಅತ್ತೆ-ಸೊಸೆಯ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ. ಕುಲವಿಂದರ್​​​ ಮತ್ತು ಅತ್ತೆ ಚರಂಜಿತ್​ ಕೌರ್​​ ಜೊತೆ ಆಗಾಗ್ಗೆ ಜಗಳಗಳಾಗುತ್ತಿದ್ದವು ಎಂದು ತಿಳಿದು ಬಂದಿದೆ.

ಕೊಲೆಯಾದ ಬಾಲಕ ಅಜ್ಜ-ಅಜ್ಜಿಯ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದ. ಅದರಲ್ಲೂ ತನ್ನ ಅಜ್ಜಿಯ ಜೊತೆ ತುಂಬಾ ಸಲುಗೆಯಿಂದ, ಪ್ರೀತಿಯಿಂದ ಇದ್ದ ಎನ್ನಲಾಗಿದೆ. ಇದನ್ನು ಸಹಿಸದ ಕುಲವಿಂದರ್​ ಯಾವಾಗಲೂ ತನ್ನ ಮಗನ ಮೇಲೆ ಕೋಪಗೊಳ್ಳುತ್ತಿದ್ದಳು ಎಂದು ಡಿಎಸ್​ಪಿ ತಿಳಿಸಿದ್ದಾರೆ.

ಸೋಮವಾರ ರಾತ್ರಿ ಬಾಲಕ ತನ್ನ ಅಜ್ಜ-ಅಜ್ಜಿಯೊಂದಿಗೆ ಊಟ ಮಾಡಲು ಕುಳಿತಿದ್ದ. ಇದನ್ನು ಕಂಡು ಕೋಪಗೊಂಡ ತಾಯಿ ಕುಲವಿಂದರ್ ಮಗನನ್ನು ರೂಮ್​ಗೆ ಕರೆದೊಯ್ದು ಚಾಕುವಿನಿಂದ ಎರಡು ಬಾರಿ ಇರಿದಿದ್ದಾಳೆ. ಮೊಮ್ಮಗನ ಅಳುವಿನ ಶಬ್ದ ಕೇಳಿ ಅಜ್ಜ-ಅಜ್ಜಿ ರೂಂ ಕಡೆ ಧಾವಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೊಮ್ಮಗನನ್ನು ಕಂಡು ದಿಗ್ಬ್ರಾಂತರಾಗಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲು ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಆರೋಪಿ ಕುಲವಿಂದರ್​ ತಾನೇ ತನ್ನ ಮಗನನ್ನು ಕೊಂದಿರುವುದಾಗಿ ತನ್ನ ಅತ್ತೆ-ಮಾವನಿಗೆ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.​
ಘಟನೆ ಬಳಿಕ ಕುಲವಿಂದರ್​ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಆದರೆ ಸಣ್ಣ-ಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾಳೆ. ಇನ್ನು, ಕೊಲೆ ಪ್ರಕರಣದ ಅಡಿಯಲ್ಲಿ ಕುಲವಿಂದರ್​ ವಿರುದ್ಧ ಶಾಹ್ಕೋಟ್​​ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
Youtube Video

First published: June 10, 2020, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories