ರಾಜಸ್ಥಾನ: ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡಕ್ಕೆ (Mental Stress) ಸಿಲುಕಿ, ಅದನ್ನು ನಿಭಾಯಿಸಲಾಗದೇ ಆತ್ಮಹತ್ಯೆ (Suicide) ಹಾದಿ ಹಿಡಿಯುತ್ತಾರೆ. ಮತ್ತೊಂದು ಕಡೆ ತಾವೂ ಬಯಸಿದ್ದು ಸಿಗದಿದ್ದರೆ, ಕೆಲವರು ಕಿರುಕುಳಕ್ಕೆ (Harassment) ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಲ್ಲೊಬ್ಬ ಮಹಿಳೆ ಗಂಡನ (Husband) ಹಿಂಸೆ ತಾಳಲಾರದೆ ತನ್ನ ನಾಲ್ಕು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಾಲ್ಕು ಮಕ್ಕಳನ್ನು ಕೊಂದು ಆತ್ಮಹತ್ಯೆ
ಪತಿಯ ಮಾನಸಿಕ ಹಿಂಸೆಯಿಂದ ಬೇಸತ್ತಾ 4 ಮಕ್ಕಳನ್ನು ಉಸಿರುಗಟ್ಟಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರಾಜಸ್ಥಾನ ಮೂಲದ ಜೀತಾರಾಮ್ ಎಂಬುವವರ ಪತ್ನಿ ಊರ್ಮಿಳಾ ಆತ್ಮಹತ್ಯೆ ಮಾಡಿಕೊಂಡವರು. ಆಕೆ ತನ್ನ ಮಕ್ಕಳಾದ ಭಾವನಾ (8), ವಿಕ್ರಮ್ (5), ವಿಮಲಾ (3) ಮತ್ತು ಮನೀಶ್ (2)ನನ್ನು ಡ್ರಮ್ವೊಂದಕ್ಕೆ ಹಾಕಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಪತಿ ಕೆಲಸಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾನಸಿಕ ಕಿರುಕುಳದಿಂದ ಬೇಸತ್ತು ಸಾವು
ತುಂಬಾ ಸಮಯದಿಂದ ಮಕ್ಕಳು ಮತ್ತು ಊರ್ಮಿಳಾ ಕಾಣದ ಕಾರಣ ಸಂಬಂಧಿಕರು ಹುಡುಕಾಡಿದಾಗ ಸಾವಿನ ವಿಷಯ ಬೆಳಕಿಗೆ ಬಂದಿದೆ. ಪತಿಯ ಮಾನಸಿಕ ಕಿರುಕುಳದಿಂದ ಊರ್ಮಿಳಾ ತನ್ನ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಜೀತಾರಾಮ್ ಊರ್ಮಿಳಾ ಜೊತೆ ನಿತ್ಯ ಜಗಳವಾಡುತ್ತಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಮಂಡಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಗಂಡನ ಮೇಲೆ ಕೊಲೆ ಆರೋಪ
ಪೊಲೀಸರು ಎಲ್ಲಾ ಐದು ಮೃತದೇಹಗಳನ್ನು ಕಲ್ಯಾಣಪುರಿಯ ಶವಾಗಾರಕ್ಕೆ ರವಾನಿಸಿದ್ದಾರೆ. ಊರ್ಮಿಳಾ ಪತಿ ಆಕೆಯನ್ನು ಮತ್ತು ಮಕ್ಕಳನ್ನು ಕೊಂದಿದ್ದಾನೆ. ನನ್ನ ಮಗಳು ಮತ್ತು ಆಕೆಯ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದು ಊರ್ಮಿಳಾ ಅವರ ಚಿಕ್ಕಪ್ಪ ದುರ್ಗಾರಾಮ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ