• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Husband and Wife: ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದಿದ್ದ ಪತ್ನಿ, ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವು ಕೊಟ್ಟ 4 ವರ್ಷದ ಕಂದಮ್ಮ!

Husband and Wife: ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದಿದ್ದ ಪತ್ನಿ, ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವು ಕೊಟ್ಟ 4 ವರ್ಷದ ಕಂದಮ್ಮ!

 ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿ

ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿ

ಜೀತೇಂದ್ರ 2012 ರಲ್ಲಿ ಲಖಿಸಾರೈ ಜಿಲ್ಲೆಯ ಅಭಯಪುರದ ನಿವಾಸಿ ಮಮತಾ ದೇವಿ ಅವರನ್ನು ವಿವಾಹವಾಗಿದ್ದರು. ಮದುವೆಯಾದಾಗಿನಿಂದಲೂ ಜೀತೇಂದ್ರನಿಗೆ ಮಮತಾ ವರ್ತನೆ ಇಷ್ಟವಿರಲಿಲ್ಲ. ಈ ಬಗ್ಗೆ ಅವಾಗವಾಗ ಇಬ್ಬರ ನಡುವೆ ಜಗಳ ಸಂಭವಿಸುತ್ತಿತ್ತು. ಈ ನಡುವೆ ಮಮತಾ ಜೀತೇಂದ್ರನ ಸೋದರ ಸಂಬಂಧಿ ಅಜಿತ್ ಕುಮಾರ್ ಅಲಿಯಾಸ್ ಛೋಟು ಎಂಬಾತನ ಪ್ರೀತಿಯಲ್ಲಿ ಬಿದ್ದಿದ್ದಳು ಎನ್ನಲಾಗಿದೆ.

ಮುಂದೆ ಓದಿ ...
 • Local18
 • 5-MIN READ
 • Last Updated :
 • Bihar, India
 • Share this:

ಬಿಹಾರ: ಮದುವೆ (Marriage) ಎಂಬುದು ಏಳೇಳು ಜನ್ಮಗಳ ಅನುಬಂಧ ಎಂದು ಹೇಳುತ್ತಾರೆ, ದಾಂಪತ್ಯ ಜೀವನದಲ್ಲಿ ಎದುರಿಸುವಂತಹ ಯಾವುದೇ ಸಮಸ್ಯೆಗಳನ್ನು ಪರಸ್ಪರರು ಹೊಂದಾಣಿಕೆ ಮಾಡಿಕೊಂಡು ನಿಭಾಯಿಸುತ್ತೇವೆ ಎಂದು ಸಪ್ತಪದಿ ತುಳಿದು ಪ್ರತಿಜ್ಞೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ (Woman) ಪ್ರಿಯಕರನ (Lover) ಜೊತೆ ಸೇರಿ ಪತಿಯನ್ನು (Husband) ಕೊಂದಿದ್ದಾಳೆ. ಈ ಕೊಲೆಗೆ ಅಕ್ರಮ ಸಂಬಂಧವೇ (Illegal Relationship) ಕಾರಣ ಎನ್ನಲಾಗಿದೆ. ಬಿಹಾರ್​ನ (Bihar) ಮುಂಗೇರ್ ಜಿಲ್ಲೆಯ ಜಮಾಲ್‌ಪುರದಲ್ಲಿರುವ ಈಸ್ಟ್ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.


ರೈಲ್ವೇ ಕಾರ್ಮಿಕನಾಗಿದ್ದ ಜೀತೇಂದ್ರ ಕುಮಾರ್ ಎಂಬಾತನನ್ನು ಆಕೆಯ ಪತ್ನಿ ಮಮತಾ ಮತ್ತು ಆಕೆಯ ಪ್ರಿಯಕರ ಅಜಿತ್ ಕುಮಾರ್ ಅಲಿಯಾಸ್ ಛೋಟು ಎಂಬಾತನ ಸೇರಿ ಮುಗಿಸಿದ್ದಾಳೆ. ಜೀತೇಂದ್ರ ಕೊಲೆಯ ವಿಚಾರ ಮೃತನ ತಂದೆಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಮತಾ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.


ಗಂಡನ ಸೋದರ ಸಂಬಂಧಿ ಜೊತೆಗೆ ಲವ್


ಜೀತೇಂದ್ರ 2012 ರಲ್ಲಿ ಲಖಿಸಾರೈ ಜಿಲ್ಲೆಯ ಅಭಯಪುರದ ನಿವಾಸಿ ಮಮತಾ ದೇವಿ ಅವರನ್ನು ವಿವಾಹವಾಗಿದ್ದರು. ಮದುವೆಯಾದಾಗಿನಿಂದಲೂ ಜೀತೇಂದ್ರನಿಗೆ ಮಮತಾ ವರ್ತನೆ ಇಷ್ಟವಿರಲಿಲ್ಲ. ಈ ಬಗ್ಗೆ ಅವಾಗವಾಗ ಇಬ್ಬರ ನಡುವೆ ಜಗಳ ಸಂಭವಿಸುತ್ತಿತ್ತು. ಈ ನಡುವೆ ಮಮತಾ ಜೀತೇಂದ್ರನ ಸೋದರ ಸಂಬಂಧಿ ಅಜಿತ್ ಕುಮಾರ್ ಅಲಿಯಾಸ್ ಛೋಟು ಎಂಬಾತನ ಪ್ರೀತಿಯಲ್ಲಿ ಬಿದ್ದಿದ್ದಳು ಎನ್ನಲಾಗಿದೆ.


ಇದನ್ನೂ ಓದಿ: Shocking News: ನಡುರಸ್ತೆಯಲ್ಲಿ ಯುವತಿಗೆ ಥಳಿಸಿ ಕಾರ್‌ಗೆ ತಳ್ಳಿದ ಕಿರಾತಕ! ನೋಡಿದ್ರೂ ನೆರವಿಗೆ ಬಾರದ ಜನ!


ಅಕ್ರಮ ಸಂಬಂಧ ವಿರೋಧಿಸಿದ್ದಕ್ಕೆ ಕೊಲೆ


ಜೀತೇಂದ್ರ ಅವರ ಸೋದರ ಸಂಬಂಧಿ ಅಜಿತ್ ಕೂಡ ಮದುವೆಯಾಗಿದ್ದು, ಒಂದು ಮಗುವಿನ ತಂದೆಯಾಗಿದ್ದಾರೆ. ಆತ ಪತ್ನಿ ಮತ್ತು ಮಗುವಿನೊಂದಿಗೆ ದೆಹಲಿಯಲ್ಲಿ ಕೆಲಸ ವಾಸವಾಗಿದ್ದ. ಮಮತಾ ದೇವಿಯೊಂದಿಗೆ ಪ್ರೀತಿಯಾದ ಮೇಲೆ ಅಜಿತ್ ಕುಮಾರ್​ ಗುಟ್ಟಾಗಿ ಭೇಟಿಯಾಗಲು ಶುರು ಮಾಡಿದ್ದ. ಈ ಇಬ್ಬರು ತಡರಾತ್ರಿಯವರೆಗೂ ಫೋನಿನಲ್ಲಿ ಮಾತನಾಡುತ್ತಿದ್ದರು. ಇದನ್ನು ಜೀತೇಂದ್ರ ಯಾವಾಗಲೂ ವಿರೋಧಿಸುತ್ತಿದ್ದರು. ಅಜಿತ್ ಭಾನುವಾರ ಬೆಳಿಗ್ಗೆ ಜೀತೇಂದ್ರನ ಮನೆಗೆ ಬಂದಿದ್ದು, ಇದರಿಂದಾಗಿ ಜೀತೇಂದ್ರ ಮತ್ತು ಅಜಿತ್ ನಡುವೆ ವಾಗ್ವಾದ ನಡೆದಿದೆ. ಈ ಜಗಳದ ಲಾಭ ಪಡೆದ ಮಮತಾ ತನ್ನ ಪ್ರಿಯಕರ ಅಜಿತ್ ಜೊತೆಗೂಡಿ ಜೀತೇಂದ್ರನ ತಲೆಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾಳೆ. ಗಂಭೀರ ಗಾಯಗೊಂಡ ಜೀತೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಪೊಲೀಸರಿಗೆ ಸಂಪೂರ್ಣ ಘಟನೆ ವಿವರಿಸಿದ 4 ವರ್ಷದ ಮಗ


ಜೀತೇಂದ್ರನ ಕೊಲೆ ವಿಷಯ ತಿಳಿದು ಆತನ ತಂದೆ ಮನೆಗೆ ಬಂದಿದ್ದಾರೆ. ಅವರು ಮನೆ ತಲುಪಿದಾಗ ಜೀತೇಂದ್ರ ಮನೆಯ ಅಂಗಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿದಾಗ ಮೃತನ ನಾಲ್ಕು ವರ್ಷದ ಮಗ ತನ್ನ ತಂದೆಯೊಂದಿಗೆ ನಡೆದ ಜಗಳ ಮತ್ತು ಹಲ್ಲೆ ನಡೆದ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಪೊಲೀಸರು ಮೃತನ ಪತ್ನಿ ಮಮತಾ ಮತ್ತು ಆಕೆಯ ಪ್ರಿಯಕರ ಅಜಿತ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

top videos


  ನಾನು ತೀರಾ ಬಡತನದಲ್ಲಿ ಮಗನನ್ನು ಬೆಳೆಸಿದ್ದೆ, ಇಂದು ಸೊಸೆ ತನ್ನ ಪ್ರಿಯಕರನ ಜೊತೆ ಸೇರಿ ಆತನನ್ನು ಬರ್ಬರವಾಗಿ ಕೊಂದು ಹಾಕಿದ್ದಾಳೆ ಎಂದು ಮೃತನ ತಂದೆ ಯೋಗೇಂದ್ರ ರಾಮ್ ಹೇಳಿದ್ದಾರೆ. ಈಗ ತನಗೆ ಬದುಕಲು ಆಸೆ ಉಳಿದಿಲ್ಲ. ಆದ್ದರಿಂದ ಮೃತನ 4 ವರ್ಷದ ಮಗನ ಪೋಷಣೆಯ ಜವಾಬ್ದಾರಿಯನ್ನು ತನಗೆ ಹಸ್ತಾಂತರಿಸಬೇಕು ಎಂದು ಕೋರಿಕೊಂಡಿದ್ದಾರೆ.

  First published: