ಒಂಬತ್ತನೇ ಗಂಡನಿಂದ ಕೊಲೆಯಾದ ಮಹಿಳೆ - ಕತ್ತು ಕೊಯ್ದು ಸಾಯಿಸಿದ ಪತಿ

ಇಬ್ಬರ ನಡುವಿನ ಪರಿಚಯ ಸ್ನೇಹದಿಂದ ಪ್ರೀತಿಗೆ ತಿರುಗಿದೆ. ನಾಗರಾಜು ಜತೆಗಿನ ಪ್ರೀತಿಯಲ್ಲಿದ್ದ ವರಲಕ್ಷ್ಮೀ ಒಂದು ದಿನ ತನ್ನ ಎಂಟನೇ ಗಂಡನಿಗೆ ಜನಿಸಿದ ಮಗನನ್ನು ಬಿಟ್ಟಳು. ಎಂಟನೇ ಪತಿ ಮತ್ತು ಮಗುವನ್ನು ಬಿಟ್ಟು ನಾಗರಾಜುನನ್ನು ಮದುವೆಯಾದಳು.

news18-kannada
Updated:July 29, 2020, 8:41 PM IST
ಒಂಬತ್ತನೇ ಗಂಡನಿಂದ ಕೊಲೆಯಾದ ಮಹಿಳೆ - ಕತ್ತು ಕೊಯ್ದು ಸಾಯಿಸಿದ ಪತಿ
ಪ್ರಾತಿನಿಧಿಕ ಚಿತ್ರ
  • Share this:
ಹೈದರಾಬಾದ್​(ಜು.29): ಹತ್ತನೇ ಮದುವೆಯಾಗಲು ಮುಂದಾಗಿದ್ದ ಮಹಿಳೆಯೋರ್ವಳನ್ನು ಆಕೆಯ ಒಂಬತ್ತನೇ ಗಂಡ ಭೀಕರವಾಗಿ ಕೊಂದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್​​ನ ಪಹದಿ ಶರೀಫ್​​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.


ತನ್ನ ಒಂಬತ್ತನೇ ಗಂಡನಿಂದ ಕೊಲೆಯಾದ ಮಹಿಳೆಯನ್ನು ವರಲಕ್ಷ್ಮೀ ಎಂದು ಗುರುತಿಸಲಾಗಿದೆ. ಈಕೆಯ 9ನೇ ಗಂಡ ನಾಗರಾಜು ಎಂಬಾತ ಈ ಕೃತ್ಯ ಎಸಗಿದ್ಧಾನೆ. ಸದ್ಯ ಪೊಲೀಸರು ನಾಗರಾಜನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ಧಾರೆ.

ನಾಗರಾಜು ಆಂಧ್ರದ ಕರ್ನೂಲ್​​ ಜಿಲ್ಲೆಯ ನಿವಾಸಿ. ಕಳೆದ ಮೂರು ವರ್ಷಗಳಿಂದ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜಲ್ಲಪಲ್ಲಿ ಎಂಬ ಮುನ್ಸಿಪಾಲಿಟಿ ಏರಿಯಾದಲ್ಲಿ ಡ್ರೈವರ್​​ ಆಗಿ ಕೆಲಸ ಮಾಡುತ್ತಿದ್ದ.

ಇನ್ನು, ಮೃತ ಮಹಿಳೆ ವರಲಕ್ಷ್ಮೀ ಪೆಟ್ರೋಲ್​​ ಬಂಕ್​​ನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೂ 8 ಜನರೊಂದಿಗೆ ಮದುವೆಯಾಗಿತ್ತು. ಎಂಟನೇ ಗಂಡನೊಂದಿಗೆ ಆಗಷ್ಟೇ ದೂರವಾಗಿ ತನ್ನ ಮಗನೊಂದಿಗೆ ಜಲ್ಲಪಲ್ಲಿ ಏರಿಯಾದಲ್ಲೇ ವಾಸವಾಗಿದ್ದಳು. ನಾಜರಾಜುಗೆ ಈಕೆ ಪರಿಚಯವಾದಳು.

ಇಬ್ಬರ ನಡುವಿನ ಪರಿಚಯ ಸ್ನೇಹದಿಂದ ಪ್ರೀತಿಗೆ ತಿರುಗಿದೆ. ನಾಗರಾಜು ಜತೆಗಿನ ಪ್ರೀತಿಯಲ್ಲಿದ್ದ ವರಲಕ್ಷ್ಮೀ ಒಂದು ದಿನ ತನ್ನ ಎಂಟನೇ ಗಂಡನಿಗೆ ಜನಿಸಿದ ಮಗನನ್ನು ಬಿಟ್ಟಳು. ಎಂಟನೇ ಪತಿ ಮತ್ತು ಮಗುವನ್ನು ಬಿಟ್ಟು ನಾಗರಾಜುನನ್ನು ಮದುವೆಯಾದಳು.

ಮದುವೆಯಾದ ಮೇಲೆ ಒಂಬತ್ತನೇ ಗಂಡನೊಂದಿಗೆ ಈಕೆ ಸಂಬಂಧ ಚೆನ್ನಾಗಿತ್ತು. ಹೀಗಿರುವಾಗಲೇ ತನ್ನ ಹಳೆಯ ಚಾಳಿ ಮುಂದುವರಿಸಿದ ಈಕೆ ಇನ್ನೊಬ್ಬನ ಜತೆಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ. ಈ ವಿಚಾರ ನಾಗರಾಜುಗೆ ತಿಳಿಯುತ್ತಿದ್ದಂತೆಯೇ ಈಕೆಗೆ ಎರಡು ಸಲ ವಾರ್ನ್​ ಮಾಡಿದ್ದ.

ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್​​-19​: ಒಂದೇ ದಿನ 5503 ಕೇಸ್​​, 1.12 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಪ್ರತೀ ದಿನ ಈ ವಿಚಾರ ಇಬ್ಬರ ಜಗಳಕ್ಕೆ ಕಾರಣವಾಗಿತ್ತು. ಒಂದು ದಿನ ತಾಳ್ಮೆ ಕಳೆದುಕೊಂಡ ಒಂಬತ್ತನೇ ಗಂಡ ತನ್ನ ಹೆಂಡತಿಯ ಕತ್ತು ಕೊಯ್ದು ಕೊಂದಿದ್ಧಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ಧಾರೆ.
Published by: Ganesh Nachikethu
First published: July 29, 2020, 8:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading