ನವದೆಹಲಿ(ಜ.02): ರಾಷ್ಟ್ರ ರಾಜಧಾನಿ ದೆಹಲಿಯ ಸುಲ್ತಾನ್ಪುರಿ ರಸ್ತೆ ಅಪಘಾತದ (Sultanpuri Road Accident) ಕಂಝವಾಲಾ ಪ್ರದೇಶದಲ್ಲಿ ಹೃದಯ ವಿದ್ರಾವಕ ರಸ್ತೆ ಅಪಘಾತವೊಂದು ಬೆಳಕಿಗೆ ಬಂದಿದ್ದು, ಕುಡಿದ ಅಮಲಿನಲ್ಲಿ ಯುವಕರು ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆನ್ನು ಡಿಕ್ಕಿ ಹೊಡೆದು ಸುಮಾರು ನಾಲ್ಕು ಕಿಲೋಮೀಟರ್ಗಳವರೆಗೆ ಎಳೆದೊಯ್ದಿದ್ದಾರೆ. ಈ ಭಯಾನಕ ಅಪಘಾತದ (Road Accident) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರ ಬಲೆನೊ ಕಾರು ಹಾದು ಹೋಗುತ್ತಿರುವುದು ಕಂಡು ಬಂದಿದೆ.
ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದೆಹಲಿ ಪೊಲೀಸರು ಪ್ರಕರಣ ಸಂಬಂಧ ಐವರು ಆರೋಪಿ ಯುವಕರನ್ನು ಬಂಧಿಸಿದ್ದಾರೆ. ಯುವಕರಲ್ಲಿ ಒಬ್ಬರು ಕ್ರೆಡಿಟ್ ಕಾರ್ಡ್ ಸಂಗ್ರಹದ ಕೆಲಸ ಮಾಡುತ್ತಾನೆ. ಮೃತ ಯುವತಿ ಪಾರ್ಟ್ ಟೈಂ ಜಾಬ್ ಮಾಡುತ್ತಿದ್ದರು.
ದೆಹಲಿ ಮಹಿಳಾ ಆಯೋಗ ನೋಟಿಸ್ ಜಾರಿ
ದೆಹಲಿ ಮಹಿಳಾ ಆಯೋಗವೂ (ಡಿಸಿಡಬ್ಲ್ಯು) ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಪೊಲೀಸರ ಪ್ರಕಾರ, ಕುತುಬ್ಗಢ್ ಪ್ರದೇಶಕ್ಕೆ ಹೋಗುತ್ತಿದ್ದ ಕಾರಿಗೆ ಶವವನ್ನು ಕಟ್ಟಲಾಗಿದೆ ಎಂದು ಕಂಜ್ವಾಲಾ ಪೊಲೀಸ್ ಠಾಣೆಗೆ (ರೋಹಿಣಿ ಜಿಲ್ಲೆ) ಮುಂಜಾನೆ 3.24 ಕ್ಕೆ ಮಾಹಿತಿ ಬಂದಿದೆ. ಮೃತದೇಹವನ್ನು ಮಂಗೋಲ್ಪುರಿಯ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Rishabh Pant: ಅಪಘಾತದ ಬಳಿಕ ರಿಷಭ್ ಪಂತ್ಗೆ ಮತ್ತೊಂದು ಸಮಸ್ಯೆ, ಈ ವಿಷಯ ನಿಜವಾದ್ರೆ ಪಂತ್ ದಂಡ ಕಟ್ಟಬೇಕಂತೆ!
#DelhiHorror: Shocking CCTV of Delhi #Kanjhawala Accident where girl dragged for few Kilometers..girl can be seen beneath cars front tires while taking uturn.
girl died all five people arrested by delhi police..#DelhiAccident pic.twitter.com/jZML6LQFKE
— Sonu Kanojia (@NNsonukanojia) January 2, 2023
5 ಯುವಕರನ್ನು ಬಂಧಿಸಿದ ಪೊಲೀಸರು
ಉಪ ಪೊಲೀಸ್ ಆಯುಕ್ತ (ಹೊರ) ಹರೇಂದ್ರ ಕುಮಾರ್ ಸಿಂಗ್ ಮಾತನಾಡಿ, ಸಂತ್ರಸ್ತೆಯ ಕಾಲು ಕಾರಿನ ಚಕ್ರವೊಂದಕ್ಕೆ ಸಿಲುಕಿಕೊಂಡಿತ್ತು. ಇದರಿಂದಾಗಿ ಆಕೆ ನಾಲ್ಕು ಕಿಲೋಮೀಟರ್ ಎಳೆಯ್ಯಲಾಗಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279 (ಅತಿ ವೇಗದ ಚಾಲನೆ) ಮತ್ತು 304-ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕೃಷ್ಣ (27), ಮಿಥುನ್ (26) ಮತ್ತು ಮನೋಜ್ ಮಿತ್ತಲ್ ಅವರನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Bengaluru: ಕೊಟ್ಟ ಮಾತಿನಂತೆ ನಡೆದ KSRTC ನಿಗಮ; ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ಕೋಟಿ ರೂಪಾಯಿ ನೆರವು
ಈ ಬಗ್ಗೆ ಪೊಲೀಸರಿಂದ ತನಿಖೆ
ದೀಪಕ್ ಚಾಲಕ, ಅಮಿತ್ ಉತ್ತಮ್ ನಗರದಲ್ಲಿ ಎಸ್ಬಿಐ ಕಾರ್ಡ್ನೊಂದಿಗೆ ಕೆಲಸ ಮಾಡುತ್ತಾನೆ, ಕೃಷ್ಣ ಕನ್ನಾಟ್ ಪ್ಲೇಸ್ನಲ್ಲಿ ಕೆಲಸ ಮಾಡುತ್ತಾನೆ, ಮಿಥುನ್ ನಾರಾಯಣನಲ್ಲಿ ಕೇಶ ವಿನ್ಯಾಸಕನಾಗಿ ಕೆಲಸ ಮಾಡುತ್ತಾನೆ ಮತ್ತು ಮಿತ್ತಲ್ ಸುಲ್ತಾನ್ಪುರಿಯಲ್ಲಿ ಖಾಸಗಿ ಆಹಾರ ವಿತರಣಾ ಕಂಪನಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾನೆ. ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದರೇ ಎಂಬುದನ್ನು ಪರಿಶೀಲಿಸಲು ಆತನ ರಕ್ತದ ಮಾದರಿಯನ್ನು ಸಂರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ಮದುವೆ ಕಾರ್ಯಕ್ರಮ ಮತ್ತಿತರ ಕೆಲಸಗಳಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಈ ಘಟನೆ ಸಂಭವಿಸಿದಾಗ, ಅವರು ಅಂತಹ ಒಂದು ಸಮಾರಂಭದಿಂದ ಮನೆಗೆ ಮರಳುತ್ತಿದ್ದರು ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ