ದಿನೇ ದಿನೇ ಕೊಲೆ(Murder), ಸುಲಿಗೆ, ಕಿಡ್ನ್ಯಾಪ್ (Kidnap), ಮಹಿಳೆಯರು ಹಾಗೂ ಮಕ್ಕಳ ಮೇಲೆ ಅತ್ಯಾಚಾರದಂತಹ (Rape) ಭಯಾನಕ ಕೃತ್ಯಗಳು ದೇಶದಲ್ಲಿ ಹೆಚ್ಚುತ್ತಲೇ ಇದೆ. ಅದರಲ್ಲಿಯೂ ಮಹಿಳೆಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗುತ್ತಿದೆ. ಈ ಎಲ್ಲ ಕೃತ್ಯಗಳನ್ನು ತಡೆಗಟ್ಟಲು ಸರ್ಕಾರ ನಾನಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಇಂತಹ ಕೃತ್ಯಗಳು ಮರುಕಳಿಸುತ್ತಲೇ ಇದೆ. ಈ ನಡುವೆ ಹಾಡಹಗಲೇ ಯುವತಿಯನ್ನು ಬರೋಬ್ಬರಿ 100 ಮಂದಿ ಸೇರಿ ಕಿಡ್ಲ್ಯಾಪ್ ಮಾಡಿರುವ ಘಟನೆ ತೆಲಂಗಾಣ (Telangana) ರಾಜ್ಯದಲ್ಲಿ ಬೆಳಕಿಗೆ ಬಂದಿದೆ.
ತೆಲಂಗಾಣದ ರಂಗಾ ರೆಡ್ಡಿಯಲ್ಲಿ ಯುವತಿ ಕಿಡ್ನ್ಯಾಪ್
ಹೌದು, ತೆಲಂಗಾಣದ ರಂಗಾ ರೆಡ್ಡಿಯಲ್ಲಿ 24 ವರ್ಷದ ಯುವತಿಯನ್ನು ಹಗಲು ಹೊತ್ತಿನಲ್ಲಿಯೇ ಸುಮಾರು 100 ಮಂದಿ ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಹರಣ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಶುಕ್ರವಾರ ರಂಗಾ ರೆಡ್ಡಿಯ ಆದಿಬಟ್ಲಾ ಪ್ರದೇಶದಲ್ಲಿ 24 ವರ್ಷದ ಯುವತಿಯನ್ನು ಆಕೆಯ ಮನೆಯಿಂದ ಅಪಹರಿಸಿರುವ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಎಂಟ್ರಿ ಕೊಟ್ಟ ದುಷ್ಕರ್ಮಿಗಳು ಮನೆ ಬಳಿ ನಿಲ್ಲಿಸಲಾಗಿದ್ದ ವಾಹನಗಳನ್ನು ಧ್ವಂಸಗೊಳಿಸಿಸುವುದರ ಜೊತೆಗೆ ಯುವತಿಯ ಕುಟುಂಬಸ್ಥರನ್ನು ಹಿಗ್ಗಾಮುಗ್ಗ ಥಳಿಸಿರುವುದನನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
#WATCH | Ranga Reddy, Telangana | A 24-yr-old woman was kidnapped from her house in Adibatla y'day. Her parents alleged that around 100 youths barged into their house, forcibly took their daughter Vaishali away & vandalised the house. Police say, case registered & probe underway. pic.twitter.com/s1lKdJzd2B
— ANI (@ANI) December 10, 2022
ಇನ್ನೂ ಈ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಯುವತಿಯ ಪೋಷಕರು, ಸುಮಾರು 100 ಯುವಕರು ತಮ್ಮ ಮನೆಗೆ ನುಗ್ಗಿ ತಮ್ಮ ಮಗಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಅಲ್ಲದೇ ಮನೆಗೆ ಹಾನಿ ಮಾಡಿ, ವಾಹನಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಯುವತಿ ಮನೆಗೆ ನುಗ್ಗಿ ದುಷ್ಕರ್ಮಿಗಳಿಂದ ದರೋಡೆ
ನಮ್ಮ ಮಗಳನ್ನು ಕರೆದೊಯ್ಯುವ ಮುನ್ನ ಕೋಲು ಮತ್ತು ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದ ಯುವಕರು ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ. ಸಂಬಂಧಿಕರು, ನೆರೆಹೊರೆಯವರು ಅಡ್ಡಹಾಕಿದರೂ ಅವರ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿ ಮಗಳನ್ನು ಎಳೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಯುವತಿಗೆ ಪ್ರಪೋಸ್ ಮಾಡಿದ್ದ ಹಳೆ ಪ್ರೇಮಿ
ನಮ್ಮ ಮಗಳಿಗೆ ಈ ಹಿಂದೆ ಯುವಕನೊಬ್ಬ ಪ್ರಪೋಸ್ ಮಾಡಿದ್ದನು. ಆದರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಸರಿಯಾಗಿ ಸ್ಪಂದಿಸಿರಲಿಲ್ಲ. ಇದೀಗ ಈ ಕೃತ್ಯದ ಹಿಂದೆ ಆತನ ಕೈವಾಡವಿದೆ ಎಂದು ಅಪಹರಣಕ್ಕೊಳಗಾದ ಯುವತಿಯ ತಾಯಿ ಶಂಕೆ ವ್ಯಕ್ತಪಡಿಸಿದ್ದಾರೆ.
Ranga Reddy, Telangana | A woman has been kidnapped from her house at Adibatla. The woman’s parents alleged that around 100 youths barged into their house & forcibly took their daughter Vaishali away. The accused also vandalised the house. pic.twitter.com/qlJuwU3voE
— ANI (@ANI) December 9, 2022
ಘಟನೆ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿ ರಿಯಾಕ್ಷನ್
ಈ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಖಂಡಿತವಾಗಿಯೂ ಇದೊಂದು ಗಂಭೀರವಾದ ಅಪರಾಧವಾಗಿದೆ. ನಾವು ಈ ವಿಚಾರವಾಗಿ ಯುವತಿಯ ಪೋಷಕರೊಂದಿಗೆ ಮಾತನಾಡಿದ್ದೇವೆ ಮತ್ತು ಕೆಲವು ಮಾಹಿತಿಗಳನ್ನು ಕಲೆಹಾಕುತ್ತಿದ್ದೇವೆ. ಪ್ರಕರಣ ಸಂಬಂಧ ಮತ್ತಷ್ಟು ಅಪ್ಡೇಟ್ಸ್ ಲಭ್ಯವಾದ ಬಳಿಕ ತಿಳಿಸುತ್ತೇವೆ. ಸದ್ಯ u/s 307 ಮತ್ತು ಐಪಿಸಿ (ಭಾರತೀಯ ದಂಡ ಸಂಹಿತೆ) ಸಂಬಂಧಿತ ಇತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಹಾಗೂ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಘಟನೆಯ ವೀಡಿಯೋ, ಫೋಟೋ ವೈರಲ್
ಇನ್ನೂ ಈ ಘಟನೆಯ ವೀಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಮನೆಯ ಸುತ್ತಮುತ್ತ ಅನೇಕ ಯುವಕರು ಜಮಾಯಿಸಿ, ಯುವತಿಯ ತಂದೆಯನ್ನು ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ಕೆಲವು ಫೋಟೋಗಳಲ್ಲಿ ಮನೆಯೊಳಗಿರುವ ವಸ್ತುಗಳನ್ನು ದುಷ್ಕರ್ಮಿಗಳು ಛಿದ್ರಗೊಳಿಸಿರುವುದನ್ನು ಮತ್ತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿರುವುದನ್ನು ಕಾಣಬಹುದಾಗಿದೆ. ಮತ್ತೊಂದೆಡೆ ಮಗಳಿಗಾಗಿ ಹೆತ್ತವರು ಕಣ್ಣೀರು ಹಾಕುತ್ತಿರುವುದನ್ನು ನೋಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ