VIDEO: ಕೋತಿಗೆ ಲೈಂಗಿಕ ಕಿರುಕುಳ ನೀಡಿ ಜೈಲು ಸೇರಿದ ಮಹಿಳೆ..!

ಇದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಶ್ಮಾ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.

zahir | news18
Updated:January 1, 2019, 9:59 PM IST
VIDEO: ಕೋತಿಗೆ ಲೈಂಗಿಕ ಕಿರುಕುಳ ನೀಡಿ ಜೈಲು ಸೇರಿದ ಮಹಿಳೆ..!
ಸಾಂದರ್ಭಿಕ ಚಿತ್ರ
zahir | news18
Updated: January 1, 2019, 9:59 PM IST
ಕೋತಿಗೆ ಲೈಂಗಿಕ ಕಿರುಕುಳ ನೀಡಿದ ಮಹಿಳೆಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿರುವ ವಿಚಿತ್ರ ಘಟನೆ ಈಜಿಪ್ಟ್​ನಲ್ಲಿ ನಡೆದಿದೆ. ಬಂಧಿತೆಯನ್ನು 25ರ ಹರೆಯದ ಬಶ್ಮಾ ಅಹಮದ್​ ಎಂದು ಗುರುತಿಸಲಾಗಿದ್ದು, ಇವರ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ವರ್ತನೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪದಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಮನ್ಸೌರಾ ನಗರದ ನಿವಾಸಿಯಾಗಿರುವ ಬಶ್ಮಾ ಇತ್ತೀಚೆಗೆ ಕೋತಿಯೊಂದಿಗಿನ ವೀಡಿಯೊ ಚಿತ್ರೀಕರಿಸಿಕೊಂಡಿದ್ದರು. 90 ನಿಮಿಷಗಳ ಈ ವೀಡಿಯೊದಲ್ಲಿ ಕೋತಿಯ ಜನನಾಂಗವನ್ನು ಮುಟ್ಟಿ ಅಪಹಾಸ್ಯ ಮಾಡಿದ್ದರು. ಅಷ್ಟೇ ಅಲ್ಲದೆ ಈ ವೀಡಿಯೊ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಿಕೃತಿ ಮೆರೆದಿದ್ದರು.

ಇದನ್ನೂ ಓದಿ: ರಿವರ್ಸ್​ ಗೇರ್​ ಇರುವ ಈ ಸ್ಕೂಟರ್​ ಪೆಟ್ರೋಲ್​ ಇಲ್ದೆ 75 ಕಿ.ಮೀ ಮೈಲೇಜ್ ನೀಡುತ್ತೆ..!

ಇದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಶ್ಮಾ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾರ್ವಜನಿಕ ದೂರು ದಾಖಲಿಸಿದ ಪೊಲೀಸರು ಬಶ್ಮಾರನ್ನು ವಶಕ್ಕೆ ಪಡೆದು ನ್ಯಾಯಾಲಕ್ಕೆ ಒಪ್ಪಿಸಿದ್ದರು.

ಇದನ್ನೂ ಓದಿ: ಹೊಸ ವರ್ಷದಿಂದ ಈ ನೌಕರರಿಗೆ ಸಿಗಲಿದೆ ಜಿಯೋ ಉಚಿತ ಸಿಮ್​, ತಿಂಗಳಿಗೆ 60GB ಡೇಟಾ..!

ಈ ಕುರಿತು ಹೇಳಿಕೆ ನೀಡಿದ ಬಶ್ಮಾ, ಪ್ರಾಣಿಗೆ ಕಿರುಕುಳ ನೀಡುವ ಉದ್ದೇಶ ಹೊಂದಿರಲಿಲ್ಲ. ಅರಿವಿನ ಕೊರತೆಯಿಂದ ವೀಡಿಯೊ ಮಾಡಿ ಅಂತರ್ಜಾಲದಲ್ಲಿ ಹಂಚಿಕೊಂಡಿರುವುದಾಗಿ  ತಪ್ಪೊಪ್ಪಿಕೊಂಡಿದ್ದರು. ಈ ಬಗ್ಗೆ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರಾಣಿಯೊಂದಿಗಿನ ವಿಕೃತಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಇದನ್ನೂ ಓದಿ: ಹೊಸ ವರ್ಷದಲ್ಲಿ ಕೇವಲ 500 ರೂ. ಉಳಿತಾಯ ಮಾಡಿ ಕೋಟ್ಯಾಧಿಪತಿಗಳಾಗಿ..!
Loading...

ಇದನ್ನೂ ಓದಿ: ಎಚ್ಚರ..ಹಸ್ತ ಮೈಥುನ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ..!

First published:January 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ