ಶ್ರೀನಗರದ ಸಿಆರ್‌ಪಿಎಫ್‌ ಇನ್ಸ್‌ಪೆಕ್ಟರ್‌ ಜನರಲ್‌ ಆಗಿ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿ ನೇಮಕ!

1996 ರ ಬ್ಯಾಚ್ ತೆಲಂಗಾಣದ ಐಪಿಎಸ್ ಕೇಡರ್‌ನ ಅಧಿಕಾರಿ ಚಾರು ಸಿನ್ಹಾ, ಇನ್ನುಮುಂದೆ ಶ್ರೀನಗರ ವಲಯದ ಸಿಆರ್‌ಪಿಎಫ್‌ಗೆ ಇನ್ಸ್‌ಪೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಮಹಿಳಾ ಐಪಿಎಸ್‌ ಅಧಿಕಾರಿ ಚಾರು ಸಿನ್ಹ.

ಮಹಿಳಾ ಐಪಿಎಸ್‌ ಅಧಿಕಾರಿ ಚಾರು ಸಿನ್ಹ.

  • Share this:
ಶ್ರೀನಗರ (ಸೆಪ್ಟೆಂಬರ್‌ 01)‌; ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ಪೀಡಿತ ಪ್ರದೇಶವಾದ ಶ್ರೀನಗರ ವಲಯದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(ಸಿಆರ್‌ಪಿಎಫ್) ಇನ್ಸ್‌ಪೆಕ್ಟರ್ ಜನರಲ್ (ಐಜಿ) ಆಗಿ ಮಹಿಳಾ ಐಪಿಎಸ್ ಅಧಿಕಾರಿಯನ್ನು ಮೊದಲ ಬಾರಿಗೆ ನೇಮಕ ಮಾಡಲಾಗಿದೆ.

1996 ರ ಬ್ಯಾಚ್ ತೆಲಂಗಾಣದ ಐಪಿಎಸ್ ಕೇಡರ್‌ನ ಅಧಿಕಾರಿ ಚಾರು ಸಿನ್ಹಾ, ಇನ್ನುಮುಂದೆ ಶ್ರೀನಗರ ವಲಯದ ಸಿಆರ್‌ಪಿಎಫ್‌ಗೆ ಇನ್ಸ್‌ಪೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಆಕೆಗೆ ಇಂತಹ ಕಠಿಣ ಕಾರ್ಯವನ್ನು ವಹಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಸಿಆರ್‌ಪಿಎಫ್‌ನಲ್ಲಿ ಬಿಹಾರ ವಲಯದ ಐಜಿಯಾಗಿ ನಕ್ಸಲೈಟರ ಪ್ರದೇಶದಲ್ಲಿ ಕೆಲಸಮಾಡಿದ ಅನುಭವ ಹೊಂದಿದ್ದಾರೆ.

ಅವರ ನಾಯಕತ್ವದಲ್ಲಿ ವಿವಿಧ ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಲಾಯಿತು. ನಂತರ, ಅವರನ್ನು ಸಿಆರ್‌ಪಿಎಫ್ ನ ಮುಖ್ಯಸ್ಥರಾಗಿ ಐಜಿ ಜಮ್ಮುವಿಗೆ ವರ್ಗಾಯಿಸಲಾಯಿತು. ಅಲ್ಲಿ ಅವರು ದೀರ್ಘ ಮತ್ತು ಯಶಸ್ವಿಯಾಗಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದರು. ಸೋಮವಾರ ಶ್ರೀನಗರ ವಲಯಕ್ಕೆ ಮಹಿಳಾ ಐಪಿಎಸ್ ಅಧಿಕಾರಿ ಚಾರು ಸಿನ್ಹಾ, ಇನ್ಸ್‌ಪೆಕ್ಟರ್ ಜನರಲ್ (ಐಜಿ) ಆಗಿ ನೇಮಕ ಮಾಡಿರುವ ಹೊಸ ಆದೇಶ ಬಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರ ಕಾರ್ಯಕ್ರಮದಲ್ಲಿ ಕುಖ್ಯಾತ ರೌಡಿಶೀಟರ್‌; ಪೊಲೀಸರನ್ನು ಕಂಡು ಓಟ

ಹಾಲಿ ಮಹಾನಿರ್ದೇಶಕ ಸಿಆರ್‌ಪಿಎಫ್ ಆನಂದ್ ಪ್ರಕಾಶ್ ಮಹೇಶ್ವರಿ 2005 ರಲ್ಲಿ ಶ್ರೀನಗರ ವಲಯದ ಐಜಿಯಾಗಿ ಮುಖ್ಯಸ್ಥರಾಗಿದ್ದರು.

2005 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಈ ವಲಯವು ಐಜಿ ಮಟ್ಟದಲ್ಲಿ ಮಹಿಳಾ ಅಧಿಕಾರಿಯನ್ನು ಹೊಂದಿರಲಿಲ್ಲ. ಈ ವಲಯವು ಹೆಚ್ಚಿನ ಭಯೋತ್ಪಾದನಾ-ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಕುಖ್ಯಾತಿ ಪಡೆದಿದೆ. ಚಾರು ಸಿನ್ಹಾ ಈ ವಲಯದ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಕಾರ್ಯಾಚರಣೆಗಳ ಮುಖ್ಯಸ್ಥರಾಗಿರುತ್ತಾರೆ.
Published by:MAshok Kumar
First published: