10 ವರ್ಷದಿಂದ ತಾಯಿ ಶವವನ್ನು ಫ್ರೀಜರ್​​ನಲ್ಲಿ ಬಚ್ಚಿಟ್ಟ ಮಗಳು; ಹೀಗೇಕೆ ಮಾಡಿದಳು?

ಜಪಾನ್​ ಟೊಕಿಯೊ ನಗರದ ಯೂಮಿ ಯೊಶಿನೊ ಎಂಬ 48 ವರ್ಷದ ಮಹಿಳೆ ತನ್ನ ಸತ್ತ ತಾಯಿಯನ್ನು 10 ವರ್ಷಗಳಿಂದ ಹಾಗೆಯೇ ಇಟ್ಟುಕೊಂಡು ಬಂದಿದ್ದಾಳೆ.

ಪ್ರಾತಿನಿಧಿಕ ಚಿತ್ರ (ಫೋಟೋ: ಗೂಗಲ್​)

ಪ್ರಾತಿನಿಧಿಕ ಚಿತ್ರ (ಫೋಟೋ: ಗೂಗಲ್​)

 • Share this:
  ಸತ್ತ ವ್ಯಕ್ತಿಯನ್ನು ಮಣ್ಣು ಮಾಡುವುದು ಸಂಪ್ರದಾಯ. ಆದರೆ ಇಲ್ಲೊಬ್ಬಳು ಮಗಳು ತನ್ನ ತಾಯಿಯ ಶವವನ್ನು 10 ವರ್ಷದಿಂದ ಮಣ್ಣು ಮಾಡದೆ ಫ್ರೀಜರ್​ನಲ್ಲಿಟ್ಟುಕೊಂಡು ಬಂದಿದ್ದಾಳೆ. ಅಂದರೆ ಆಕೆಯ ತಾಯಿ ಸಾವನ್ನಪ್ಪಿ ಹತ್ತು ವರ್ಷವಾದರು ಮಗಳು ಮಾತ್ರ ತಾಯಿಯ ಶವವನ್ನು ಮಣ್ಣು ಮಾಡದೆ ಹಾಗೆಯೇ ಇಟ್ಟುಕೊಂಡಿದ್ದಾಳೆ. ಆದರೆ ಸ್ವಂತ ಮಗಳು ಸತ್ತ ತಾಯಿಯ ದೇಹವನ್ನು ಯಾಕೆ ಇಟ್ಟುಕೊಂಡಿದ್ದಳು ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿರಬಹುದು.  ಅದಕ್ಕೂ ಒಂದು ಕಾರಣವಿದೆ. ಆ ಕಾರಣ ಎನು ಎಂದು ತಿಳಿಯಲು ಈ ಸ್ಟೋರಿ ಓದಿ.

  ಅಂದಹಾಗೆಯೇ ಈ ಘಟನೆ ನಡೆದಿರುವುದು ಜಪಾನಿನಲ್ಲಿ. ಮಗಳು ತನ್ನ ತಾಯಿಯೊಂದಿಗೆ ಮುನಿಸಿಪಾಲಿಟಿಯ ಫ್ಲಾಟ್​​ವೊಂದರಲ್ಲಿ ವಾಸವಿದ್ದಳು. ಆದರೆ ತಾಯಿ ಸತ್ತ ನಂತರ ವಾಸವಿದ್ದ ಫ್ಲಾಟ್ ಅನ್ನು ಕಳೆದುಕೊಳ್ಳಬಹುದೆಂಬ ಕಾರಣಕ್ಕೆ ಹೀಗೆ ಮಾಡಿದ್ದಾಳೆ!.

  ಜಪಾನ್​ ಟೊಕಿಯೊ ನಗರದ ಯೂಮಿ ಯೊಶಿನೊ ಎಂಬ 48 ವರ್ಷದ ಮಹಿಳೆ ತನ್ನ ಸತ್ತ ತಾಯಿಯನ್ನು 10 ವರ್ಷಗಳಿಂದ ಹಾಗೆಯೇ ಇಟ್ಟುಕೊಂಡು ಬಂದಿದ್ದಾಳೆ. ನಗರ ಪಾಲಿಕೆಯ ಫ್ಲಾಟಿನಲ್ಲಿ ಯೊಶಿನೊ ಮತ್ತು ಆಕೆಯ ತಾಯಿ ವಾಸವಿದ್ದರು. ಒಂದು ದಿನ ಆಕೆಯ ತಾಯಿ ಸಾವನ್ನಪ್ಪುತ್ತಾರೆ. ಆದರೆ ಯೊಶಿನೊ ತಾಯಿಯ ಹೆಸರಿನಲ್ಲಿ ಆ ಫ್ಲಾಟಿನ ಒಪ್ಪಂದವಿತ್ತು. ತಾಯಿ ಸತ್ತಿರುವ ವಿಚಾರ ತಿಳಿದರೆ ಫ್ಲಾಟ್​ನಿಂದ ನನ್ನನ್ನು ತೆರವುಗೊಳಿಸಲು ಹೇಳುತ್ತಾರೆಂಬ ಕಾರಣಕ್ಕೆ ಆಕೆ ಈ ಸುದ್ದಿಯನ್ನು ಗೌಪ್ಯವಾಗಿ ಇಟ್ಟುಕೊಂಡಳು. ಮಾತ್ರವಲ್ಲದೆ, ಶ್ರವವನ್ನು ಫ್ರೀಜರ್​ನಲ್ಲಿಟ್ಟು ಕ್ಲಾಸೆಟ್ಟಿನಲ್ಲಿ ಬಚ್ಚಿಟ್ಟಿದ್ದಳು ಎನ್ನಲಾಗಿದೆ.

  ಇತ್ತೀಚೆಗೆ ಯೊಶಿನೊಳನ್ನು ಮನೆ ಖಾಲಿ ಮಾಡುವಂತೆ ಹೇಳಿದ್ದರು. ಹಾಗಾಗಿ ಆಕೆಯ ಮನೆ ಬಿಟ್ಟು ಹೋಗಿದ್ದಾಳೆ. ಈ ವೇಳೆ ಮನೆ ಸ್ವಚ್ಛ ಮಾಡುವ ಸಮಯಕ್ಕೆ ವ್ಯಕ್ತಿಯೊಬ್ಬನಿಗೆ ಕ್ಲಾಸೆಟ್​​ ಒಂದರಲ್ಲಿ ಮೃತದೇಹ ಸಿಕ್ಕಿದೆ. ನಂತರ ಯೊಶಿನೊಳನ್ನು ಬಂಧಿಸಿ ಆಕೆಯನ್ನು ವಿಚಾರಣೆ ನಡೆಸಿದಾಗ ನೈಜ ವಿಚಾರವನ್ನು ಬಹಿರಂಗ ಪಡಿಸಿದ್ದಾಳೆ.

  ತನ್ನ ತಾಯಿ 10 ವರ್ಷಗಳ ಹಿಂದೆ ಸತ್ತಿದ್ದಾರೆ. ಆದರೆ ಈ ವಿಚಾರ ಯಾರಿಗೂ ತಿಳಿಯುವುದು ಬೇಡ ಎಂಬ ಕಾರಣಕ್ಕೆ ಹಾಗೆ ಇಟ್ಟುಕೊಂಡಿದ್ದೆ ಎಂದು ಯೊಶಿನೋ ಪೊಲೀಸರಿಗೆ ತಿಳಿಸಿದ್ದಾರೆ.

  ಇನ್ನು ಯೊಶಿನೊ ತಾಯಿ ಸಾಯುವ ವೇಳೆ 60 ವರ್ಷ ವಯಸ್ಸಾಗಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ.
  Published by:Harshith AS
  First published: