Mother Kills Son: 4 ವರ್ಷದ ಮಗನ ಕೊಂದ ತಾಯಿ, 10 ವರ್ಷದ ಹಿಂದೆ ಮಗಳನ್ನೂ ಕೊಂದಿದ್ದಳು!

ತನ್ನ ಮಗನ ತಾನೇ ಕೊಂದು ಗೋಣಿಯಲ್ಲಿ ಕಟ್ಟಿ ತಲೆಯ ಮೇಲೆ ಹೊತ್ತು ಊರಾಚೆ ಕೆರೆಗೆ ಎಸೆದು ಬಂದಿದ್ದಳು ತಾಯಿ. 10 ವರ್ಷದ ಹಿಂದೆ ಹೆಣ್ಣು ಮಗುವನ್ನೂ ಕೊಂದಿದ್ದಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಂಡೀಘಡ್(ಜು.16): ಆಘಾತಕಾರಿ ಘಟನೆಯೊಂದರಲ್ಲಿ ತಾಯಿಯೇ (Mother) ತನ್ನ 4 ವರ್ಷದ ಮಗನನ್ನು (Son) ಕೊಂದಿರುವ ಘಟನೆ ಚಂಡೀಘಡ್​ನಲ್ಲಿ ಬೆಳಕಿಗೆ ಬಂದಿದೆ. ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ (Murder) ಮಾಡಿದ ಆರೋಪದ ಮೇಲೆ ಬಂಧಿತಳಾದ ಮಹಿಳೆ, 10 ವರ್ಷಗಳ ಹಿಂದೆ ತನ್ನ ಮಗಳನ್ನು (Daughter) ಕೊಂದಿರುವುದಾಗಿ ಪೊಲೀಸರ (Police) ಮುಂದೆ ಒಪ್ಪಿಕೊಂಡಿದ್ದಾಳೆ. ನಾಲ್ಕು ವರ್ಷದ ಮಗು ಮುಲ್ಲನ್‌ಪುರ ದಖಾದ ಭನೋಹರ್ ಗ್ರಾಮದಲ್ಲಿ ನಾಪತ್ತೆಯಾಗಿತ್ತು. ಮಗುವಿನ ತಾಯಿ, ಉತ್ತರ ಪ್ರದೇಶದ (Uttar Pradesh) ಬಬಿತಾ, 45, ಬಾಲಕ ಕೊನೆಯದಾಗಿ ತಮ್ಮ ಮನೆಯ ಹೊರಗೆ ಆಟವಾಡುತ್ತಿರುವುದು ಕಂಡುಬಂದಿದೆ ಎಂದು ಹೇಳಿಕೊಂಡರು.

ಅದರ ನಂತರ ಸೈಕಲ್ ರಿಪೇರಿ ಅಂಗಡಿಯನ್ನು ನಡೆಸುತ್ತಿರುವ ಆಕೆಯ ಪತಿ ಶಾಮ್ ಲಾಲ್, ಕೆಲವು ಗ್ರಾಮಸ್ಥರೊಂದಿಗೆ ಕಾಣೆಯಾದ ಮಗುವನ್ನು ಹುಡುಕಲು ಪ್ರಾರಂಭಿಸಿದರು.

ಗೋಣಿ ಚೀಲದಲ್ಲಿ ಮಗನ ಶವ

ಸಿಸಿಟಿವಿ (ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್) ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುವಾಗ, ಬಬಿತಾ ತನ್ನ ತಲೆಯ ಮೇಲೆ ಗೋಣಿಚೀಲದೊಂದಿಗೆ ಹಳ್ಳಿಯ ಮೂಲಕ ಹೋಗುತ್ತಿರುವುದನ್ನು ಅವರು ಗುರುತಿಸಿದರು. ಪತ್ನಿಯೇ ಮಗನನ್ನು ಕೊಂದಿದ್ದಾಳೆ ಎಂಬ ಭಯದಿಂದ ಶಾಮ್ ಲಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮಗನ ಕೊಂದು ಕೊಳಕ್ಕೆಸೆದಳು

ಪ್ರಕರಣದ ತನಿಖೆ ನಡೆಸುತ್ತಿರುವ ಸಬ್ ಇನ್ಸ್‌ಪೆಕ್ಟರ್ ಸುಖಜೀಂದರ್ ಸಿಂಗ್, "ವಿಚಾರಣೆಯ ಸಮಯದಲ್ಲಿ, ಆರೋಪಿಯು ತನ್ನ ಮಗನನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅವಳು ಅವನ ದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಕೊಳಕ್ಕೆ ಎಸೆದಿದ್ದಾಳೆ. ದೇಹವನ್ನು ಕೊಳದಿಂದ ಹೊರತೆಗೆಯಲಾಗಿದೆ.

“10 ವರ್ಷಗಳ ಹಿಂದೆ ತನ್ನ ಆರು ವರ್ಷದ ಮಗಳನ್ನು ಕೊಂದಿರುವುದಾಗಿ ಬಬಿತಾ ಒಪ್ಪಿಕೊಂಡಿದ್ದಾಳೆ. ಗರ್ಭಪಾತವಾಗಲು ಗಟ್ಟಿಯಾದ ವಸ್ತುವಿನಿಂದ ತನ್ನ ಹೊಟ್ಟೆಯನ್ನು ಹೊಡೆದು ಎರಡು ಗರ್ಭಧಾರಣೆಯನ್ನು ನಾಶ ಮಾಡಿದ್ದಾಗಿ ಅವಳು ಒಪ್ಪಿಕೊಂಡಿದ್ದಾಳೆ ಎಂದು ಎಸ್‌ಐ ಹೇಳಿದರು.

ಮಹಿಳೆಯು ಮಾನಸಿಕವಾಗಿ ಅಸ್ಥಿರಳಾಗಿದ್ದಳು. ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದಳು. ತನ್ನ ಮಗಳನ್ನು ಹೇಗೆ ಕೊಂದಿದ್ದಾಳೆ ಎಂಬುದನ್ನು ಮಹಿಳೆ ಇನ್ನೂ ಬಹಿರಂಗಪಡಿಸಿಲ್ಲ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷ್ಯಗಳು ಕಣ್ಮರೆಯಾಗುವಂತೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಏನಾಯಿತು?

1. ಜುಲೈ 14 ರಂದು ನಾಲ್ಕು ವರ್ಷದ ಬಾಲಕ ನಾಪತ್ತೆಯಾಗಿದ್ದಾನೆ

2. ಹುಡುಗ ಕೊನೆಯದಾಗಿ ಮನೆಯ ಹೊರಗೆ ಆಟವಾಡುತ್ತಿದ್ದನು ಎಂದು ತಾಯಿ ಹೇಳುತ್ತಾರೆ

4. ಹಳ್ಳಿಗರು, ತಂದೆ ಸೇರಿ ಹುಡುಕಾಟ ನಡೆಸಿದ್ದಾರೆ

5. ತಾಯಿ ತನ್ನ ತಲೆಯ ಮೇಲೆ ಗೋಣಿಚೀಲವನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ

6. ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿ, ದೇಹವನ್ನು ಕೆರೆಯಲ್ಲಿ ಎಸೆದಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: Minor Raped: ಅಪ್ರಾಪ್ತೆಯನ್ನು ರೇಪ್ ಮಾಡಿದ ವ್ಯಕ್ತಿ, ಆತನ ಪತ್ನಿಯಿಂದಲೇ ವಿಡಿಯೋ ಶೂಟ್

ಲವ್ ಮಾಡಿದ್ದಕ್ಕೆ ಮಗಳ ಕೊಂದ ತಂದೆ

ಉತ್ತರ ಪ್ರದೇಶದಲ್ಲಿ (Uttar Pradesh) ಮಗಳು ಪ್ರೀತಿಸಿದ್ದಕ್ಕೆ ತಂದೆಯಿಂದಲೇ ಕೊಲೆಯಾಗಿರುವ (Murder) ಘಟನೆ ನಡೆದಿದೆ. ಶುಕ್ರವಾರ ಇಲ್ಲಿ ವ್ಯಕ್ತಿಯೊಬ್ಬ ತನ್ನ 19 ವರ್ಷದ ಮಗಳನ್ನು ಗಂಟಲು ಕುಯ್ದು ಕೊಲೆ ಮಾಡಿದ್ದಾನೆ. ವ್ಯಕ್ತಿಯೊಬ್ಬನೊಂದಿಗಿನ ಮಗಳ ಪ್ರೇಮ ಸಂಬಂಧದ ಕಾರಣಕ್ಕೆ ಕತ್ತು ಸೀಳಿ ಕೊಂದಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

ಪೊಲೀಸ್ ಅಧೀಕ್ಷಕ (ಗ್ರಾಮೀಣ) ಅಖಿಲೇಶ್ ನಾರಾಯಣ್ ಅವರು, ರಾಥೋಡ್ ಅವರು ಇಟಾಹ್‌ನ ವ್ಯಕ್ತಿಯೊಂದಿಗೆ ತಮ್ಮ ಮಗಳು ರುಚಿಯ ಸಂಬಂಧದ ಬಗ್ಗೆ ತಿಳಿದುಕೊಂಡರು. ಅವರನ್ನು ಭೇಟಿಯಾಗದಂತೆ ಕೇಳಿಕೊಂಡರು. ಆದರೆ ಅವಳು ಮಗಳು ಈ ಸಲಹೆಯನ್ನು ಕೇಳಲಿಲ್ಲ.

ಇದನ್ನೂ ಓದಿ: Minor Raped: ಅಪ್ರಾಪ್ತೆಯನ್ನು ರೇಪ್ ಮಾಡಿದ ವ್ಯಕ್ತಿ, ಆತನ ಪತ್ನಿಯಿಂದಲೇ ವಿಡಿಯೋ ಶೂಟ್

ಇದರಿಂದ ಕೋಪಗೊಂಡ ರಾಥೋಡ್ ಶುಕ್ರವಾರ ಮನೆಯ ಮೇಲಿನ ಮಹಡಿಯಲ್ಲಿರುವ ಮಗಳ ಕೋಣೆಗೆ ನುಗ್ಗಿ ಆಕೆಯ ಕತ್ತು ಸೀಳಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದಿದ್ದಾರೆ.
Published by:Divya D
First published: