ಡಿಎಂಕೆ ಗೆಲುವು: ದೇವರಿಗೆ ನಾಲಿಗೆ ಕತ್ತರಿಸಿ ಅರ್ಪಣೆ ಮಾಡಿದ ಮಹಿಳೆ

ತಮಿಳುನಾಡಿನಲ್ಲಿ ರಾಜಕೀಯ ನಾಯಕರೇ ಇರಲಿ ಸಿನಿಮಾ ನಾಯಕರೇ ಇರಲಿ ಅವರ ಬಗ್ಗೆ ಜನರಿಗೆ ಇರುವ ಅಭಿಮಾನಕ್ಕೆ ಸಾಟಿಯೇ ಇಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚೆನ್ನೈ (ಮೇ. 3) ತಮಿಳುನಾಡಿನಲ್ಲಿ ದಶಕಗಳ ಬಳಿಕ ದ್ರಾವಿಡ ಮುನ್ನೆತ್ರ ಖಳಗಂ (ಡಿಎಂಕೆ) ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದೆ. ಡಿಎಂಕೆ ಗೆಲುವಿಗಾಗಿ ಪಕ್ಷದ ಅನೇಕ ಅಭಿಮಾನಿಗಳು, ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಹಿಳೆಯೊಬ್ಬರ ಕಾರ್ಯ ಎಲ್ಲರನ್ನು ದಿಗ್ಮೂಢರನ್ನಾಗಿಸಿದೆ. ಕಾರಣ, ಈಕೆ ಡಿಎಂಕೆ ಗೆಲುವಿಗಾಗಿ ಹೊತ್ತ ಹರಕೆ ಸಾಮಾನ್ಯದಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮತ್ತೊಮ್ಮೆ ಅಧಿಕಾರದ  ಗದ್ದುಗೆ ಏರಿದರೆ ತನ್ನ ನಾಲಿಗೆಯನ್ನೇ ದೇವರಿಗೆ ಅರ್ಪಿಸುವುದಾಗಿ ಈಕೆ ಹರಸಿಕೊಂಡಿದ್ದರಂತೆ. ಅದರಂತೆ ಈಕೆ ಈಗ ದೇವರಿಗೆ ತನ್ನ ನಾಲಿಗೆಯನ್ನೇ ಕತ್ತರಿಸಿ ಅರ್ಪಣೆ ಮಾಡಿದ್ದಾರೆ. ಈ ಮೂಲಕ ವಾಗ್ದಾನವನ್ನು ಪೂರೈಸಿದ ಖುಷಿಯಲ್ಲಿ ಆಕೆ ಇದ್ದಾರೆ.

  32 ವರ್ಷದ ವನಿತಾ ಎಂಬ ಮಹಿಳೆ ಈ ಮಹತ್​ ಕಾರ್ಯ ಮಾಡಿದ ಮಹಿಳೆ. ನಿನ್ನೆ ಫಲಿತಾಂಶದ ದಿನ ಸ್ಟಾಲಿನ್​ ನೇತೃತ್ವದ ಡಿಎಂಕೆ ಬಹುಮತ ಗಳಿಸಿದೆ. ಈ ಫಲಿತಾಂಶ ಪ್ರಕಟವಾದ ತಕ್ಷಣ ಮಹಿಳೆ ಕೂಡ ಹರ್ಷದಿಂದ ತೇಲಾಡಿದ್ದಾರೆ. ಇಂದು ಬೆಳಗ್ಗೆ ಇಲ್ಲಿನ ಮುತ್ತಲಮ್ಮನ ದೇವಾಲಯಕ್ಕೆ ಭೇಟಿ ನೀಡಿದ ಅವರು ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಲು ಮುಂದಾಗಿದ್ದಾರೆ.

  ಇದನ್ನು ಓದಿ: ಉಸಿರು ಕೊಟ್ಟವಳ ಬದುಕಿಸಲು ಉಸಿರು ನೀಡಿದ ಮಕ್ಕಳು; ಆದರೂ ಉಳಿಯಲಿಲ್ಲ ತಾಯಿ

  ಕೋವಿಡ್​ ಹಿನ್ನಲೆ ದೇವಾಲಯದ ಬಾಗಿಲು ಮುಚ್ಚಿದ ಕಾರಣ ದೇವಸ್ಥಾನದ ಹೊರಗೆಯೇ ಈಕೆ ನಾಲಿಗೆ ಕತ್ತರಿಸಿ, ಗೇಟ್​ ಮುಂದಿರಿಸಿದ್ದಾಳೆ. ಇದಾದ ಕೆಲವೇ ಕ್ಷಣದಲ್ಲಿ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ತಕ್ಷಣಕ್ಕೆ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

  ಇದನ್ನು ಓದಿ: ರಾಜಕೀಯ ಕಮಾಲ್​ ಮಾಡುವಲ್ಲಿ ಸೋತ ಕಮಲ್​​; ಮಕ್ಕಳ ನಿಧಿ ಮಯ್ಯಂ ಪಕ್ಷಕ್ಕೆ ಒಂದೂ ಸ್ಥಾನವಿಲ್ಲ

  ತಮಿಳುನಾಡಿನಲ್ಲಿ ರಾಜಕೀಯ ನಾಯಕರೇ ಇರಲಿ ಸಿನಿಮಾ ನಾಯಕರೇ ಇರಲಿ ಅವರ ಬಗ್ಗೆ ಜನರಿಗೆ ಇರುವ ಅಭಿಮಾನಕ್ಕೆ ಸಾಟಿಯೇ ಇಲ್ಲ. ತಮ್ಮ ನೆಚ್ಚಿನ ನಾಯಕರಿಗಾಗಿ ಎಂತಹ ತ್ಯಾಗಕ್ಕೆ ಕೂಡ ಸಿದ್ದ ಎಂಬುದನ್ನು ಈಗಾಗಲೇ ಹಲವು ಸಂದರ್ಭದಲ್ಲಿ ವ್ಯಕ್ತವಾಗಿದೆ. ಜಯಲಲಿತಾ, ಕರುಣಾನಿಧಿ ಸಾವನ್ನಪ್ಪಿದಾಗ ಪ್ರಾಣ ಕಳೆದುಕೊಂಡ ಅನೇಕ ಮಂದಿ ಕೂಡ ಇದ್ದಾರೆ. ಅಲ್ಲದೇ ಸಿನಿಮಾ ನಟ- ನಟಿಯರ ಆರಾಧನೆಗಾಗಿ ವ್ಯಕ್ತಿಯನ್ನು ದೇವರಂತೆ ಆರಾಧನೆ ಮಾಡುವ ಜನರು ಕೂಡ ಇಲ್ಲಿದ್ದಾರೆ. ಭಾಷಾಭಿಮಾನ, ವ್ಯಕ್ತಿ ಆರಾಧನೆ, ನೆಲದ ಪ್ರೀತಿಗಾಗಿ,  ನಾಯಕರ ಬಗ್ಗೆ ಭಾವಾನಾತ್ಮಕವಾಗಿ ಇವರು ಬೆಸೆದು ಕೊಂಡಿರುತ್ತಾರೆ. ಇದೇ ಹಿನ್ನಲೆ ಬಹುತೇಕರು  ಎಂತಹ ಹುಚ್ಚು ಸಾಹಸಕ್ಕೂ ಕೈ ಹಾಕುವ  ಅಭಿಮಾನಿಗಳು ಇಲ್ಲಿ ಮಾತ್ರ ಕಾಣಲು ಸಾಧ್ಯವಿಲ್ಲ ಎಂದರೆ ತಪ್ಪಾಗಲಾರದು.

  ತಮಿಳುನಾಡಿನ ಒಟ್ಟು 234 ಕ್ಷೇತ್ರಗಳಲ್ಲಿ 159 ಕ್ಷೇತ್ರಗಳಲ್ಲಿ ಡಿಎಂಕೆ ನಗುವಿನ ಗೆಲುವು ಬೀರಿದೆ, ಈ ಅಭೂತ ಪೂರ್ವ ಗೆಲುವಿನ ಬಗ್ಗೆ ಮಾತನಾಡಿರುವ ಎಂಕೆ ಸ್ಟಾಲಿನ್​, ಜನರ ತೀರ್ಪಿನಿಂದಾಗಿ ಮತ್ತೊಮ್ಮೆ ಜನರು ಸೇವೆ ಮಾಡುವ ಭಾಗ್ಯ ಸಿಕ್ಕಿದೆ. ನಾವು ನೀಡಿದ ಆಶ್ವಾಸನೆಗಳನ್ನು ಒಂದೊಂದಾಗಿ ಈಡೇರಿಸುತ್ತೇವೆ. ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ಮೇ 7ರಂದು ಸ್ಟಾಲಿನ್​ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರ ಮಾಡಲಿದ್ದಾರೆ. ಕೋವಿಡ್​ ಹಿನ್ನಲೆ ಸರಳವಾಗಿ ಈ ಕಾರ್ಯಕ್ರಮ ನಡೆಯಲಿದೆ
  Published by:Seema R
  First published: