ಸಂಪ್ರದಾಯದ ನೆಪದಲ್ಲಿ ಸೊಸೆಯನ್ನೇ ಮದುವೆಯಾಗಲು ಹೊರಟ ಮಾವ; ನಿರಾಕರಿಸಿದ್ದಕ್ಕೆ ಅತ್ಯಾಚಾರ


Updated:September 2, 2018, 10:00 PM IST
ಸಂಪ್ರದಾಯದ ನೆಪದಲ್ಲಿ ಸೊಸೆಯನ್ನೇ ಮದುವೆಯಾಗಲು ಹೊರಟ ಮಾವ; ನಿರಾಕರಿಸಿದ್ದಕ್ಕೆ ಅತ್ಯಾಚಾರ

Updated: September 2, 2018, 10:00 PM IST
ನ್ಯೂಸ್​18 ಕನ್ನಡ

ಸಂಭಾಲ್ (ಸೆ. 2): ಮುಸ್ಲಿಂ ಸಮುದಾಯದಲ್ಲಿ ಒಮ್ಮೆ ಗಂಡನಿಂದ ತಲಾಖ್​ ಪಡೆದ ಮಹಿಳೆಗೆ ಮತ್ತೆ ಅದೇ ಗಂಡನ ಜೊತೆಗೆ ಬಾಳ್ವೆ ಮಾಡಬೇಕೆಂದರೂ ಅವಕಾಶವಿಲ್ಲ. ಆಕೆ ಬೇರೊಬ್ಬನನ್ನು ಮದುವೆಯಾಗಿ, ತಲಾಖ್​ ಪಡೆದ ನಂತರವಷ್ಟೆ ಮೊದಲ ಗಂಡನನ್ನು ವರಿಸಲು ಅವಕಾಶವಿದೆ . ಈ ಆಚರಣೆಯನ್ನು ಒಪ್ಪದೆ, ಗಂಡನ ಜೊತೆಗೆ ಜೀವನ ಸಾಗಿಸಲು ತವರುಮನೆಯಿಂದ ವಾಪಾಸಾದ ಸೊಸೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮೊರಾದಾಬಾದ್​ ಜಿಲ್ಲೆಯ ಆ ಯುವತಿಗೆ 2014ರಲ್ಲಿ ಮದುವೆಯಾಗಿತ್ತು. ಗಂಡನ ಮನೆಯವರು ಮಾನಸಿಕವಾಗಿ ಹಿಂಸೆ ನೀಡಿ ಮನೆಯಿಂದ ಹೊರಹಾಕಿದ ಕಾರಣ 2015ರ ಡಿಸೆಂಬರ್​ನಲ್ಲಿ ತವರುಮನೆಗೆ ಹೋದ ಆಕೆ ಗಂಡನ ಮನೆಯವರ ದೌರ್ಜನ್ಯದ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದಳು. ಪೊಲೀಸ್​ ಠಾಣೆಯ ಮೆಟ್ಟಿಲು ಹತ್ತಲು ಒಪ್ಪದ ಗಂಡನ ಮನೆಯವರು ಆಕೆಯ ಮನವೊಲಿಸಿ ಕೇಸನ್ನು ವಾಪಾಸು ಪಡೆಯುವಂತೆ ಮಾಡಿದರು. ಇಷ್ಟೆಲ್ಲ ಆದನಂತರ ಆಕೆ ಗಂಡನ ಮನೆಗೆ ಹಿಂತಿರುಗಿದಳು.

ತಮ್ಮ ಮನೆಯಿಂದ ಹೊರಹೋಗುವಾಗ ತಮ್ಮ ಮಗ ಆಕೆಗೆ ತಲಾಖ್​ ನೀಡಿದ್ದ. ಹೀಗಾಗಿ, ಸಂಪ್ರದಾಯದ ಪ್ರಕಾರ ಆಕೆ ನಿಖಾ ಹಲಾಲ್ ಅನುಸರಿಸಿ, ಮತ್ತೊಂದು ಮದುವೆಯಾಗದೆ ಹಳೆಯ ಗಂಡನ ಜೊತೆ ವೈವಾಹಿಕ ಜೀವನ ನಡೆಸುವಂತಿಲ್ಲ ಎಂದು ಆ ಯುವತಿಯ ಮಾವ ತಗಾದೆ ತೆರೆದರು. ಅದಕ್ಕೆ ಪುಷ್ಟಿ ನೀಡಿದ ಆಕೆಯ ಗಂಡನ ಚಿಕ್ಕಪ್ಪಂದಿರು ಸುಮ್ಮನೆ ಬೇರೊಂದು ಮದುವೆಯಾಗುವ ಬದಲು ಮಾವನನ್ನೇ ಮದುವೆಯಾಗಿ ನಂತರ ತಲಾಖ್​ ಪಡೆದು ಗಂಡನ ಜೊತೆಗೆ ಜೀವನ ನಡೆಸುವಂತೆ ಸಲಹೆ ನೀಡಿದರು. ಆದರೆ, ಅದಕ್ಕೆ ಆ ಯುವತಿ ಒಪ್ಪಲಿಲ್ಲ.

ಮಾತು ಕೇಳದ್ದಕ್ಕೆ ಅತ್ಯಾಚಾರ:
ನಿಖಾ ಹಲಾಲ ಪ್ರಕಾರ ಮುಸ್ಲಿಂ ಪುರುಷ ತನ್ನ ಮಾಜಿ ಹೆಂಡತಿಯನ್ನು ಮತ್ತೆ ಮದುವೆಯಾಗುವಂತಿಲ್ಲ. ಹಾಗೇನಾದರೂ ಆಗುವುದಾದರೆ ಆಕೆ ಬೇರೊಬ್ಬರ ಜೊತೆ ಮದುವೆಯಾಗಿ, ಸಂಸಾರ ಮಾಡಿ, ತಲಾಖ್​ ಪಡೆದು ಮತ್ತೆ ಆತನೊಂದಿಗೆ ನಿಖಾ ಮಾಡಿಕೊಳ್ಳಬೇಕು. ಹೀಗಾಗಿ, ಗಂಡನನ್ನು ಬಿಟ್ಟು ಮಾವನ ಜೊತೆ ಮದುವೆಯಾಗಲು ಒಪ್ಪದ ಆಕೆಯನ್ನು ರೂಮಿನಲ್ಲಿ ಕೂಡಿಹಾಕಿದ ಮಾವ ಅಂದು ರಾತ್ರಿ ಆಕೆಯ ಮೇಲೆ ಅತ್ಯಾಚಾರ ಮಾಡಿದನು. ಮಾರನೇ ದಿನ ಬೆಳಗ್ಗೆಯೇ ಆಕೆಗೆ ತಲಾಖ್​ ನೀಡಿದನು. ಆದರೆ, ಅಂದೇ ಆಕೆಯ ಗಂಡನೇ ಆಕೆಯ ಮೇಲೆ ಅತ್ಯಾಚಾರ ಎಸಗಿದನು. ಇದರಿಂದ ಆಕೆ ಗರ್ಭ ಧರಿಸುವಂತಾಯಿತು. ಬಳಿಕ, ತವರುಮನೆಗೆ ತೆರಳಿದ ಆಕೆ 2017ರಲ್ಲಿ ಗಂಡುಮಗುವಿಗೆ ಜನ್ಮ ನೀಡಿದಳು. ವಾಪಾಸು ಗಂಡನ ಮನೆಗೆ ಹೊರಟ ಆಕೆಗೆ ಮತ್ತು ಆಕೆಯ ತವರುಮನೆಯವರಿಗೆ ಕೊಲೆಯ ಬೆದರಿಕೆ ಬರತೊಡಗಿದ್ದರಿಂದ ಆಕೆ ಮತ್ತೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದಳು.

ಈ ಕುರಿತು ಆ ಮಹಿಳೆಯ ಗಂಡ, ಮಾವ, ಕುಟುಂಬದವರ ವಿರುದ್ಧ ದೂರು ದಾಖಲಿಸಿಕೊಂಡಿರುವ ಎಡಿಜಿಪಿ ಪ್ರೇಮ್​ ಪ್ರಕಾಶ್​ ತನಿಖೆ ಆರಂಭಿಸಿದ್ದಾರೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ