ರೈಲ್ವೆ ನಿಲ್ದಾಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಕ್ಲಿನಿಕ್​ಗೆ ಸೇರಿಸಿ 15 ನಿಮಿಷದೊಳಗೆ ಆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದು, ಹೆರಿಗೆಯಾದ ಬಳಿಕ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

Sushma Chakre | news18-kannada
Updated:October 10, 2019, 11:51 AM IST
ರೈಲ್ವೆ ನಿಲ್ದಾಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಥಾಣೆ ರೈಲ್ವೆ ನಿಲ್ದಾಣ
  • Share this:
ಥಾಣೆ (ಅ. 10): ರಾಯಗಢ ಜಿಲ್ಲೆಯ ಬಳಿ ಇರುವ ಕರ್ಜತ್​ನಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿದ್ದ ಕ್ಲಿನಿಕ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

29 ವರ್ಷದ ಸುಭಂತಿ ಪಾತ್ರಾ ಎಂಬ ಮಹಿಳೆ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುವಾಗ ಈ ಘಟನೆ ನಡೆದಿದೆ. ತುಂಬು ಗರ್ಭಿಣಿಯಾದ್ದರಿಂದ ರೈಲಿನಲ್ಲಿಯೇ ಪ್ರಯಾಣಿಸುವುದು ಉತ್ತಮವೆಂದು ಸುಭಂತಿ ನಿರ್ಧರಿಸಿದ್ದರು. ರೈಲಿನಲ್ಲಿ 35 ಕಿ.ಮೀ. ದೂರದ ಊರಿಗೆ ಪ್ರಯಾಣಿಸುವಷ್ಟರಲ್ಲಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಮುಂದಿನ ರೈಲ್ವೆ ನಿಲ್ದಾಣದಲ್ಲಿರುವ 1 ರೂ. ಕ್ಲಿನಿಕ್​ಗೆ ವಿಷಯ ತಿಳಿಸಿದ್ದಾರೆ. ಥಾಣೆ ರೈಲ್ವೆ ನಿಲ್ದಾಣಕ್ಕೆ ರೈಲು ಹೋಗುತ್ತಿದ್ದಂತೆ ಆಕೆಯನ್ನು ಕ್ಲಿನಿಕ್​ಗೆ ಸೇರಿಸಲಾಗಿದೆ.

Video: ಅಮ್ಮನ ಜೊತೆ ಮಲಗಿದ್ದ 8 ತಿಂಗಳ ಹಸುಗೂಸು ಬೆಳಗಾಗುವಾಗ ನಾಪತ್ತೆ!

ಕ್ಲಿನಿಕ್​ಗೆ ಸೇರಿಸಿ 15 ನಿಮಿಷದೊಳಗೆ ಆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಖಾಸಗಿಯವರಿಂದ ನಡೆಸಲ್ಪಡುವ ಈ 1 ರೂ. ಕ್ಲಿನಿಕ್​ನಲ್ಲಿ ಆಕೆಗೆ ಹೆರಿಗೆಯಾಗಿದೆ. ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿದ್ದು, ಹೆರಿಗೆಯಾದ ಬಳಿಕ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಥಾಣೆ ರೈಲ್ವೆ ನಿಲ್ದಾಣದ ಕ್ಲಿನಿಕ್​ನಲ್ಲಿ ಇದುವರೆಗೂ 10 ಡೆಲಿವರಿಗಳು ಆಗಿವೆ ಎಂದು ಕ್ಲಿನಿಕ್​ನ ಸಿಇಓ ಡಾ. ರಾಹುಲ್ ಗುಲೆ ತಿಳಿಸಿದ್ದಾರೆ.

First published: October 10, 2019, 11:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading